KN/Prabhupada 0170 - ನಾವು ಗೋಸ್ವಾಮಿಗಳನ್ನು ಅನುಸರಿಸಬೇಕು

Revision as of 15:29, 17 March 2023 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0170 - in all Languages Category:KN-Quotes - 1976 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on SB 1.7.8 -- Vrndavana, September 7, 1976

ಈ ಸಂಹಿತಾ... ‘ಸಂಹಿತಾ’ ಎಂದರೆ ವೈದಿಕ ಸಾಹಿತ್ಯ ಎಂದರ್ಥ. "ಭಾಗವತವನ್ನು ವ್ಯಾಸದೇವನು ಬರೆಯಲಿಲ್ಲ, ಅದನ್ನು ಯಾರೋ ಬೋಪದೇವನು ಬರೆದನು", ಎಂದು ಅನೇಕ ಧೂರ್ತರು ಹೇಳುತ್ತಾರೆ. ಅವರು ಹಾಗೆ ಹೇಳುತ್ತಾರೆ. ಮಾಯವಾದಿಗಳು, ನಿರೀಶ್ವರವಾದಿಗಳು. ಏಕೆಂದರೆ, ನಿರೀಶ್ವರವಾದಿ, ಅಥವಾ ಮಾಯಾವಾದಿಗಳ ನಾಯಕರಾದ ಶಂಕರಾಚಾರ್ಯರು ಭಗವದ್ಗೀತೆಯ ಬಗ್ಗೆ ಟಿಪ್ಪಣಿಗಳನ್ನು ಬರೆದರು, ಆದರೆ ಅವರು ಶ್ರೀಮದ್-ಭಾಗವತವನ್ನು ಸ್ಪರ್ಶಿಸಲು ಸಾಧ್ಯವಾಗಲಿಲ್ಲ. ಇದು ಏಕೆಂದರೆ ಶ್ರೀಮದ್-ಭಾಗವತದಲ್ಲಿ ವಿಷಯಗಳನ್ನು ಎಷ್ಟು ಉತ್ತಮವಾಗಿ ಸ್ಥಾಪಿಸಲಾಗಿದೆಯೆಂದರೆ, ಕೃತ್ವಾನುಕ್ರಮ್ಯ, ಭಗವಂತ ಅವ್ಯಕ್ತ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಅವರು ಅದನ್ನು ಮಾಡಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವರು ಭಾಗವತವನ್ನು ತಮ್ಮದೇ ಆದ ರೀತಿಯಲ್ಲಿ ಓದುತ್ತಿದ್ದಾರೆ, ಆದರೆ ಅದು ಯಾವುದೇ ಬುದ್ಧಿವಂತ ಮನುಷ್ಯನಿಗೆ ಇಷ್ಟವಾಗುವುದಿಲ್ಲ. ಒಮ್ಮೆ ಒಬ್ಬ ಪ್ರಮುಖ ಮಾಯವಾದಿಯು ಶ್ರೀಮದ್-ಭಾಗವತದ ಒಂದು ಶ್ಲೋಕವನ್ನು ಹೀಗೆ ವಿವರಿಸುವುದನ್ನು ನಾನು ನೋಡಿದೆ, "ನೀವು ಭಗವಂತನಾಗಿರುವುದರಿಂದ, ನೀವು ಸಂತೋಷಪಟ್ಟರೆ ಭಗವಂತನೂ ಸಂತೋಷಪಡುತ್ತಾನೆ." ಇದು ಅವರ ತತ್ತ್ವ. "ನೀವು ಭಗವಂತನನ್ನು ಪ್ರತ್ಯೇಕವಾಗಿ ಮೆಚ್ಚಿಸುವ ಅಗತ್ಯವಿಲ್ಲ. ಆದುದರಿಂದ, ನೀವು ವೈನ್ ಕುಡಿದು ಸಂತೋಷಪಟ್ಟರೆ, ಆಗ ಭಗವಂತನೂ ಕೂಡ ಸಂತೋಷಪಡುತ್ತಾನೆ." ಇದು ಅವರ ವಿವರಣೆ.

