KN/Prabhupada 0002 - ಹುಚ್ಚರ ನಾಗರಿಕತೆ

Revision as of 01:56, 21 April 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Lecture on SB 6.1.49 -- New Orleans Farm, August 1, 1975

ಹರಿಕೇಶ: ಅನುವಾದ... "ಒಬ್ಬ ವ್ಯಕ್ತಿ ನಿದ್ರಿಸುವಾಗ ಕನಸಿನಲ್ಲಿ ನೋಡಿದ ದೇಹದ೦ತೆ ವರ್ತಿಸುವನೊ, ಅಥವಾ ಅದೇ ದೇಹ ತಾನೆ೦ದು ತಿಳಿಯುತಾನೋ, ಅದೇ ರೀತಿ ತನ್ನ ಹಿ೦ದಿನ ಧಾಮಿ೯ಕ ಅಥವಾ ಅಧಾಮಿ೯ಕ ಜೀವನದ ಅಧಾರದ ಮೇಲೆ ಪಡೆದ ಈ ಪ್ರಸ್ತುತ ದೇಹವನ್ನು ತಾನೇ ಎ೦ದು ಗುರುತಿಸುತ್ತಾನೆ. ಅವನಿಗೆ ತನ್ನ ಹಿ೦ದಿನ ಅಥವಾ ಮು೦ದಿನ ಜೀವನ ತಿಳಿದಿರುವುದಿಲ್ಲ.

ಪ್ರಭುಪಾದ:

ಯಥಜ್ಞಾನಸ್ ತಮಸಾ (ಯುಕ್ತ)
ಉಪಾಸ್ತೆ ವ್ಯಕ್ತಮ್ ಏವ ಹಿ
ನ ವೇದ ಪೂವ೯ಮ್ ಅಪರಂ
ನಷ್ಟ-ಜನ್ಮ-ಸ್ಮ್ರುತಿಸ್ ತಥಾ
(ಶ್ರೀ.ಭಾ 6.1.49)

ಇದೇ ನಮ್ಮ ಸ್ಥಾನ. ಇದೇ ನಮ್ಮ ವಿಜ್ನಾನದ ಪ್ರಗತಿ. "ನಾನು ಹಿ೦ದೆ ಏನಾಗಿದ್ದೆ, ಮತ್ತು ಈ ಜನ್ಮದ ನ೦ತರ ನಾನು ಏನಗುತ್ತೇನೆ?", ಇದು ನಮ್ಮಗೆ ಗೊತ್ತಿಲ್ಲ. ಈ ಜೀವನ ಮು೦ದುವರೆಯುತ್ತದೆ. ಅದುವೇ ಆಧ್ಯಾತ್ಮಿಕ ಜ್ಞಾನ. ಆದರೆ ಅವರಿಗೆ ಈ ಜೀವನ ಮು೦ದುವರೆಯುತ್ತದೆ ಎ೦ದು ಸಹ ಗೊತ್ತಿಲ್ಲ. ಅವರು ಏನು ಯೋಚಿಸುತ್ತಾರೆ ಎಂದರೆ, "ಆಕಸ್ಮಿಕವಾಗಿ, ನಮ್ಮಗೆ ಈ ಜೀವನ ದೊರಕಿದೆ, ಮತ್ತು ಸಾವಿನ ನ೦ತರ ಮುಗಿಯುತ್ತದೆ. ಹಿಂದಿನ, ಇಂದಿನ, ಹಾಗು ಭವಿಷ್ಯದ ಪ್ರಶ್ನೆಯೆ ಇಲ್ಲ. ನಾವು ಸ೦ತೋಶದಿಂದ ಅನುಭವಿಸೊಣ." ಇದೇ ಅಜ್ಞಾನ, ತಮಸಾ, ಬೇಜವಾಬ್ದಾರಿ ಜೀವನ.

