KN/Prabhupada 0203 - ಈ ಹರೇ ಕೃಷ್ಣ ಚಳುವಳಿಯನ್ನು ನಿಲ್ಲಿಸಬೇಡಿ

Revision as of 04:59, 9 November 2024 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0203 - in all Languages Category:KN-Quotes - 1975 Category:KN-Quotes - Lectures, Initiations Category:KN-Quotes - in USA Category:KN-Quotes - in USA, Chicago <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0202 - Who can Love Better than a Preacher|0202|Prabhupada 020...")
(diff) ← Older revision | Latest revision (diff) | Newer revision → (diff)


Lecture and Initiation -- Chicago, July 10, 1975

ಪ್ರಭುಪಾದ: ಯಜ್ಞ, ಯಜ್ಞಗಳು... ಯಜ್ಞ-ದಾನ-ತಪಃ-ಕ್ರಿಯಾ. ಮಾನವ ಜೀವನವು ಈ ಮೂರು ವಿಷಯಗಳಿಗೆ ಮೀಸಲಾಗಿದೆ — ಯಜ್ಞ ಮಾಡುವುದು, ದಾನ ನೀಡುವುದು, ಮತ್ತು ತಪಸ್ಸು ಮಾಡುವುದು. ಈ ಮೂರು ವಿಷಯಗಳು. ಮಾನವ ಜೀವನ ಎಂದರೆ ಅದು. ಮನುಷ್ಯ ಜೀವನ ಎಂದರೆ ಬೆಕ್ಕು ನಾಯಿಗಳಂತೆ ಬದುಕುವುದಲ್ಲ. ಅದು ವೈಫಲ್ಯ. ಆ ರೀತಿಯ ನಾಗರಿಕತೆ, ನಾಯಿ ನಾಗರಿಕತೆ, ಮಾನವ ಜೀವನದ ವೈಫಲ್ಯ. ಮಾನವ ಜೀವನವು ಮೂರು ವಿಷಯಗಳಿಗಾಗಿ ಉದ್ದೇಶಿಸಲಾಗಿದೆ: ಯಜ್ಞ-ದಾನ-ತಪಃ-ಕ್ರಿಯಾ. ಯಜ್ಞಗಳನ್ನು ಹೇಗೆ ಮಾಡಬೇಕು, ಹೇಗೆ ದಾನ ನೀಡಬೇಕು, ಮತ್ತು ತಪಸ್ಸನ್ನು ಹೇಗೆ ಮಾಡಬೇಕು ಎಂದು ತಿಳಿದಿರಬೇಕು. ಇದು ಮಾನವ ಜೀವನ. ಆದ್ದರಿಂದ, ಯಜ್ಞ-ದಾನ-ತಪಸ್ಯ, ಇತರ ಯುಗಗಳಲ್ಲಿ, ಯುಗಾನುಸಾರವಾದ ಕ್ರಿಯೆಗಳನ್ನು ನಿರ್ವಹಿಸುತ್ತಿದ್ದರು. ಸತ್ಯಯುಗದಲ್ಲಿ, ವಾಲ್ಮೀಕಿ ಮುನಿಯಂತೆ. ಅವರು ಅರವತ್ತು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದರು, ಧ್ಯಾನಿಸಿದರು. ಆ ಸಮಯದಲ್ಲಿ ಜನರು ನೂರು ಸಾವಿರ ವರ್ಷಗಳ ಕಾಲ ಬದುಕುತ್ತಿದ್ದರು. ಅದು ಈಗ ಸಾಧ್ಯವಿಲ್ಲ. ಆ ಕಾಲದಲ್ಲಿ ಧ್ಯಾನ ಸಾಧ್ಯವಿತ್ತು, ಆದರೆ ಈಗ ಅದು ಸಾಧ್ಯವಿಲ್ಲ. ಆದ್ದರಿಂದ, ಶಾಸ್ತ್ರವು, ಯಜ್ಞೈಃ ಸಂಕೀರ್ತನ ಪ್ರಾಯೈಃ (ಶ್ರೀ.ಭಾ 11.5.32), ಎಂದು ಆದೇಶ ಮಾಡುತ್ತದೆ: "ನೀವು ಸಂಕೀರ್ತನ ಯಜ್ಞವನ್ನು ಮಾಡಿ." ಆದ್ದರಿಂದ, ಸಂಕೀರ್ತನ-ಯಜ್ಞವನ್ನು ಮಾಡುವುದರಿಂದ ನೀವು ಅದೇ ಫಲಿತಾಂಶವನ್ನು ಪಡೆಯಬಹುದು. ಅರವತ್ತು ಸಾವಿರ ವರ್ಷಗಳ ಧ್ಯಾನದ ನಂತರ ವಾಲ್ಮೀಕಿ ಮುನಿಯು ಫಲವನ್ನು ಪಡೆದಂತೆ, ನೀವು ಕೆಲವೇ ದಿನಗಳಲ್ಲಿ ಸಂಕೀರ್ತನ-ಯಜ್ಞವನ್ನು ಮಾಡುವ ಮೂಲಕ ಅದೇ ಫಲಿತಾಂಶವನ್ನು ಪಡೆಯಬಹುದು. ಅದೊಂದು ಅಪಾರ ದಯೆ.

ಹಾಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ, ವಿಶೇಷವಾಗಿ ಅಮೇರಿಕದಲ್ಲಿ, ಅದೃಷ್ಟವಂತ ಹುಡುಗರು ಮತ್ತು ಹುಡುಗಿಯರೇ, ನೀವು ಈ ಸಂಕೀರ್ತನ-ಯಜ್ಞದಲ್ಲಿ ಸೇರಿಕೊಂಡಿದ್ದೀರಿ ಎಂದು ನನಗೆ ತುಂಬಾ ಸಂತೋಷವಾಗಿದೆ. ಜನ ಮೆಚ್ಚಿದ್ದಾರೆ. ನನಗೂ ತುಂಬಾ ಖುಷಿಯಾಗಿದೆ. ಈ ಯಜ್ಞವು, ನೀವು ಬಸ್ಸುಗಳಲ್ಲಿ ದೇವರನ್ನು ಕರೆದುಕೊಂಡು ಒಳ ಪ್ರದೇಶಗಳಿಗೆ ಹೋಗಿ ಯಜ್ಞವನ್ನು ಮಾಡುತ್ತಿದ್ದೀರಿ... ನಿಮ್ಮ ಇಡೀ ದೇಶವು ಈ ಧರ್ಮವನ್ನು ರಾಷ್ಟ್ರೀಯವಾಗಿ ಒಪ್ಪಿಕೊಳ್ಳುವವರೆಗೆ ಈ ಪ್ರಕ್ರಿಯೆಯನ್ನು ಮುಂದುವರಿಸಿ.

ಭಕ್ತರು: ಜಯ!

ಪ್ರಭುಪಾದ: ಅವರು ಸ್ವೀಕರಿಸುತ್ತಾರೆ. ಇದನ್ನು ಚೈತನ್ಯ ಮಹಾಪ್ರಭುಗಳು ಭವಿಷ್ಯ ನುಡಿದಿದ್ದಾರೆ.

