KN/Prabhupada 0164 - ಮಾರ್ಗವನ್ನು ಸುಲಭಗೊಳಿಸಲು ವರ್ಣಾಶ್ರಮ-ಧರ್ಮವನ್ನು ಸ್ಥಾಪಿಸಬೇಕು

Revision as of 01:32, 10 March 2023 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0164 - in all Languages Category:KN-Quotes - 1977 Category:KN-Quotes - C...")
(diff) ← Older revision | Latest revision (diff) | Newer revision → (diff)


Room Conversation Varnasrama System Must Be Introduced -- February 14, 1977, Mayapura

ಹರಿಶೌರಿ: ಆದರೆ ಚೈತನ್ಯ ಮಹಾಪ್ರಭುವಿನ ಪ್ರಾಯೋಗಿಕ ಬೋಧನೆಯಲ್ಲಿ ಅವರು ಜನರನ್ನು ಜಪಿಸಲು ಮಾತ್ರ ಪ್ರೇರೇಪಿಸಿದರು.

ಪ್ರಭುಪಾದ: ಸಾಮಾನ್ಯ ಮನುಷ್ಯನಿಗೆ ಅದು ಸಾಧ್ಯವಿಲ್ಲ.

ಹರಿಶೌರಿ: ಏನನ್ನು, ಜನರನ್ನು ಜಪಿಸಲು ಪ್ರೇರೇಪಿಸುವುದೆ? ಮಹಾಪ್ರಭುವು ಕೇವಲ ಜಪಿಸುವುದನ್ನು ಪರಿಚಯಿಸಿದರು.

ಪ್ರಭುಪಾದ: ಆದರೆ ಜಪಿಸುವವರು ಯಾರು? ಜಪಿಸುವವರು ಯಾರು?

ಸತ್ವರೂಪ: ಆದರೆ ಅವರು ಜಪ ಮಾಡದಿದ್ದರೆ, ಅವರು ವರ್ಣಾಶ್ರಮದಲ್ಲಿ ತರಬೇತಿ ಪಡೆಯುವುದಿಲ್ಲ. ಅದು ಅತ್ಯಂತ ಸುಲಭ.

ಪ್ರಭುಪಾದ: ಜಪ ಇರುತ್ತದೆ, ಆದರೆ ಜನರು ಚೈತನ್ಯ ಮಹಾಪ್ರಭುವಿನಂತೆ ಜಪಿಸುತ್ತಾರೆ ಎಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಹದಿನಾರು ಸುತ್ತುಗಳನ್ನು ಸಹ ಜಪಿಸಲು ಸಾಧ್ಯವಿಲ್ಲ. (ಮತ್ತು) ಈ ಧೂರ್ತರು ಚೈತನ್ಯ ಮಹಾಪ್ರಭು ಆಗಲಿದ್ದಾರೆ!

ಸತ್ಸ್ವರೂಪ: ಇಲ್ಲ. ಆದರೆ ಅವರು ಕನಿಷ್ಠ ಜಪಿಸಿದರೆ ಮತ್ತು ಸ್ವಲ್ಪ ಪ್ರಸಾದವನ್ನು ಸ್ವೀಕರಿಸಿದರೆ...

ಪ್ರಭುಪಾದ: ಜಪ ಮುಂದುವರಿಯುತ್ತದೆ. ಅದು ನಿಲ್ಲದು. ಆದರೆ ಅದೇ ಸಮಯದಲ್ಲಿ ಮಾರ್ಗವನ್ನು ಸುಲಭಗೊಳಿಸಲು ವರ್ಣಾಶ್ರಮ-ಧರ್ಮವನ್ನು ಸ್ಥಾಪಿಸಬೇಕು.

ಹರಿಶೌರಿ: ನನ್ನ ಸ್ವಂತ ತಿಳುವಳಿಕೆ ಏನೆಂದರೆ, ಕಲಿಯುಗದಲ್ಲಿ ವರ್ಣಾಶ್ರಮ ಸಾಧ್ಯವಿಲ್ಲ ಎಂದು ಮಂತ್ರ ಜಪವನ್ನು ಪರಿಚಯಿಸಲಾಯಿತು.

ಪ್ರಭುಪಾದ: ಏಕೆಂದರೆ ಅದು ಮನಸ್ಸನ್ನು ಶುದ್ಧೀಕರಿಸುತ್ತದೆ. ಜಪ ನಿಲ್ಲುವುದಿಲ್ಲ.

