KN/Prabhupada 0083 - ಹರೇ ಕೃಷ್ಣ ಜಪಿಸಿ ಎಲ್ಲವೂ ಬರುತ್ತದೆ

Revision as of 17:51, 1 October 2020 by Elad (talk | contribs) (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
(diff) ← Older revision | Latest revision (diff) | Newer revision → (diff)


Lecture on SB 7.9.11-13 -- Hawaii, March 24, 1969

ಪ್ರಹ್ಲಾದ ಮಹಾರಾಜರು ಹೇಳಿದ್ದಾರೆ - ಇದರ ಬಗ್ಗೆ ನಾವು ಈಗಾಗಲೇ ಚರ್ಚಿಸಿದ್ದೇವೆ - ಇದಕ್ಕೆ ಯಾವುದೇ ಅರ್ಹತೆಯ ಅಗತ್ಯವಿಲ್ಲ. ಭಗವಂತನನ್ನು ಮೆಚ್ಚಿಸಲು, ತೃಪ್ತಿ ಪಡಿಸಲು, ನಿಮ್ಮಲ್ಲಿ ಯಾವುದೇ ಪೂರ್ವ ಅರ್ಹತೆಯ ಅಗತ್ಯವಿಲ್ಲ. ಓಹ್, ನಿಮ್ಮ ವಿಶ್ವ ವಿದ್ಯಾಲಯದಲ್ಲಿ ನೀವು ನಿಮ್ಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅಥವಾ, ನೀವು ರಾಕ್ಫೆಲರ್ ಅಥವಾ ಫೋರ್ಡ್ ರಂತೆ ಧನಿಕ ವ್ಯಕ್ತಿಯಾಗಬೇಕು. ಅಥವಾ ಇದು, ಅದು ಇನ್ನೇನಾದರೂ ಆಗಬೇಕು... ಯಾವ ಷರತ್ತುಗಳು ಇಲ್ಲ. ಅಹೈತುಕೀ ಅಪ್ರತಿಹತಾ. ನೀವು ಕೃಷ್ಣನನ್ನು ಪ್ರೀತಿಸಲು ಬಯಸಿದರೆ, ಅದಕ್ಕೆ ಯಾವುದೇ ತಡೆಯಿಲ್ಲ. ಈ ಮಾರ್ಗವು ತೆರೆದಿದೆ. ನೀವು ಸುಮ್ಮನೆ ಪ್ರಾಮಾಣಿಕರಾಗಬೇಕು. ಅಷ್ಟೇ. ಆಗ ಕೃಷ್ಣನು ನಿಮ್ಮ ದಾರಿಯನ್ನು ಸುಗಮಗೊಳಿಸುತ್ತಾನೆ. ನಿಮ್ಮಲ್ಲಿ ಪ್ರಾಮಾಣಿಕತೆ ಇಲ್ಲದೇ ಹೋದರೆ, ಕೃಷ್ಣನ ಮಾಯೆ ಇದೆ. ಮಾಯೆಯು ಯಾವಾಗಲೂ ಏನಾದರೂ ತಡೆಯನ್ನು ಒಡ್ಡುತ್ತಾಳೆ. "ಇದಲ್ಲ, ಇದಲ್ಲ, ಇದಲ್ಲ." ಆದ್ದರಿಂದ ಪ್ರಹ್ಲಾದ ಮಹಾರಾಜರು ನಿರ್ಧರಿಸಿದರು, "ನಾನೊಬ್ಬ ಸಣ್ಣ ಮಗುವಾಗಿದ್ದರೂ ಸಹ, ನನಗೆ ಶಿಕ್ಷಣವಿಲ್ಲ, ನನಗೆ ವೇದಗಳ ಅಧ್ಯಯನವಿಲ್ಲ, ಮತ್ತು ನಾಸ್ತಿಕ ತಂದೆಗೆ ಜನಿಸಿದವ, ನೀಚ, ಆದ್ದರಿಂದ ಎಲ್ಲಾ ಕೆಟ್ಟ ಅರ್ಹತೆ... ದೇವರನ್ನು ಧರ್ಮನಿಷ್ಠ ಬೌದ್ಧ ವ್ಯಕ್ತಿಗಳು ಪೂಜಿಸುತ್ತಾರೆ, ವೈದಿಕ ಸ್ತೋತ್ರಗಳನ್ನು ಅರ್ಪಿಸುತ… ಹಾಗು