ಆದ್ದರಿಂದ, ಚೈತನ್ಯ ಮಹಾಪ್ರಭು ಈ ಮಾಯಾವಾದಿ ವ್ಯಾಖ್ಯಾನವನ್ನು ಖಂಡಿಸಿದ್ದಾರೆ. ಚೈತನ್ಯ ಮಹಾಪ್ರಭು ಹೇಳುವಂತೆ, ‘ಮಾಯಾವಾದಿ-ಭಾಷ್ಯ ಶುನಿಲೆ ಹಯ ಸರ್ವ-ನಾಶ (ಚೈ.ಚ ಮಧ್ಯ 6.169).’ ‘ಮಾಯಾವಾದಿ ಹಯ ಕೃಷ್ಣೇ ಅಪರಾಧೀ.’ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ರಾಜಿ ಇಲ್ಲ. ಮಾಯಾವಾದಿಗಳು, ಅವರು ಕೃಷ್ಣನ ದೊಡ್ಡ ಅಪರಾಧಿಗಳು. ‘ತಾನ್ ಅಹಂ ದ್ವಿಷತಃ ಕ್ರೂರಾನ್ (ಭ.ಗೀ 16.19)’, ಎಂದು ಕೃಷ್ಣ ಕೂಡ ಹೇಳುತ್ತಾನೆ. ಅವರು ಕೃಷ್ಣನ ಬಗ್ಗೆ ತುಂಬಾ ಅಸೂಯೆಪಡುತ್ತಾರೆ. ಕೃಷ್ಣನು ದ್ವಿ-ಭುಜ-ಮುರಳೀಧರ, ಶ್ಯಾಮಸುಂದರ, ಆದರೆ ಮಾಯಾವಾದಿಯು ಕೃಷ್ಣನನ್ನು ಹೀಗೆ ವಿವರಿಸುತ್ತಾನೆ: “ಕೃಷ್ಣನಿಗೆ ಕೈ ಇಲ್ಲ, ಕಾಲಿಲ್ಲ. ಇದೆಲ್ಲವೂ ಕಲ್ಪನೆ.” ಇದು ಎಂತಹ ದೊಡ್ಡ ಅಪರಾಧವೆಂದು ಅವರಿಗೆ ತಿಳಿದಿಲ್ಲ. ಆದರೆ ನಮ್ಮಂತಹ ಜನರನ್ನು ಎಚ್ಚರಿಸಲು, ಚೈತನ್ಯ ಮಹಾಪ್ರಭು ಸ್ಪಷ್ಟವಾಗಿ, "ಮಾಯವಾದಿಗಳ ಬಳಿ ಹೋಗಬೇಡಿ", ಎಂದು ಎಚ್ಚರಿಸಿದ್ದಾರೆ. ‘ಮಾಯಾವಾದಿ-ಭಾಷ್ಯ ಶುನಿಲೆ ಹಯ ಸರ್ವ-ನಾಶ. ಮಾಯಾವಾದಿ ಹಯ ಕೃಷ್ಣೇ ಅಪರಾಧೀ.’ ಇದು ಶ್ರೀ ಚೈತನ್ಯ ಮಹಾಪ್ರಭುಗಳ ಹೇಳಿಕೆ.