ಹರಿಶೌರಿ: ಆದ್ದರಿಂದ, ವರ್ಣಾಶ್ರಮದ ಎಲ್ಲಾ ವ್ಯವಸ್ಥೆಗಳ ಬದಲಾಗಿ ಜಪವನ್ನು ಪರಿಚಯಿಸಲಾಯಿತು.

ಪ್ರಭುಪಾದ: ಹೌದು, ಅದು ಬದಲಿಸಬಹುದು, ಆದರೆ ಅದನ್ನು ಬದಲಿಸುವವರು ಯಾರು? ಜನರು ಅಷ್ಟೊಂದು ನಿಪುಣರಲ್ಲ. ಜಪಿಸಲು ನೀವು ಹರಿದಾಸ ಠಾಕುರನನ್ನು ಅನುಕರಿಸಿದರೆ, ಅದು ಸಾಧ್ಯವಿಲ್ಲ.

ಸತ್ಸ್ವರೂಪ: ನಿಮ್ಮ ಕೆಲಸವನ್ನು ಮುಂದುವರಿಸಿ ಆದರೆ ಜಪಿಸಿ ಎಂದು ನಾವು ಅವರಿಗೆ ಹೇಳುತ್ತೇವೆ.

ಪ್ರಭುಪಾದ: ಹೌದು. ಥಾಕಹ ಆಪನಾರ ಕಾಜೆ, ಭಕ್ತಿವಿನೋದ ಠಾಕುರ. ಆಪನಾರ ಕಾಜ ಕಿ. ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ, ಸ್ಥಾನೆ ಸ್ಥಿತಃ (ಶ್ರೀ.ಭಾ 10.14.3). ಮತ್ತು ಅವರು ಸ್ಥಾನದಲ್ಲಿ ಉಳಿಯದಿದ್ದರೆ, ಸಹಜಿಯ ಜಪ ಶುರುವಾಗುತ್ತದೆ. ಸಹಜೀಯರ ಕೈಯಲ್ಲಿಯೂ ಜಪಮಾಲೆಗಳಿವೆ... ಆದರೆ ಅವರಿಗೆ ಮೂರು ಡಜನ್ ಹೆಂಗಸರಿದ್ದಾರೆ. ಈ ರೀತಿಯ ಜಪ ಮುಂದುವರಿಯುತ್ತದೆ. ನಮ್ಮ ಮಧುದ್ವಿಸನ ಹಾಗೆ. ಅವನು ಸನ್ಯಾಸಕ್ಕೆ ಯೋಗ್ಯನಾಗಿರಲಿಲ್ಲ, ಆದರೆ ಅವನಿಗೆ ಸನ್ಯಾಸವನ್ನು ನೀಡಲಾಯಿತು. ಅವನಿಗೆ ಐದು ಮಹಿಳೆಯರೊಡನೆ ಸಂಬಂಧವಿದೆ ಎಂದು ಅವನೇ ಬಹಿರಂಗಪಡಿಸಿದನು. ಆದ್ದರಿಂದ, ವರ್ಣಾಶ್ರಮ-ಧರ್ಮದ ಅಗತ್ಯವಿದೆ. ಕೇವಲ ನಟಿಸುವುದಲ್ಲ. ಆದ್ದರಿಂದ, ವರ್ಣಾಶ್ರಮ-ಧರ್ಮವನ್ನು ಪ್ರಪಂಚದಾದ್ಯಂತ ಪರಿಚಯಿಸಬೇಕು, ಮತ್ತು...

ಸತ್ಸ್ವರೂಪ: ಪರಿಚಯವನ್ನು ಇಸ್ಕಾನ್ ಸಮುದಾಯದಿಂದ ಪ್ರಾರಂಭಿಸಬಹುದೆ?

ಪ್ರಭುಪಾದ: ಹೌದು. ಹೌದು. ಬ್ರಾಹ್ಮಣರು, ಕ್ಷತ್ರಿಯರು. ವ್ಯವಸ್ಥಿತ ಶಿಕ್ಷಣ ಇರಬೇಕು.

ಹರಿಶೌರಿ: ಆದರೆ ನಮ್ಮ ಸಮುದಾಯದಲ್ಲಿ,… ನಾವು ವೈಷ್ಣವರಂತೆ ತರಬೇತಿ ಪಡೆಯುತ್ತಿದ್ದೇವೆ...

