KN/Prabhupada 0156 - ನೀವು ಮರೆತಿರುವುದನ್ನು ಕಲಿಸಲು ನಾನು ಪ್ರಯತ್ನಿಸುತ್ತಿದ್ದೇನೆ
Arrival Address -- London, September 11, 1969
ವರದಿಗಾರ: ನೀವು ಏನು ಕಲಿಸಲು ಪ್ರಯತ್ನಿಸುತ್ತೀರಿ, ಸ್ವಾಮೀಜಿ?
ಪ್ರಭುಪಾದ: ನೀವು ಮರೆತಿರುವುದನ್ನು ನಾನು ಕಲಿಸಲು ಪ್ರಯತ್ನಿಸುತ್ತಿದ್ದೇನೆ.
ಭಕ್ತರು: ಹರಿಬೋಲ್! ಹರೇ ಕೃಷ್ಣ! (ನಗು)
ವರದಿಗಾರ: ಅದು ಯಾವುದು?
ಪ್ರಭುಪಾದ: ಅದು ಭಗವಂತ. ನಿಮ್ಮಲ್ಲಿ ಕೆಲವರು ದೇವರಿಲ್ಲ ಎಂದು ಹೇಳುತ್ತಿದ್ದಾರೆ, ನಿಮ್ಮಲ್ಲಿ ಕೆಲವರು ದೇವರು ಸತ್ತಿದ್ದಾನೆ ಎಂದು ಹೇಳುತ್ತಿದ್ದಾರೆ, ಮತ್ತು ಕೆಲವರು ದೇವರು ನಿರಾಕಾರ ಅಥವಾ ಶೂನ್ಯ ಎಂದು ಹೇಳುತ್ತಿದ್ದಾರೆ. ಇವೆಲ್ಲ ಅಸಂಬದ್ಧತೆಗಳು. ಈ ಎಲ್ಲಾ ಅಸಂಬದ್ಧ ಜನರಿಗೆ ನಾನು ದೇವರಿದ್ದಾನೆ ಎಂದು ಕಲಿಸಲು ಬಯಸುತ್ತೇನೆ. ಅದು ನನ್ನ ಧ್ಯೇಯ. ಯಾವುದೇ ಅಸಂಬದ್ಧತೆ ಬಂದರೂ, ನಾನು ದೇವರಿದ್ದಾನೆ ಎಂದು ಸಾಬೀತುಪಡಿಸುತ್ತೇನೆ. ಅದೇ ನನ್ನ ಕೃಷ್ಣ ಪ್ರಜ್ಞೆ ಆಂದೋಲನ. ನಾಸ್ತಿಕರಿಗೆ ಇದೊಂದು ಸವಾಲು. ಭಗವಂತನಿದ್ದಾನೆ. ನಾವು ಇಲ್ಲಿ ಮುಖಾಮುಖಿಯಾಗಿ ಕುಳಿತಿರುವಂತೆ ನೀವು ಭಗವಂತನನ್ನು ಮುಖಾಮುಖಿಯಾಗಿ ನೋಡಬಹುದು. ನೀವು ಪ್ರಾಮಾಣಿಕರಾಗಿದ್ದರೆ ಮತ್ತು ಗಂಭೀರವಾಗಿದ್ದರೆ ಅದು ಸಾಧ್ಯ. ದುರದೃಷ್ಟವಶಾತ್, ನಾವು ದೇವರನ್ನು ಮರೆಯಲು ಪ್ರಯತ್ನಿಸುತ್ತಿದ್ದೇವೆ; ಆದ್ದರಿಂದ, ನಾವು ಜೀವನದ ಅನೇಕ ದುಃಖಗಳನ್ನು ಸ್ವೀಕರಿಸುತ್ತಿದ್ದೇವೆ. ಆದ್ದರಿಂದ, ನಾನು ಕೇವಲ ನೀವು ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಿ ಸಂತೋಷವಾಗಿರಿ ಎಂದು ಉಪದೇಶಿಸುತ್ತಿದ್ದೇನೆ. ಮಾಯೆ ಅಥವಾ ಭ್ರಮೆಯ ಈ ಅಸಂಬದ್ಧ ಅಲೆಗಳಿಂದ ಅತ್ತ ಇತ್ತ ಓಲಾಡ ಬೇಡಿ. ಅದೇ ನನ್ನ ಕೋರಿಕೆ.
ಭಕ್ತರು: ಹರಿಬೋಲ್!