KN/Prabhupada 0045 - ಜ್ಞಾನದ ಗುರಿಯನ್ನು ಜ್ಞೇಯಂ ಎನ್ನುತ್ತಾರೆ

Revision as of 21:21, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)


Lecture on BG 13.1-2 -- Paris, August 10, 1973

ಪ್ರಕೃತಿಂ ಪುರುಷಂ ಚೈವ
ಕ್ಷೇತ್ರಂ ಕ್ಷೇತ್ರಜ್ಞಮೇವ ಚ
ಏತದ್ ವೇದಿತುಮಿಚ್ಛಾಮಿ
ಜ್ಞಾನಂ ಜ್ಞೇಯಂ ಚ ಕೇಶವ
(ಭ.ಗೀ 13.1-2)

ಇದು ಮಾನವನಿಗಿರುವ ವಿಶೇಷಾಧಿಕಾರ… ಅವನು ಪ್ರಕೃತಿಯನ್ನು ಅರ್ಥಮಾಡಿಕೊಳ್ಳ ಬಹುದು, ಈ ಬ್ರಹ್ಮಾಂಡದ ಅಭಿವ್ಯಕ್ತಿ, ಮತ್ತು ಪ್ರಕೃತಿಯನ್ನು ಅನುಭವಿಸುವವ, ಮತ್ತು ಅವನು ಸಂಪೂರ್ಣವಾಗಿ ಜ್ಞಾನದ ಗುರಿಯೇನೆಂಬುದನ್ನು...ಜ್ಞೇಯಂ...ಅರಿತವನಾಗಿರುತ್ತಾನೆ.

ಮೂರು ವಿಷಯಗಳಿವೆ: ಜ್ಞೇಯಂ, ಜ್ಞಾತ, ಜ್ಞಾನಂ ಜ್ಞಾನದ ಗುರಿಯೇನೆಂಬುದು ತಿಳಿದವನು ಜ್ಞಾತ, ಮತ್ತು ಜ್ಞಾನದ ಗುರಿಯನ್ನು ಜ್ಞೇಯಂ ಎನ್ನುತ್ತಾರೆ ಹಾಗು ಇದನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯನ್ನು ಜ್ಞಾನ ಎನ್ನುತ್ತಾರೆ. ‘ಜ್ಞಾನ’ ಎಂದು ಹೇಳಿದಾಕ್ಷಣ ಮೂರು ವಿಷಯಗಳಿರಬೇಕು: ಜ್ಞಾನದ ಗುರಿಯು, ಅದನ್ನು ತಿಳಿದುಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿ, ಹಾಗು ಜ್ಞಾನದ ಗುರಿಯನ್ನು ಸಾಧಿಸುವ ಪ್ರಕ್ರಿಯೆ. ಆದ್ದರಿಂದ ಕೆಲವರು… ಐಹಿಕ ವಿಜ್ಞಾನಿಗಳಂತವರು… ಕೇವಲ ಪ್ರಕೃತಿಯನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಪುರುಷನ ಬಗ್ಗೆ ತಿಳಿದ್ದಿಲ್ಲ. ಪ್ರಕೃತಿ ಎ೦ದರೆ ಅನುಭವಿಸುವ, ಮತ್ತು ಪುರುಷ ಎ೦ದರೆ ಅನುಭವಿಸುವವ. ಯಥಾರ್ಥಕ್ಕೆ ಕೃಷ್ಣನೆ ಅನುಭವಿಸುವವ. ಅವನೆ ಮೂಲ ಪುರುಷ. ಅರ್ಜುನನು ಇದನ್ನು ಒಪ್ಪಿಕೊಳ್ಳುತ್ತಾನೆ – ಪುರುಷಂ ಶಾಶ್ವತಂ. “ನೀನೆ ಮೂಲವಾದ ಅನುಭವಿಸುವವ, ಪುರುಷ.” ಕೃಷ್ಣನೆ ಪುರುಷ, ಮತ್ತು ನಾವು ಪ್ರತಿಯೊಬ್ಬರು, ಜೀವಿಗಳು, ಹಾಗು ಪ್ರಕೃತಿ, ಎಲ್ಲವೂ, ಕೃಷ್ಣನು ಅನುಭವಿಸುವುದಕೋಸ್ಕರ. ಅದು ಕೃಷ್ಣನ… ಇನ್ನೊಬ್ಬ ಪುರುಷ, ನಾವು ಈ ಜೀವಿಗಳು. ನಾವು ಪುರುಷರಲ್ಲ. ನಾವೂ ಪ್ರಕೃತಿಯೆ! ನಾವು ಅನುಭವಿಸುವ (ಅಂದರೆ ಪ್ರಕೃತಿ), ಆದರೆ ಈ ಐಹಿಕ ನೆಲೆಯಲ್ಲಿ ಅನುಭವಿಸುವವನಾಗಲು, ಪುರಷನಾಗಲು ಪ್ರಯತ್ನಿಸುತ್ತಿದ್ದೇವೆ. ಇದರ ಅರ್ಥ, ಪ್ರಕೃತಿ ಅಥವ ಜೀವಿಗಳು ಯಾವಾಗ ಪುರುಷನಾಗಲು ಬಯಸುತ್ತವೆಯೊ ಅದೆ ಐಹಿಕ ನೆಲೆ. ಒಂದು ಹೆಣ್ಣು ಗಂಡಾಗಿ ಮಾರಲು ಪ್ರಯತ್ನಿಸುವುದು, ಅದು ಅಸಹಜವು, ಅಂತೆಯೇ ಜೀವಿಗಳು, ಯಾರು ಸಹಜವಾಗಿ ಅನುಭವಿಸುವರಾಗಬೇಕೊ…

