KN/Prabhupada 0172 - ಕೃಷ್ಣನಿಗೆ ಶರಣಾಗುವುದೇ ನಿಜವಾದ ಧರ್ಮ

Revision as of 23:52, 25 March 2023 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0172 - in all Languages Category:KN-Quotes - 1974 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on SB 1.5.30 -- Vrndavana, August 11, 1974

ಕೃಷ್ಣನಿಗೆ ಶರಣಾಗುವುದೇ ಧರ್ಮ. ಇಲ್ಲವಾದಲ್ಲಿ, ಶ್ರೀಮದ್ ಭಾಗವತದಲ್ಲಿ ಹೇಳಿರುವಂತೆ, ‘ಧರ್ಮ ಪ್ರೊಜ್ಜ್ಹಿತ-ಕೈತವೊ 'ತ್ರ' (ಶ್ರೀ.ಭಾ 1.1.2). ಎಲ್ಲಾ ರೀತಿಯ ಕಪಟ ಧಾರ್ಮಿಕ ವ್ಯವಸ್ಥೆಯನ್ನು ಭಗವದ್ಗೀತೆ, ಶ್ರೀಮದ್ ಭಾಗವತದಿಂದ ಹೊರಹಾಕಲಾಗಿದೆ. ಹೊರದೂಡಲಾಗಿದೆ, ಪ್ರೊಜ್ಜ್ಹಿತ. ಪರಮಾತ್ಮನಲ್ಲಿ ವಿಲೀನಗೊಳ್ಳಲು, ದೇವರಾಗಲು, ದೇವರ ಅವತಾರವಾಗಲು - ಈ ರೀತಿಯ ಧಾರ್ಮಿಕ ವ್ಯವಸ್ಥೆಗಳನ್ನು ಶ್ರೀಮದ್ ಭಾಗವತದಿಂದ ಬಹಳ ಕಟ್ಟುನಿಟ್ಟಾಗಿ ಹೊರಹಾಕಲಾಗಿದೆ. ಏಕೆಂದರೆ ಅವು ಧರ್ಮವಲ್ಲ. ಕೃಷ್ಣನಿಗೆ ಶರಣಾಗುವುದೆ ನಿಜವಾದ ಧರ್ಮ.

ಆದ್ದರಿಂದ, ಇದನ್ನು ‘ಯತ್ ತತ್ ಸಾಕ್ಷಾದ್ ಭಗವತ ಉದಿತಂ (ಶ್ರೀ.ಭಾ 1.5.30) ಎಂದು ಹೇಳಲಾಗುತ್ತದೆ. ನೀವು ದೇವೋತ್ತಮ ಪರಮ ಪುರುಷನ ಬಳಿಸಾರಲು ಬಯಸಿದರೆ, ನೀವು ದೇವೋತ್ತಮ ಪರಮ ಪುರುಷನ ಆದೇಶಕ್ಕೆ ಬದ್ಧರಾಗಿರಬೇಕು. ಆದರೆ ದೇವೋತ್ತಮ ಪರಮ ಪುರುಷ ಯಾರು, ಆತನ ಆಜ್ಞೆ ಏನು, ಆತನೊಂದಿಗಿನ ನಮ್ಮ ಸಂಬಂಧವೇನು ಎಂಬುದೇ ಅವರಿಗೆ ತಿಳಿದಿಲ್ಲ. ಈ ವಿಷಯಗಳು ತಿಳಿದಿಲ್ಲ. ಇದು ಭಕ್ತರಿಗೆ ತಿಳಿದಿದೆ. ಇದನ್ನು ಭಕ್ತರು ಏಕೆ ಏಕಸ್ವಾಮ್ಯಗೊಳಿಸುತ್ತಾರೆ? ಇದಕ್ಕೂ ಭಗವದ್ಗೀತೆಯಲ್ಲಿ ಉತ್ತರವಿದೆ: ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಶ್ ಚಾಸ್ಮಿ ತತ್ವತಃ (ಭ.ಗೀ 18.55). ಭಗವಂತ ಎಂದರೆ ಯಾರು, ಕೃಷ್ಣ ಎಂದರೆ ಯಾರು ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ನೀವು ಈ ಭಕ್ತಿ ಮಾರ್ಗವನ್ನು ಅನುಸರಿಸಬೇಕು... ಬೇರೆ ದಾರಿಯೇ ಇಲ್ಲ. ಊಹಾಪೋಹ ಅಥವಾ ತಥಾಕಥಿತ ಊಹಾತ್ಮಕ ಜ್ಞಾನದ ಬೆಳವಣಿಗೆಯ ಮೂಲಕ ಅವನನ್ನು ತಿಳಿಯಬಹುದು ಎಂದು ಕೃಷ್ಣನು ಎಂದಿಗೂ ಹೇಳುವುದಿಲ್ಲ. ಇಲ್ಲ. ಹಾಗಿದ್ದರೆ, "ಜ್ಞಾನದ ಮೂಲಕ ನನ್ನನ್ನು ಅರಿತುಕೊಳ್ಳಬಹುದು", ಎಂದು ಅವನು ಹೇಳುತ್ತಿದ್ದ. ಇಲ್ಲ. ಕರ್ಮದ ಮುಖಾಂತರವೂ ಅವನು ಯಾರಿಗೂ ಅರ್ಥವಾಗುವುದಿಲ್ಲ. ಯೋಗದಿಂದಲೂ ಅಲ್ಲ. ಇದನ್ನು ಶಾಸ್ತ್ರದ ಅನೇಕ, ವಿವಿಧ ಸ್ಥಳಗಳಲ್ಲಿ ವಿವರಿಸಲಾಗಿದೆ. ಕೇವಲ ಭಕ್ತಿ. ಭಕ್ತಿ ಮಾತ್ರ. ಭಕ್ತಿ ಪಂಥವನ್ನು ಹರಡುವುದು ಆಧ್ಯಾತ್ಮಿಕ ಗುರು ಅಥವಾ ಮಹಾತ್ಮನ ಕರ್ತವ್ಯವಾಗಿದೆ. ಅದು ಅತ್ಯಂತ ಗೌಪ್ಯವಾಗಿದೆ... ಅದು ಅತ್ಯಂತ ಕರುಣಾಮಯಿ ಮಾನವೀಯ ಚಟುವಟಿಕೆಯಾಗಿದೆ.

ಏಕೆಂದರೆ ಜನರು ಈ ಜ್ಞಾನದ ಕೊರತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ನಮ್ಮ ಕೃಷ್ಣ ಪ್ರಜ್ಞಾ ಆಂದೋಲನವು ಮಾನವ ಸಮಾಜಕ್ಕೆ ಪ್ರಯೋಜನವನ್ನು ನೀಡಬಲ್ಲ ಏಕೈಕ ಆಂದೋಲನವಾಗಿದೆ ಎಂದು ನಾನು ಬಹಳ ಹೆಮ್ಮೆಯಿಂದ ಹೇಳಬಲ್ಲೆ. ಇದೊಂದೇ ಆಂದೋಲನ, ಉಳಿದೆಲ್ಲವೂ ನಕಲಿ ಚಳುವಳಿಗಳು ಎಂದು ನಾನು ಘೋಷಿಸುತ್ತೇನೆ. ಅವರು ಬಂದು ಶಾಸ್ತ್ರಗಳನ್ನು ಅಧ್ಯಯನ ಮಾಡಲಿ ಮತ್ತು ಸ್ವತಃ ನಿರ್ಧರಿಸಲಿ. ಅವರೆಲ್ಲರೂ ಮೋಸ ಮಾಡುತ್ತಿದ್ದಾರೆ. ಈ ಭಗವದ್-ಭಕ್ತಿ ಮಾತ್ರ ನಿಜ. ಏಕೆಂದರೆ ಭಕ್ತಿ ಸೇವೆಯ ಪ್ರಕ್ರಿಯೆಗೆ ಒಳಗಾಗದೆ ನೀವು ಭಗವಂತನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಶ್ ಚಾಸ್ಮಿ ತತ್ವತಃ (ಭ.ಗೀ 18.55). ನೀವು ಸತ್ಯವನ್ನು ತಿಳಿದುಕೊಳ್ಳಲು ಬಯಸಿದರೆ, ತತ್ವತಃ... ಕೃಷ್ಣನು ಅವನನ್ನು ತತ್ತ್ವತಃ ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತಾನೆ. "ಅವನಿಗೆ ಗೋಪಿಗಳೆಂದರೆ ತುಂಬಾ ಇಷ್ಟ, ಆದ್ದರಿಂದ ನಾವು ಕೃಷ್ಣನ ಲೀಲೆಯನ್ನು ಕೇಳೋಣ", ಎಂದು ಕೇವಲ ಮೇಲ್ನೋಟಕ್ಕೆ ಕೃಷ್ಣನನ್ನು ಗಣಿಸಬಾರದು. ಕೃಷ್ಣ-ಗೋಪಿಯರ ಲೀಲೆ ಏಕೆ ಬೇಕು? ಕೃಷ್ಣ ರಾಕ್ಷಸರನ್ನು ಕೊಲ್ಲುವ ಲೀಲೆ ಏಕೆ ಬೇಡ? ಕೃಷ್ಣನು ರಾಕ್ಷಸರನ್ನು ಕೊಂದ ಬಗ್ಗೆ ಕೇಳಲು ಜನರಿಗೆ ಆಸಕ್ತಿ ಇಲ್ಲ. ಗೋಪಿಯರ ಲೀಲೆ, ಇದು ಯುವಕ-ಯುವತಿಯರ ನಡುವಿನ ವ್ಯವಹಾರವೆಂದು ಅದು ಬಹಳ ಬೇಗನೆ ಆಕರ್ಷಿಸುತ್ತದೆ. ಆದರೆ ಕೃಷ್ಣನ ಇನ್ನೊಂದು ವ್ಯವಹಾರವೂ ಇದೆ. ‘ಪರಿತ್ರಾಣಾಯ ಸಾಧುನಾಂ ವಿನಾಶಾಯ ಚ ದುಷ್ಕೃತಾಮ್’ (ಭ.ಗೀ 4.8). ಅದು ಕೂಡ ಕೃಷ್ಣನ ಲೀಲೆಯೇ. ಅದು ಕೃಷ್ಣನ ಲೀಲೆ. ಪ್ರಭು ರಾಮಚಂದ್ರನು ರಾವಣನನ್ನು ಕೊಂದ ಹಾಗೆ. ಅದೂ ಸಹ ಕೃಷ್ಣನ ಲೀಲೆಯೆ. ಪ್ರಭು ರಾಮನ ಲೀಲೆ ಮತ್ತು ಕೃಷ್ಣನ ಲೀಲೆ...

