KN/Prabhupada 0040 - ಇಲ್ಲಿದ್ದಾನೆ ಪರಮಪುರುಷ

Revision as of 02:31, 11 February 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Lecture on BG 16.8 -- Tokyo, January 28, 1975

ದಶಲಕ್ಷಾಂತರ, ಕೋಟಿಯಾಂತರ ಜಿವಾತ್ಮಗಳಿವೆ, ಹಾಗು ಅವನು ಪ್ರತಿಯೊಂದರ ಹೃದಯದಲ್ಲಿಯು ನೆಲೆಸಿರುತ್ತಾನೆ. ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ ಜ್ಞಾನಂ ಅಪೋಹನಂ ಚ (ಭ.ಗೀ 15.15) ಅವನು ಹೀಗೆ ನಿರ್ವಹಿಸುತಿದ್ದಾನೆ. ಆದ್ದರಿಂದ, ನಾವು ಅವನು ನಮ್ಮಂತೆಯೆ ಒಬ್ಬ ನಿಯಂತ್ರಕನೆಂದುಕೊಂಡರೆ ಅದು ನಮ್ಮ ತಪ್ಪುತಿಳುವಳಿಕೆ. ಅವನೂ ನಿಯಂತ್ರಕನೇ. ನಿಯಂತ್ರಕನಿದ್ದಾನೆ. ಅಮಿತ ಜ್ಞಾನ, ಅನಿಯಮಿತ ಸಹಾಯಕರು, ಅನಂತ ಶಕ್ತಿಗಳ ಜೊತೆ ಅವನು ನಿರ್ವಹಿಸುತ್ತಾನೆ. ಒಬ್ಬ ವ್ಯಕ್ತಿ ಇಷ್ಟು ಅಮಿತ ಶಕ್ತಿವಂತನಾಗಿರಬಹುದೆಂದು ತಿಳಿಯಲು ಈ ಮಾಯಾವಾದಿಗಳಿಗೆ ಆಗುವುದಿಲ್ಲ. ಆದ್ದರಿಂದ ಅವರು ಮಾಯಾವಾದಿಯಾಗುತ್ತಾರೆ. ಆವರಿಗೆ ಊಹಿಸಲಾಗುವುದಿಲ್ಲ. ಈ ಮಾಯಾವಾದಿಗಳು… ಅವರಿಗೆ ಊಹಿಸಲಾಗುವುದಿಲ್ಲ… “ಒಬ್ಬ ವ್ಯಕ್ತಿಯಾದರೆ, ಅವನು ನನ್ನಂತ ವ್ಯಕ್ತಿಯೇ ಆಗಿರಬೇಕು”, ಎಂದು ಅವರು ಭಾವಿಸುತ್ತಾರೆ. “ನಾನು ಇದನ್ನು ಮಾಡಲಾಗುವುದಿಲ್ಲ. ಆದ್ದರಿಂದ, ಅವನು ಕೂಡ ಮಾಡಲಾಗುವುದಿಲ್ಲ.” ಅವರು ಮೂಢರು. “ಅವಜಾನಂತಿ ಮಾಂ ಮೂಢಾಃ” (ಭ.ಗೀ 9.11) ಅವರು ಕೃಷ್ಣನನ್ನು ತಮ್ಮೊಂದಿಗೆ ಹೋಲಿಸಿಕೊಳ್ಳುತಿದ್ದಾರೆ. ಅವನು ಹೇಗೆ ಒಬ್ಬ ವ್ಯಕ್ತಿಯೋ ಅಂತೆಯೇ ಕೃಷ್ಣನೂ ಅಂತಃ ಒಬ್ಬ ವ್ಯಕ್ತಿ ಎಂದು ಭಾವಿಸುತ್ತಾನೆ. ಅವರಿಗೆ ತಿಳಿಯದು. ಕೃಷ್ಣ ಒಬ್ಬ ವ್ಯಕ್ತಿಯಾದರೂ ಅನಿಯಮಿತ ಜೀವಿಗಳನ್ನು ಪೋಷಿಸುತ್ತಾನೆ ಎಂದು ವೇದಗಳು ತಿಳಿಸುತ್ತವೆ. ಅದು ಅವರಿಗೆ ತಿಳಿಯದು. ಏಕೋ ಯೊ ಬಹೂನಾಂ ವಿದದಾತಿ ಕಾಮಾನ್. ಆ ಒಬ್ಬ ಏಕೈಕ ವ್ಯಕ್ತಿ ದಶಲಕ್ಷಾಂತರ, ಕೋಟ್ಯಾಂತರ ಜೀವಿಗಳನ್ನು ಪೋಷಿಸುತ್ತಾನೆ. ನಾವೆಲ್ಲರು… ಪ್ರತಿಯೊಬ್ಬರು ಜೀವಿಗಳು. ನಾನೊಬ್ಬ ಜೀವಿ. ನೀನೂ ಜೀವಿ. ಇರುವೆ ಒಂದು ಜೀವಿ. ಬೆಕ್ಕು ಒಂದು ಜೀವಿ. ನಾಯಿ ಒಂದು ಜೀವಿ, ಹಾಗು ಹುಳ ಒಂದು ಜೀವಿ. ಮರಗಳೂ ಜೀವಿ. ಪ್ರತಿಯೊಬ್ಬರೂ ಜೀವಿ. ಪ್ರತಿಯೊಬ್ಬರೂ ಜೀವಿ. ಹಾಗು ಮತ್ತೊಬ್ಬ ಜೀವಿಯು ಇರುವನು, ಅವನೇ ಭಗವಂತ, ಕೃಷ್ಣ. ಆ ಒಬ್ಬ ಪುರುಷನು ಈ ಎಲ್ಲಾ ದಶಲಕ್ಷಾಂತರ, ಕೋಟ್ಯಾಂತರ ವೈವಿಧ್ಯ ಜೀವಿಗಳನ್ನು ಪೋಷಿಸುತ್ತಾನೆ. ಇದು ವೈದಿಕ... ಏಕೋ ಯೊ ಬಹೂನಾಮ್ ವಿದದಾತಿ ಕಾಮಾನ್, ನಿತ್ಯೋ ನಿತ್ಯಾನಾಮ್ ಚೇತನಸ್ ಚೇತನಾನಾಮ್. (ಕಠಾ ಉಪನಿಷದ್ 2.2.13). ಇದುವೇ ಮಾಹಿತಿ.

ಮತ್ತು ಭಗವದ್ಗೀತೆಯಲ್ಲಿಯು ಶ್ರೀಕೃಷ್ಣನು ಹೇಳುತ್ತಾನೆ… ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ಇತಿ ಮತ್ವಾ ಭಜಂತೇ ಮಾಮ್ (ಭ.ಗೀ 10.8). ಆದ್ದರಿಂದ, ಒಬ್ಬ ಭಕ್ತ ಯಾವಾಗ ಸಂಪೂರ್ಣವಾಗಿ "ಯಾರು ನಾಯಕನೋ, ಯಾರು ನಿಯಂತ್ರಕನೋ, ಯಾರು ಎಲ್ಲರನೂ ಪೋಷಿಸುತ್ತಾನೋ, ಇಲ್ಲಿದ್ದಾನೆ ಆ ಪರಮಪುರುಷ", ಎಂದು ಅರಿತುಕೊಳ್ಳುತ್ತಾನೋ ಆಗ ಅವನು ಪರಮಪುರುಷನಿಗೆ ಶರಣಾಗತನಾಗುತ್ತಾನೆ ಮತ್ತು ಅವನ ಭಕ್ತನಾಗುತ್ತಾನೆ.