KN/Prabhupada 0150 - ನಾವು ಜಪಿಸುವುದನ್ನು ನಿಲ್ಲಿಸಬಾರದು

Revision as of 03:16, 14 February 2022 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0150 - in all Languages Category:KN-Quotes - 1975 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on SB 6.1.15 -- Denver, June 28, 1975

ಅಥಾಪಿ ತೇ ದೇವ ಪದಾಂಬುಜ-ದ್ವಯಂ ಪ್ರಸಾದ-ಲೇಶಾನುಗೃಹೀತ ಏವ ಹಿ, ಜಾನಾತಿ ತತ್ತ್ವಂ ನ ಚಾನ್ಯ ಏಕೋ ಅಪಿ ಚಿರಂ ವಿಚಿನ್ವನ್ (ಶ್ರೀ.ಭಾ 10.14.29). ಯಾರು ಕೃಷ್ಣನ ಅನಿಯಮಿತ ಕರುಣೆಯನ್ನು ಪಡೆಯುತ್ತಾರೋ, ಅವರು ಕೃಷ್ಣನನ್ನು ಅರ್ಥಮಾಡಿಕೊಳ್ಳಬಹುದು. ಇತರರು, ನ ಚಾನ್ಯ ಏಕೋ ಅಪಿ ಚಿರಂ ವಿಚಿನ್ವನ್. ಚಿರಂ ಎಂದರೆ ಬಹಳ ಕಾಲ, ಹಲವು ವರ್ಷಗಳವರೆಗೆ, ಅವರು ದೇವರು, ಅಥವಾ ಕೃಷ್ಣ, ಯಾರೆಂದು ಕೇವಲ ಊಹಿಸಿದರೆ, ಆ ಪ್ರಕ್ರಿಯೆಯು ನಮಗೆ ಸಹಾಯ ಮಾಡುವುದಿಲ್ಲ. ಅಂತಹ ಅನೇಕ ವೈದಿಕ ಆವೃತ್ತಿಗಳಿವೆ.

ಅತಃ ಶ್ರೀ-ಕೃಷ್ಣ-ನಾಮಾದಿ
ನ ಭವೇದ್ ಗ್ರಾಹ್ಯಂ ಇಂದ್ರಿಯೈಃ
ಸೇವೋನ್ಮುಖೇ ಹಿ ಜಿಹ್ವಾದೌ
ಸ್ವಯಂ ಏವ ಸ್ಫುರತಿ ಅದಃ
(ಚೈ.ಚ ಮಧ್ಯ 17.136)

ಕೃಷ್ಣ, ಅವನ ನಾಮ, ಅವನ ಖ್ಯಾತಿ, ಅವನ ಗುಣಲಕ್ಷಣಗಳು, ಅವನ ಲೀಲೆಗಳು... ಶ್ರೀ-ಕೃಷ್ಣ-ನಾಮದಿ ನಾ ಭವೇದ್... ನಾಮಾದಿ ಎಂದರೆ "ಪವಿತ್ರ ನಾಮದಿಂದ ಆರಂಭ". ಆದ್ದರಿಂದ, ಸಾಧ್ಯವಿಲ್ಲ... ಆದ್ದರಿಂದ, ನಮ್ಮನ್ನು ನಾವೆ ಭೌತಿಕ ಮಟ್ಟದಲ್ಲಿ ಇರಿಸಿಕೊಂಡು, ಸಾವಿರ ವರ್ಷಗಳವರೆಗೆ ಜಪ ಮಾಡಬಹುದು, ಅದರೆ ಅದು ಕಷ್ಟಕರ. ಅದನ್ನೇ ನಾಮಪರಾಧ ಎನ್ನುತ್ತಾರೆ. ಸಹಜವಾಗಿ, ಪವಿತ್ರ ನಾಮವು ಎಷ್ಟು ಶಕ್ತಿಯುತವಾಗಿದೆಯೆಂದರೆ, ಅಪರಾಧದಿಂದ ಜಪಿಸುವ ಮೂಲಕ ಸಹ, ಕ್ರಮೇಣ ಅವನು ಪರಿಶುದ್ಧನಾಗುತ್ತಾನೆ. ಆದ್ದರಿಂದ, ನಾವು ಜಪವನ್ನು ಬಿಡಬಾರದು. ಯಾವುದೇ ಸಂದರ್ಭವಾಗಲಿ, ನಾವು ಹರೇ ಕೃಷ್ಣ ಜಪಿಸುತ್ತಿರಬೇಕು. ಆದರೆ ಎಚ್ಚರಿಕೆ ನೀಡಿರುವುದು ಏನೆಂದರೆ, ನಮ್ಮನ್ನು ನಾವೆ ಭೌತಿಕ ಮಟ್ಟದಲ್ಲಿ ಇರಿಸಿಕೊಂಡು, ಕೃಷ್ಣನನ್ನು, ಅವನ ಪವಿತ್ರ ನಾಮವನ್ನು, ಅವನ ಗುಣಲಕ್ಷಣಗಳನ್ನು, ಅವನ ಸ್ವರೂಪವನ್ನು, ಅವನ ಲೀಲೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದು ಅಸಾಧ್ಯ.

ಆದ್ದರಿಂದ, ಭಕ್ತಿಯೆ ಪ್ರಕ್ರಿಯೆ. ಮತ್ತು ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳುವ ಮಟ್ಟಕೆ ಬಂದಾಗ, ತಕ್ಷಣವೇ ನೀವು ಆಧ್ಯಾತ್ಮಿಕ ಜಗತ್ತಿಗೆ ವರ್ಗಾಯಿಸಲು ಯೋಗ್ಯರಾಗುತ್ತೀರಿ. ಅಂದರೆ... ಕೃಷ್ಣನು ಭಗವದ್ಗೀತೆಯಲ್ಲಿಯೂ ಹೇಳಿದ್ದಾನೆ, ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಮ್ ಇತಿ (ಭ.ಗೀ 4.9).