ಆದ್ದರಿಂದ, ನೀವು ತುಂಬಾ ಜಾಗರೂಕರಾಗಿರಬೇಕು. ಯಾವುದೇ ಮಾಯಾವಾದಿಯ ಮಾತುಗಳನ್ನು ಕೇಳಲು ಹೋಗಬೇಡಿ. ವೈಷ್ಣವರ ವೇಷದಲ್ಲಿ ಅನೇಕ ಮಾಯವಾದಿಗಳು ಇದ್ದಾರೆ. ಶ್ರೀ ಭಕ್ತಿವಿನೋದ ಠಾಕುರರವರು ಅಂತವರ ಬಗ್ಗೆ ಹೀಗೆ ವಿವರಿಸಿದ್ದಾರೆ, ‘ಐ’ತ ಏಕ ಕಲಿ-ಚೇಲಾ ನಾಕೇ ತಿಲಕ ಗಲೆ ಮಾಲಾ,’ ಅಂದರೆ ‘ಇವನು ಕಲಿಯ ಅನುಯಾಯಿ. ಅವನ ಮೂಗಿನ ಮೇಲೆ ತಿಲಕ ಮತ್ತು ಕುತ್ತಿಗೆಯಲ್ಲಿ ಮಣಿ ಮಾಲೆಯಿದ್ದರೂ, ಅವನು ಕಲಿ-ಚೇಲಾ.” ಅವನು ಮಾಯಾವಾದಿಯಾಗಿದ್ದರೆ, ‘ಸಹಜ-ಭಜನಾ ಕಚೆ ಮಮ ಸಾಂಗೆ ಲಯ ಪರೆ ಬಲ.’ ಆದ್ದರಿಂದ, ಈ ವಿಷಯಗಳಿವೆ. ನೀವು ವೃಂದಾವನಕ್ಕೆ ಬಂದಿದ್ದೀರಿ. ಜಾಗರೂಕರಾಗಿರಿ, ಬಹಳ ಜಾಗರೂಕರಾಗಿರಿ. ‘ಮಾಯಾವಾದಿ-ಭಾಷ್ಯ ಶುನಿಲೆ (ಚೈ.ಚ ಮಧ್ಯ 6.169).’ ಇಲ್ಲಿ ಅನೇಕ ಮಾಯವಾದಿಗಳಿದ್ದಾರೆ, ಅನೇಕ ನಾಮಮಾತ್ರಕ್ಕೆ ‘ತಿಲಕ-ಮಾಲಾ’ ಇದ್ದಾರೆ, ಆದರೆ ವಾಸ್ತವಿಕವಾಗಿ ಅವರು ಏನು ಎಂದು ನಿಮಗೆ ತಿಳಿಯದು. ಆದರೆ ಮಹಾನ್ ಆಚಾರ್ಯರು ಅವರನ್ನು ಕಂಡುಹಿಡಿಯ ಬಲ್ಲರು.

ಶೃತಿ-ಸ್ಮೃತಿ-ಪುರಾಣಾದಿ
ಪಂಚರಾತ್ರ-ವಿಧಿಂ ವಿನಾ
ಐಕಾಂತಿಕಿ ಹರೇರ್ ಭಕ್ತಿರ್
ಉತ್ಪಾತಾಯೈವ ಕಲ್ಪತೆ
(ಬ್ರಹ್ಮ.ಸಂ 1.2.101)

ಅವು ಕೇವಲ ಅಶಾಂತಿಯನ್ನು ಸೃಷ್ಟಿಸುತ್ತಾರೆ. ಆದ್ದರಿಂದ, ನಾವು ಗೋಸ್ವಾಮೀಯ, ಗೋಸ್ವಾಮಿ ಸಾಹಿತ್ಯವನ್ನು, ವಿಶೇಷವಾಗಿ ‘ದಿ ನೆಕ್ಟರ್ ಆಫ್ ಡಿವೋಷನ್’ ಪುಸ್ತಕವಾಗಿ ಅನುವಾದಿಸಿರುವ ಭಕ್ತಿ-ರಸಾಮೃತ-ಸಿಂಧುವನ್ನು ಅನುಸರಿಸಬೇಕು. ನೀವು ಪ್ರತಿಯೊಬ್ಬರೂ ಅದನ್ನು ಬಹಳ ಎಚ್ಚರಿಕೆಯಿಂದ ಓದಿ ಪ್ರಗತಿ ಸಾಧಿಸಬೇಕು. ಕೇವಲ ನಾಮಮಾತ್ರಕ್ಕೆ ವೈಷ್ಣವನಾದ ಮಾಯವಾದಿಗೆ ಬಲಿಪಶುವಾಗಬೇಡಿ. ಇದು ತುಂಬಾ ಅಪಾಯಕಾರಿ.

ಆದ್ದರಿಂದ, ‘ಸ ಸಂಹಿತಾಂ ಭಾಗವತೀಂ ಕೃತ್ವಾನುಕ್ರಮ್ಯ ಚಾತ್ಮ-ಜಮ್ (ಶ್ರೀ.ಭಾ 1.7.8)’ ಎಂದು ಹೇಳಲಾಗುತ್ತದೆ. ಇದು ಬಹಳ ಗೌಪ್ಯ ವಿಷಯ. ಅವರು ಅದನ್ನು ಶುಕದೇವ ಗೋಸ್ವಾಮಿಗೆ ಬೋಧಿಸಿದರು.