KN/Prabhupada 0084 - ಕೇವಲ ಕೃಷ್ಣನ ಭಕ್ತನಾಗು

Revision as of 17:51, 1 October 2020 by Elad (talk | contribs) (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
(diff) ← Older revision | Latest revision (diff) | Newer revision → (diff)


Lecture on BG 2.22 -- Hyderabad, November 26, 1972

ಆದ್ದರಿಂದ ನಮ್ಮ ಪ್ರತಿಪಾದನೆಯೆಂದರೆ, ಕೃಷ್ಣನಿಂದ ಜ್ಞಾನವನ್ನು ಪಡೆಯುವುದು, ಪರಿಪೂರ್ಣ ವ್ಯಕ್ತಿ, ದೇವೋತ್ತಮ ಪರಮಪುರುಷ. ನಾವು ಶಾಸ್ತ್ರವನ್ನು ಸ್ವೀಕರಿಸುತ್ತೇವೆ, ಅಂದರೆ ದೋಷಾತೀತವಾದ್ದದು. ಯಾವುದೇ ತಪ್ಪಿಲ್ಲ. ನಾನು ಗೋಶಾಲದ ಕಡೆಯಿಂದ ಬರುತ್ತಿದ್ದಾಗ ರಾಶಿ ರಾಶಿ ಸಗಣಿ ಇದ್ದವು. ನನ್ನ ಅನುಯಾಯಿಗಳಿಗೆ ನಾನು ವಿವರಿಸುತ್ತಿದ್ದೆ, ಮನುಷ್ಯ ಮಲವನ್ನು ಇಲ್ಲಿ ಸಂಗ್ರಹಿಸಲಾಗಿದ್ದರೆ ಯಾರೂ ಇಲ್ಲಿಗೆ ಬರುತ್ತಿರಲಿಲ್ಲ. ಯಾರೂ ಇಲ್ಲಿಗೆ ಬರುತ್ತಿರಲಿಲ್ಲ. ಆದರೆ ಸಗಣಿ, ಸಗಣಿಯ ರಾಶಿಗಳು ಇಲ್ಲಿ ತುಂಬಾ ಇವೆ, ಆದರೂ, ಈ ಕಡೆ ಹೋಗುವುದು ನಮಗೆ ಸಂತೋಷವಾಗಿದೆ. ಮತ್ತು ವೇದಗಳಲ್ಲಿ, "ಹಸುವಿನ ಸಗಣಿ ಶುದ್ಧವಾಗಿದೆ", ಎಂದು ಹೇಳಲಾಗಿದೆ. ಇದನ್ನೇ ಶಾಸ್ತ್ರ ಎನ್ನುವುದು. "ಅದು ಹೇಗೆ ಸಾಧ್ಯ, ಇದು ಪ್ರಾಣಿಗಳ ಮಲ", ಎಂದು ನೀವು ವಾದಿಸಬಹುದು.. ಆದರೆ ವೇದಗಳು, ಅವು ... ಏಕೆಂದರೆ ಜ್ಞಾನವು ಪರಿಪೂರ್ಣವಾಗಿದೆ, ವಾದದಲ್ಲಿಯೂ ಸಹ ಪ್ರಾಣಿಗಳ ಮಲ ಹೇಗೆ ಶುದ್ಧವಾಗುತ್ತದೆ ಎಂಬುದನ್ನು ನಾವು ಸಾಬೀತುಪಡಿಸಲು ಸಾಧ್ಯವಿಲ್ಲ, ಆದರೆ ಅದು ಶುದ್ಧವಾಗಿದೆ. ಆದ್ದರಿಂದ ವೈದಿಕ ಜ್ಞಾನವು ಪರಿಪೂರ್ಣವಾಗಿದೆ. ಮತ್ತು ನಾವು ವೇದಗಳಿಂದ ಜ್ಞಾನವನ್ನು ತೆಗೆದುಕೊಂಡರೆ, ತನಿಖೆಗಾಗಿ, ಅಥವಾ ಸಂಶೋಧನೆಗಾಗಿ ವ್ಯರ್ಥಮಾಡುವ ತುಂಬಾ ಸಮಯವನ್ನು ಉಳಿಸುತ್ತೇವೆ. ನಾವು ಸಂಶೋಧನೆ ತುಂಬಾ ಇಷ್ಟಪಡುತ್ತೇವೆ. ವೇದಗಳಲ್ಲಿ ಎಲ್ಲವೂ ಇದೆ. ನಿಮ್ಮ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ?