ಅದು ಅಜ್ಞಾಃ. ಅಜ್ಞಾಃ ಅ೦ದರೆ ಯಾರಿಗೆ ಜ್ಞಾನವಿಲ್ಲವೋ ಅವನು. ಮತ್ತು ಯಾರಿಗೆ ಜ್ಞಾನವಿಲ್ಲ? ಈಗ, ತಮಸಾ. ಯಾರು ಅಜ್ಞಾನದ ಗುಣದಲ್ಲಿ ಇರುವರೋ ಅವರು. ಭೌತಿಕ ಪ್ರಕೃತಿಯ ಮೂರು ಗುಣಗಳಿವೆ - ಸತ್ತ್ವ, ರಜಸ್, ಮತ್ತು ತಮಸ್. ಸತ್ತ್ವ ಗುಣ ಏ೦ದರೆ ಎಲ್ಲವು ಸ್ಪಷ್ಟ, ಪ್ರಕಾಶ. ಈಗ ಆಕಾಶವು ಮೋಡಗಳಿ೦ದ ಮುಚಿರುವುದರಿ೦ದ ಸೂರ್ಯ ಕಾ೦ತಿಯು ಸ್ಪಷ್ಟವಾಗಿಲ್ಲ. ಆದರೆ ಮೋಡದ ಮೇಲೆ ಸೂರ್ಯ ಕಾ೦ತಿಯು ಇದೆ. ಎಲ್ಲವು ಸ್ಪಷ್ಟವಾಗಿದೆ. ಆದರೆ ಮೋಡದ ಒಳಗೆ ಅದು ಅಸ್ಪಷ್ಟ. ಅದೇ ರೀತಿ ಸತ್ವ ಗುಣದಲ್ಲಿದವರಿಗೆ ಎಲ್ಲವು ಸ್ಪಷ್ಟ, ಮತ್ತು ತಮೋ ಗುಣದಲ್ಲಿ ಇರುವವರಿಗೆ ಎಲ್ಲವು ಅಸ್ಪಷ್ಟ. ಮತ್ತು ಯಾರು ಮಿಶ್ರಿತವೋ, ಅಂದರೆ ಸತ್ವ ಗುಣವು ಅಲ್ಲ, ತಮೋ ಗುಣವು ಅಲ್ಲ, ಮಧ್ಯಮಾರ್ಗ, ಅವರನ್ನು ರಜೋ ಗುಣವೆನ್ನುತ್ತಾರೆ. ಮೂರು ಗುಣಗಳು. ತಮಸಾ, ಇವರು ಈ ಪ್ರಸ್ತುತ ದೇಹದಲ್ಲಿ ಹೆಚ್ಚು ಆಸಕ್ತರು, ಮುಂದೆ ಏನಾಗುತ್ತದೆ ಎಂದು ಚಿಂತೆಯಿಲ್ಲ, ಹಿ೦ದೆ ಏನಾಗಿದ್ದನು ಎ೦ಬವ ಬಗ್ಗೆ ಜ್ಞಾನವಿಲ್ಲ. ಬೇರೊ೦ದು ಜಾಗದಲ್ಲಿ ಅದನ್ನು ವಿವರಿಸಲಾಗಿದೆ: ನೂನಂ ಪ್ರಮತ್ತಃ ಕುರುತೇ ವಿಕರ್ಮ (ಶ್ರೀ.ಭಾ 5.5.4). ಪ್ರಮತ್ತಃ, ಹುಚ್ಚನ ಹಾಗೆ. ಅವನು ಏಕೆ ಹುಚ್ಚನಾದ ಎ೦ದು ಗೊತ್ತಿಲ್ಲ. ಅವನು ಮರೆತ್ತಿದ್ದಾನೆ. ಮತ್ತು ಅವನ ಚಟುವಟಿಕೆಗಳಿ೦ದ, ಮು೦ದೆ ಏನಾಗುತ್ತದೆ ಎ೦ದು ಅವನಿಗೆ ತಿಳಿದಿಲ್ಲ. ಹುಚ್ಚು ಮನುಷ್ಯ.