ಪ್ರಭುಪಾದ: ಹೌದು.

ಹರಿಶೌರಿ: ... ಹಾಗಾದರೆ ನಾವು ನಮ್ಮ ಸಮಾಜದಲ್ಲಿ ವಿಭಜನೆಗಳನ್ನು ಮಾಡಲು ಹೇಗೆ ಸಾಧ್ಯವಾಗುತ್ತದೆ?

ಪ್ರಭುಪಾದ: ವೈಷ್ಣವನಾಗುವುದು ಅಷ್ಟು ಸುಲಭವಲ್ಲ. ವೈಷ್ಣವನಾಗಲು ವರ್ಣಾಶ್ರಮ-ಧರ್ಮವನ್ನು ಸ್ಥಾಪಿಸಬೇಕು. ವೈಷ್ಣವ ಆಗುವುದು ಅಷ್ಟು ಸುಲಭವಲ್ಲ.

ಹರಿಶೌರಿ: ಇಲ್ಲ, ಅದು ಅಗ್ಗದ ವಸ್ತುವಲ್ಲ.

ಪ್ರಭುಪಾದ: ಹೌದು. ಆದ್ದರಿಂದ, ಇದನ್ನು ಮಾಡಬೇಕು. ವೈಷ್ಣವನಾಗುವುದು ಅಷ್ಟು ಸುಲಭವಲ್ಲ. ವೈಷ್ಣವನಾಗುವುದು ಅಷ್ಟು ಸುಲಭವಾಗಿದ್ದರೆ, ಅನೇಕರ ಪತನ ಏಕೆ ಆಗುತ್ತದೆ? ಇದು ಸುಲಭವಲ್ಲ. ಅತ್ಯುನ್ನತ ಅರ್ಹತೆಯುಳ್ಳ ಬ್ರಾಹ್ಮಣರಿಗೆ ಮಾತ್ರ ಸನ್ಯಾಸ. ಮತ್ತು ಸುಮ್ಮನ್ನೆ ವೈಷ್ಣವನಂತೆ ಉಡುಪು ಧರಿಸುವದರಿಂದ... ಅದು ಪತನ.

ಹರಿಶೌರಿ: ಅಂದರೆ, ವರ್ಣಾಶ್ರಮ ಪದ್ಧತಿಯು ಕನಿಷ್ಠ, ಕನಿಷ್ಠ-ಅಧಿಕಾರಿಗಳಿಗಾಗಿ ಇರುವುದು.

ಪ್ರಭುಪಾದ: ಕನಿಷ್ಠ? ಹರಿಶೌರಿ: ಹೊಸದಾಗಿ ದೀಕ್ಷೆ ಪಡೆದವನಿಗಾಗಿ.

ಪ್ರಭುಪಾದ: ಹೌದು. ಹೌದು. ಕನಿಷ್ಣ-ಅಧಿಕಾರಿ, ಹೌದು.

ಹರಿಶೌರಿ: ವರ್ಣಾಶ್ರಮ ಪದ್ಧತಿಯು ಪ್ರಯೋಜನಕಾರಿಯಾಗಿದೆ.

ಪ್ರಭುಪಾದ: ಕನಿಷ್ಠ-ಅಧಿಕಾರಿ ಎಂದರೆ ಅವನು ಬ್ರಾಹ್ಮಣನಾಗಿರಬೇಕು ಎಂದರ್ಥ. ಅದೇ ಕನಿಷ್ಠ-ಅಧಿಕಾರಿ. ಅಧ್ಯಾತ್ಮಿಕ ಜೀವನ, ಕನಿಷ್ಣ-ಅಧಿಕಾರಿ, ಅಂದರೆ ಅವನು ಅರ್ಹ ಬ್ರಾಹ್ಮಣನಾಗಿರಬೇಕು. ಅದೇ ಕನಿಷ್ಠ. ಭೌತಿಕ ಪ್ರಪಂಚದಲ್ಲಿ ಅತ್ಯುನ್ನತ ಸ್ಥಾನವೆಂದು ಪರಿಗಣಿಸಲ್ಪಡುವ ಬ್ರಾಹ್ಮಣ ಸ್ಥಾನ, ಅದು ಕನಿಷ್ಠ-ಅಧಿಕಾರಿ.