ಸುಸಂಸ್ಕೃತವಾದ ಬ್ರಹ್ಮಣರು ಕೂಡ. ಹಾಗಾಗಿ ನನಗೆ ಅಂತಹ ಯಾವುದೇ ಅರ್ಹತೆ ಇಲ್ಲ. ಆದರೂ, ಉನ್ನತ ಸ್ಥಾನದಲ್ಲಿರುವ ಈ ಎಲ್ಲ ದೇವತೆಗಳು ನನ್ನನ್ನು ವಿನಂತಿಸಿದ್ದಾರೆ. ಅಂದರೆ ದೇವರನ್ನು ನಾನು ಕೂಡ ಸಮಾಧಾನಗೊಳಿಸಬಹುದು. ಇಲ್ಲದಿದ್ದರೆ ಅವರು ಹೇಗೆ ಶಿಫಾರಸು ಮಾಡುತ್ತಾರೆ? ಹಾಗಾಗಿ ನನಲ್ಲಿ ಏನೆಲ್ಲ ಅರ್ಹತೆಯಿದೆಯೋ, ಬುದ್ಧಿವಂತಿಕೆಯಿದೆಯೋ, ನಾನು ಕೃಷ್ಣನಿಗೆ ಅರ್ಪಿಸಬಹುದು.” ಆದ್ದರಿಂದ ನಮ್ಮ, ಈ ಕೃಷ್ಣ ಪ್ರಜ್ಞೆ ಚಳುವಳಿ ಈ ರೀತಿಯಾಗಿದೆ, ನಿಮಗೆ ಯಾವುದೇ ಅರ್ಹತೆಯಿದ್ದರೂ ಅದು ಸಾಕು. ನೀವು ಆ ಅರ್ಹತೆಯಿಂದ ಪ್ರಾರಂಭಿಸಿ. ನಿಮ್ಮ ಅರ್ಹತೆಯೊಂದಿಗೆ ನೀವು ಕೃಷ್ಣನಿಗೆ ಸೇವೆ ಸಲ್ಲಿಸಲು ಪ್ರಯತ್ನಿಸಿರಿ. ಏಕೆಂದರೆ ನಿಜವಾದ ಅರ್ಹತೆ - ನಿಮ್ಮ ಸೇವೆಯ ಭಾವನೆ. ಅದು ನಿಜವಾದ ಅರ್ಹತೆ. ಆದ್ದರಿಂದ ನೀವು ಆ ಭಾವನೆಯನ್ನು ಬೆಳೆಸಿಕೊಳ್ಳುತ್ತೀರಿ. ನಿಮ್ಮ ಬಾಹ್ಯ ಅರ್ಹತೆ, ಸೌಂದರ್ಯ, ಸಂಪತ್ತು, ಜ್ಞಾನ, ಇದು, ಅದು… ಬೇಡ. ಈ ವಿಷಯಗಳಿಗೆ ಯಾವುದೇ ಮೌಲ್ಯವಿಲ್ಲ. ಕೃಷ್ಣನ ಸೇವೆಯಲ್ಲಿ ಉಪಯೋಗಿಸಿದ್ದಾಗ ಅವು ಮೌಲ್ಯಯುತವಾಗಿವೆ. ನೀವು ತುಂಬಾ ಶ್ರೀಮಂತರಾಗಿದ್ದರೆ, ನಿಮ್ಮ ಸಂಪತ್ತನ್ನು ಕೃಷ್ಣನ ಸೇವೆಯಲ್ಲಿ ಬಳಸಿಕೊಂಡರೆ... ಪರವಾಗಿಲ್ಲ. ಕೃಷ್ಣನ ಸೇವೆಮಾಡಲು ನೀವು ತುಂಬಾ ಶ್ರೀಮಂತರಾಗಬೇಕಾದ ಅಗತ್ಯವಿಲ್ಲ.

ಆದ್ದರಿಂದ ಪ್ರಹ್ಲಾದ ಮಹಾರಾಜರು ಹೇಳುತ್ತಾರೆ, ನೀಚೋ ಅಜಯಾ ಗುಣ-ವಿಸರ್ಗಮ್ ಅನುಪ್ರವಿಷ್ಟಃ ಪೂಯೇತ ಯೇನ ಪೂಮಾನ್ ಅನುವರ್ಣಿತೇನ (ಶ್ರೀ ಭಾ 7.9.12). ಈಗ, ಪ್ರಹ್ಲಾದನು ಅಪವಿತ್ರ ತಂದೆಯಿಂದ ಹುಟ್ಟಿದ್ದಾನೆ ಎಂದು ಒಬ್ಬರು ಪ್ರಶ್ನಿಸಬಹುದು. ಇದು ವಾದ. ಪ್ರಹ್ಲಾದ ಅಪವಿತ್ರನಲ್ಲ, ಆದರೆ ಇದು ವಾದದ ಸಲುವಾಗಿ, ನೀಚ ತಂದೆಗೆ ಜನಿಸಿದವರು, ಅಥವಾ ನೀಚ ಕುಟುಂಬ… ಅನೇಕರು ಏನೇನೋ ಹೇಳಬಹುದು. ಆದರೆ ಪ್ರಹ್ಲಾದ ಮಹಾರಾಜರು "ನಾನು ಪ್ರಾರಂಭಿಸಿದರೆ, ಅವನನ್ನು ಕೀರ್ತಿಸಿದರೆ, ಆಗ ನಾನು