KN/Prabhupada 0018 - ಗುರುವಿನ ಪಾದಪದ್ಮಗಳಲ್ಲಿ ದೃಡವಾದ ನಂಬಿಕೆ

Revision as of 01:18, 2 July 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Lecture on SB 6.1.26-27 -- Philadelphia, July 12, 1975

ಪ್ರಭುಪಾದ: ಪದೇ ಪದೇ ದೇಹತ್ಯಾಗ ಮಾಡಿ ಬೇರೊಂದು ದೇಹವನ್ನು ಸ್ವೀಕರಿಸುತ್ತಿರುವ ನಮ್ಮ ಈ ಜೀವನದ ಸಮಯವನ್ನು ಅದಕ್ಕೆ ಪರಿಹಾರವನ್ನು ಹುಡುಕುವುದ್ದಕೆ ಬಳಸಿಕೊಳ್ಳಬೇಕು. ಸರಿಯಾದ ಗುರುಗಳ ಬಳಿ ಸಾರದ ಹೊರತು ಅವರಿಗೆ ಹೇಗೆ ಅರ್ಥವಾಗುತ್ತದೆ? ಆದ್ದರಿಂದ, ಶಾಸ್ತ್ರ ಹೇಳುತ್ತದೆ ತದ್-ವಿಜ್ಞಾನಾರ್ಥಮ್: "ನಿಮ್ಮ ಜೀವನದ ನಿಜವಾದ ಸಮಸ್ಯೆ ತಿಳಿಯಬೇಕೆಂದರೆ ಮತ್ತು ಕೃಷ್ಣ ಪ್ರಜ್ಞೆಯಲ್ಲಿ ಪ್ರಬುದ್ಧರಾಗಬೇಕೆಂದು ಬಯಸಿದರೆ, ಹೇಗೆ ಶಾಶ್ವತವಾಗುವುದು, ಮರಳಿ ಭಗವದ್ಧಾಮಕ್ಕೆ ಹಿಂತಿರುಗುವುದು ಹೇಗೆ ಎಂದು ತಿಳಿಯಬೇಕಾದರೆ ಆಗ ನೀವು ಗುರುವಿನ ಬಳಿ ಸಾರಬೇಕು." ಮತ್ತು ಯಾರು ಗುರು? ಅದನ್ನು ವಿವರಿಸಿದೆ, ಬಹಳ ಸರಳ ವಿಷಯ. "ನೀವು ಇದನ್ನು ಮಾಡಿ ನನಗೆ ದುಡ್ಡು ಕೊಡಿ ಮತ್ತು ನಿಮ್ಮಗೆ ಸಂತೋಷವಾಗುತ್ತದೆ", ಎಂಬ ತಪ್ಪು ಕಲ್ಪನೆಯನ್ನು ಗುರುವು ಎಂದಿಗೂ ಸೃಷ್ಟಿ ಮಾಡುವುದಿಲ್ಲ. ಅದು ಗುರುವಲ್ಲ. ಅದು ಹಣ ಗಳಿಸುವ ಮತ್ತೊಂದು ಪ್ರಕ್ರಿಯೆ. ಆದ್ದರಿಂದ, ಇಲ್ಲಿ ಹೇಳಲಾಗಿದೆ, ಮೂಢ, ಕೇವಲ ಭ್ರಮಾಲೋಕದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬನು, ಅಜಾಮಿಳ ತನ್ನ ಕಲ್ಪನಗಳನ್ನು ತಯಾರಿಸುವ ರೀತಿ... ಯಾರಾದರು "ಇದು ನನ್ನ ಕರ್ತವ್ಯ," ಎಂದು ಆಲೋಚಿಸಿದರೆ... ಅವನು ಮೂರ್ಖ. ನಿಮ್ಮ ಕರ್ತವ್ಯ ಏನೆಂದು ನಿಮ್ಮ ಗುರುವಿನಿಂದ ತಿಳಿಯಬೇಕು. ನೀವು ದಿನ ಹಾಡುತೀರಿ: ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಇದು ಜೀವನ. ಇದೇ ಜೀವನ. ಗುರು-ಮುಖ-ಪದ್ಮ... ನೀವು ವಿಶ್ವಾಸಾರ್ಹ ಗುರುವನ್ನು ಸ್ವೀಕರಿಸಬೇಕು. ಆಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ. ಆರನಾ ಕೊರಿಹೊ ಮನೆ ಆಶಾ. ಧೂರ್ತನೇ, ನೀ ಬೇರೆನೂ ಬಯಸಬಾರದು. ನೀವು ದಿನವು ಹಾಡುವುತ್ತಿಲ್ಲವೇ? ಆದರೆ ಅದು ನಿಮ್ಮಗೆ ಅರ್ಥವಾಗುತ್ತಿಲ್ಲವೇ? ಅಥವಾ ನೀವು ಬರಿ ಹಾಡುತ್ತೀರಾ? ಏನು ಇದರ ಅರ್ಥ? ಯಾರು ವಿವರಿಸುತಾರೆ? ಯಾರಿಗೂ ಗೊತ್ತಿಲ್ಲವೇ? ಹೌದು, ಏನು ಇದರ ಅರ್ಥ?

