KN/Prabhupada 0154 - ನಿಮ್ಮ ಆಯುಧವನ್ನು ಯಾವಾಗಲೂ ಹರಿತವಾಗಿರಿಸಿಕೊಳ್ಳಿ
Room Conversation -- May 7, 1976, Honolulu
ತಮಾಲ ಕೃಷ್ಣ: ಬ್ಯಾಕ್ ಟು ಗಾಡ್‌ಹೆಡ್‌ನಲ್ಲಿನ ನಿಮ್ಮ ಲೇಖನದಲ್ಲಿ ಮಾರ್ಕ್ಸ್‌ನ ಬಗ್ಗೆ ನೀವು ಅವನನ್ನು ಜ್ಞಾನಶೂನ್ಯ ವ್ಯಕ್ತಿ ಎಂದು, ಮತ್ತು ಮಾರ್ಕ್ಸ್‌ವಾದವನ್ನು ಅಸಂಬದ್ಧ ಎಂದು ಕರೆಯುತ್ತೀರಿ.
ಪ್ರಭುಪಾದ: ಹೌದು, ಅವನ ತತ್ವ ಏನು? ಡಯಲೆಕ್ಟಿಟ್ಯೂಡ್?
ತಮಾಲ ಕೃಷ್ಣ: ಡಯಲೆಕ್ಟಿಕ್ ಮೆಟೀರಿಯಲಿಸಂ.
ಪ್ರಭುಪಾದ: ಆದ್ದರಿಂದ, ನಾವು ಒಂದು ಡಯಲೆಕ್ಟಿಕ್ ಸ್ಪಿರಿಚುಅಲಿಸಂ ಅನ್ನು ಬರೆದಿದ್ದೇವೆ.
ಹರಿ-ಶೌರಿ: ಹರಿಕೇಶನ...
ಪ್ರಭುಪಾದ: ಹರಿಕೇಶ.
ತಮಾಲ ಕೃಷ್ಣ: ಹೌದು, ಅವರು ಅದನ್ನು ನಮಗೆ ಓದಿದರು. ಅವರು ಬೋಧಿಸುತ್ತಿದ್ದಾರೆ, ಕೆಲವೊಮ್ಮೆ ಪೂರ್ವ ಯುರೋಪ್ನಲ್ಲಿ ಅನಿಸುತ್ತದೆ. ನಮಗೆ ವರದಿ ಸಿಕ್ಕಿದೆ. ಅವರು ನಿಮಗೆ ಪತ್ರ ಬರೆದಿದ್ದಾರೆಯೇ?
ಪ್ರಭುಪಾದ: ಹೌದು. ವಿಷಯ ತಿಳಿಯಿತು, ಆದರೆ ಅವನು ಕುಶಲವೇ?
ತಮಾಲ ಕೃಷ್ಣ: ಅವರು ಕೆಲವು ಪೂರ್ವ ಯುರೋಪಿಯನ್ ದೇಶಗಳಿಗೆ ಆಗಾಗ ಹೋಗುತ್ತಾರೆ ಎಂದು ವರದಿಯಿಂದ ತಿಳಿಯುತ್ತದೆ. ಹೆಚ್ಚಾಗಿ ಅವರು ಇಂಗ್ಲೆಂಡ್, ಜರ್ಮನಿ, ಮತ್ತು ಸ್ಕ್ಯಾಂಡಿನೇವಿಯಾ ದೇಶಗಳ ಕಡೆ ಗಮನಹರಿಸುತ್ತಿದ್ದಾರೆ. ಅವರು ಒಂದು ತಂಡವನ್ನು ಸೃಷ್ಟಿಸಿ ಉಪನ್ಯಾಸ ಕಾರ್ಯಕ್ರಮಗಳನ್ನು ಮತ್ತು ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಮತ್ತು ಕೆಲವೊಮ್ಮೆ ಅವರು… ಯಾವ ದೇಶಗಳಿಗೆ ಹೋದರು?
ಭಕ್ತ: ಜೆಕೊಸ್ಲೊವಾಕಿಯಾ, ಹಂಗೇರಿ, ಬುಡಾಪೆಸ್ಟ್.
