KN/Prabhupada 0011 - ಕೃಷ್ಣನನ್ನು ಮನಸ್ಸಿನಿಂದ ಪೂಜಿಸಬಹುದು
Lecture on BG 4.28 -- Bombay, April 17, 1974
ಭಕ್ತಿ-ರಸಾಮೃತ-ಸಿಂಧುವಿನಲ್ಲಿ, ಒಂದು ಕಥೆ ಇದೆ... ಕಥೆಯಲ್ಲ ವಾಸ್ತವ. ಒಬ್ಬ ಬ್ರಾಹ್ಮಣ ಇದ್ದ. ಅವನು ಮಹಾ ಭಕ್ತ. ಅವನು ಒಂದು ಅತ್ಯಂತ ಅದ್ಭುತ ಸೇವೆ ಮಾಡಲು ಇಚ್ಛಿಸಿದ, ದೇವಸ್ಥಾನದ ಪೂಜೆಯಲ್ಲಿ ಅರ್ಚನೆ. ಆದರೆ ಅವನ ಬಳಿ ಹಣವಿರಲಿಲ್ಲ. ಒಂದು ದಿನ ಅವನು ಭಾಗವತಂ ಉಪನ್ಯಾಸದಲ್ಲಿ ಕುಳಿತಿದ್ದು ಕೃಷ್ಣನನ್ನು ಮಾನಸಿಕವಾಗಿಯೂ ಪೂಜಿಸಬಹುದೆಂದು ಕೇಳಿಸಿಕೊಂಡ. ಅವನು ಈ ಅವಾಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದುಕೊಂಡ, ಏಕೆಂದರೆ ಕೃಷ್ಣನನ್ನು ಹೇಗೆ ವೈಭವವಾಗಿ ಪೂಜಿಸುವುದು ಎಂದು ಅವನು ಬಹಳ ದಿನಗಳಿಂದ ಯೋಚಿಸುತ್ತಿದ, ಆದರೆ ಅವನ ಬಳಿ ಹಣವಿರಲಿಲ್ಲ.
ಕೃಷ್ಣನನ್ನು ಮಾನಸಿಕವಾಗಿ ಪೂಜಿಸಬಹುದೆಂದು ಅವನಿಗೆ ಅರಿವಾದಾಗ, ಗೋಧಾವರಿ ನದಿಯಲ್ಲಿ ಸ್ನಾನ ಮಾಡಿ ಒಂದು ಮರದ ಕೆಳಗೆ ಕುಳಿತ. ತನ್ನ ಮನಸ್ಸಿನಲಿ ವೈಭವದ ಸಿಂಹಾಸನ ನಿರ್ಮಿಸಿ ಅದರ ಮೇಲೆ ರತ್ನಗಳಿಂದ ಅಲಂಕರಿಸಿದ ವಿಗ್ರಹವನ್ನು ಇಟ್ಟು, ಆ ವಿಗ್ರಹಕ್ಕೆ ಗಂಗ, ಯಮುನಾ, ಗೋಧಾವರಿ, ನರ್ಮದ, ಕಾವೇರಿ ನದಿಗಳ ನೀರಿನಿಂದ ಸ್ನಾನ ಮಾಡಿಸಿದ, ಮತ್ತು ಆ ವಿಗ್ರಹಕ್ಕೆ ಬಹಳ ಚೆನ್ನಾಗಿ ಅಲಂಕಾರ ಮಾಡಿ ಅದಕ್ಕೆ ಹೂವಿನ ಹಾರ ಅರ್ಪಿಸಿದ.
ಆಮೇಲೆ ಅವನು ಬಹಳ ರುಚಿಕರವಾದ ಅಡುಗೆ, ಅಂದರೆ ಸಿಹಿ ಅನ್ನ, ಪರಮಾನ್ನ, ಮಾಡಿದ. ಪರಮಾನ್ನವು ತಣ್ಣಗಿರಬೇಕು. ಪರಮಾನ್ನವನ್ನು ಬಹಳ ಬಿಸಿಯಾಗಿ ತಿನ್ನುವುದಿಲ್ಲ. ಆದ್ದರಿಂದ, ಅದನ್ನು ಪರೀಕ್ಷಿಸಲು ಅವನು ತನ್ನ ಬೆರಳನ್ನು ಪರಮಾನ್ನದಲ್ಲಿ ಇಟ್ಟ. ಬೆರಳು ಸುಟ್ಟಿತು. ಆಗ ಅವನ ಧ್ಯಾನ ಮುರಿಯಿತು, ಏಕೆಂದರೆ ಅಲ್ಲಿ ಏನು ಇರಲಿಲ್ಲ. ಕೇವಲ ಅವನು ಎಲ್ಲವನ್ನು ತನ್ನ ಮನಸ್ಸಿನಲ್ಲೆ ಮಾಡುತ್ತಿದ್ದ. ಆದರೆ ಅವನ ಬೆರಳು ಸುಟ್ಟಿದ್ದನ್ನು ನೋಡಿದ. ಆಗ ಅವನಿಗೆ ಆಶ್ಚರ್ಯವಾಯಿತು.
ಈ ರೀತಿ, ವೈಕುಂಠದಲ್ಲಿ ನಾರಾಯಣ ನಗುತ್ತಿದ್ದ. ಲಕ್ಷ್ಮಿ ಕೇಳಿದಳು, "ಏಕೆ ನೀವು ನಗುತ್ತಿದ್ದಿರಾ?" "ನನ್ನ ಒಬ್ಬ ಭಕ್ತ ಹೀಗೆ ಪೂಜಿಸುತ್ತಿದ್ದಾನೆ. ಆದ್ದರಿಂದ, ತಕ್ಷಣ ವೈಕುಂಠಕ್ಕೆ ಅವನನ್ನು ತರಲು ನನ್ನ ಸೇವಕರನ್ನು ಕಳುಹಿಸು", ಎಂದ. ಆದ್ದರಿಂದ, ಭಕ್ತಿ-ಯೋಗ ಬಹಳ ಚೆನ್ನಾಗಿದೆ. ನೀವು ಭಗವಂತನಿಗೆ ವೈಭವದ ಪೂಜೆ ಮಾಡಲು ಯಾವುದೇ ಅನುಕೂಲವಿಲ್ಲದಿದ್ದರು ಸಹ, ನೀವು ಅದನ್ನು ಮನಸ್ಸಿನಲ್ಲಿಯೆ ಮಾಡಬಹುದು. ಅದು ಸಹ ಸಾಧ್ಯ.