KN/Prabhupada 0072 - ಶರಣಾಗತಿಯೆ ದಾಸನ ಕರ್ತವ್ಯ

Revision as of 21:25, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


Lecture on CC Madhya-lila 20.108-109 -- New York, July 15, 1976

ಯಾರೂ ಪ್ರಭುವಾಗಲಾರರು. ಅದು ಅಸಾಧ್ಯ. “ಎಕಲೆ ಈಶ್ವರ ಕೃಷ್ಣಾ ಆರ ಸಭ ಭೃತ್ಯ” (ಚೈ.ಚ ಆದಿ 5.142) - ಈ ಬೋಧನೆಯಲ್ಲಿ ಕಾಣಬಹುದು. ಕೃಷ್ಣನೊಬ್ಬನೆ ಪ್ರಭು, ಮತ್ತು ನಾವೆಲ್ಲ ಅವನ ದಾಸರು. ಇದೇ ನಮ್ಮ ವಾಸ್ತವಿಕ ಸ್ಥಾನ. ಆದರೆ ನಾವು ಕ್ರತಕವಾಗಿ ಪ್ರಭುವಾಗಲು ಪ್ರಯತ್ನಿಸುತ್ತದ್ದೇವೆ. ಅದು ಅಸ್ತಿತ್ವಕ್ಕೆ ಹೋರಾಟ. ನಾವು ಏನು ಅಲ್ಲವೋ, ಅದೇ ಆಗಲು ಪ್ರಯತ್ನಿಸುತ್ತಿದ್ದೇವೆ. ‘ಅಸ್ತಿತ್ವಕ್ಕೆ ಹೋರಾಟ’, ‘ಶ್ರೇಷ್ಟರ ಬದುಕುಳಿಯುವಿಕೆ’ ಎಂಬ ವಾಕ್ಯಂಶಗಳನ್ನು ನಮಗೆ ಗೊತ್ತಿವೆ. ಇದನ್ನೇ ಹೆಣಗಾಟ ಎನ್ನುವುದು. ನಾವು ಪ್ರಭುವಲ್ಲ, ಆದರು ಪ್ರಭುವಾಗಲು ಪ್ರಯತ್ನಿಸುತ್ತಿದ್ದೇವೆ. ಮಾಯಾವಾದಿ ತತ್ವಜ್ಞರು ಕೂಡ ಕಠಿಣವಾದ ವ್ರತ-ತಪಸ್ಸುಗಳನ್ನು ಮಾಡುವರು ಆದರೆ ಉದ್ದೇಶವೇನು? “ಈಗ ನಾನು ದೇವರಲ್ಲಿ ವಿಲೀನನಾಗುತ್ತೇನೆ.” ಒಂದೇ ರೀತಿಯ ತಪ್ಪು. ಒಂದೇ ರೀತಿಯ ತಪ್ಪು. ಅವನು ದೇವರಲ್ಲ, ಆದರೆ ದೇವರಾಗಲು ಪ್ರಯತ್ನಿಸುತ್ತಿದ್ದಾನೆ. ಅಷ್ಟು ಕಠಿಣ ತಪಸ್ಸು, ವೈರಾಗ್ಯ, ಪರಿತ್ಯಾಗ, ಎಲ್ಲವು ಮಾಡಿದರು… ಕೆಲವೊಮ್ಮೆ ಎಲ್ಲ ಭೌತಿಕ ಸುಖಗಳನ್ನು ಬಿಟ್ಟು ಕಾಡಿಗೆ ಹೋಗಿ ಹಲವಾರು ರೀತಿಯ ಕಠಿಣ ತಪಸ್ಸುಗಳನ್ನು ಮಾಡುತ್ತಾರೆ. ಉದ್ದೇಶವೇನು? “ಈಗ ನಾನು ದೇವರಲ್ಲಿ ವಿಲೀನನಾಗುತ್ತೇನೆ.” ಒಂದೇ ರೀತಿಯ ತಪ್ಪು.

