KN/Prabhupada 0125 - ಸಮಾಜ ಬಹಳ ಮಲಿನವಾಗಿದೆ

Revision as of 08:09, 28 February 2021 by Vanibot (talk | contribs) (Vanibot #0005: NavigationArranger - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)


Lecture on SB 1.5.23 -- Vrndavana, August 4, 1974

ಶೂದ್ರರಿಗಿಂತ ಕಡಿಮೆ ಇರುವ ಎಲ್ಲಾ ಜನರು. ಅವರನ್ನು ಪಂಚಮರು, ಐದನೇ ದರ್ಜೆ, ಎಂದು ಕರೆಯಲಾಗುತ್ತದೆ. ಪ್ರಥಮ ದರ್ಜೆ - ಬ್ರಾಹ್ಮಣ, ಎರಡನೇ ದರ್ಜೆ - ಕ್ಷತ್ರಿಯ, ಮೂರನೇ ದರ್ಜೆ - ವೈಶ್ಯ, ನಾಲ್ಕನೇ ದರ್ಜೆ - ಶೂದ್ರ, ಮತ್ತು ಉಳಿದವರೆಲ್ಲರೂ ಐದನೇ ದರ್ಜೆ. ಅವರನ್ನು ಚಂಡಾಳರು ಎಂದು ಕರೆಯಲಾಗುತ್ತದೆ. ಚಂಡಾಳರು... ಜಾಡಮಾಲಿ, ಚಮ್ಮಾರ ಮತ್ತು... ಕಡಿಮೆ ದರ್ಜೆ. ಇನ್ನೂ, ಭಾರತದಲ್ಲಿ, ಈ ಐದನೇ ದರ್ಜೆಯ ವ್ಯಕ್ತಿಗಳು ಮಾತ್ರ, ಅವರು ಮಾಂಸ, ಹಂದಿಗಳು, ಮತ್ತು ಕೆಲವೊಮ್ಮೆ ಹಸುಗಳನ್ನು ತಿನ್ನುತ್ತಾರೆ. ಐದನೇ ದರ್ಜೆ. ಈಗ ಅದು ಅಭ್ಯಾಸವಾಗಿ ಮಾರ್ಪಟ್ಟಿದೆ. ಅಂತವನು ಈಗ ಪ್ರಥಮ ದರ್ಜೆಯ ವ್ಯಕ್ತಿ. ನೋಡಿ ಹೇಗಿದೆ. ಐದನೇ ದರ್ಜೆಯ ವ್ಯಕ್ತಿಯ ವ್ಯವಹಾರ ಯಾವುದೋ, ಅದು ನಾಮಮಾತ್ರಕ್ಕೆ ರಾಜಕಾರಣಿಗಳೆಂಬ ವ್ಯಕ್ತಿಗಳ ವ್ಯವಹಾರವಾಗಿದೆ. ನೋಡಿ. ನಿಮ್ಮನ್ನು ಐದನೇ ದರ್ಜೆಯ ವ್ಯಕ್ತಿಗಳು ಆಳುತ್ತಿದ್ದರೆ, ನೀವು ಹೇಗೆ ಸಂತೋಷವಾಗಿರಲು ಸಾಧ್ಯ? ಅದು ಸಾಧ್ಯವಿಲ್ಲ. ಸಾಮಾಜಿಕ ಶಾಂತಿ ನೆಲೆಸಲು ಹೇಗೆ ಸಾಧ್ಯ? ಅದು ಸಾಧ್ಯವಿಲ್ಲ. ಆದರೆ ಐದನೇ ದರ್ಜೆಯ ಮನುಷ್ಯನನ್ನೂ ಸಹ ಕೃಷ್ಣ ಪ್ರಜ್ಞೆ ಆಂದೋಲನದಿಂದ ಶುದ್ಧೀಕರಿಸಬಹುದು. ಆದ್ದರಿಂದ ಈ ಆಂದೋಲನದ ಹೆಚ್ಚಿನ ಅವಶ್ಯಕತೆಯಿದೆ. ಏಕೆಂದರೆ ಈಗ ಉನ್ನತ ಮಟ್ಟದ ವ್ಯಕ್ತಿಗಳು, ಪ್ರಥಮ ದರ್ಜೆಯ ವ್ಯಕ್ತಿಗಳು ಇಲ್ಲ, ಎರಡನೇ ದರ್ಜೆಯ ವ್ಯಕ್ತಿಗಳೂ ಇಲ್ಲ. ಬಹುಶಃ ಮೂರನೇ ದರ್ಜೆ, ನಾಲ್ಕನೇ ದರ್ಜೆ, ಐದನೇ ದರ್ಜೆ, ಆರನೇ ದರ್ಜೆ, ಅಂತವರು. ಆದರೆ ಅವರುಗಳನ್ನು ಶುದ್ಧೀಕರಿಸಬಹುದು. ಅಂದರೆ... ಒಂದೇ ಪ್ರಕ್ರಿಯೆ ಇರುವುದು, ಈ ಕೃಷ್ಣ ಪ್ರಜ್ಞೆ ಆಂದೋಲನ ಮಾತ್ರ. ಯಾರನ್ನೂ ಶುದ್ಧೀಕರಿಸಬಹುದು. ಮಾಮ್ ಹಿ ಪಾರ್ಥ ವ್ಯಪಾಶೃತ್ಯ ಯೇ ಅಪಿ ಸ್ಯುಃ ಪಾಪ ಯೋನಯಃ (ಭ.ಗೀ 9.32). ಅವರನ್ನು ಪಾಪ-ಯೋನಿ ಎಂದು ಕರೆಯಲಾಗುತ್ತದೆ, ಕೀಳು ದರ್ಜೆಯ, ಪಾಪಿ ಕುಟುಂಬದಲ್ಲಿ ಜನಿಸಿದವರು. ಪಾಪ-ಯೋನಿ. ಕೃಷ್ಣ ಹೇಳುತ್ತಾನೆ, ಯೇ ಅಪಿ ಸ್ಯುಃ ಪಾಪ ಯೋನಯಃ. ಯಾವ ರೀತಿಯ ಪಾಪ-ಯೋನಿ ಆದರೂ ಪರವಾಗಿಲ್ಲ. ಮಾಮ್ ಹಿ ಪಾರ್ಥ ವ್ಯಪಾ... "ಅವನು ನನ್ನನ್ನು ಆಶ್ರಯಿಸಿದರೆ, ನಂತರ..." ಕೃಷ್ಣನ ಪ್ರತಿನಿಧಿ ಪ್ರಚಾರ ಮಾಡುತ್ತಿರುವುದರಿಂದ ಆ ಆಶ್ರಯವನ್ನು ಪಡೆಯಬಹುದು.