ಭಕ್ತ: "ನನ್ನ ಗುರುಗಳ ಬಾಯಿಂದ ಹೊರ ಬರುವ ಪದಗಳು ನನ್ನ ಮನಸ್ಸುನ್ನು ಶುದ್ಧೀಕರಿಸಲ್ಲಿ ಎಂಬುದೊಂದೆ ನನ್ನ ಬಯಕೆ. ಇದ್ದಲ್ಲದೆ ನನಗೆ ಬೇರೆನೂ ಆಸೆ ಇಲ್ಲ."

ಪ್ರಭುಪಾದ: ಹೌದು. ಇದುವೇ ಆಜ್ಞೆ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಈಗ ಚಿತ್ತ ಎಂದರೆ ಪ್ರಜ್ಞೆ ಅಥವಾ ಹೃದಯ. "ನಾನು ಅಷ್ಟೆ ಮಾಡುವೆ, ಅಷ್ಟೆ. ನನ್ನ ಗುರು ಮಹಾರಾಜರು ಹೇಳಿದರು; ನಾನು ಇದನ್ನು ಮಾಡುತ್ತೇನೆ." ಚಿತ್ತೆತೆ ಕೊರಿಯಾ ಐಕ್ಯ, ಆರ ನಾ ಕೊರಿಹೊ ಮಾನೆ ಆಶಾ. ಇದು ನನ್ನ ಗರ್ವ ಅಲ್ಲ, ಆದರೆ ನಿಮ್ಮಗೆ ಆದೇಶಕಾಗಿ ನಾನು ಹೇಳಬಲ್ಲೆ, ನಾನು ಅದನ್ನು ಆಚರಿಸಿದೆ. ಆದ್ದರಿಂದ, ಏನಾದರು ನನ್ನ ಎಲ್ಲ ದೇವಸಹೋದರರಗಿಂತ ಯಶಸ್ಸು ನೋಡಿದರೆ ಅದು ಈ ಕಾರಣದಿಂದಾಗಿ. ನನಗೆ ಏನು ಸಾಮರ್ಥ್ಯವಿಲ್ಲ, ಆದರೂ ನನ್ನ ಗುರುವಿನ ಪದಗಳನ್ನು ನನ್ನ ಪ್ರಾಣ ಮತ್ತು ಆತ್ಮವಾಗಿ ಸ್ವೀಕರಿಸಿದೆ. ಆದ್ದರಿಂದ, ಇದು ಸತ್ಯ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಪ್ರತಿಯೊಬ್ಬರು ಮಾಡಬೇಕು. ಆದರೆ ಅವನು ಅದ್ದಕೆ ಏನನ್ನಾದರು ಸೇರಿಸಿದರೆ, ಬದಲಾಯಿಸಿದರೆ ನಾಶವಾಗುತ್ತಾನೆ. ಸೇರಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ. ನೀವು ಗುರುಗಳ ಬಳಿ ಹೋಗಬೇಕು - ಗುರು ಎಂದರೆ ಕೃಷ್ಣನ ನಿಷ್ಠಾವಂತ ಸೇವಕ - ಮತ್ತು ಭಗವಂತನ ಸೇವೆ ಮಾಡುವುದು ಹೇಗೆ ಎಂದು ಗರುಮುಖೇನ ತಿಳಿಯಬೇಕು. ಆಗ ನೀವು ಯಶಸ್ವಿಯಾಗುತ್ತೀರಿ. ಆದರೆ "ನಾನು ನನ್ನ ಗುರುವಿಗಿಂತ ಬುದ್ಧಿವಂತ, ನಾನು ಸೇರಿಸಬಹುದು ಅಥವಾ ಬದಲಾಯಿಸಬಹುದು," ಎಂದು ನೀವೇ ಉತ್ಪತ್ತಿ ಮಾಡಿದರೆ, ಆಗ ನೀವು ಮುಗಿದಿರಿ. ಅಷ್ಟೇ. ಈಗ ಮುಂದೆ ಹಾಡಿರಿ.

ಭಕ್ತ: ಶ್ರೀ-ಗುರು-ಚರಣೆ ರತಿ, ಏ ಸೆ ಉತ್ತಮ-ಗತಿ.

ಪ್ರಭುಪಾದ: ಶ್ರೀ-ಗುರು-ಚರಣೆ ರತಿ, ಏ ಸೆ ಉತ್ತಮ-ಗತಿ. ನಿಮ್ಮಗೆ ನಿಜವಾದ ಪ್ರಗತಿ ಬೇಕಾದರೆ, ಆಗ ನೀವು ಗುರುವಿನ ಪಾದ ಕಮಲದಲ್ಲಿ ದೃಢವಾದ ನಿಷ್ಠಾವಂತರಾಗಬೇಕು. ಮುಂದೆ?