ಆ ಉದಾಹರಣೆ, ನಾನು ಬಹಳ ಸಲ ಹೇಳಿರುವ ಹಾಗೆ… ಈ ಬೆರಳು ಸ್ವಲ್ಪ ಆಹಾರಪದಾರ್ಥವನ್ನು ತೆಗೆಯುತ್ತದೆ ಆದರೆ ನಿಜವಾಗಿ ನೋಡಿದರೆ ಬೆರಳುಗಳು ಅನುಭವಿಸುವವನಲ್ಲ. ಬೆರಳುಗಳು ನಿಜವಾದ ಅನುಭವಿಸುವವನಿಗೆ, ಅಂದರೆ ಹೊಟ್ಟೆಗೆ, ಸಹಾಯ ಮಾಡಬಹುದು. ಅದು ರುಚಿಕರವಾದ ಸ್ವಲ್ಪ ಆಹಾರ ಪದಾರ್ಥವನ್ನು ತೆಗೆದು ಬಾಯಿಯೊಳಗೆ ಹಾಕಬಹುದು. ಅದು ಹೊಟ್ಟೆಯನ್ನು, ಅಂದರೆ ನಿಜದಾದ ಪುರುಷನನ್ನು, ಸೇರುತ್ತಿದಂತೆ ಆಗ ಎಲ್ಲಾ ಪ್ರಕೃತಿಗಳೂ, ದೇಹದ ಅಂಗಾಂಗಗಳೂ, ಕೈಗಳು ಹಾಗು ಕಾಲ್ಗಳು, ತೃಪ್ತಿ ಪಡೆಯುತ್ತವೆ. ಆದ್ದರಿಂದ ಹೊಟ್ಟೆಯೆ ಅನುಭವಿಸುವವ, ದೇಹದ ಬೇರೆಯಾವ ಅಂಗವಲ್ಲ.