ಆದ್ದರಿಂದ ಯಾವುದೇ ಕೊರತೆ ಇಲ್ಲ. ಕೇವಲ ಅವನನ್ನು ಆಶ್ರಯಿಸಬೇಕು. ಅಷ್ಟೇ. ಈ ಪ್ರಚಾರಕನನ್ನು ರಚಿಸುವುದು ಚೈತನ್ಯ ಮಹಾಪ್ರಭುರವರ ಧ್ಯೇಯವಾದಂತೆ. "ಎಲ್ಲೆಡೆ ಹೋಗಿ." ಆಮಾರ ಆಜ್ಞಾಯ ಗುರು ಹನಾ ತಾರ ಏ ದೇಶ (ಚೈ.ಚ ಮಧ್ಯ 7.128). "ಹೋಗು." ಅವರು ನಿತ್ಯಾನಂದ ಪ್ರಭು, ಹರಿದಾಸ ಠಾಕುರರವರನ್ನು "ದಯವಿಟ್ಟು ಹರೇ ಕೃಷ್ಣ ಜಪಾ ಮಾಡಿ. ದಯವಿಟ್ಟು ಹರೇ ಕೃಷ್ಣ ಎಂದು ಜಪಿಸಿ. ದಯವಿಟ್ಟು ಕೃಷ್ಣನಿಗೆ ಶರಣಾಗಿ", ಎಂದು ಪ್ರಚಾರ ಮಾಡಲು ಕಳುಹಿಸುತ್ತಿದ್ದರು. ಅಲ್ಲದೆ ಬೀದಿಯಲ್ಲಿ ಜನಸಂದಣಿ ಇತ್ತು. ನಿತ್ಯಾನಂದ ಪ್ರಭು ಮತ್ತು ಹರಿದಾಸ ಠಾಕುರ "ಏನು ಈ ಜನದಂದಣಿ?”, ಎಂದು ಕೇಳಿದರು. "ಇಲ್ಲ, ಜಗಾಯಿ ಮತ್ತು ಮಾಧಾಯಿ ಎಂಬ ಇಬ್ಬರು ಸಹೋದರರು ತುಂಬಾ ತೊಂದರೆ ಕೊಡುತ್ತಾರೆ. ಅವರು ಕುಡುಕರು, ಕಾಮುಕರು, ಮಾಂಸ ತಿನ್ನುವವರು, ಮತ್ತು ಅವರು ಯಾವಾಗಲೂ ತೊಂದರೆ ಮಾಡುತ್ತಾರೆ." ಆದ್ದರಿಂದ ನಿತ್ಯಾನಂದ ಪ್ರಭು ತಕ್ಷಣ ನಿರ್ಧರಿಸಿದರು, "ಈ ವ್ಯಕ್ತಿಗಳನ್ನು ಮೊದಲು ಏಕೆ ಉದ್ಧರಿಸಸಬಾರದು? ಆಗ ನನ್ನ ಪ್ರಭುವಿನ ಹೆಸರು ವೈಭವೀಕರಿಸಲ್ಪಡುತ್ತದೆ. ಶ್ರೀ ಚೈತನ್ಯ ಮಹಾಪ್ರಭು ಅವರ ಹೆಸರನ್ನು ಕೀರ್ತಿಸಲಾಗುವುದು."

