KN/Prabhupada 0023 - ಸಾವಿಗೆ ಮುನ್ನ ಕೃಷ್ಣ ಪ್ರಜ್ಞರಾಗಿರಿ
Sri Isopanisad Invocation Lecture -- Los Angeles, April 28, 1970
ವಿಶ್ವವು ತನ್ನದೇ ಆದ ಸಮಯವನ್ನು ಹೂಂದಿದೆ, ಇದನ್ನು ಭಗವಂತನ ಶಕ್ತಿಯು ನಿಯಮಿಸಿದೆ. ವಿಶ್ವವು ಒಂದು ದೊಡ್ಡ ಭೌತಿಕ ವಸ್ತು. ನಿಮ್ಮ ದೇಹದ ರೀತಿಯಲ್ಲಿ. ಎಲ್ಲವೂ ಪರಸ್ಪರ ಸಂಬಂಧವನ್ನು ಹೊಂದಿದೆ. ಆಧುನಿಕ ವಿಜ್ಞಾನ ಎಂದರೆ ಸಾಪೇಕ್ಷತಾ ಸಿದ್ಧಾಂತ. ಒಂದು ಅಣು, ಒಂದು ಸಣ್ಣ ತುಣುಕು, ಸಣ್ಣ ಇರುವೆ, ಎಲ್ಲವೂ ಸಾಪೇಕ್ಷತಾ ಜೀವನವನ್ನು ಹೂಂದಿದೆ. ನೀವೂ ಕೂಡ ಸಾಪೇಕ್ಷತಾ ಜೀವನವನ್ನು ಹೂಂದಿದ್ದೀರಿ. ಅದೇ ರೀತಿ ಈ ವಿಶಾಲವಾದ ವಿಶ್ವ, ಇದು ಎಷ್ಟೇ ಸಾವಿರ ವರ್ಷಗಳವರೆಗೆ ಇರಬಹುದು. ಆದರೆ ಅದು ಶಾಶ್ವತವಲ್ಲ. ಇದು ಸತ್ಯ. ವಿಶ್ವವು ಒಂದು ದೊಡ್ಡ ಭೌತಿಕ ವಸ್ತುವಾದ್ದರಿಂದ ಅದು ಕೆಲವು ವರ್ಷಗಳ ಕಾಲ ಇರಬಹುದು. ಆದರೆ ಅದು ನಾಶವಾಗುತ್ತದೆ. ಅದು ಪ್ರಕೃತಿಯ ನಿಯಮ. ಹಾಗೂ ಸಮಯವು ಮುಗಿದಾಗ ಈ ನಶ್ವರವಾದ ಸೃಷ್ಟಿಯು ನಾಶವಾಗುತ್ತದೆ. ಪರಿಪೂರ್ಣನಾದ ಭಗವಂತನಿಂದ ಇದು ಸಾಧ್ಯವಾಗುತ್ತದೆ. ನಿಮ್ಮ ಸಮಯವು ಮುಗಿದಾಗ, ಎಲ್ಲವೂ ಮುಗಿಯುತ್ತದೆ. ಯಾರೂ ಕಾಪಾಡಲು ಸಾಧ್ಯವಿಲ್ಲ. ಈ ವ್ಯವಸ್ಥೆಯು ಬಹಳ ಬಲಯುತವಾಗಿದೆ. "ನಾನು ಇಲ್ಲಿಯೇ ಇರುತ್ತೇನೆ" ಎಂದು ಹೇಳಲು ಸಾಧ್ಯವಿಲ್ಲ. ಇದು ನಿಜವಾಗಿ ನಡೆದ ಘಟನೆ. ನಾನು ಭಾರತದ ಅಲಹಾಬಾದ್ ನಲ್ಲಿ ಇದ್ದಾಗ, ನಮ್ಮ ಒಬ್ಬ, ಗೆಳೆಯ, ಅವನು ತುಂಬಾ ಶ್ರೀಮಂತ. ಅವನ ಸಾವು ಹತ್ತಿರವಾಗಿತ್ತು. ಅವನು ವೈದ್ಯರಲ್ಲಿ ವಿನಂತಿಸಿಕೊಳ್ಳುತ್ತಿದ್ದ, "ನೀವು ನನ್ನನ್ನು ನಾಲ್ಕು ವರ್ಷಗಳಾದರೂ ಬದುಕುವಂತೆ ಮಾಡಲು ಸಾಧ್ಯವಿಲ್ಲವೇ"? ನನಗೆ ಕೆಲವು ಯೋಜನೆಗಳಿವೆ, ನಾನು ಅವುಗಳನ್ನು ಪೂರ್ಣಗೊಳಿಸಿಲ್ಲ". ಆಶಾ ಪಾಶ ಶತೈ ಬದ್ಧ (ಭಗವದ್ಗೀತೆ 16.12). ಇದು ಆಸುರೀ ಪ್ರವೃತ್ತಿ. "ನಾನು ಇದನ್ನು ಮಾಡಬೇಕು. ನಾನು ಇದನ್ನು ಮಾಡಬೇಕು." ಎಂದು ಪ್ರತಿಯೊಬ್ಬರೂ ಯೋಚಿಸುತ್ತಾರೆ. ಇಲ್ಲ, ವೈದ್ಯರು ಅಥವಾ ಅವರ ತಂದೆ, ಯಾವುದೇ ವಿಜ್ಞಾನಿ ಕೂಡ ರಕ್ಷಿಸಲಾರರು. "ನಾಲ್ಕು ವರ್ಷಗಳಲ್ಲ, ನಾಲ್ಕು ನಿಮಿಷಗಳೂ ಇಲ್ಲ. ನೀವು ಕೂಡಲೇ ಹೊರಡಬೇಕು." ಇದೇ ಕಾನೂನು. ಆದ್ದರಿಂದ ಅಂತಹ ಸಮಯ ಬರುವ ಮೊದಲೇ, ತನ್ನ ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸಲು ವ್ಯಕ್ತಿಯು ನಿಪುಣನಾಗಿರಬೇಕು. ತೂರ್ಣಂ ಯತೇತ (SB 11.9.29) ತೂರ್ಣಂ ಎಂದರೆ ಅತ್ಯಂತ ವೇಗವಾಗಿ, ಆದಷ್ಟು ಬೇಗ ನೀವು ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸಿಕೂಳ್ಳಬೇಕು. ಅನು... ಮುಂದಿನ ಸಾವು ಬರುವ ಮುನ್ನ ನೀವು ನಿಮ್ಮ ಕೆಲಸ ಸಾಧಿಸಬೇಕು. ಅದೇ ಬುದ್ಧಿವಂತಿಕೆ. ಇಲ್ಲದಿದ್ದಲ್ಲಿ ಸೋಲುತ್ತೀರಿ. ಧನ್ಯವಾದಗಳು.