ತಮಾಲ ಕೃಷ್ಣ: ಅವರು ಕೆಲವು ಕಮ್ಯುನಿಸ್ಟ್ ಯುರೋಪಿಯನ್ ದೇಶಗಳಿಗೆ ಹೋಗುತ್ತಿದ್ದಾರೆ.
ಭಕ್ತ: ಅವರು ತಮ್ಮ ವ್ಯಾನ್‌ಗಳಲ್ಲಿ ಸುಳ್ಳು ತಳವನ್ನು ಮಾಡಿ, ಪುಸ್ತಕಗಳನ್ನು ಅದರಲ್ಲಿ ಇಟ್ಟು ಗಡಿ ಸಿಬ್ಬಂದಿಗೆ ಕಾಣದಂತೆ ಮರೆಮಾಡುತ್ತಾರೆ. ವ್ಯಾನ್‌ನ ಕೆಳಗೆ ನಮ್ಮ ಎಲ್ಲಾ ಪುಸ್ತಕಗಳಿರುತ್ತದೆ. ಅವರು ಗಡಿ ದಾಟಿದ ನಂತರ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುತ್ತಾರೆ.
ತಮಾಲ ಕೃಷ್ಣ: ಕ್ರಾಂತಿ.
ಪ್ರಭುಪಾದ: ತುಂಬಾ ಸಂತೋಷ.
ಭಕ್ತ: ಅವರು ಹೇಳಿದರು, ಕೆಲವೊಮ್ಮೆ ಅವರು ಮಾತನಾಡುವಾಗ ಅನುವಾದಕ ಅವರ ಮಾತುಗಳನ್ನು ಅನುವಾದಿಸುವುದಿಲ್ಲ ಏಕೆಂದರೆ ಅದು... ಕೆಲವೊಮ್ಮೆ ಅವನು ಮರೆತುಬಿಡುತ್ತಾನೆ - ಸಾಮಾನ್ಯವಾಗಿ ಅವನು ಬಹಳ ಎಚ್ಚರಿಕೆಯಿಂದ-ಭದ್ರವಾದ ಮಾತುಗಳನ್ನು ಮಾತನಾಡುತ್ತಾನೆ. ಆದರೆ ಕೆಲವು ಬಾರಿ ಅವನು ನೇರವಾಗಿ ಕೃಷ್ಣ ಪ್ರಜ್ಞೆಯ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾನೆ ಮತ್ತು ಅನುವಾದಕ ಅವನನ್ನು ನೋಡುತ್ತಾನೆ ಮತ್ತು ಅದನ್ನು ಸ್ಥಳೀಯ ಭಾಷೆಗೆ ಅನುವಾದಿಸುವುದಿಲ್ಲ. ಕೆಲವೊಮ್ಮೆ ಅವನು ತನ್ನನ್ನೇ ಮರೆತು ಕೃಷ್ಣನನ್ನು ಪರಮ ಪುರುಷನೆಂದು ಹೇಳಲು ಪ್ರಾರಂಭಿಸುತ್ತಾನೆ ಮತ್ತು ಅನುವಾದಕ ಇದ್ದಕ್ಕಿದ್ದಂತೆ ಅವನತ್ತ ನೋಡುತ್ತಾನೆ. ಸಾಮಾನ್ಯವಾಗಿ ಅವನು ಎಲ್ಲವನ್ನೂ ಅನುವಾದಿಸುತ್ತಾನೆ.
ಪ್ರಭುಪಾದ: ಅವನು ಒಳ್ಳೆಯ ಕೆಲಸ ಮಾಡಿದ್ದಾನೆ.
ತಮಾಲ ಕೃಷ್ಣ: ಅವನು ಯೋಗ್ಯ ವ್ಯಕ್ತಿ, ಬಹಳ ಬುದ್ಧಿವಂತ.
