KN/Prabhupada 0062 - ಇಪ್ಪತ್ತನಾಲ್ಕು ಗಂಟೆಯು ಕೃಷ್ಣನನ್ನು ದರ್ಶಿಸು

Revision as of 21:24, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


Lecture on SB 1.8.18 -- Chicago, July 4, 1974

ಪ್ರಭುಪಾದ: ಆರಾಧಿತೋ ಯದಿ ಹರಿಸ್ ತಪಸಾ ತತಃ ಕಿಮ್. ನೀವು ಕೃಷ್ಣನನ್ನು ಪೂಜಿಸಲಾದರೆ, ಬೇರೆ ಇನ್ನು ಯಾವುದೇ ವ್ರತ, ತಪಸ್ಸುಗಳ ಅವಶ್ಯಕತೆಯಿಲ್ಲ… ಏಕೆಂದರೆ ಆತ್ಮ-ಸಾಕ್ಷಾತ್ಕಾರವಾಗಲು, ಅಥವ ದೇವರನ್ನು ತಿಳಿದುಕೊಳ್ಳಲು ಹಲವಾರು ಪ್ರಕ್ರಿಯೆಗಳು, ವ್ರತಗಳು ಹಾಗು ತಪಸ್ಸುಗಳಿವೆ. ಕೆಲವೊಮ್ಮೆ ನಾವು ದೇವರು ಎಲ್ಲಿದ್ದಾನೆ ಎಂದು ಹುಡುಕುತ್ತ ಕಾಡಿಗೆ ಹೋಗುತ್ತೇವೆ… ಎಲ್ಲಿ… ಹಲವಾರು ಪ್ರಕ್ರಿಯೆಗಳಿವೆ, ಆದರೆ ಶಾಸ್ತ್ರವು ಹೇಳುತ್ತದೆ ನೀವು ನಿಜವಾಗಿಯು ಕಷ್ಣನನ್ನು ಪೂಜಿಸುತ್ತಿದ್ದರೆ, ಆರಾಧಿತೋ ಯದಿ ಹರಿಸ್ ತಪಸಾ ತತಃ ಕಿಮ್, ಆಗ ನೀವು ತೀವ್ರವಾದ ವ್ರತಗಳು ಹಾಗು ತಪಸ್ಸುಗಳನ್ನು ಮಾಡುವ ಅವಶ್ಯಕತೆಯಿಲ್ಲ. ಹಾಗು ನರಾಧಿತೋ, ನರಾಧಿತೋ ಯದಿ ಹರಿಸ್ ತಪಸಾ ತತಃ ಕಿಮ್, ಕೊನೆಗು ಕಠೋರವಾದ… ಕಠೋರವಾದ ತಪಸ್ಸು ಮತ್ತು ವ್ರತಗಳನ್ನು ಆಚರಿಸಿದ ನಂತರವು ನಿಮಗೆ ಕೃಷ್ಣನು ಯಾರೆಂದು ತಿಳಿಯದಿದ್ದರೆ ಉಪಯೋಗವೇನು? ಅದು ವ್ಯರ್ಥ. ನರಾಧಿತೋ ಯದಿ ಹರಿಸ್ ತಪಸಾ ತತಃ ಕಿಮ್, ಅಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್. ಅಂತೆಯೇ, ನೀವು ಇಪ್ಪತ್ತನಾಲ್ಕು ಗಂಟೆಯೂ ಕೃಷ್ಣನನ್ನುಒಳಗು ಮತ್ತು ಹೊರಗು ದರ್ಶಿಸಲು ಆದರೆ ಅದುವೇ ಎಲ್ಲ ತಪಸ್ಸಿನ ಅಂತಿಮ ಪ್ರತಿಫಲ.

