KN/Prabhupada 0043 - ಭಗವದ್ಗೀತೆಯೆ ಮೂಲ ತತ್ವ

Revision as of 21:21, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)


Lecture on BG 7.1 -- Sydney, February 16, 1973

ಯೋಗಂ ಯುಂಜನ್ ಮದ್-ಆಶ್ರಯಃ
ಅಸಂಶಯಂ ಸಮಗ್ರಂ ಮಾಮ್
ಯಥಾ ಜ್ಞಾಸ್ಯಸಿ ತಚ್ ಛೃಣು
(ಭ.ಗೀ 7.1)

ಇದು ಭಗವದ್ಗೀತೆಯಲ್ಲಿರುವ ಒಂದು ಶ್ಲೋಕ, ಹೇಗೆ ಕೃಷ್ಣಪ್ರಜ್ಞೆ ಅಥವ ದೈವಪ್ರಜ್ಞೆಯನ್ನು ವಿಕಸಿಸಿಕೊಳ್ಳಬಹುದು ಎಂಬುವುದರ ಬಗ್ಗೆ. ಭಗವದ್ಗೀತಾ. ನಿಮ್ಮಲಿ ಬಹಳ ಜನ ಈ ಗ್ರಂಥದ ಹೆಸರನ್ನು ಕೇಳಿರುವಿರಿ. ಅದು ವಿಶ್ವದಾದ್ಯಂತ ಅತಿ ವ್ಯಾಪಕವಾಗಿ ಓದುವ ಜ್ಞಾನದ ಗ್ರಂಥ. ಬಹುಮಟ್ಟಿಗೆ ಪ್ರತಿ ದೇಶದಲ್ಲು ಭಗವದ್ಗೀತೆಯ ಹಲವಾರು ಆವೃತಿಗಳಿವೆ. ಆದ್ದರಿಂದ ಭಗವದ್ಗೀತೆಯು ನಮ್ಮ ಕೃಷ್ಣಪ್ರಜ್ಞೆ ಆಂದೋಲನದ ಮೂಲತತ್ವವಾಗಿದೆ. ನಾವು ಕೃಷ್ಣ ಪ್ರಜ್ಞೆಯೆಂದು ಏನನ್ನು ಪ್ರಸಾರಮಾಡುತ್ತಿರುವೆವೋ ಅದು ಭಗವದ್ಗೀತೆ ಮಾತ್ರವೆ. ನಾವು ಏನನ್ನು ತಯಾರಿಸಿಲ್ಲ. ಕೃಷ್ಣಪ್ರಜ್ಞೆಯು ಸೃಷ್ಟಿಯ ಸಮಯದಿಂದಲೂ ಅಸ್ತಿತ್ವದಲ್ಲಿದೆ, ಆದರೂ ಸರಿಸುಮಾರು ಕಳೆದ ಐದು ಸಾವಿರ ವರುಷಗಳ ಹಿಂದೆ, ಕೃಷ್ಣನು ಈ ಗ್ರಹದಲ್ಲಿ ಪ್ರಸ್ತುತನಾಗಿದ್ದಾಗ, ಅವನು ಖುದ್ದಾಗಿ ಕೃಷ್ಣಪ್ರಜ್ಞೆಯನು ಬೋಧಿಸಿದನು, ಹಾಗು ಅವನು ಇಲ್ಲೆ ಬಿಟ್ಟು ಹೋದಂತಹ ಬೋಧನೆಯೇ ಭಗವದ್ಗೀತಾ. ದುರದೃಷ್ಟವಶಾತ್, ಈ ಭಗವದ್ಗೀತೆಯು ಕೇವಲ ನಾಮಮಾತ್ರದ ಪಂಡಿತರು ಮತ್ತು ಸ್ವಾಮಿಗಳಿಂದ ಹಲವಾರು ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಗಲಾಗಿದೆ. ಮಾಯಾವಾದಿ ವರ್ಗ ಅಥವ ನಾಸ್ತಿಕ ವರ್ಗದವರು ಭಗವದ್ಗೀತೆಯನ್ನು ಅವರ ಸ್ವಂತ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. 