ಪೃಥಿವೀತೆ ಆಚೇ ಯತ ನಗರಾದಿ-ಗ್ರಾಮ
ಸರ್ವತ್ರ ಪ್ರಚಾರ ಹೈಬೆ ಮೋರ ನಾಮ

ಚೈತನ್ಯ ಮಹಾಪ್ರಭುಗಳು ಏನು ಬಯಸುತ್ತಾರೆಂದರೆ ಪ್ರತಿ ಹಳ್ಳಿಯಲ್ಲಿ, ಪ್ರತಿ ಪಟ್ಟಣದಲ್ಲಿ, ಪ್ರತಿ ಕೌಂಟಿಯಲ್ಲಿ, ಪ್ರತಿ ನಗರದಲ್ಲಿಯೂ ಈ ಸಂಕೀರ್ತನ ಚಳುವಳಿ ನಡೆಯಬೇಕು, ಆಗ ಜನರು ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಋಣಿಗಳಾಗುತ್ತಾರ: "ನನ್ನ ಪ್ರಭು, ನೀವು ನಮಗೆ ತುಂಬಾ ಭವ್ಯವಾದದ್ದನ್ನು ನೀಡಿದ್ದೀರಿ." ಇದೇ ಅವರ ಭವಿಷ್ಯವಾಣಿ. ಕೇವಲ ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಬೇಕು. ಇದು ತುಂಬಾ ಕಷ್ಟವಲ್ಲ. ನೀವು ಭಗವಂತನ ಮೂರ್ತಿಯನ್ನು ಸ್ಥಾಪಿಸಿದ್ದೀರಿ. ವಿವಿಧ ಬಸ್ಸುಗಳಲ್ಲಿ ನಗರದಿಂದ ನಗರಕ್ಕೆ, ಪಟ್ಟಣದಿಂದ ಪಟ್ಟಣಕ್ಕೆ, ಹಳ್ಳಿಯಿಂದ ಹಳ್ಳಿಗೆ ಹೋಗಿ. ನೀವು ಈಗ ಅನುಭವವಿಗಳಾದ್ದರಿಂದ ಈ ಚಳುವಳಿಯನ್ನು ವಿಸ್ತರಿಸಿ. ನಿಮ್ಮ ದೇಶವಾದ ಅಮೇರಿಕಾ ಅದೃಷ್ಟಶಾಲಿ ಎಂದು ನಾನು ನಿಮಗೆ ಪದೇ ಪದೇ ಹೇಳಿದ್ದೇನೆ ಮತ್ತು ಅವರಿಗೆ ಕೇವಲ ಸಂಕೀರ್ತನೆ ಬೇಕು... ಆಗ ಅವರು ಪರಿಪೂರ್ಣರಾಗುತ್ತಾರೆ. ನಾನು ನಿನ್ನೆ ಹಲವು ವಿಷಯಗಳನ್ನು ಚರ್ಚಿಸುತ್ತಿದ್ದೆ, ಬಹುಶಃ ನೀವು ಪತ್ರಿಕೆಯಲ್ಲಿ ನೋಡಿರಬಹುದು - ಒಂದು ಸಂಪೂರ್ಣ ಕೂಲಂಕುಷ ಪರೀಕ್ಷೆ, ಆಧ್ಯಾತ್ಮಿಕ ಕೂಲಂಕುಷ ಪರೀಕ್ಷೆಯ ಅಗತ್ಯವಿದೆ. ಈಗ, ಪ್ರಸ್ತುತ ಕ್ಷಣದಲ್ಲಿ ವಿಷಯಗಳು ಸರಿಯಾಗಿ ನಡೆಯುತ್ತಿಲ್ಲ. ಭೌತಿಕವಾಗಿ, ಈ ಓಟ ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ನಮಗೆ ಸಹಾಯ ಮಾಡುವುದಿಲ್ಲ ಎಂದು ವಿಷಾದಿಸಬೇಡಿ. ಭೌತಿಕವಾಗಿ ಮುಂದುವರಿದಿರಿ, ಆದರೆ ನಿಮ್ಮ ಆಧ್ಯಾತ್ಮಿಕ ಕರ್ತವ್ಯ ಮತ್ತು ಆಧ್ಯಾತ್ಮಿಕ ಗುರುತನ್ನು ಮರೆಯಬೇಡಿ. ಇಲ್ಲವಾದರೆ ನಷ್ಟವಾಗುತ್ತದೆ. ಆಗ ಅದು ಶ್ರಮ ಏವ ಹಿ ಕೇವಲಮ್ (ಶ್ರೀ.