ಇದೇ ಶಿಷ್ಯನ ವ್ಯವಹಾರ - ಆಧ್ಯಾತ್ಮಿಕ ಗುರುವನ್ನು, ಪರಂಪರೆಯನ್ನು ಹೇಗೆ ವೈಭವೀಕರಿಸುವುದು ಎಂಬುದು. ನನ್ನ ಆಧ್ಯಾತ್ಮಿಕ ಗುರುವನ್ನು ನಾನು ಕೀರ್ತಿಸುತ್ತೇನೆ, ನಿಮ್ಮ ಆಧ್ಯಾತ್ಮಿಕ ಗುರುವನ್ನು ನೀವು ಕೀರ್ತಿಸಿ. ಕೇವಲ ಅದನ್ನು ನಾವು ಮಾಡಿದರೆ, ಕೀರ್ತಿಸಿದರೆ, ಆಗ ಕೃಷ್ಣನನ್ನು ಕೀರ್ತಿಸಿದಂತೆಯೇ. ಅದೇ ನಿತ್ಯಾನಂದ ಪ್ರಭುರವರ ನಿರ್ಧಾರವಾಗಿತ್ತು, "ಈ ಪಾಪಾತ್ಮಗಳನ್ನು ಮೊದಲು ಏಕೆ ಉದ್ಧರಿಸಬಾರದು?" ಏಕೆಂದರೆ ಚೈತನ್ಯ ಮಹಾಪ್ರಭುರವರ ಅವತಾರವೇ ಪಾಪಾತ್ಮಗಳನ್ನು ಉದ್ಧರಿಸಲೆಂದು. ಮತ್ತು ಇಲ್ಲಿ... ಮತ್ತು ಈ ಯುಗದಲ್ಲಿ ಪತಿತರ ಕೊರತೆಯಿಲ್ಲ.

ಪತಿತ ಪಾವನ ಹೇತು ತವ ಅವತಾರ,
ಮೋ ಸಮ ಪತಿತ ಪ್ರಭು ನಾ ಪಾಯಿಬೇ ಆರ.

ನರೋತ್ತಮ ದಾಸ ಠಾಕುರ ತನ್ನನ್ನು ಶ್ರೀ ಚೈತನ್ಯ ಮಹಾಪ್ರಭು ಅವರ ಕಮಲದ ಪಾದಗಳಿಗೆ ಸಮರ್ಪಿಸಿ ಹೇಳುತ್ತಾರೆ, "ನನ್ನ ಪ್ರಿಯ ಪ್ರಭುವೇ, ನಿನ್ನ ಅವತಾರ ಈ ಪತಿತರನ್ನು ಉಧ್ಧಾರ ಮಾಡುವುದ್ದಕಾಗಿ. ಆದರೆ ನಾನು ಪಾಪಾತ್ಮಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದೇನೆ. ಆದ್ದರಿಂದ ನನ್ನ ಹಕ್ಕು ಮೊದಲು. ದಯವಿಟ್ಟು ನನ್ನನ್ನು ಉದ್ಧರಿಸಿ.” ಮೋ ಸಮ ಪತಿತ ಪ್ರಭು ನಾ ಪಾಯಿಬೇ ಆರ. "ಪತಿತರನ್ನು ಉದ್ಧರಿಸಬೇಕೆಂಬುದೇ ನಿಮ್ಮ ದೃಢ ನಿಶ್ಚಯ. ನಾನು ಪ್ರಥಮ ದರ್ಜೆಯ ಪತಿತ. ದಯವಿಟ್ಟು ನನ್ನನ್ನು ಸ್ವೀಕರಿಸಿ.”