ಆದ್ದರಿಂದ, ಈ ನಾಗರಿಕತೆ, ಆಧುನಿಕ ನಾಗರಿಕತೆ, ಕೇವಲ ಹುಚ್ಚರ ನಾಗರಿಕತೆ. ಅವರಿಗೆ ಹಿ೦ದಿನ ಜನ್ಮದ ಜ್ಞಾನವಿಲ್ಲ, ಹಾಗು ಮು೦ದಿನ ಜನ್ಮದ ಆಸಕ್ತಿಯು ಇಲ್ಲ. ನೂನಂ ಪ್ರಮತ್ತಃ ಕುರುತೇ ವಿಕರ್ಮ (ಶ್ರೀ.ಭಾ 5.5.4). ಮತ್ತು ಪೂರ್ತಿಯಾಗಿ ಪಾಪಕಾರ್ಯಗಳಲ್ಲಿ ತೊಡಗಿದಾರೆ ಏಕೆ೦ದರೆ ಅವರಿಗೆ ಹಿ೦ದಿನ ಜನ್ಮದ ಜ್ಞಾನವಿಲ್ಲ. ನಾಯಿಯ ತರಹ. ಅವನು ನಾಯಿ ಯಾಕೆ ಆದ ಎಂದು ಅವನಿಗೆ ಗೊತ್ತಿಲ್ಲ ಮತ್ತು ಮು೦ದೆ ಏನಾಗುತ್ತಾನೆ? ಒಂದು ನಾಯಿ, ತನ್ನ ಹಿ೦ದಿನ ಜನ್ಮದಲ್ಲಿ ಪ್ರಧಾನ ಮ೦ತ್ರಿ ಆಗಿರಬಹುದು, ಆದರೆ ನಾಯಿ ಜನ್ಮ ಪಡೆದಾಗ ಅದನ್ನು ಮರೆಯುತ್ತಾನೆ. ಇದು ಆ ಮಾಯೆಯ ಮತ್ತೊಂದು ಪ್ರಭಾವ. ಪ್ರಕ್ಷೇಪಾತ್ಮಿಕಾ-ಶಕ್ತಿ, ಆವರಣಾತ್ಮಿಕಾ-ಶಕ್ತಿ. ಮಾಯೆಯಲ್ಲಿ ಎರಡು ಬಗೆಯ ಶಕ್ತಿ ಸಾಮರ್ಥ್ಯಗಳಿವೆ. ಒ೦ದು ವೇಳೆ ಯಾರದರು ತನ್ನ ಹಿ೦ದಿನ ಜನ್ಮದ ಚಟುವಟಿಕೆಗಳಿ೦ದ ನಾಯಿಯಾದರೆ ಮತ್ತು ಒ೦ದು ವೇಳೆ "ನಾನು ಹಿ೦ದೆ ಪ್ರಧಾನ ಮ೦ತ್ರಿಯಾಗಿದ್ದೆ; ಈಗ ನಾಯಿಯಾದೆ", ಎ೦ದು ನೆನಪಿಸಿಕೊ೦ಡರೆ ಅವನಿಗೆ ಬದುಕಲು ಅಸಾಧ್ಯವಾಗುತ್ತದೆ. ಆದ್ದರಿ೦ದ, ಮಾಯೆಯು ಆ ಜ್ಞಾನವನ್ನು ಆವರಿಸುತ್ತದೆ. ಮೃತ್ಯು. ಮೃತ್ಯು ಎ೦ದರೆ ಎಲ್ಲವನ್ನು ಮರೆಯುವುದು. ಅದನ್ನು ಮೃತ್ಯುವೆ೦ದು ಕರೆಯುತ್ತಾರೆ. ಆದ್ದರಿ೦ದ, ನಮ್ಮಗೆ ಅದರ ಅನುಭವ ಪ್ರತಿದಿನ ಮತ್ತು ರಾತ್ರಿ ಆಗುತ್ತದೆ. ರಾತ್ರಿ ವೇಳೆ ನಾವು ಕನಸಿಲ್ಲಿ ಕಾಣುವುದು ಬೇರೊಂದು ವಾತಾವರಣ, ಬೇರೊಂದು ಜೀವನ, ನಾವು ಈ ದೇಹದ ಬಗ್ಗೆ ಮರೆತು, "ನಾನು ಮಲಗಿದ್ದೇನೆ. ಈ ಒಳ್ಳೆಯ ಅಪಾರ್ಟ್ಮೆಂಟ್ನಲ್ಲಿ ನನ್ನ ದೇಹ ಮಲಗಿದೆ, ಬಹಳ ಒಳ್ಳೆಯ ಹಾಸಿಗೆಯಿದೆ", ಎಂದು ಭಾವಿಸುತ್ತೇವೆ. ಇಲ್ಲ. ರಸ್ತೆಯಲ್ಲಿ ಅವನು ಅಲ್ಲಲ್ಲೇ ಅಡ್ಡಾಡುತ್ತಾ ಕಾಲ ಕಳೆದರೆ ಅಥವಾ ಅವನು ಬೆಟ್ಟದ ಮೇಲ್ಲಿದ್ದರೆ... ಅವನು ತೆಗೆದುಕೊಳ್ಳುತ್ತಿದ್ದಾನೆ, ಕನಸಿನಲ್ಲಿ, ಅವನು ತೆಗೆದುಕೊಳ್ಳುತ್ತಿದ್ದಾನೆ... ಎಲ್ಲರು, ನಾವು ಆ ದೇಹದಲ್ಲಿ ಆಸಕ್ತಿ ತೊರುತ್ತೇವೆ. ನಾವು ಹಿ೦ದಿನ ದೇಹವನು ಮರೆಯುತ್ತೇವೆ. ಆದ್ದರಿಂದ, ಇದು ಅಜ್ಞಾನ. ನಾವು ಅಜ್ಞಾನದಿ೦ದ ಜ್ಞಾನದೆಡೆಗೆ ಹೆಚ್ಚಾಗಿ ಏರಿದರೆ, ಅದೇ ಜೀವನದ ಯಶಸ್ಸು. ಮತ್ತು ನಾವು ನಮ್ಮನ್ನು ಅಜ್ಞಾನದಲ್ಲಿ ಇರಿಸಿಕೊ೦ಡರೆ, ಅದು ಯಶಸ್ಸು ಅಲ್ಲ. ಅದು ಜೀವನವನ್ನು ಹಾಳಾಗಿಸುತ್ತದೆ.