ಮಾಯೆ ಬಹಳ ಪ್ರಭಾವಿ, ಆಧ್ಯಾತ್ಮಿಕವಾಗಿ ಹೆಸರಿಗೆ-ಮಾತ್ರ ಮುಂದುವರೆದವರಲ್ಲಿ ಕೂಡ ಈದೇ ತಪ್ಪು ನಡೆಯುತ್ತಿದೆ. ಇಲ್ಲ. ಆದ್ದರಿಂದ ಚೈತನ್ಯ ಮಹಾಪ್ರಭುಗಳು ತಕ್ಷಣ ತಮ್ಮ ಬೋಧನೆಯಲ್ಲಿ ಈ ಮುಖ್ಯ ಅಂಶವನ್ನು ತಿಳಿಸುತ್ತಾರೆ. ಅದುವೇ ಚೈತನ್ಯ ಮಹಾಪ್ರಭುಗಳ ತತ್ವ. ಕೃಷ್ಣನು ಹೇಳುವ ಕೊನೆಯ ಮಾತು, “ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ (ಭ.ಗೀ 18.66). ಅವನು ಸ್ಥಾನದ ಬಗ್ಗೆ ಮಾತನಾಡುತ್ತಿದ್ದಾನೆ; ಅವನು ಕೃಷ್ಣ, ದೇವೋತ್ತಮ ಪರಮಪುರುಷ. ಅವನು ಕೇಳುತ್ತಿದ್ದಾನೆ, ಒತ್ತಾಯಿಸುತ್ತಿದ್ದಾನೆ, “ಎಲೆ ದೂರ್ತನೆ, ಎಲ್ಲವನ್ನು ಪರಿತ್ಯಜಿಸು. ನನಗೆ ಶರಣಾಗತನಾಗು. ಆಗ ಸಂತೋಷದಿಂದಿರುವೆ.” ಭಗವದ್ಗೀತೆಯ ಇದು ಕೊನೆಯ ಬೋಧನೆ. ಚೈತನ್ಯ ಮಹಾಪ್ರಭು, ಅವನೇ ಕೃಷ್ಣನು, ಆದರೆ ಕೃಷ್ಣನ ಭಕ್ತನಂತೆ ವರ್ತಿಸುತ್ತಿರುವನು. ಆದ್ದರಿಂದ, ಅವನು ಅದನ್ನೇ ಹೇಳುತ್ತಾನೆ. ಕೃಷ್ಣನು ಹೇಳಿದನು, “ನೀನು ಶರಣಾಗತನಾಗು, ಹಾಗು ಚೈತನ್ಯ ಮಹಾಪ್ರಭುಗಳು ಹೇಳಿದರು, “ಪ್ರತಿ ಜೀವಾತ್ಮವೂ ಕೃಷ್ಣನ ಸೇವಕ.” ಅದರ ಅರ್ಥ ಅವನು ಶರಣಾಗತನಾಗ ಬೇಕು. ಶರಣಾಗತಿಯೆ ದಾಸನ ಕರ್ತವ್ಯ, ಗುರುವಿನೊಂದಿಗೆ ವಾದಿಸುವುದಲ್ಲ, ಅಥವ “ನಾನು ನಿನ್ನ ಸರಿಸಮಾನನು” ಎಂದು ಹಕ್ಕು ಸಾಧಿಸುವುದಲ್ಲ. ಇವೆಲ್ಲವು ದುರಭಿಮಾನಿ ಹುಚ್ಚು ಪ್ರಸ್ತಾಪ.

