KN/Prabhupada 0064 - ಸಿದ್ಧಿ ಎಂದರೆ ಜೀವನದ ಪರಿಪೂರ್ಣತೆ

Revision as of 21:24, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


Lecture on SB 6.1.15 -- Denver, June 28, 1975

ಕೆಚಿತ್ ಅಂದರೆ ಯಾರೋ. ‘ಬಹಳ ಅಪರೂಪವಾಗಿ.’ ‘ಯಾರೋ’ ಅಂದರೆ ‘ಬಹಳ ಅಪರೂಪ’. ವಾಸುದೇವ-ಪರಾಯಣಾಃ ಆಗುವುದು ಅಷ್ಟು ಸುಲಭವಲ್ಲ. ನೆನ್ನೆ ನಾನು ವಿವರಿಸುತ್ತಿದ್ದೆ, ಭಗವಾನ್ ಕೃಷ್ಣ ಹೇಳುತ್ತಾನೆ ಯತತಾಮ್ ಅಪಿ ಸಿದ್ದಾನಾಮ್ ಕಶ್ಚಿದ್ ವೇತಿ ಮಾಮ್ ತತ್ತ್ವತಃ, ಮನುಷ್ಯಾಣಾಮ್ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ (ಭ.ಗೀ 7.3) ಸಿದ್ಧಿ ಎಂದರೆ ಜೀವನದ ಪರಿಪೂರ್ಣತೆ ಸಾಮಾನ್ಯವಾಗಿ ಎಲ್ಲರೂ ಅಷ್ಟಸಿದ್ದಿ ಎಂದರೆ ಯೋಗಾಭ್ಯಾಸ ಎಂದುಕೊಳ್ಳುತ್ತಾರೆ – ಅಣಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಸಿದ್ಧಿ, ಈಶಿತ್ವ, ವಶಿತ್ವ, ಪ್ರಾಕಾಮ್ಯ ಇವುಗಳನ್ನು ಸಿದ್ಧಿಗಳೆನ್ನುತ್ತಾರೆ, ಯೋಗಸಿದ್ಧಿ. ಯೋಗ-ಸಿದ್ಧಿಯೆಂದರೆ ಎಲಕ್ಕಿಂತಲೂ ಚಿಕ್ಕದಾಗುವುದು. ವಾಸ್ತವಿಕವಾಗಿ ನಮ್ಮ ಗಾತ್ರ ಬಹಳ ಚಿಕ್ಕದು. ಈ ಭೌತಿಕ ದೇಹವಿದ್ದರೂ ಕೂಡ, ಯೋಗ-ಸಿದ್ಧಿಯ ಮೂಲಕ ಒಬ್ಬ ಯೋಗಿ ಅತ್ಯಂತ ಚಿಕ್ಕ ಗಾತ್ರದವನಾಗಬಹುದು, ಹಾಗು ಎಲ್ಲೆ ಮುಚ್ಚಿಟ್ಟರು ಹೊರ ಬರುತ್ತಾನೆ. ಇದನ್ನು ಅಣಿಮಾ ಸಿದ್ಧಿ ಎಂದು ಕರೆಯುತ್ತಾರೆ. ಹಾಗೆಯೆ ಮಹಿಮಾ ಸಿದ್ಧಿ, ಲಘಿಮಾ ಸಿದ್ಧಿಗಳಿವೆ. ಅವನು ಹತ್ತಿಗಿಂತ ಹಗುರವಾಗಬಲ್ಲ. ಯೋಗಿಗಳು ಅಷ್ಟು ಹಗುರವಾಗುತ್ತಾರೆ. ಭಾರತದಲ್ಲಿ ಈಗಲು ಅಂತ ಯೋಗಿಗಳಿದ್ದಾರೆ. ನನ್ನ ಬಾಲ್ಯದಲ್ಲಿ, ನನ್ನ ತಂದೆಯನ್ನು ಭೇಟಿಮಾಡಲು ಬರುವ ಒಬ್ಬ ಯೋಗಿಯನ್ನು ನೋಡಿದ್ದೇನೆ. ಕೆಲವೇ ಕ್ಷಣಗಳಲ್ಲಿ ಎಲ್ಲಿಗೆ ಬೇಕಾದರು ಹೋಗಬಲ್ಲೆ ಎಂದು ಅವರು ಹೇಳುವರು. ಮತ್ತು ಆಗಾಗ ಮುಂಜಾನೆ ಜಗನ್ನಾಥ ಪುರಿಗೆ, ರಾಮೇಶ್ವರಮ್, ಹರಿದ್ವಾರ ಗೆ ಹೋಗುತ್ತಾರೆ, ಹಾಗು ಗಂಗಾ ಮತ್ತು ಬೇರೆ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಅದನ್ನು ಲಘಿಮಾ ಸಿದ್ಧಿ ಎನ್ನುತ್ತಾರೆ. ಬಹಳ ಹಗುರವಾಗಿಬಡುತ್ತೇವೆ. ಅವರು ಹೇಳುತ್ತಿದ್ದರು, “ನಾವು ನಮ್ಮ ಗುರುವಿನ ಹತ್ತಿರ ಕುಳಿತು ಮುಟ್ಟಿದರೆ ಸಾಕು ಇಲ್ಲಿ ಕುಳಿತಿರುವವರು ಕೆಲವೇ ಕ್ಷಣಗಳಲ್ಲಿ ಬೇರೆಲ್ಲೋ ಇರುವೆವು.” ಇದನ್ನು ಲಘಿಮಾ ಸಿದ್ಧಿ ಎನ್ನುತ್ತಾರೆ.

