KN/Prabhupada 0032 - ನಾನು ಏನು ಹೇಳಬೇಕೋ, ಅದನ್ನೆಲ್ಲಾ ನನ್ನ ಪುಸ್ತಕಗಳಲ್ಲಿ ಹೇಳಿದ್ದೇನೆ

Revision as of 01:29, 11 August 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Arrival Speech -- May 17, 1977, Vrndavana

ಪ್ರಭುಪಾದ: ನನಗೆ ಮಾತನಾಡಲು ಆಗುವದಿಲ್ಲ. ನನಗೆ ಬಹಳ ಅಶಕ್ತಿ ಆಗುತ್ತಿದೆ. ಚಂಡೀಗಢದ ಕಾರ್ಯಕ್ರಮದಂತೆ ನನಗೆ ಬೇರೆ ಕಡೆ ಹೊಗುವದಿತ್ತು, ಆದರೆ ನಾನು ಅದನ್ನು ರದ್ದು ಮಾಡಿದೆ ಏಕೆಂದರೆ ನನ್ನ ಆರೋಗ್ಯವು ಈಗ ಬಹಳ ಕೆಡುತ್ತಿದೆ. ಆದ್ದರಿಂದ, ನಾನು ವೃಂದಾವನಕ್ಕೆ ಬರಲು ಬಯಸಿದೆ. ಮೃತ್ಯು ಬಂದರೆ ಇಲ್ಲೆ ಬರಲಿ. ಹೇಳಲು ಏನು ಹೊಸದು ಇಲ್ಲ. ನಾನು ಏನಲ್ಲಾ ಹೇಳಬೇಕೊ ಅದನ್ನು ನನ್ನ ಪುಸ್ತಕಗಳಲ್ಲಿ ಹೇಳಿದ್ದೇನೆ. ಈಗ ನೀವು ಅದನ್ನು ಅರ್ಥಮಾಡಿಕೊಂಡು ಕಾರ್ಯವನ್ನು ಮುಂದುವರಿಸಿರಿ. ನಾನು ಪ್ರತ್ಯಕ್ಷವಾಗಿರಲಿ ಅಥವಾ ಇಲ್ಲದೆ ಇರಲಿ, ಅದೇನು ಮುಖ್ಯವಲ್ಲ. ಕೃಷ್ಣ ಹೇಗೆ ಶಾಶ್ವತನೊ, ಅದೇರೀತಿಯಲ್ಲಿ ಜೀವಾತ್ಮನೂ ಸಹ ಶಾಶ್ವತನು. ಆದರೆ, ಕೀರ್ತಿರ್ ಯಸ್ಯ ಸ ಜೀವತಿ. ಯಾರು ಭಗವಂತನ ಸೇವೆ ಮಾಡುತ್ತಾನೋ ಅವನು ಅಮರ. ಆದ್ದರಿಂದ, ನಿಮಗೆ ಕೃಷ್ಣನ ಸೇವೆ ಮಾಡಲು ಕಲಿಸಿದೆ. ಮತ್ತು ನಾವು ಕೃಷ್ಣನ ಜೊತೆಯಲ್ಲಿ ಶಾಶ್ವತವಾಗಿ ಇರುತ್ತೇವೆ. ನಮ್ಮ ಜೀವನ ಶಾಶ್ವತ. ನಾ ಹನ್ಯತೇ ಹನ್ಯಮಾನೇ ಶರೀರೇ (ಭ.ಗೀ 2.20). ಆಶಾಶ್ವತವಾಗಿ ಅದೃಶ್ಯವಾಗುವಂತಹ ಈ ಶರೀರ, ಅದೇನೂ ಮುಖ್ಯವಲ್ಲ. ಈ ಶರೀರ ಅದೃಶ್ಯವಾಗುವದು ಸಹಜ. ತಥಾ ದೇಹಾಂತರ ಪ್ರಾಪ್ತಿಃ (ಭ.ಗೀ 2.13). ಆದ್ದರಿಂದ, ಕೃಷ್ಣನ ಸೇವೆ ಮಾಡಿ ಚಿರಂಜೀವರಾಗಿರಿ. ಬಹಳ ಧನ್ಯವಾದಗಳು.

ಭಕ್ತರು : ಜಯ!