KN/Prabhupada 0201 - ಸಾವನ್ನು ಹೇಗೆ ತಡೆಯುವುದು

Revision as of 02:32, 6 October 2024 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0201 - in all Languages Category:KN-Quotes - 1976 Category:KN-Quotes - Lectures, Caitanya-caritamrta Category:KN-Quotes - in USA Category:KN-Quotes - in USA, Baltimore <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0200 - A Little Mistake will Spoil the Whole Scheme|...")
(diff) ← Older revision | Latest revision (diff) | Newer revision → (diff)


Lecture on CC Madhya-lila 20.102 -- Baltimore, July 7, 1976

ಆದ್ದರಿಂದ, ನಾವು ಜ್ಞಾನವನ್ನು ಬಯಸುತ್ತೇವೆ, ಆದರೆ ಅನೇಕ ವಿಷಯಗಳು ನಮಗೆ ತಿಳಿದಿಲ್ಲ. ಆದುದರಿಂದ, ಸನಾತನ ಗೋಸ್ವಾಮಿಯವರು ತಮ್ಮ ಪ್ರಾಯೋಗಿಕ ನಡವಳಿಕೆಯಿಂದ ಆಧ್ಯಾತ್ಮಿಕ ಗುರುವನ್ನು ಸಮೀಪಿಸಿ, "ನಾನು ಈ ರೀತಿಯಾಗಿ ನರಳುತ್ತಿದ್ದೇನೆ”, ಎಂದು ನಮ್ಮ ವಾದವನ್ನು ಮಂಡಿಸುವುದು ಹೇಗೆ ಎಂದು ನಮಗೆ ಕಲಿಸುತ್ತಿದ್ದಾರೆ. ಅವರು ಸಚಿವರಾಗಿದ್ದರು, ನರಳುವ ಪ್ರಶ್ನೆಯೇ ಇಲ್ಲ. ಅವರು ತುಂಬಾ ಉನ್ನತ ಸ್ಥಿತಿಯಲಿದ್ದರು. ಅವರು ಈಗಾಗಲೇ ವಿವರಿಸಿದ್ದಾರೆ, ಗ್ರಾಮ್ಯ-ವ್ಯವಹಾರೆ ಪಂಡಿತ, ತಾಯಿ ಸತ್ಯ ಕರಿ ಮಾನಿ (ಚ.ಚೈ ಮಧ್ಯ 20.100). “ನಾನು ಉತ್ತರಿಸಲಾಗದ ಹಲವಾರು ಪ್ರಶ್ನೆಗಳಿವೆ. ಯಾವುದೇ ಪರಿಹಾರವಿಲ್ಲ. ಆದರೂ, ಜನರು ನಾನು ತುಂಬಾ ಕಲಿತ ವ್ಯಕ್ತಿ ಎಂದು ಹೇಳುತ್ತಾರೆ - ನಾನೂ ಅದನ್ನು ಮೂರ್ಖತನದಿಂದ ಸ್ವೀಕರಿಸುತ್ತೇನೆ.” ಗುರುವಿನ ಬಳಿ ಸಾರದ ಹೊರತು ಯಾರೂ ಪಂಡಿತರಲ್ಲ. ತದ್-ವಿಜ್ಞಾನಾರ್ಥಂ ಸ ಗುರುಂ ಏವಾಭಿಗಚ್ಛೇತ್ (ಮುಂ.ಉ 1.2.12). ಆದ್ದರಿಂದ, ವೈದಿಕ ಸೂಚನೆ ಏನೆಂದರೆ, ನೀವು ಕಲಿಯಲು ಬಯಸಿದರೆ, ಗುರುವಿನ ಬಳಿಗೆ ಹೋಗಿ — ಪ್ರಾಮಾಣಿಕ ಗುರು — ತಥಾಕಥಿತ ಗುರುವಲ್ಲ.

ತದ್ ವಿದ್ಧಿ ಪ್ರಾಣಿಪಾತೇನ
ಪರಿಪ್ರಶ್ನೇನ ಸೇವೆಯಾ
ಉಪದೇಕ್ಷ್ಯಂತಿ ತೇ ಜ್ಞಾನಂ
ಜ್ಞಾನಿನಾಸ್ ತತ್ವ-ದರ್ಶಿನಃ
(ಭ.ಗೀ 4.34)