ಹೀಗೆ ಹಲವಾರು ಯೋಗ-ಸಿದ್ಧಿಗಳಿವೆ. ಈ ಯೋಗ-ಸಿದ್ಧಿಗಳನ್ನು ನೋಡಿ ಜನ ದಿಗ್ಬ್ರಾಂತರಾಗುತ್ತಾರೆ. ಆದರೆ ಕೃಷ್ಣ ಹೇಳುತ್ತಾನೆ, “ಯತತಾಮ್ ಅಪಿ ಸಿದ್ಧಾನಾಮ್” (ಭ.ಗೀ 7.3). “ಇಂತ ಯೋಗ-ಸಿದ್ಧಿಗಳನ್ನು ಪಡೆದ ಹಲವಾರು ಸಿದ್ಧರಲ್ಲಿ, “ಯತತಾಮ್ ಅಪಿ ಸಿದ್ಧಾನಾಮ್ ಕಶ್ಚಿದ್ ಮಾಮ್ ವೇತ್ತಿ ತತ್ತ್ವತಃ” (ಭ.ಗೀ 7.3), “ಯಾರೋ ಒಬ್ಬನು ನನ್ನನ್ನು ಅರ್ಥಮಾಡಿಕೊಳ್ಳಬಹುದು.” ಅದು ಸಾಧ್ಯವಲ್ಲ. ಯಾರು ಕೃಷ್ಣನಿಗೆ ಎಲ್ಲವನ್ನೂ ಸಮರ್ಪಿಸಿರುವರೋ ಕೇವಲ ಅವರು ಮಾತ್ರ ಕೃಷ್ಣನನ್ನು ತಿಳಿದುಕೊಳ್ಳಬಹುದು. ಆದ್ದರಿಂದ ಕೃಷ್ಣನಿಗೆ ಅದೇ ಬೇಕು. ಅವನು ಕೋರುತ್ತಾನೆ – “ಸರ್ವ ಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್ ಶರಣಂಮ್ (ಭ.ಗೀ 18.66). ಕೃಷ್ಣನನ್ನು ಒಬ್ಬ ಪರಿಶುದ್ಧ ಭಕ್ತನು ಮಾತ್ರ ತಿಳಿದುಕೊಳ್ಳಬಲ್ಲ, ಬೇರೆಯಾರಿಂದಲೂ ಅಲ್ಲ.