ಪರಿಶುದ್ಧನಾಗುತ್ತೇನೆ." ನಾನು ಶುದ್ಧೀಕರಣ ಮಂತ್ರವನ್ನು ಜಪಿಸಿದರೆ... ಈ ಹರೇ ಕೃಷ್ಣ ಮಂತ್ರವು ಶುದ್ಧೀಕರಣದ ಪ್ರಕ್ರಿಯೆಯಾಗಿದೆ. ನಾನು ಬೇರೆ ರೀತಿಯಲ್ಲಿ ಮೊದಲು ಶುದ್ಧೀಕರಣವಾಗಬೇಕು, ನಂತರ ಹರೇ ಕೃಷ್ಣ ಮಂತ್ರ ಜಪಿಸಬೇಕೆಂಬುವುದು ಸರಿ ಅಲ್ಲ. ಇಲ್ಲ. ನೀವು ಜಪಿಸಲು ಪ್ರಾರಂಭಿಸಿ. ಆಗ ಅದೇ ಶುದ್ಧೀಕರಿಸುತ್ತದೆ. ನಿವು ಶುದ್ಧರಾಗುವಿರಿ. ಜಪಿಸಲು ಪ್ರಾರಂಭಿಸಿ. ನೀವು ಯಾವುದೇ ಸ್ಥಿತಿಯಲ್ಲಿದ್ದರೂ ಪರವಾಗಿಲ್ಲ. ವಾಸ್ತವವಾಗಿ ನಾನು ನನ್ನ… ಈ ಕೃಷ್ಣ ಪ್ರಜ್ಞೆ ಚಳುವಳಿಯನ್ನು ಪ್ರಾರಂಭಿಸಿದಾಗ ಎಲ್ಲರೂ ಬಹಳ ಶುದ್ಧವಾದ ಸ್ಥಿತಿಯಲೇನು ಬರಲಿಲ್ಲ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ತಿಳಿದಿದೆ, ನನ್ನ ಬಳಿಗೆ ಬಂದವರು, ಅವರು, ಬಾಲ್ಯದಿಂದಲೂ ತರಬೇತಿ ಪಡೆದಿದ್ದಾರೆ ... ಭಾರತೀಯ ಮಾನದಂಡದ ಪ್ರಕಾರ, ಅವರಿಗೆ ಆರೋಗ್ಯಕರ ತತ್ವಗಳೂ ತಿಳಿದಿಲ್ಲ. ಇನ್ನು ಶುದ್ಧೀಕರಣದ ಪ್ರಶ್ನೆಯೇ ಇಲ್ಲ. ಭಾರತದಲ್ಲಿ ಈ ವ್ಯವಸ್ಥೆಯು ಬಾಲ್ಯದಿಂದಲೇ ಇರುತ್ತದೆ. ಮಗುವಿಗೆ ಸ್ನಾನ ಮಾಡಲು, ಬೆಳಿಗ್ಗೆ ಹಲ್ಲು ತೊಳೆಯಲು ತರಬೇತಿ ನೀಡಲಾಗುತ್ತದೆ. ಹೌದು. ನನಗೆ ನೆನಪಿದೆ, ನನ್ನ ಎರಡನೇ ಮಗನಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ, ಆದ್ದರಿಂದ ಉಪಾಹಾರಕ್ಕೆ ಮುಂಚಿತವಾಗಿ, "ನಿನ್ನ ಹಲ್ಲುಗಳನ್ನು ತೋರಿಸಿ", ಎಂದು ನಾನು ಅವನನ್ನು ಕೇಳುತ್ತಿದ್ದೆ. ಆಗ ಅವನು ತೋರಿಸುತ್ತಾನೆ ..., "ಹೌದು." "ಸರಿ, ನೀನು ಹಲ್ಲು ತೊಳೆದುಕೊಂಡಿದ್ದಿಯ. ಒಳ್ಳೆಯದು. ನಿನಗೆ ಉಪಾಹಾರ ತಿನ್ನಲು ಅನುಮತಿ ಇದೆ." ಆದ್ದರಿಂದ ಈ ತರಬೇತಿ ಇದೆ. ಆದರೆ ಇಲ್ಲಿ, ಈ ದೇಶದಲ್ಲಿ, ತರಬೇತಿ ... ಎಲ್ಲೋ ಕೆಲವು ಕಡೆ ಇದೆ, ಆದರೆ ತುಂಬಾ ಕಟ್ಟುನಿಟ್ಟಾಗಿ ಅಲ್ಲ. ಆದ್ದರಿಂದ ಪರವಾಗಿಲ್ಲ. ಹರೇ ಕೃಷ್ಣ ಜಪಮಾಡಿ. ಹರೇ ಕೃಷ್ಣ ಪ್ರಾರಂಭಿಸಿ. ಆಗ ಎಲ್ಲವೂ ಬರುತ್ತದೆ. ಎಲ್ಲವೂ ಬರುತ್ತದೆ.