ಪಿಸಾಚಿ ಪಾಯ್ಲೇ ಯೇನ ಮತಿ-ಚ್ಚನ್ನ ಹಯ
ಮಾಯಾ-ಗೃಹಸ್ತ ಜೀವೆರ ಸೆ ದಾಸ ಉಪಜಯ

ದಾಸನು ಪ್ರಭುವಾಗಲಾಗುವುದಿಲ್ಲ. ಅದು ಸಾದ್ಯವಿಲ್ಲ. ಆದರೆ ಅದಾಗುತ್ತಿದಂತೆಯೆ… ಎಲ್ಲಿಯವರೆಗು ನಾವು ಜೀವನದ ಬಗ್ಗೆ ಈ ತಪ್ಪು ತಿಳುವಳಿಕೆಯಲ್ಲಿರುತ್ತೇವೋ, “ನಾನು ಪ್ರಭುವಲ್ಲ, ನಾನು ದಾಸನು”, ಅಲ್ಲ, “ನಾನು ದಾಸನಲ್ಲ, ನಾನು ಫ್ರಭುವು”, ಅಂದುಕೊಳ್ಳುವವರೆಗು ಅವನು ನರಳುತ್ತಾನೆ. ಮಾಯೇ ಅವನನ್ನು ಬಾಧಿಸುತ್ತಾಳೆ. ದೈವೀ ಹ್ಯೇಷಾ. ದುಷ್ಕರ್ಮಿಗಳು, ಪುಂಡರು, ಹಾಗು ಕಳ್ಳರು ಹೇಗೆ ಸರ್ಕಾರದ ಆದೇಶವನ್ನು ಉಲಂಘಿಸುವರೋ: “ನಾನು ಹೆದರುವುದಿಲ್ಲ.” ಆದರೆ ಅದರ ಅರ್ಥ ಅವನು ತಾನೇ ತಾನಾಗಿ ಬಾಧೆಯನ್ನು ಸ್ವೀಕರಿಸಿದಂತೆ. ಅವನು ಸರ್ಕಾರದ ಕಾನೂನನ್ನು ಪಾಲಿಸಬೇಕು. ಅವನು ಸಾಮಾನ್ಯವಾಗಿ ಪಾಲಿಸಲಿಲ್ಲವೆಂದರೆ, ದುಷ್ಕರ್ಮಿ, ಆಗ ಅವನನ್ನು ಸೆರೆಮನೆಯಲ್ಲಿ ಬಂಧಿಸುತ್ತಾರೆ. ಹಾಗು ಬಲವಂತವಾಗಿ, ಹೊಡೆತಗಳಿಂದ, ಶಿಕ್ಷೆಗಳಿಂದ, ಒಪ್ಪಿಸುತ್ತಾರೆ: “ಸರಿ, ಸರಿ, ನಾನು ಒಪ್ಪುತ್ತೇನೆ.”