ಹಿತೋಪನಿಷದ್, ಅಥವ ಹಿತೋಪದೇಶದಲ್ಲಿ... ಈಸೋಪನ ನೀತಿಕತೆಗಳು ಇದರಿಂದ ಅನುವಾದವಾದದ್ದು…ಒಂದು ಕಥೆಯಿದೆ. ಒಂದು ಕಥೆಯಿದೆ “ಉದರೇಂದ್ರಿಯಾನಾಮ್”. ಉದರ. ಉದರ ಅಂದರೆ ಹೊಟ್ಟೆ, ಹಾಗು ಇಂದ್ರಿಯ ಅಂದರೆ ನಮ್ಮ ಇಂದ್ರಿಯಗಳು. “ಉದರೇಂದ್ರಿಯಾನಾಮ್” ಎನ್ನುವ ಕಥೆಯಿದೆ. ಇಂದ್ರಿಯಗಳು…ಎಲ್ಲ ಇಂದ್ರಿಯಗಳು ಒಂದು ಸಭೆಯಲ್ಲಿ ಭೇಟಿಯಾದರು. ಅವರು ಹೇಳಿಕೊಂಡರು: “ನಾವು ಕೆಲಸ ಮಾಡುತ್ತಿದ್ದೇವೆ, ಇಂದ್ರಿಯಗಳು…” (ಪಕ್ಕಕ್ಕೆ) ಅದು ಏಕೆ ತೆಗೆದಿದೆ?

“ನಾವು ಕೆಲಸ ಮಾಡುತ್ತಿದ್ದೇವೆ.” ಕಾಲು ಹೇಳಿತು, “ನಾನು ಇಡೀ ದಿನ ನಡೆಯುತ್ತಿದ್ದೇನೆ.” ಕೈ ಹೇಳಿತು, “ಹೌದು. ನಾನು ಇಡೀ ದಿನ ಕೆಲಸ ಮಾಡುತ್ತಿದ್ದೇನೆ. ದೇಹವು ಎಲ್ಲೆಲ್ಲ ಹೇಳುತದೊ… “ಇಲ್ಲಿ ಬಂದು ಆಹಾರವನ್ನು ತೆಗೆದುಕೊ.” “ಪದಾರ್ಥಗಳನ್ನು ತರುವುದು. ನಾನು ಅಡುಗೆಯೂ ಮಾಡುತ್ತೇನೆ.” ನಂತರ ನೇತ್ರಗಳು…ಅವು ಹೇಳಿದವು, “ನಾವು ನೋಡುತ್ತಿದ್ದೇವೆ.” ಪ್ರತಿ ಅವಯವ, ದೇಹದಾದ್ಯಂತ, ಮುಷ್ಕರ ಮಾಡಿದವು ಕೇವಲ ತಿನ್ನುತ್ತಿರುವ ಹೊಟ್ಟೆಗಾಗಿ ನಾವು ಕೆಲಸ ಇನ್ನು ಮಾಡುವುದಿಲ್ಲ” ಎಂದು. “ನಾವೆಲ್ಲ ಕೇಲಸಮಾಡುತ್ತಿದ್ದೇವೆ. ಈ ವ್ಯಕ್ತಿ , ಅಥವ ಹೊಟ್ಟೆ, ಬರಿ ತಿನ್ನುತ್ತಿದ್ದಾನೆ.” ಆಗ ಮುಷ್ಕರವಾಯಿತು. ಮಾಲಿಕನಿಗು ನೌಕರನಿಗು ಆದಂತೆ. ನೌಕರನು ಮುಷ್ಕರ ಮಾಡುತ್ತಾನೆ, ಇನ್ನು ಕೆಲಸ ಮಾಡುವುದಿಲ್ಲ. ಅಂತೆಯೆ ಎಲ್ಲಾ ಅವಯವಗಳು, ದೇಹದ ಅಂಗಾಂಗಗಳೂ, ಮುಷ್ಕರ ಮಾಡಿದವು. ಹಾಗು ಎರಡು ದಿನದ ನಂತರ ಅವುಗಳು ಮತ್ತೆ ಭೇಟಿಯಾದಾಗ ತಮ್ಮತಮ್ಮಲೆ ಮಾತಾಡಿಕೊಂಡವು, “ ನಾವೇಕೆ ದುರ್ಬಲರಾಗುತ್ತಿದ್ದೇವೆ?” ಎಂದು. “ನಾವು ಈಗ ಕೆಲಸಮಾಡಲಾಗುವುದಿಲ್ಲ.” ಕಾಲುಗಳೂ ಹೇಳಿದವು, ”ನಾವು ದುರ್ಬಲರಾದಂತೆ ಅನಿಸುತಿದೆ.” ಕೈಗಳೂ ದುರ್ಬಲರಾದಂತೆ ಅನಿಸುತಿದೆ, ಎಲ್ಲರೂ.” ಅಂದರೆ ಕಾರಣವೇನು? ಕಾರಣವೆಂದರೆ… ಆಗ ಹೊಟ್ಟೆ ಹೇಳಿತು, “ಏಕೆಂದರೆ ನಾನು ತಿನ್ನುತ್ತಿಲ್ಲ.” “ಆದ್ದರಿಂದ ನೀವು ಬಲಿಷ್ಟವಾಗಿರಬೇಕೆಂದರೆ ನನಗೆ ತಿನ್ನಲು ಆಹಾರ ಕೊಡಬೇಕು.” ಇಲ್ಲವೆಂದರೆ… ನಾನು ಅನುಭವಿಸುವವ. ನೀವಲ್ಲ. “ನೀವು ನನ್ನ ಆನಂದಕ್ಕೆ ಪದಾರ್ಥಗಳನ್ನು ಒದಗಿಸಬೇಕು. ಅದು ನಿಮ್ಮ ಸ್ಥಾನ.” ಆಗ ಅವುಗಳು ಅರ್ಥಮಾಡಿಕೊಂಡವು, “ಹೌದು, ನಾವು ನೇರವಾಗಿ ಅನುಭವಿಸಲಾಗುವುದಿಲ್ಲ. ಅದು ಸಾಧ್ಯವಲ್ಲ.”