ಗುರು ಎಂದರೆ ಪರಿಪೂರ್ಣ ಸತ್ಯವನ್ನು ಕಂಡವನು. ಅವನೇ ಗುರು. ತತ್ತ್ವ-ದರ್ಶಿನಃ. ತತ್ತ್ವ ಎಂದರೆ ಪರಿಪೂರ್ಣ ಸತ್ಯ ಮತ್ತು ದರ್ಶಿನಃ ಎಂದರೆ ನೋಡಿದವನು. ಆದ್ದರಿಂದ, ಈ ಆಂದೋಲನ, ನಮ್ಮ ಕೃಷ್ಣ ಪ್ರಜ್ಞೆಯ ಆಂದೋಲನವು, ಈ ಉದ್ದೇಶಗಳಿಗಾಗಿ: ಸಂಪೂರ್ಣ ಸತ್ಯವನ್ನು ಕಾಣುವುದು, ಸಂಪೂರ್ಣ ಸತ್ಯವನ್ನು ಅರ್ಥಮಾಡಿಕೊಳ್ಳುವುದು, ಜೀವನದ ಸಮಸ್ಯೆಗಳನ್ನು ಮತ್ತು ಪರಿಹಾರಗಳನ್ನು ತಿಳಿದುಕೊಳ್ಳುವುದು. ಇವು ನಮ್ಮ ವಸ್ತುವಿಷಯಗಳು. ನಮ್ಮ ವಸ್ತುವಿಷಯ ಜಡ ವಸ್ತುಗಳಲ್ಲ. ಅಂದರೆ ಹೇಗೋ ಒಂದು ಕಾರು, ಉತ್ತಮ ಮನೆ, ಮತ್ತು ಉತ್ತಮ ಹೆಂಡತಿಯನ್ನು ಪಡೆಯುವುದು, ಆಗ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ ಎಂಬುದಲ್ಲ. ಇಲ್ಲ ಅದು ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮ್ಮ ಸಾವನ್ನು ಹೇಗೆ ತಡೆಯುವುದು ಎಂಬುದು ನಿಜವಾದ ಸಮಸ್ಯೆ. ಅದೇ ನಿಜವಾದ ಸಮಸ್ಯೆ. ಆದರೆ ಇದು ಸಂಕೀರ್ಣ ವಿಷಯವಾದ್ದರಿಂದ ಯಾರೂ ಅದನ್ನು ಮುಟ್ಟುವುದಿಲ್ಲ. "ಓಹ್, ಸಾವು - ನಾವು ಪ್ರಶಾಂತವಾಗಿ ಸಾಯುತ್ತೇವೆ." ಆದರೆ ಯಾರೂ ಪ್ರಶಾಂತವಾಗಿ ಸಾಯುವುದಿಲ್ಲ. ನಾನು ಕಠಾರಿ ತೆಗೆದುಕೊಂಡು "ಈಗ ಪ್ರಶಾಂತವಾಗಿ ಸಾಯಿರಿ", ಎಂದು ಹೇಳಿದರೆ, (ನಗು) ಇಡೀ ಶಾಂತಿಯ ಸ್ಥಿತಿ ತಕ್ಷಣವೇ ಮುಗಿಯಿತು. ಅವನು ಅಳುತ್ತಾನೆ. ಆದ್ದರಿಂದ, ಯಾರಾದರೂ, "ನಾನು ಪ್ರಶಾಂತವಾಗಿ ಸಾಯುತ್ತೇನೆ", ಎಂದು ಹೇಳಿದರೆ ಅದು ಅಸಂಗತ. ಯಾರೂ ಪ್ರಶಾಂತವಾಗಿ ಸಾಯಲು ಸಾಧ್ಯವಿಲ್ಲ. ಆದ್ದರಿಂದ, ಸಾವು ಒಂದು ಸಮಸ್ಯೆ. ಜನನವೂ ಒಂದು ಸಮಸ್ಯೆ. ತಾಯಿಯ ಗರ್ಭದಲ್ಲಿರುವಾಗ ಯಾರೂ ಶಾಂತವಾಗಿರುವುದಿಲ್ಲ. ಇದು ಗಾಳಿಯಾಡದ, ಒತ್ತಿ ಒಳಸೇರಿದ ಸ್ಥಿತಿಯಲ್ಲಿ... ಮತ್ತು ಇತ್ತೀಚಿನ ದಿನಗಳಲ್ಲಿ ಸಾಯುವ ಅಪಾಯವೂ ಇದೆ. ಆದ್ದರಿಂದ ಶಾಂತಿ, ಹುಟ್ಟು, ಮತ್ತು ಸಾವಿನ ಪ್ರಶ್ನೆಯೇ ಇಲ್ಲ. ತದನಂತರ ವೃದ್ಧಾಪ್ಯ. ನಾನು ವೃದ್ಧ, ನನಗೆ ಅನೇಕ ತೊಂದರೆಗಳಿವೆ. ವೃದ್ಧಾಪ್ಯ. ರೋಗ, ಎಲ್ಲರಿಗೂ ಅನುಭವವಿದೆ, ನಿಮಗೆ ತೊಂದರೆ ಕೊಡಲು ತಲೆನೋವು ಸಾಕು. ನಿಜವಾದ ಸಮಸ್ಯೆ ಇದು: ಹುಟ್ಟು, ಸಾವು, ವೃದ್ಧಾಪ್ಯ, ಮತ್ತು ರೋಗ. ಜನ್ಮ-ಮೃತ್ಯು-ಜರಾ-ವ್ಯಾಧಿ ದುಃಖ-ದೋಷಾನುದರ್ಶನಂ (ಭ.ಗೀ 13.9), ಎಂದು ಕೃಷ್ಣನು ಹೇಳಿರುವನು. ನೀವು ಬುದ್ಧಿವಂತರಾಗಿದ್ದರೆ, ಜೀವನದ ಈ ನಾಲ್ಕು ಸಮಸ್ಯೆಗಳನ್ನು ನೀವು ತುಂಬಾ ಅಪಾಯಕಾರಿ ಎಂದು ಪರಿಗಣಿಸಬೇಕು.

ಹಾಗಾಗಿ ಅವರಿಗೆ ಜ್ಞಾನವಿಲ್ಲ; ಆದ್ದರಿಂದಲೆ ಅವರು ಈ ಪ್ರಶ್ನೆಗಳನ್ನು ತಪ್ಪಿಸುತ್ತಾರೆ. ಆದರೆ ನಾವು ಈ ಪ್ರಶ್ನೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಅದುವೇ ಇತರ ಚಳುವಳಿಗಳ ಮತ್ತು ಕೃಷ್ಣ ಪ್ರಜ್ಞೆಯ ಚಳುವಳಿಯ ನಡುವಿನ ವ್ಯತ್ಯಾಸ. ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬುವುದೆ ನಮ್ಮ ಆಂದೋಲನೆ.