ಇದುವೇ ಮಾಯಾ. ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ (ಭ.ಗೀ 7.14). ನಾವು ಮಾಯೇಯ ಆಡಳಿತದಲ್ಲಿದ್ದೇವೆ. ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ (ಭ.ಗೀ 3.27). ಏಕೇ? ಏಕೆಂದರೆ ನಾವು ಪ್ರಭುವೆಂದು ಹೇಳಿಕೊಳ್ಳುತ್ತಿರುವೆವು. ದಾಸನು ಪ್ರಭುವೆಂದು ಹೇಳಿಕೊಳ್ಳುತ್ತಿರುವುದರಿಂದ ನರಳುತ್ತಿರುವರು. “ನಾನು ಪ್ರಭುವಲ್ಲ, ನಾನು ದಾಸನು” ಎಂದು ಸ್ವೀಕರಿಸುತ್ತಲೆ ಬಾಧೆ ಇರುವುದಿಲ್ಲ. ಬಹಳ ಸರಳ ತತ್ವ. ಅದುವೇ ಮುಕ್ತಿ. ಮುಕ್ತಿಯೆಂದರೆ ಸರಿಯಾದ ಮಟ್ಟಕ್ಕೆ ತಲುಪು. ಅದುವೇ ಮುಕ್ತಿ. ಮುಕ್ತಿಯನ್ನು ಶ್ರೀಮದ್ ಭಾಗವತದಲ್ಲಿ “ಮುಕ್ತಿರ್ ಹಿತ್ವಾ ಅನ್ಯಥಾ ರೂಪಮ್ ಸ್ವರೂಪೇಣ ವ್ಯವಸ್ಥಿತಿಃ” (ಶ್ರೀ. ಭಾ 2.10.6) ಎಂದು ವಿವರಿಸಲಾಗಿದೆ. ಮುಕ್ತಿಯೆಂದರೆ ಈ ಅನರ್ಥಗಳನ್ನು ತ್ಯಜಿಸುವುದು, ಅನ್ಯಥಾ. ಅವನು ದಾಸನು ಆದರೆ ಪ್ರಭುವೆಂದು ತಿಳಿದುಕೊಂಡಿದ್ದಾನೆ. ಅದು ಅನ್ಯಥಾ, ಅದು ತದ್ವಿರುದ್ಧ. ಅವನು ಪ್ರಭುವೆಂಬ ಜೀವನದ ತದ್ವಿರುದ್ಧ ಪರಿಕಲ್ಪನೆಯನ್ನು ಯಾವಾಗ ತ್ಯಜಿಸುತ್ತಾನೋ, ಅವನಿಗೆ ಮುಕ್ತಿ ಸಿಗುತ್ತದೆ; ಅವನು ಮುಕ್ತನಾಗುತ್ತಾನೆ. ಮುಕ್ತಿ ಪಡೆಯಲು ಬಹಳ ಸಮಯ ಬೇಕಿಲ್ಲ… ಅಂದರೆ ಕಠಿಣ ತಪಸ್ಸನ್ನು ಆಚರಿಸಿ, ಹಾಗು ಕಾಡಿಗೆ ಹೋಗಿ, ಹಾಗು ಹಿಮಾಲಯಕ್ಕೆ ಹೋಗಿ, ಹಾಗು ಧ್ಯಾನಮಾಡಿ, ಹಾಗು ಮೂಗನ್ನು ಒತ್ತಿ, ಹಾಗು ಇಂತ ಹಲವಾರು ವಿಷಯಗಳು. ಅವೆಲ್ಲ ಬೇಕಿಲ್ಲ. ಸುಮ್ಮನೆ ಸರಳವಾಗಿ ಅರ್ಥಮಾಡಿಕೊಂಡರೆ “ನಾನು ಕೃಷ್ಣನ ಸೇವಕ” – ತಕ್ಷಣ ಮಕ್ತನಾಗುತ್ತಿಯ. ಅದುವೇ ಶ್ರೀಮದ್ ಭಾಗವತದಲ್ಲಿ ಮುಕ್ತಿಗಿರುವ ವಿವರಣೆ. “ಮುಕ್ತಿರ್ ಹಿತ್ವಾ ಅನ್ಯಥಾ ರೂಪಮ್ ಸ್ವರೂಪೇಣ ವ್ಯವಸ್ಥಿತಿಃ” ಸೆರೆಮನೆಯಲ್ಲಿರುವ ಒಬ್ಬ ಖೈದಿ ಹೇಗೆ ತಾನು ವಿಧೇಯದಿಂದ “ಈಗಿನಿಂದ ನಾನು ಕಾನೂನುಬದ್ದವಾಗಿರುತ್ತೇನೆ. ಸರ್ಕಾರದ ಕಾನೂನುಗಳನ್ನು ಬಹಳ ನಿಷ್ಠೆಯಿಂದ ಪಾಲಿಸುತ್ತೇನೆ” ಎಂದು ಹೇಳಿಕೆ ಕೊಟ್ಟಾಗ ಕೆಲವೊಮ್ಮೆ ಅವನನ್ನು ಶಿಕ್ಷಾವಧಿಯ ಮುನ್ನವೆ ಬಿಡುಗಡೆ ಮಾಡುತ್ತಾರೆ. ಆದ್ದರಿಂದ ನಾವು ಈ ಐಹಿಕ ಅಸ್ತಿತ್ವದ ಸೆರೆಮನೆಯಿಂದ ತಕ್ಷಣ ಮುಕ್ತಿ ಪಡೆಯಬಹುದು, ಚೈತನ್ಯ ಮಹಾಪ್ರಭುವಿನ “ಜೀವೇರ ಸ್ವರೂಪ ಹಯ ನಿತ್ಯ ಕೃಷ್ಣೇರ ದಾಸ” (ಚೈ.ಚ ಮಧ್ಯ 20.108-109) ಭೋದನೆಯನ್ನು ಒಪ್ಪಿಕೊಂಡಾಗ.