1966ರಲ್ಲಿ, ನಾನು ಅಮೇರಿಕದಲ್ಲಿದ್ದಾಗ, ಒಬ್ಬ ಅಮೇರಿಕನ್ ಹೆಣ್ಣು ತಾನು ಓದುವುದಕ್ಕೆ ಭಗವದ್ಗೀತೆಯ ಆಂಗ್ಲ ಭಾಷ ಆವೃತಿಯನ್ನು ಸೂಚಿಸಿಯೆಂದು ನನ್ನನ್ನು ಕೇಳಿದಳು. ಆದರೆ ಪ್ರಾಮಾಣಿಕವಾಗಿ ನಾನು ಯಾವೊಂದನ್ನೂ ಸೂಚಿಸಲಾಗಲಿಲ್ಲ… ಅವುಗಳ ಭ್ರಾಂತಿಯುತ ವಿವರಣೆಯ ಕಾರಣದಿಂದ. ಅದು ನನಗೆ ಭಗವದ್ಗೀತಾ ಯಥಾರೂಪವನ್ನು ರಚಿಸಲು ಉತ್ತೇಜನ ನೀಡಿತು. ಹಾಗು ಭಗವದ್ಗೀತಾ ಯಥಾರೂಪದ ಈ ಪ್ರಸ್ತುತ ಆವೃತ್ತಿಯನ್ನು ಜಗತ್ತಿನ ಅತಿ ದೊಡ್ಡ ಪ್ರಕಾಶಕರಾದಂತಹ ಮಾಕ್ಮಿಲನ್ ಸಂಸ್ಥೆ ಪ್ರಕಟಿಸುತ್ತಿದೆ. ಮತ್ತು ನಾವು ಬಹಳ ಚೆನ್ನಾಗಿ ನಡೆಸುತ್ತಿದ್ದೇವೆ. 1968ರಲ್ಲಿ, ನಾವು ಭಗವದ್ಗೀತಾ ಯಥಾರೂಪದ ಸಂಕ್ಷಿಪ್ತ ಆವೃತ್ತಿಯನು ಪ್ರಕಟಿಸಿದ್ದೆವು. ಅದು ಅದ್ಭುತವಾಗಿ ಮಾರಾಟವಾಯಿತು! ಮಾಕ್ಮಿಲನ್ ಸಂಸ್ಥೆಯ ಮಾರಾಟ ನಿರ್ವಾಹಕರು ನಮ್ಮ ಪುಸ್ತಕಗಳು ಹೆಚ್ಚು ಹೆಚ್ಚಾಗಿ ಮಾರಾಟವಾಗುತ್ತಿದೆ, ಇತರ ಪುಸ್ತಕಗಳು ಕಡಿಮೆಯಾಗುತ್ತಿದೆಯೆಂದು ವರದಿ ನೀಡಿದರು. ನಂತರ ಇತ್ತೀಚೆಗೆ, 1972ರಲ್ಲಿ, ನಾವು ಭಗವದ್ಗೀತಾ ಯಥಾರೂಪದ ಈ ಪೂರ್ಣ ಆವೃತ್ತಿಯನ್ನು ಪ್ರಕಟಿಸಿದೆವು. ಹಾಗು ಮಾಕ್ಮಿಲನ್ ಸಂಸ್ಥೆಯು ಇದರ ಐವತ್ತು ಸಾವಿರ ಪ್ರತಿಗಳನ್ನು ಮುಂಗಡವಾಗಿ ಪ್ರಕಟಿಸಿದರು, ಆದರೆ ಕೇವಲ ಮೂರು ತಿಂಗಳಲ್ಲೆ ಅವು ಮಾರಾಟವಾದವು! ಈಗ ಎರಡನೇಯ ಆವೃತ್ತಿಗೆ ವ್ಯವಸ್ಥೆ ಮಾಡುತ್ತಿದ್ದಾರೆ.