KN/Prabhupada 0044 - ಸೇವೆಯೆಂದರೆ ಗುರುವಿನ ಆಜ್ಞೆಯನ್ನು ಪಾಲಿಸುವುದು

Revision as of 01:53, 13 February 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Lecture on BG 4.1 -- Montreal, August 24, 1968

ಅಂದರೆ ಅವನು ಕೃಷ್ಣನ ನಿರ್ದೇಶನವನ್ನು ಅನುಸರಿಸುತ್ತಿದ್ದಾನೆಂದು ಅರ್ಥ. ಅಷ್ಟೆ. “ನಾನು ಕೃಷ್ಣನ ಶತ್ರುವಾಗುತ್ತಿದ್ದೇನೆ” ಎಂದು ಅವನು ಚಿಂತಿಸುವುದಿಲ್ಲ. ‘ಅವನು ಅನುಸರಿಸುತ್ತಿದ್ದಾನೆ’ ಎಂಬುದೆ ಇದರ ತತ್ವ. “ನೀನು ನನ್ನ ಶತ್ರುವಾಗು” ಎಂದು ಕೃಷ್ಣನು ಹೇಳಿದರೆ, ನಾನು ಅವನ ಶತ್ರುವಾಗುತ್ತೇನೆ. ಅದೇ ಭಕ್ತಿಯೋಗ. ಹೌದು. ನಾನು ಕೃಷ್ಣನನ್ನು ತೃಪ್ತಿ ಪಡಿಸಬೇಕು. ಗುರುವು ಸೇವಕನನ್ನು “ನನ್ನನ್ನು ಇಲ್ಲಿ ಗುದ್ದು” ಎಂದು ಕೇಳಿದ ಹಾಗೆ. ಅಂತೆಯೇ ಅವನು ಹೀಗೆ ಗುದ್ದುತ್ತಿದ್ದಾನೆ. ಅದೆ ಸೇವೆಯೆಂದರೆ. ಇತರರು ಇದನ್ನು ನೋಡಿ, “ಓ, ಅವನು ಗುದ್ದುತ್ತಿದ್ದಾನೆ, ಆದರೆ ಸೇವೆಯೆಂದು ತಿಳಿದುಕೊಂಡಿದ್ದಾನೆ! ಏನಿದು? ಗುದ್ದುತ್ತಿದ್ದಾನೆ!” ಎಂದು ತಿಳಿಯಬಹುದು. ಆದರೆ ಗುರುವಿಗೆ ಬೇಕಿರುವುದು, “ನನ್ನನು ಗುದ್ದು” ಎಂಬುದು. ಅದೇ ಸೇವೆಯೆಂದರೆ. ಸೇವೆಯೆಂದರೆ ಗುರುವಿನ ಆಜ್ಞೆಯನ್ನು ಪಾಲಿಸುವುದು ಎಂದರ್ಥ. ಅದು ಏನೆಂಬುದು ಮುಖ್ಯವಲ್ಲ. ಚೈತನ್ಯ ಮಹಾಪ್ರಭುಗಳ ಜೀವನದಲ್ಲಿ ನಡೆದಂತ ಒಂದು ಉತ್ತಮ ನಿದರ್ಶನವಿದೆ. ಅವರಿಗೆ ಗೋವಿಂದ ಎಂಬುವ ಆಪ್ತ ಸೇವಕನಿದ್ದನು. ಚೈತನ್ಯ ಮಹಾಪ್ರಭುಗಳು ಪ್ರಸಾದವನ್ನು ಸ್ವೀಕರಿಸಿದನಂತರ ಗೋವಿಂದನು ಕೂಡ ಸ್ವೀಕರಿಸುತ್ತಿದ್ದನು. ಒಂದು ದಿನ ಚೈತನ್ಯ ಮಹಾಪ್ರಭುಗಳು ಪ್ರಸಾದನ್ನು ಸ್ವೀಕರಿಸದನಂತರ ಹೊಸ್ತಿಲ ಹತ್ತಿರ ಮಲಗಿಕೊಂಡರು. ಏನೆಂದು ಕರೆಯುತ್ತಾರೆ ಅದನ್ನು? ಹೊಸ್ತಿಲು? ಬಾಗಿಲು? ಬಾಗಿಲದ್ವಾರ? ಗೋವಿಂದ ಅವರನ್ನು ದಾಟಿಕೊಂಡು ಹೋದನು. ಮಹಾಪ್ರಭುಗಳು ವಿಶ್ರಮಿಸಿಕೊಳ್ಳುವಾಗ ಗೋವಿಂದ ಅವರ ಪಾದಗಳನ್ನು ನೀವುವನು. ಆದ್ದರಿಂದ ಗೋವಿಂದನು ಚೈತನ್ಯ ಮಹಾಪ್ರಭುಗಳನ್ನು ದಾಟಿಕೊಂಡು ಹೋಗಿ ಅವರ ಪಾದಗಳನ್ನು ನೀವಿದನು. ಚೈತನ್ಯ ಮಹಾಪ್ರಭುಗಳು ನಿದ್ರಿಸುತ್ತಿದ್ದರು, ಹಾಗು ಸುಮಾರು ಅರ್ಧಗಂಟೆಯ ನಂತರ ಎಚ್ಚರಗೊಂಡಾಗ ಕೇಳಿದರು, “ಗೋವಿಂದ, ನೀನು ಪ್ರಸಾದ ಸ್ವೀಕರಿಸಿಯಾಯಿತೆ?” “ಇಲ್ಲ ಪ್ರಭುಗಳೆ.” “ಏಕೆ?” “ನಾನು ನಿಮ್ಮನು ದಾಟಲಾಗುವುದಿಲ್ಲ. ನೀವು ಇಲ್ಲಿ ಮಲಗಿರುವಿರಿ.” “ಹಾಗಿದ್ದರೆ ಹೇಗೆ ಒಳಗೆ ಬಂದೆ?” “ ನಿಮ್ಮನ್ನು ದಾಟಿಕೊಂಡು.” “ಒಮ್ಮೆ ದಾಟಿಕೊಂಡು ಬಂದಮೇಲೆ ಮತ್ತೆ ದಾಟುವುದಿಲ್ಲವೇಕೆ?” “ಮೊದಲ ಬಾರಿ ನಿಮಗೆ ಸೇವೆ ಮಾಡಲು ದಾಟಿದೆ. ಈಗ ನಾನು ಪ್ರಸಾದ ಸ್ವೀಕರಿಸಲು ದಾಟಲಾಗುವುದಿಲ್ಲ.ಅದು ನನ್ನ ಕರ್ತವ್ಯವಲ್ಲ. ಅದು ನನಗೋಸ್ಕರ. ಇದು ನಿಮಗೋಸ್ಕರ.” ಇಂತಯೇ ಕೃಷ್ಣನ ಆನಂದಕ್ಕಾಗಿ ನೀವು ಅವನ ಶತ್ರುವಾಗಬಹುದು, ಅವನ ಸ್ನೇಹಿತನಾಗಬಹುದು, ನೀವು ಏನಾದರು ಆಗಬಹುದು. ಅದುವೇ ಭಕ್ತಿಯೋಗ. ಏಕೆಂದರೆ ನಿಮ್ಮ ಗುರಿ ಈಗ ಕೃಷ್ಣನನ್ನು ಹೇಗೆ ಆನಂದಪಡಿಸಬಹುದೆಂಬುದು. ಆದರೆ ಯಾವಾಗ ನಿಮ್ಮ ಇಂದ್ರಿಯತೃಪ್ತಿಯ ನೆಲೆಗೆ ಬರುವುದೋ, ಆಗ ನೀವು ತಕ್ಷಣ ಐಹಿಕ ಜಗತ್ತಿಗೆ ತೆರೆಳುವಿರಿ.

ಕೃಷ್ಣ ಬಾಹಿರ್ಮುಖ ಹನಾ ಭೋಗ ವಾನ್ಚಾ ಕರೆ
ನಿಕಟಸ್ತ ಮಾಯಾ ತಾರೆ ಜಾಪಟಿಯಾ ಧರೆ
(ಪ್ರೇಮ ವಿವರ್ತ)

ನಾವು ಯಾವಾಗ ಕೃಷ್ಣನನ್ನು ಮರೆತು ನಮ್ಮ ಇಂದ್ರಿಯ ತೃಪ್ತಿಗೋಸ್ಕರ ಕೆಲಸ ಮಾಡುತ್ತೇವೋ, ಅದುವೇ ಮಾಯೆ. ಹಾಗು ನಾವು ಯಾವಾಗ ಈ ಇಂದ್ರಿಯ ತೃಪ್ತಿಯ ಪ್ರಕ್ರಿಯೆಯನ್ನು ತೊರೆದು ಎಲ್ಲವನ್ನೂ ಕೃಷ್ಣನಿಗೋಸ್ಕರ ಮಾಡುತ್ತೀವೋ ಅದುವೇ ಮುಕ್ತಿ.