ಪ್ರಭುಪಾದ: ಆದ್ದರಿಂದ, ಈ ರೀತಿಯಲ್ಲಿ... ನೀವೆಲ್ಲರೂ ಬುದ್ಧಿವಂತರು, ನೀವು ಯೋಜಿಸಬಹುದು. ಪುಸ್ತಕಗಳನ್ನು ವಿತರಿಸುವುದು ಹೇಗೆ ಎಂಬುದು ನಮ್ಮ ಗುರಿ. ಅದು ನಮ್ಮ ಪ್ರಧಾನ ವಿಚಾರವಾಗಿರಬೇಕು. ಭಾಗವತದಲ್ಲಿ ನಾವು ಈ ದೇಹ ಮತ್ತು ವಿವಿಧ ಭಾಗಗಳನ್ನು ಪಡೆದುಕೊಂಡಿದ್ದೇವೆ ಎಂದು ಬಹಳ ಸಾಂಕೇತಿಕವಾಗಿ ವಿವರಿಸಲಾಗಿದೆ. ಅರ್ಜುನನು ರಥದ ಮೇಲೆ ಕುಳಿತಿರುವಂತೆ. ರಥ ಚಾಲಕನಿದ್ದಾನೆ, ಕುದುರೆಗಳಿವೆ, ಲಗಾಮುಗಳಿವೆ. ಕ್ಷೇತ್ರ, ಬಾಣ, ಮತ್ತು ಬಿಲ್ಲು ಇದೆ. ಸಾಂಕೇತಿಕವಾಗಿ. ಆದ್ದರಿಂದ, ಇದನ್ನು ನಮ್ಮ ಕೃಷ್ಣಪ್ರಜ್ಞೆಯ ಶತ್ರುಗಳನ್ನು ಕೊಲ್ಲಲು ಬಳಸಬಹುದು ಮತ್ತು ನಂತರ ಈ ಎಲ್ಲಾ ಸಾಮಾನುಗಳನ್ನು ತ್ಯಜಿಸಿ, ರಥ, ನಾವು... ಯುದ್ಧದ ನಂತರ, ವಿಜಯವಾದ ನಂತರ ನೀವು ಅವರನ್ನು ಕೊಲ್ಲುತ್ತೀರಿ. ಮತ್ತು ಹಾಗೆಯೇ ಈ ದೇಹವಿದೆ, ಮನಸ್ಸು ಇದೆ, ಇಂದ್ರಿಯಗಳೂ ಇವೆ. ಆದ್ದರಿಂದ, ಈ ಭೌತಿಕ ಅಸ್ತಿತ್ವವನ್ನು ಜಯಿಸಲು ಅದನ್ನು ಬಳಸಿಕೊಳ್ಳಿ. ತದನಂತರ ಈ ದೇಹವನ್ನು ತ್ಯಜಿಸಿ ಮನೆಗೆ ಹಿಂತಿರುಗಿ.
ತಮಾಲ ಕೃಷ್ಣ: ಭಕ್ತನು, ಅಂದರೆ ನಿಮ್ಮ ಹಾಗೆ... ನಾವು ಯಾವಾಗಲೂ ಮನ್ನಡೆಯಲು ಸ್ಪೂರ್ತಿ ತುಂಬುವಂತೆ...
ಪ್ರಭುಪಾದ: ಅದು ನಿಮ್ಮ ಆಯುಧಗಳನ್ನು ಹರಿತಗೊಳಿಸುತ್ತಿದೆ. ಅದೂ ಸಹ ವಿವರಿಸಲಾಗಿದೆ. ಆಧ್ಯಾತ್ಮಿಕ ಗುರುವಿಗೆ ಸೇವೆ ಸಲ್ಲಿಸುವ ಮೂಲಕ, ನೀವು ನಿಮ್ಮ ಆಯುಧವನ್ನು ಯಾವಾಗಲೂ ಹರಿತವಾಗಿರಿಸಿಕೊಳ್ಳಿ. ತದನಂತರ ಕೃಷ್ಣನಿಂದ ಸಹಾಯವನ್ನು ಪಡೆದುಕೊಳ್ಳಿ, ಆಧ್ಯಾತ್ಮಿಕ ಗುರುವಿನ ಮಾತುಗಳು ಆಯುಧವನ್ನು ಹರಿತಗೊಳಿಸುತ್ತವೆ. ಮತ್ತು