ಇದು ವೈದಿಕ ಜ್ಞಾನ. ವೈದಿಕ ಜ್ಞಾನ ಎಂದರೆ ಪರಮಾತ್ಮನು ನುಡಿದಿರುವ ಮಾತುಗಳು. ಅದು ವೈದಿಕ ಜ್ಞಾನ. ಅಪೌರುಷೇಯ. ಇದು ನನ್ನಂತಹ ಸಾಮಾನ್ಯ ವ್ಯಕ್ತಿ ನುಡಿದಿರುವುದಲ್ಲ. ಆದ್ದರಿಂದ ನಾವು ವೈದಿಕ ಜ್ಞಾನವನ್ನು ಸ್ವೀಕರಿಸಿದರೆ, ಕೃಷ್ಣ ಅಥವಾ ಅವನ ಪ್ರತಿನಿಧಿಯು ಹೇಳಿದಂತೆ ನಾವು ಸತ್ಯವನ್ನು ಒಪ್ಪಿಕೊಂಡರೆ... ಏಕೆಂದರೆ ಅವನ ಪ್ರತಿನಿಧಿಯು ಕೃಷ್ಣ ಮಾತನಾಡದ ಯಾವುದನ್ನೂ ಮಾತನಾಡುವುದಿಲ್ಲ. ಆದ್ದರಿಂದಲೇ ಅವರು ಪ್ರತಿನಿಧಿ. ಕೃಷ್ಣ ಪ್ರಜ್ಞಾಪೂರ್ವಕ ವ್ಯಕ್ತಿಗಳು ಕೃಷ್ಣನ ಪ್ರತಿನಿಧಿಗಳು, ಏಕೆಂದರೆ ಕೃಷ್ಣ ಪ್ರಜ್ಞೆಯುಳ್ಳ ವ್ಯಕ್ತಿಯು ಅಸಂಬದ್ಧವಾಗಿ ಏನನ್ನೂ ಮಾತನಾಡುವುದಿಲ್ಲ, ಕೃಷ್ಣನ ಮಾತನ್ನು ಮೀರಿ. ಅದೇ ವ್ಯತ್ಯಾಸ. ಇತರ ಅಸಂಬದ್ಧ, ದೂರ್ತ, ಅವನು ಕೃಷ್ಣನನ್ನು ಮೀರಿ ಮಾತನಾಡುತ್ತಾನೆ. ಕೃಷ್ಣ ಹೇಳುತ್ತಾನೆ, ಮನ್ಮನಾ ಭವ ಮದ್-ಭಕ್ತೋ ಮದ್-ಯಾಜೀ ಮಾಂ ನಮಸ್ಕುರು (ಭ.ಗೀ 18.65). ಆದರೆ ದೂರ್ತ ವಿದ್ವಾಂಸ ಹೇಳುತ್ತಾನೆ, "ಇಲ್ಲ, ಅದು ಕೃಷ್ಣನಿಗೆ ಅಲ್ಲ, ಅದು ಬೇರೆ ಯಾರಿಗೋ", ಎಂದು. ನೀವು ಇದನ್ನು ಏಲ್ಲಿಂದ ತಯಾರಿಸುತ್ತಿರುವಿರಿ? ಕೃಷ್ಣ ನೇರವಾಗಿ ಹೇಳುತ್ತಾನೆ, ಮನ್ಮನಾ ಭವ ಮದ್-ಭಕ್ತೋ ಮದ್-ಯಾಜೀ ಮಾಂ ನಮಸ್ಕುರು (ಭ.ಗೀ 18.65). ಹಾಗಾದರೆ ನೀವು ಏಕೆ ವಿಚಲನ ಮಾಡುತ್ತೀರಿ? ನೀವು ಬೇರೆ ಏನನ್ನಾದರೂ ಏಕೆ ಹೇಳುತ್ತೀರಿ: "ಅದು ಕೃಷ್ಣನ ಒಳಗೆ ಬೇರೆ ಏನೋ ಇದೆ "? ನೀವು ನೋಡಿದರೆ... ನಾನು ಹೆಸರಿಸಲು ಬಯಸುವುದಿಲ್ಲ. ಅನೇಕ ದೂರ್ತ ವಿದ್ವಾಂಸರಿದ್ದಾರೆ. ಅವರು ಹಾಗೆ ವ್ಯಾಖ್ಯಾನಿಸುತ್ತಾರೆ. ಆದ್ದರಿಂದ ಭಗವದ್ಗೀತೆ ಭಾರತದ ಜ್ಞಾನದ ಪುಸ್ತಕವಾಗಿದ್ದರೂ, ಅನೇಕ ಜನರು ದಾರಿ ತಪ್ಪುತ್ತಾರೆ. ದೊಡ್ಡ... ಈ ದೂರ್ತ ವಿದ್ವಾಂಸರಿಂದ, ವಿದ್ವಾಂಸರು ಎಂದು ಕರೆಯಲ್ಪಡುವವರು. ಏಕೆಂದರೆ ಅವರು ಸುಮ್ಮನೆ ತಪ್ಪಾಗಿ ಅರ್ಥೈಸುತ್ತಾರೆ.