ಕಲಿಯುಗದಲ್ಲಿ ಜನರು ಬಳಲುತ್ತಿದ್ದಾರೆ. ಅವರೆಲ್ಲರೂ ಪತಿತರು, ಎಲ್ಲಾ ಮಾಂಸ ತಿನ್ನುವವರು, ಎಲ್ಲಾ ಕುಡುಕರು, ಎಲ್ಲಾ ಐದನೇ ದರ್ಜೆ, ಆರನೇ ದರ್ಜೆಯ ವ್ಯಕ್ತಿಗಳು. ಅವರು ಅಹಂಕಾರಿಗಳಾಗಿದ್ದಾರೆ, ಆದರೆ ವಾಸ್ತವವಾಗಿ ಅವರು ಐದನೇ, ಆರನೇ, ಮತ್ತು ಹತ್ತನೇ ದರ್ಜೆಯ ವ್ಯಕ್ತಿಗಳು, ಸಜ್ಜನರೂ ಅಲ್ಲ. ಆದ್ದರಿಂದ ನನ್ನ ಗುರು ಮಹಾರಾಜರು, "ಯಾರೇ ಸಭ್ಯ ವ್ಯಕ್ತಿ ಇಲ್ಲಿ ವಾಸಿಸಲು ಸಾಧ್ಯವಿಲ್ಲ. ಸಮಾಜವು ತುಂಬಾ ಕಲುಷಿತವಾಗಿದೆ", ಎಂದು ಹೇಳುತ್ತಿದ್ದರು. ಮತ್ತು... ಆದರೆ, ಚೈತನ್ಯ ಮಹಾಪ್ರಭುರವರ ಸೇವೆ ಮಾಡುವ ಅವಕಾಶವಿದೆ. ಸಮಾಜವು ತುಂಬಾ ಹಾಳಾಗಿರುವುದರಿಂದ ಚೈತನ್ಯ ಮಹಾಪ್ರಭುರವರ ಸೇವೆ ಮಾಡಲು ಉತ್ತಮ ಅವಕಾಶವಿದೆ. ಏಕೆಂದರೆ ಪತಿತಾತ್ಮರ ಉದ್ಧಾರಕ್ಕಾಗಿಯೇ ಶ್ರೀ ಚೈತನ್ಯ ಮಹಾಪ್ರಭುರವರ ಅವತಾರ. ಆದುದರಿಂದ ಶ್ರೀ ಚೈತನ್ಯರವರಿಗೆ ಸೇವೆ..., ಚೈತನ್ಯ ಮಹಾಪ್ರಭುರವರನ್ನು ಮೆಚ್ಚಿಸಲು ನಿಮಗೆ ಅವಕಾಶ ದೊರಕಿದೆ ಏಕೆಂದರೆ ಪತಿತಾತ್ಮಗಳನ್ನು ಉದ್ಧರಿಸಬೇಕೆಂದು ಅವರು ಬಯಸಿದರು. ಕೃಷ್ಣನೂ ಸಹ ಬಯಸಿದ. ಯದಾ ಯದಾ ಹಿ ಗ್ಲಾನಿರ್ ಭವತಿ ಭಾರತ… ಧರ್ಮಸ್ಯ ಗ್ಲಾನಿರ್ ಭವತಿ ಭಾರತ (ಭ.ಗೀ 4.7). ಕೃಷ್ಣ ಬರುತ್ತಾನೆ... ಇದು... ದೇವರ ವ್ಯವಹಾರವು ಹಾಗೆಯೇ ನಡೆಯುತ್ತಿದೆ. ಈ ಭೌತಿಕ ಜಗತ್ತಿನಲ್ಲಿ ಕೊಳೆಯುತ್ತಿರುವ ಈ ಎಲ್ಲಾ ಧೂರ್ತರನ್ನು ಪುನಃ ಪಡೆದುಕೊಳ್ಳಲು ಅವನು ತೀವ್ರವಾಗಿ ವ್ಯಾಕುಲನಾಗಿದ್ದಾನೆ. ಕೃಷ್ಣ ಯಾವಾಗಲೂ ವ್ಯಾಕುಲನಾಗಿರುತ್ತಾನೆ. ಅವನು ಸ್ವತಃ ಬರುತ್ತಾನೆ. ಅವನು ಭಕ್ತನಾಗಿ ಬರುತ್ತಾನೆ. ಅವನು ಬರುತ್ತಾನೆ, ಅವನ ನಿಷ್ಠಾವಂತ ಸೇವಕನನ್ನು, ನಿಷ್ಠಾವಂತ ಮಗನನ್ನು ಕಳುಹಿಸುತ್ತಾನೆ.