ಆದ್ದರಿಂದ, ನಾವು ಕೃಷ್ಣನ ಎಲ್ಲಾ ಲೀಲೆಗಳನ್ನು ಸರ್ವೋಚ್ಛ ಎಂದು ಸ್ವೀಕರಿಸಬೇಕು. ಅದನ್ನು ಬಿಟ್ಟು ಬರಿ ಅತ್ಯಂತ ಗೌಪ್ಯವಾದ... ಗೋಪಿಯರೊಂದಿಗೆ ಕೃಷ್ಣನ ಲೀಲೆಯಾದ ವೃಂದಾವನ-ಲೀಲೆ ಅತ್ಯಂತ ಗೌಪ್ಯ ಲೀಲೆಯಾಗಿದೆ. ನಾವು ಮುಕ್ತರಾಗದೆ ಹೊರತು ಈ ಗೌಪ್ಯ ಲೀಲೆಯನ್ನು ಆನಂದಿಸಬಾರದು. ಇದು ಕಠಿಣವಾದ ವಿಷಯ. ಕೃಷ್ಣನ ಲೀಲೆ ಎಂದರೇನು ಎಂದು ಅವರಿಗೆ ಅರ್ಥವಾಗದ ಕಾರಣ, ಅವರು ಕೇವಲ ನಕಲು ಮಾಡುತ್ತಾರೆ, ಅವರ ಅಧಃಪತನವಾಗುತ್ತದೆ. ಅನೇಕ ವಿಷಯಗಳಿವೆ. ನಾವು ಚರ್ಚಿಸಲು ಬಯಸುವುದಿಲ್ಲ. ಆದರೆ ನಾವು... ನಾವು ನಿಜವಾಗಿಯೂ ಕೃಷ್ಣಲೀಲೆಯಲ್ಲಿ ಪ್ರಬುದ್ಧರಾಗುವ ಬಗ್ಗೆ ಆಸಕ್ತರಾಗಿದ್ದರೆ, ಮೊದಲು ನಾವು ಕೃಷ್ಣ ಎಂದರೆ ಯಾರು, ಆತನು ಏನನ್ನು ಬಯಸುತ್ತಾನೆ, ಮತ್ತು ನಾವು ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಆಗ ನಾವು ಕೃಷ್ಣನ ಲೀಲೆಯ ಗೌಪ್ಯ ಭಾಗಕ್ಕೆ ಪ್ರವೇಶಿಸಬಹುದು. ಇಲ್ಲದಿದ್ದರೆ, ನಾವು ಅದನ್ನು ತಪ್ಪಾಗಿ ಗ್ರಹಿಸುತ್ತೇವೆ, ಮತ್ತು ನಮ್ಮ ಅಧಃಪತನವಾಗುತ್ತದೆ.