ಆದ್ದರಿಂದ ನಾವು ಭಗವದ್ಗೀತೆಯನ್ನು ಯಥಾರೂಪ ಪ್ರಸ್ತುತಪಡಿಸುತ್ತಿದ್ದೇವೆ. ಕೃಷ್ಣ ಹೇಳುತ್ತಾನೆ, ಸರ್ವ-ಧರ್ಮಾನ್ ಪರಿತ್ಯಜ್ಯ ಮಾಂ ಏಕಂ ಶರಣಮ್ ವ್ರಜ (ಭ.ಗೀ 18.66). ನಾವು ಈ ಪಂಥವನ್ನು ಬೋಧಿಸುತ್ತಿದ್ದೇವೆ ಎಂದು ನಾವು ಹೇಳುತ್ತೇವೆ: "ಕೃಷ್ಣ ಪ್ರಜ್ಞಾವಂತನಾಗಿರು. ಕೇವಲ ಕೃಷ್ಣ ಭಕ್ತರಾಗಿ. ನಿಮ್ಮ ನಮನಗಳನ್ನುಅರ್ಪಿಸಿ ..." ನಿಮ್ಮ ಆದರವನ್ನು ನೀವು ಯಾರಿಗಾದರೂ ಅರ್ಪಿಸಬೇಕು. ನೀವು ಸರ್ವೋಚ್ಚರಲ್ಲ. ಸ್ವಲ್ಪ ಸೇವೆ ಪಡೆಯಲು ನೀವು ಯಾರನ್ನಾದರೂ ಹೊಗಳಬೇಕು. ಅದು ಒಂದು... ನೀವು ಉತ್ತಮ ಸ್ಥಾನವನ್ನು ಪಡೆದರೂ, ನೀವು ಹೊಗಳಬೇಕು. ನೀವು ಅಧ್ಯಕ್ಷ ಪದವಿ ಪಡೆದರೂ, ದೇಶದ ರಾಷ್ಟ್ರಪತಿಯಾಗಿದ್ದರೂ, ನಿಮ್ಮ ದೇಶವಾಸಿಗಳನ್ನು ನೀವು ಹೊಗಳಬೇಕು: "ದಯವಿಟ್ಟು ನನಗೆ ಮತ ನೀಡಿ. ದಯವಿಟ್ಟು ... ನಾನು ನಿಮಗೆ ಅನೇಕ ಸೌಲಭ್ಯಗಳನ್ನು ನೀಡುತ್ತೇನೆ." ಆದ್ದರಿಂದ ನೀವು ಹೊಗಳಬೇಕು. ಅದು ಸತ್ಯ. ನೀವು ತುಂಬಾ ಗಣ್ಯ ವ್ಯಕ್ತಿಯಾಗಿರಬಹುದು. ಆದರೆ ನೀವು ಯಾರನ್ನಾದರೂ ಹೊಗಳಬೇಕು. ನೀವು ಒಬ್ಬ ಗುರುವನ್ನು ಸ್ವೀಕರಿಸಬೇಕು. ಪರಮಗುರುವಾದ ಕೃಷ್ಣನನ್ನು ಏಕೆ ಸ್ವೀಕರಿಸಬಾರದು? ಏನು ಕಷ್ಟ? "ಇಲ್ಲ. ನಾನು ಕೃಷ್ಣ ಹೊರತುಪಡಿಸಿ ಬೇರೆ ಸಾವಿರಾರು ಗುರುವನ್ನು ಸ್ವೀಕರಿಸುತ್ತೇನೆ." ಇದು ನಮ್ಮ ಈಗಿನ ತತ್ವವಾಗಿದೆ. "ನಾನು ಕೃಷ್ಣ ಹೊರತುಪಡಿಸಿ ಸಾವಿರಾರು ಶಿಕ್ಷಕರನ್ನು ಸ್ವೀಕರಿಸುತ್ತೇನೆ. ಇದು ನನ್ನ ಸಂಕಲ್ಪ." ಹಾಗಿದ್ದರೆ ನೀವು ಹೇಗೆ ಸಂತೋಷವಾಗಿರಲು ಸಾಧ್ಯ? ಕೃಷ್ಣನನ್ನು ಸ್ವೀಕರಿಸುವುದರಿಂದ ಮಾತ್ರ ಸಂತೋಷವಾಗಿರಬಹುದು.