ಅದ್ದರಿ೦ದ, ಈ ನಮ್ಮ ಕೃಷ್ಣ ಪ್ರಜ್ಞೆ ಚಳುವಳಿ ಒ೦ದು ವ್ಯಕ್ತಿಯನ್ನು ಅಜ್ಞಾನದಿ೦ದ ಜ್ಞಾನದೆಡೆಗೆ ಏರಿಸುತ್ತದೆ. ಅದೇ ಈ ಇಡೀ ವೈದಿಕ ಸಾಹಿತ್ಯದ ಯೋಜನೆ: ಒಬ್ಬ ವ್ಯಕ್ತಿಯನ್ನು ಮುಕ್ತಗೊಳಿಸುವುದು. ಕೃಷ್ಣನು ಭಾಗವದ್ಗೀತೆಯಲ್ಲಿ ಭಕ್ತರ ಬಗ್ಗೆ ಹೇಳುತ್ತಾನೆ - ಎಲ್ಲರಿಗು ಅಲ್ಲ - ತೇಷಾಂ ಅಹಂ ಸಮುದ್ಧತಾ೯ ಮೃತ್ಯು-ಸ೦ಸಾರ-ಸಾಗರಾತ್ (ಭ.ಗೀ 12.7). ಮತ್ತೊಂದು:

ತೇಷಾ೦ ಏವಾನುಕಂಪಾರ್ಥಮ್
ಅಹ೦‌ ಅಜ್ಞಾನ-ಜ೦ ತಮಃ
ನಾಶಯಾಮಿ ಆತ್ಮ-ಭಾವಸ್ಥೋ
ಜ್ಞಾನ-ದೀಪೇನ ಭಾಸ್ವತಾ
(ಭ.ಗೀ 10.11)

ವಿಷೇಶ ಸಲುವಾಗಿ, ಭಕ್ತರ ಸಲುವಾಗಿ... ಅವರು ಎಲ್ಲರ ಹೃದಯದಲ್ಲಿ ಸ್ಥಾಪಿತನಾಗಿದ್ದರೂ ಯಾವ ಭಕ್ತನು ಕೃಷ್ಣನನ್ನು ಅಥ೯ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೋ, ಅವನಿಗೆ ಸಹಾಯ ಮಾಡುತ್ತಾನೆ. ಅವನು ಸಹಾಯ ಮಾಡುತ್ತಾನೆ. ಭಕ್ತರಲ್ಲದವರಿಗೆ, ಅವರಿಗೆ ಕಾಳಜಿ ಇರುವುದ್ದಿಲ್ಲ... ಅವರು ಕೇವಲ ಪ್ರಾಣಿಗಳ ತರಹ - ತಿನ್ನುವುದು, ಮಲಗುವುದು, ಲೈಂಗಿಕ ಜೀವನ, ಮತ್ತು ರಕ್ಷಣೆ ಮಾಡಿಕೊಳ್ಳುವುದು. ದೇವರನ್ನು ಅಥ೯ ಮಾಡಿಕೊಳ್ಳಲು ಅಥವಾ ದೇವರೊ೦ದಿಗೆ ಅವನ ಸಂಬಂಧ ಏನು, ಅವನು ಯಾವುದಕ್ಕು ಲೆಕ್ಕಿಸುವುದ್ದಿಲ್ಲ. ಅವನು ದೇವರಿಲ್ಲ ಎ೦ದು ಯೋಚಿಸುತ್ತಾನೆ. ಆಗ ಕೃಷ್ಣ ಕೂಡ ಹೇಳುತ್ತಾನೆ, "ಹೌದು, ಯಾವುದೇ ದೇವರಿಲ್ಲ, ನೀನು ನಿದ್ರಿಸು." ಅಷ್ಟೇ. ಆದ್ದರಿ೦ದ, ಸತ್ಸಂಗದ ಅಗತ್ಯವಿದೆ. ಈ ಸತ್ಸಂಗ, ಸತಾಂ ಪ್ರಸ೦ಗಾತ್. ಭಕ್ತನ ಸ೦ಘದಲ್ಲಿ ನಾವು ದೇವರ ಬಗ್ಗೆ ನಮ್ಮ ಶೋಧನೆ ಮಾಡುವ ಅರಿವುನ್ನು ಜಾಗೃತಪಡಿಸಿಕೊಳ್ಳುತ್ತೇವೆ. ಆದ್ದರಿಂದ, ಈ ಕೇ೦ದ್ರಗಳು ಬೇಕಾಗಿವೆ. ಅನಾಗತ್ಯವಾಗಿ ನಾವು ಹಲವಾರು ಕೇ೦ದ್ರಗಳನ್ನು ಆರ೦ಭಿಸುತ್ತಿಲ್ಲ. ಇಲ್ಲ. ಇದು ಈ ಮಾನವ ಸಮಾಜದ ಲಾಭಕ್ಕಾಗಿ.