ಭಾ 1.2.8), ವ್ಯರ್ಥ ಶ್ರಮ. ನಿಮ್ಮ ಚಂದ್ರನ ಯಾತ್ರೆಯಂತೆಯೇ ಕೇವಲ ಸಮಯ ವ್ಯರ್ಥ ಮತ್ತು ಅನಗತ್ಯವಾಗಿ ಹಣದ ಖರ್ಚು. ನೀವು ದಶಕೋಟಿ ಡಾಲರ್‌ಗಳನ್ನು ಹಾಳು ಮಾಡಿದ್ದೀರಿ ಮತ್ತು ಏನು ಗಳಿಸಿದಿರಿ? ಸ್ವಲ್ಪ ಧೂಳು, ಅಷ್ಟೆ. ಆ ರೀತಿಯಲ್ಲಿ ಮೂರ್ಖರಾಗಬೇಡಿ. ಕೇವಲ ಪ್ರಾಯೋಗಿಕವಾಗಿ ಯೋಚಿಸಿ. ಇಷ್ಟು ದೊಡ್ಡ ಪ್ರಮಾಣದ ಹಣವನ್ನು, ಡಾಲರ್ಗಳನ್ನು ಕೃಷ್ಣ ಪ್ರಜ್ಞೆಯ ಆಂದೋಲನವನ್ನು ನಿಮ್ಮ ದೇಶದಾದ್ಯಂತ ವಿತರಿಸಲು ಖರ್ಚು ಮಾಡಿದ್ದರೆ, ಆಗ ಅಪಾರ ಪ್ರಯೋಜನವನ್ನು ಸಾಧಿಸಬಹುದಾಗಿತ್ತು. ಆದರೆ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ನಿಮ್ಮ ಹಣವನ್ನು ನೀವು ಪೋಲು ಮಾಡಬಹುದು. ಅದು ನಿಮ್ಮ ವ್ಯವಹಾರ. ಆದರೆ ನೀವು ಈ ಸಂಕೀರ್ತನ ಆಂದೋಲನವನ್ನು ವಿಶೇಷವಾಗಿ ಅಮೇರಿಕಾದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಮತ್ತು ಪ್ರಪಂಚದ ಇತರ ಭಾಗಗಳಿಗೆ, ಯುರೋಪ್, ಏಷ್ಯಾಕ್ಕೆ ವಿಸ್ತರಿಸಬೇಕೆಂದು ನಾವು ಅಧಿಕಾರಿಗಳಿಗೆ ಮತ್ತು ವಿವೇಕಯುತ ಪುರುಷರಲ್ಲಿ ವಿನಂತಿಸುತ್ತೇವೆ. ನೀವು ಈಗಾಗಲೇ ವಿಶ್ವದ ಶ್ರೀಮಂತ ರಾಷ್ಟ್ರ ಎಂಬ ಗೌರವವನ್ನು ಪಡೆದಿದ್ದೀರಿ. ನೀವು ಬುದ್ಧಿವಂತರು. ನೀವು ಎಲ್ಲವನ್ನೂ ಪಡೆದುಕೊಂಡಿದ್ದೀರಿ. ಈ ಆಂದೋಲನ, ಹರೇ ಕೃಷ್ಣ ಚಳುವಳಿಯನ್ನು ತಾಳ್ಮೆ, ಶ್ರದ್ಧೆ, ಮತ್ತು ಬುದ್ಧಿವಂತಿಕೆಯಿಂದ ಸ್ವೀಕರಿಸಿ. ಇದು ತುಂಬಾ ಸುಲಭ. ನೀವು ಈಗಾಗಲೇ ಅನುಭವಿಗಳು. ಅದನ್ನು ನಿಲ್ಲಿಸಬೇಡಿ. ಇನ್ನು ಹೆಚ್ಚು ವಿಸ್ತರಿಸಿ. ನಿಮ್ಮ ದೇಶವು ಸಂತೋಷವಾಗಿರುತ್ತದೆ, ಮತ್ತು ಇಡೀ ಜಗತ್ತು ಸಂತೋಷವಾಗಿರುತ್ತದೆ.

ತುಂಬಾ ಧನ್ಯವಾದಗಳು.

ಭಕ್ತರು: ಜಯ!