ಯಸ್ಯ ಪ್ರಸಾದದ್ ಭಗವತ..., ಮತ್ತು ಆಧ್ಯಾತ್ಮಿಕ ಗುರುಗಳು ಸಂತೋಷವಾಗಿರುತ್ತಾರೆ, ಆಗ ಕೃಷ್ಣನು ತಕ್ಷಣವೇ ಸಹಾಯ ಮಾಡುತ್ತಾನೆ. ಅವನು ನಿಮಗೆ ಶಕ್ತಿಯನ್ನು ಕೊಡುತ್ತಾನೆ. ನಿಮಗೆ ಹರಿತವಾದ ಕತ್ತಿ ಸಿಕ್ಕಿದೆ ಎಂದು ಭಾವಿಸೋಣ, ಆದರೆ ನಿಮಗೆ ಶಕ್ತಿಯಿಲ್ಲದಿದ್ದರೆ, ನೀವು ಕತ್ತಿಯಿಂದ ಏನು ಮಾಡುತ್ತೀರಿ? ಶತ್ರುಗಳೊಡನೆ ಹೋರಾಡಿ ಅವರನ್ನು ಕೊಲ್ಲುವುದಕ್ಕೆ ಕೃಷ್ಣನು ನಿಮಗೆ ಶಕ್ತಿಯನ್ನು ನೀಡುತ್ತಾನೆ. ಎಲ್ಲವನ್ನೂ ವಿವರಿಸಲಾಗಿದೆ. ಆದ್ದರಿಂದ, ಚೈತನ್ಯ ಮಹಾಪ್ರಭು (ಹೇಳಿದರು) ಗುರು-ಕೃಷ್ಣ-ಕೃಪಾಯ (ಚೈ.ಚ ಮಧ್ಯ 19.151), ಆಧ್ಯಾತ್ಮಿಕ ಗುರುವಿನ ಬೋಧನೆಯಿಂದ ನಿಮ್ಮ ಆಯುಧವನ್ನು ಹರಿತಗೊಳಿಸಿ, ನಂತರ ಕೃಷ್ಣನು ನಿಮಗೆ ಶಕ್ತಿಯನ್ನು ನೀಡುತ್ತಾನೆ. ನೀವು ಜಯಿಸಲು ಸಾಧ್ಯವಾಗುತ್ತದೆ. ಈ ಸಾಂಕೇತಿಕ ವಿವರಣೆಯನ್ನು ನಾನು ನಿನ್ನೆ ರಾತ್ರಿ ತಿಳಿಸಿದೆ. ಅಚ್ಯುತ ಬಲ, ಅಚ್ಯುತ ಬಲ ಎಂಬ ಶ್ಲೋಕ ಇಲ್ಲಿದೆ. ಪುಷ್ಠ ಕೃಷ್ಣ ಇಲ್ಲಿ ಇದ್ದಾನಾ?
ಹರಿ-ಶೌರಿ: (ಕರೆಯುತ್ತಾನೆ) ಪುಷ್ಟ ಕೃಷ್ಣ?
ಪ್ರಭುಪಾದ: ನಾವು ಕೃಷ್ಣನ ಸೈನಿಕರು, ಅರ್ಜುನನ ಸೇವಕರು. ನೀವು ಕೇವಲ ಅದಕ್ಕೆ ತಕ್ಕಂತೆ ವರ್ತಿಸಬೇಕು, ನಂತರ ನೀವು ಶತ್ರುಗಳನ್ನು ಮುಗಿಸುತ್ತೀರಿ. ಅವರ ಸಂಖ್ಯೆ ನೂರು ಪಟ್ಟು ಹೆಚ್ಚಿದ್ದರೂ ಅವರು ಬಲಹೀನರು. ಕುರುಗಳು ಮತ್ತು ಪಾಂಡವರಂತೆ. ಅವರಿಗೆ ಯಾವುದೇ ಶಕ್ತಿಯಿಲ್ಲ, ಯತ್ರ ಯೋಗೇಶ್ವರಃ ಕೃಷ್ಣಃ (ಭ.ಗೀ 18.78). ಕೃಷ್ಣನನ್ನು ನಿಮ್ಮ ಬದಿಯಲ್ಲಿ ಇರಿಸಿ, ಆಗ ಎಲ್ಲವೂ ಯಶಸ್ವಿಯಾಗುತ್ತದೆ. ತತ್ರ ಶ್ರೀ ವಿಜಯೋ.