ಇಲ್ಲಿ ಕೃಷ್ಣ ಮತ್ತೆ ಹೇಳುತ್ತಾನೆ…ಕುಂತಿ ಹೇಳುತ್ತಾಳೆ, “ಕೃಷ್ಣನು ಒಳಗೆ ಮತ್ತು ಹೊರಗೆ ಇದ್ದರೂ, ನಮಗೆ ಅವನನ್ನು ನೋಡಲು ಕಣ್ಣುಗಳು ಇಲ್ಲದ ಕಾರಣ, ಅಲಕ್ಷ್ಯಮ್, ಅವನು ಅದೃಶ್ಯವಾಗಿರುತ್ತಾನೆ.” ಇಲ್ಲಿ ಇರುವ ಹಾಗೆಯೇ, ಕೃಷ್ಣನು ಕುರುಕ್ಷೇತ್ರ ರಣರಂಗದಲ್ಲಿದಾಗ, ಕೇವಲ ಐದು ಪಾಂಡವರು, ಹಾಗು ಅವರ ತಾಯಿ ಕುಂತಿ ಮಾತ್ರವೇ ಕೃಷ್ಣನು ದೇವೋತ್ತಮ ಪರಮಪುರುಷನೆಂದು ತಿಳಿದವರು. ಹಾಗು ಇನ್ನು ಕೆಲವರು. ಅಲ್ಲಿ ಸ್ವಯಂ ಕೃಷ್ಣನೇ ಇದ್ದರೂ, ಕೆಲವರು ಅವನನ್ನು ಸಾಧಾರಣ ಮನುಷ್ಯನೆಂದು ಪರಿಗಣಿಸಿದರು. ಅವಜಾ…, ಅವಜನಾಂತಿ ಮಾಮ್ ಮೂಢಾ ಮಾನುಷಿಮ್ ತನುಮ್ ಆಶ್ರಿತಮ್. ಮಾನವ ಸಮಾಜದ ಮೇಲೆ ಬಹಳ ದಯೆಯಿರುವುದರಿಂದ ಅವನೇ ವೈಯಕ್ತಿಕವಾಗಿ ಇಳಿದು ಬಂದ. ಆದರೂ, ಅವನನ್ನು ನೋಡಲು ದೃಷ್ಠಿಯಿಲ್ಲದ ಕಾರಣ ಅವರು ನೋಡಲಾಗಲಿಲ್ಲ. ಆದ್ದರಿಂದ ಕುಂತಿ ಹೇಳುತ್ತಾಳೆ, ಅಲಕ್ಷ್ಯಮ್, “ನೀನು ಅದೃಶ್ಯ, ‘ಅಂತಃ ಬಹೀಃ, ಸರ್ವ ಭೂತಾನಾಮ್’ ಆದರೂ ಕೂಡ.” ಕೇವಲ ಭಕ್ತರಿಗೆ ಮಾತ್ರ ಅಂತಃ ಬಹೀಃ ಅಲ್ಲ – ಪ್ರತಿಯೊಬ್ಬರಿಗೂ. ಪ್ರತಿಯೊಬ್ಬನ ಹೃದಯದಲ್ಲೂ ಕೃಷ್ಣನು ನೆಲಸಿದ್ದಾನೆ, ಈಶ್ವರಃ ಸರ್ವ-ಭೂತಾನಾಮ್ ಹೃದ್-ದೇಶೆ. ತೋರಿಸುತ್ತಾ, ಹೃದ್-ದೇಶೆ, ಇಲ್ಲಿ ಹೃದಯದಲ್ಲಿ, ಕೃಷ್ಣನಿದ್ದಾನೆ. ಆದ್ದರಿಂದ ಧ್ಯಾನ, ಯೋಗತತ್ವವು, ಹೃದಯದಲ್ಲಿರುವ ಕೃಷ್ಣನನ್ನು ಹೇಗೆ ತಿಳಿಯುವುದು ಎಂದು. ಅದನ್ನೇ ಧ್ಯಾನವೆನ್ನುತ್ತಾರೆ.