ಅನುಭವಿಸುವುದು ಹೊಟ್ಟೆಯ ಮುಖಾಂತರವೆ ಆಗಬೇಕು. ನೀವು ಒಂದು ರಸಗುಲ್ಲಾ ತೆಗೆದುಕೊಳ್ಳಿ, ಆ ಬೆರಳುಗಳು ಅನುಭವಿಸುವುದಕ್ಕಾಗುವುದಿಲ್ಲ. ಅದನ್ನು ಬಾಯಲ್ಲಿಟ್ಟರೆ, ಹೊಟ್ಟೆಗೆ ಹೋದಾಗ ತಕ್ಷಣ ಚೈತನ್ಯ ತುಂಬುತ್ತದೆ. ಆಗ ಕೇವಲ ಬೆರಳುಗಳು ಮಾತ್ರ ಅನುಭವಿಸುವುದಿಲ್ಲ, ನೇತ್ರಗಳು, ಎಲ್ಲಾ ಅವಯವಗಳು, ಅವೂ ಕೂಡ ತೃಪ್ತಿ ಹಾಗು ಶಕ್ತಿಯುತವಾಗುತ್ತದೆ. ಆಂತೆಯೆ ನಿಜವಾದ ಅನುಭವಿಸುವವ ಕೃಷ್ಣ. ಕೃಷ್ಣನು ಹೇಳುತ್ತಾನೆ,

ಭೋಕ್ತಾರಂ ಯಜ್ಞತಪಸಾಮ್
ಸರ್ವಲೋಕ ಮಹೇಶ್ವರಮ್
ಸುಹೃದಂ ಸರ್ವಭೂತಾನಾಮ್
ಜ್ಞಾತ್ವಾ ಮಾಂ ಶಾಂತಿಮೃಚ್ಛತಿ”
(ಭ.ಗೀ 5.29)