ಕೃಷ್ಣನ ಕಾಳಜಿ ಈ ಎಲ್ಲಾ ಪತಿತಾತ್ಮಗಳನ್ನು ಪುನಃ ಉದ್ಧರಿಸುವುದು. ಆದ್ದರಿಂದ ಇದೊಂದು ಸದವಕಾಶ. ಯೋಗಿನಿಗಳು, ಯೋಗಿನಃ, ಅವರು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದರು. ಮಳೆಗಾಲದಲ್ಲಿ ಮಾತ್ರ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಇತರ ಋತುಗಳಲ್ಲಿ ತಿನ್ನುವುದು ಮತ್ತು ಮಲಗುವುದು ಮಾತ್ರ ಅಲ್ಲ. ಅಲ್ಲ. ಏಕೆಂದರೆ ಮಳೆಗಾಲದಲ್ಲಿ ಪ್ರಯಾಣಿಸಲು ಅನಾನುಕೂಲ, ಆದ್ದರಿಂದ ಕೇವಲ ನಾಲ್ಕು ತಿಂಗಳುಗಳು. ಆದ್ದರಿಂದ ನಾಲ್ಕು ತಿಂಗಳುಗಳಲ್ಲಿ, ಅವರು ಎಲ್ಲಿದ್ದರೂ, ಯಾರೊಬ್ಬರು ಸಾಧಾರಣ ಸೇವಕನಂತೆ ಅವರಿಗೆ ಸೇವೆ ಸಲ್ಲಿಸುತ್ತಿದ್ದರೋ ಅವರು ಮುಕ್ತಿ ಪಡೆಯುತ್ತಿದ್ದರು. ಉಪದೇಶಿಸುವ ಪ್ರಶ್ನೆಯೇ ಇರಲಿಲ್ಲ. ಸೇವೆ ಮಾಡಲು ಕೇವಲ ಅವಕಾಶವನ್ನು ನೀಡಿದರೆ, ಪತಿತಾತ್ಮರು ಮುಕ್ತಿ ಪಡೆಯುತ್ತಿದ್ದರು. ಆದರೆ ನೀವು ಸಮರ್ಥರಾಗಿರಬೇಕು, ಸುಮ್ಮನೆ ಸೇವೆಯನ್ನು ಸ್ವೀಕರಿಸಬಾರದು. ಆಗ ನೀವು ನರಕಕ್ಕೆ ಹೋಗುತ್ತೀರಿ. ನೀವು ನಿಜವಾಗಿಯೂ ಆಧ್ಯಾತ್ಮಿಕ ಸ್ಥಾನದಲ್ಲಿದ್ದರೆ, ಆಗ ಇತರರು ನಿಮಗೆ ಸೇವೆ ಸಲ್ಲಿಸಲು ಸ್ವಲ್ಪ ಅವಕಾಶವನ್ನು ನೀಡುವ ಮೂಲಕ, ಅವರನ್ನು ಉದ್ದರಿಸಬಹುದು. ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಒಬ್ಬ ಭಕ್ತ ಅಷ್ಟು ಪರಿಪೂರ್ಣನಾಗಿರಬೇಕು. ಆದ್ದರಿಂದ ಪದ್ಧತಿ ಏನೆಂದರೆ, ಒಬ್ಬ ಭಕ್ತನನ್ನು ನೋಡಿದ ತಕ್ಷಣ ಜನರು ಕೆಳಗೆ ಬಿದ್ದು..., ಪಾದಸ್ಪರ್ಶ ಮಾಡುತ್ತಾರೆ. ಇದೇ ಪದ್ಧತಿ. ಯಾಕೆಂದರೆ ಪಾದಸ್ಪರ್ಶಿಸುವ ಮೂಲಕ... ಮಹತ್-ಪಾದ-ರಜೋ-ಭೀಷೆಕಂ (ಶ್ರೀ.ಭಾ 5.12.12). ಒಬ್ಬನು ನಿಜವಾಗಿಯೂ ಆಧ್ಯಾತ್ಮಿಕ ಜೀವನದಲ್ಲಿ ಉನ್ನತಿ ಹೊಂದಿದ್ದರೆ ಮತ್ತು ಅವನ ಪಾದಕಮಲಗಳನ್ನು ಸ್ಪರ್ಶಿಸುವ ಅವಕಾಶವನ್ನು ಜನರು ಉಪಯೋಗಿಸಿಕೊಂಡರೆ, ಆಗ ಅವರು ಭಕ್ತರಾಗುತ್ತಾರೆ. ಇದು ಪ್ರಕ್ರಿಯೆ.