ಆದ್ದರಿಂದ ಕೃಷ್ಣನ ಸ್ಥಾನ ಎಂದಿಗೂ ಅಲೌಕಿಕ. ನಾವು ಈ ಅಲೌಕಿಕ ಪ್ರಕ್ರಿಯೆ – ಕೃಷ್ನ ಪ್ರಜ್ಞೆ - ಯನ್ನು ನಿಯಂತ್ರಕ ತತ್ವಗಳನ್ನು ಸ್ವೀಕರಿಸಿ, ಪಾಪದ ಬದುಕಿನಿಂದ ಮುಕ್ತರಾಗಲು ಪ್ರಯತ್ನಿಸಬೇಕು. ಎಲ್ಲಾ ಪಾಪಕಾರ್ಯಗಳನ್ನೂ ಮಾಡುತ್ತಾ ಕೃಷ್ಣನನ್ನು ಕಾಣಲು ಅಥವ ತಿಳಿದುಕೊಳ್ಳಲಾಗುವುದಿಲ್ಲ. ಆಗ ಅದು ಅಸಾಧ್ಯ. ನ ಮಾಮ್ ದುಷ್ಕೃತಿನೋ ಮೂಢಾಃ ಪ್ರಪದ್ಯಂತೆ ನರಾಧಮಾಃ. ಯಾರು ದುಷ್ಕೃತಿನಃ…ಕೃತಿಯೆಂದರೆ ಅರ್ಹತೆ, ಶ್ಲಾಘ್ಯ ; ಆದರೆ ದುಷ್ಕೃತಿ ಅಂದರೆ ಅರ್ಹತೆಯನ್ನು ಪಾಪಕಾರ್ಯಗಳಲ್ಲಿ ತೊಡಗಿಸುವುದು. ಆದ್ದರಿಂದ, ನಾವು ಬೇಡಿಕೊಳ್ಳುವುದೇನೆಂದರೆ… ನಾವು ಬೇಡಿಕೊಳ್ಳುವುದಿಲ್ಲ; ಇದು ನಮ್ಮ ನಿಯಮ ನಿಬಂಧನೆಗಳು, ಪಾಪಕಾರ್ಯಗಳಿಂದ ಮುಕ್ತರಾಗಿರುವುದು. ಪಾಪಕಾರ್ಯಗಳೆಂದರೆ, ಪಾಪದ ಬದುಕಿನ ನಾಲ್ಕು ಸ್ತಂಬಗಳು – ಅನೈತಿಕ ಕಾಮಜೀವನ, ಮಾಂಸಸೇವನೆ, ಮದ್ಯಪಾನ ಹಾಗು ಜೂಜಾಟ. ಆದ್ದರಿಂದ ನಮ್ಮ ವಿಧ್ಯಾರ್ಥಿಗಳಿಗೆ ಉಪದೇಶಿಸಲಾಗಿದೆ…, ಉಪದೇಶಮಾತ್ರವಲ್ಲ, ಅವರು ಅನುಸರಿಸಲೇಬೇಕು; ಇಲ್ಲವಾದರೆ ಪತನಹೊಂದುತ್ತಾರೆ. ಏಕೆಂದರೆ ಒಬ್ಬ ಪಾಪಿ ಭಗವಂತನನ್ನು ಅರಿತುಕೊಳ್ಳಲಾಗುವುದಿಲ್ಲ. ನಾವು ಒಂದು ಕಡೆ ನಿಯಂತ್ರಕ ತತ್ವಗಳನ್ನು ಭಕ್ತಿಯ ಪ್ರಕ್ರಿಯೆಯನ್ನು ಆಚರಿಸುತ್ತ ಇನ್ನೊಂದು ಕಡೆ ಪಾಪಕರ್ಯಗಳನ್ನು ದೂರವಿಡಬೇಕು. ಆಗ ಕೃಷ್ಣನು ನಮ್ಮೊಡನೆ ಇರುತ್ತಾನೆ, ನೀವು ಅವನೊಂದಿಗೆ ಮಾತನಾಡಬಹುದು, ಅವನ ಜೊತೆಯಿರಬಹುದು. ಕೃಷ್ಣನು ಕರುಣಾಮಯಿ. ಕುಂತಿ ಹೇಗೆ ಕೃಷ್ಣ ತನ್ನ ಸೋದರಳಿಯ ಎಂಬಂತೆ ಮಾತನಾಡುತ್ತಿರುವಳೋ, ಹಾಗೆಯೇ ನೀವೂ ಕೂಡ ಕೃಷ್ಣನೊಂದಿಗೆ ನಿಮ್ಮ ಮಗನಂತೆ, ಗಂಡನಂತೆ, ಪ್ರಿಯಕರನಂತೆ, ಸ್ನೇಹಿತನಂತೆ, ಒಡೆಯನಂತೆ, ಹೇಗೆ ಬೇಕಾದರು ಮಾತನಾಡಬಹುದು.

ಈ ಚಿಕಾಗೋ ದೇವಸ್ಥಾನವನ್ನು ನೋಡಲು ನನಗೆ ಬಹಳ ಸಂತೋಷವಾಗುತ್ತದೆ. ನೀವು ಬಹಳ ಚೆನ್ನಾಗಿ ನಿರ್ವಹಿಸುತ್ತಿರುವಿರಿ, ಮತ್ತು ಸಭಾಂಗಣವು ಬಹಳ ಸುಂದರವಾಗಿದೆ. ಇದೇ ಸೇವಾಭಾವದಿಂದ ಮುನ್ನಡೆಯಿರಿ ಹಾಗು ಕೃಷ್ಣ ಪ್ರಜ್ಞಾವಂತರಾಗಿರಿ. ಆಗ ನಿಮ್ಮ ಜೀವನ ಸಫಲವಾಗುತ್ತದೆ.

ಧನ್ಯವಾದಗಳು.

ಭಕ್ತರು: ಜಯ! ಹರಿಬೋಲ್!