ಭಕ್ತ: ಜೆ ಪ್ರಸಾದೆ ಪೂರೆ ಸರ್ವ ಆಶಾ.

ಪ್ರಭುಪಾದ: ಜೆ ಪ್ರಸಾದೆ ಪೂರೆ ಸರ್ವ ಆಶಾ... ಯಸ್ಯ ಪ್ರಸಾದಾತ್... ಇದು ಇಡೀ ವೈಷ್ಣವ ತತ್ವಶಾಸ್ತ್ರದ ಆದೇಶ. ಹಾಗೆ ಮಾಡದ ಹೊರತು ನಾವು ಮೂಡರಾಗಿರುತ್ತೇವೆ, ಮತ್ತು ಇದ್ದನು ಅಜಾಮಿಳ ಉಪಾಖ್ಯಾನದಲ್ಲಿ ವಿವರಿಸಲಾಗಿದೆ. ಆದ್ದರಿಂದ, ಇವತ್ತು ನಾವು ಈ ಶ್ಲೋಕವನು ಓದುತ್ತೆವೆ, ಸ ಯೆವಮ್ ವರ್ತಮಾನಃ ಅಜ್ಞಾಃ. ಮತ್ತೆ ಅವರು ಹೇಳುತ್ತಾರೆ. ಮತ್ತೆ ವ್ಯಾಸದೇವ ಹೇಳುತ್ತಾರೆ, "ಈ ಮೂಢ ಅಂತಹ ಸ್ಥಿತಿಯಲ್ಲಿ ಇದ್ದ. ನಾರಾಯಣ ಹೆಸರಿರುವ ತನ್ನ ಮಗನ ಸೇವೆಯಲ್ಲಿ ಮಗ್ನನಾಗಿದ್ದ." ಅವನಿಗೆ ತಿಳಿದಿರಲಿಲ್ಲ... "ಏನಿದು ಅಸಂಬದ್ಧ ನಾರಾಯಣ?" ಅವನ ಮಗ ಗೊತ್ತಿತ್ತು. ಆದರೆ ನಾರಾಯಣ ಬಹಳ ಕರುಣಾಮಯಿ ಏಕೆಂದರೆ ಅವನು ನಿರಂತರವಾಗಿ ತನ್ನ ಮಗನನ್ನು ಕರೆಯುತ್ತಿದ, "ನಾರಾಯಣ, ದಯವಿಟ್ಟು ಇಲ್ಲಿ ಬಾ. ನಾರಾಯಣ, ದಯವಿಟ್ಟು ಇದ್ದನು ತೆಗೆದುಕೊ." ಆದ್ದರಿಂದ, ಕೃಷ್ಣ ಅದ್ದನು ಹೇಗೆ ಸ್ವೀಕರಿಸಿದನೆಂದರೆ, "ಇವನು ನಾರಾಯಣ ಎಂದು ಜಪಿಸುತ್ತಿದ್ದಾನೆ." ಕೃಷ್ಣ ಬಹಳ ಕರುಣಾಮಯೀ. ಅಜಾಮಿಳನ ಅರ್ಥ ಎಂದಿಗೂ "ನಾನು ನಾರಾಯಣನ ಹತ್ತಿರ ಹೋಗುತ್ತೇನೆ" ಎಂದು ಇರಲಿಲ್ಲ. ಅವನ ಮಮತೆಯ ಕಾರಣ ಅವನಿಗೆ ಅವನ ಪುತ್ರ ಬೇಕಿತ್ತು. ನಾರಾಯಣನ ಪವಿತ್ರ ನಾಮ ಜಪ ಮಾಡಲು ಅವನಿಗೆ ಅವಕಾಶ ಸಿಕಿತ್ತು. ಇದು ಅವನ ಅದೃಷ್ಟ. ಆದ್ದರಿಂದ, ಈ ಪ್ರಕಾರ ನಾವು ಹೆಸರನ್ನು ಬದಲಾಯಿಸುತ್ತೇವೆ. ಏಕೆ? ಏಕೆಂದರೆ ಪ್ರತಿ ಹೆಸರು ಕೃಷ್ಣನ ಸೇವಕನಾಗುವ ಉದ್ದೇಶಕಾಗಿಯೆ. ಆದ್ದರಿಂದ ಉಪೇಂದ್ರ ಹೆಸರಿನಂತೆ. ಉಪೇಂದ್ರ ಎಂದರೆ ವಾಮನದೇವ. ನೀವು ಉಪೇಂದ್ರ, ಉಪೇಂದ್ರ ಎಂದು ಕರೆದರೆ, ಅಥವಾ ಅದೇ ರೀತಿಯ ಹೆಸರಿನಿಂದ, ಆ ಹೆಸರು ಖಾತೆಗೆ ತೆಗೆದುಕೊಳ್ಳಲಾಗುತ್ತದೆ. ಇದ್ದನು ನಂತರ ವಿವರಿಸಲಾಗಿದೆ.