ಬೋಕ್ತಾರಂ ಯಜ್ಞ ತಪಸಾಂ
ಸರ್ವ-ಲೋಕಾ-ಮಹೇಶ್ವರಂ
ಸುಹೃದಂ ಸರ್ವ ಭುತಾನಾಂ
ಜ್ಞಾತ್ವಾ ಮಾಂ ಶಾಂತಿಮೃಚ್ಛತಿ
(ಭ.ಗೀ 5.29)

ಇದು ಶಾಂತಿ ಪ್ರಕ್ರಿಯೆ. "ನಾನು ಆನಂದಿಸುವವನು, ನೀನು ಆನಂದಿಸುವವನಲ್ಲ", ಎಂದು ನೀನು ಒಪ್ಪಿಕೋ ಎಂದು ಕೃಷ್ಣ ಹೇಳುತ್ತಾನೆ. ನೀನು ಅನುಭವಿಸುವವನಲ್ಲ. ನೀನು ಅಧ್ಯಕ್ಷರಾಗಿರಬಹುದು, ಅಥವಾ ಕಾರ್ಯದರ್ಶಿಯಾಗಿರಬಹುದು; ನೀನು ಏನೇ ಇರಲಿ. ಆದರೆ ನೀನು ಅನುಭವಿಸುವವನಲ್ಲ. ಅನುಭವಿಸುವವ ಕೃಷ್ಣ. ಅದನ್ನು ತಿಳಿದುಕೊಳ್ಳಬೇಕು. ನಿಮ್ಮಂತೆಯೇ... ನಾನು ಬರುತ್ತಾ ಆಂಧ್ರ ಪರಿಹಾರ ಸಮಿತಿಯ ಒಂದು ಪತ್ರಕ್ಕೆ ಉತ್ತರಿಸಿ ಬಂದೆ. ಕೃಷ್ಣನು ತೃಪ್ತಿಯಾಗದಿದ್ದರೆ ಈ ಪರಿಹಾರ ಸಮಿತಿ ಏನು ಮಾಡುತ್ತದೆ? ಕೇವಲ ನಿಧಿಸಂಗ್ರಹಿಸುವ ಮೂಲಕ? ಇಲ್ಲ, ಅದು ಸಾಧ್ಯವಿಲ್ಲ. ಈಗ ಮಳೆ ಬರುತ್ತಿದೆ. ಈಗ ನೀವು ಲಾಭವನ್ನು ಪಡೆಯುತ್ತೀರಿ. ಆದರೆ ಆ ಮಳೆ ಕೃಷ್ಣನನ್ನು ಅವಲಂಬಿಸಿರುತ್ತದೆ, ನಿಮ್ಮ ನಿಧಿಸಂಗ್ರಹ ಸಾಮರ್ಥ್ಯದ ಮೇಲೆ ಅಲ್ಲ.