KN/Prabhupada 0206 - ವೈದಿಕ ಸಮಾಜದಲ್ಲಿ ಹಣದ ಪ್ರಶ್ನೆಯೇ ಇಲ್ಲ

Revision as of 12:13, 21 December 2024 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0206 - in all Languages Category:KN-Quotes - 1975 Category:KN-Quotes - Morning Walks Category:KN-Quotes - in South Africa <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0205 - I Never Expected that "These people will Accept"|0205|Prabhupada 0207 - Don't Live Irresponsibl...")
(diff) ← Older revision | Latest revision (diff) | Newer revision → (diff)


Morning Walk -- October 16, 1975, Johannesburg

ಪ್ರಭುಪಾದ: "ಎಲ್ಲರೂ ಧೂರ್ತುರು" ಎಂದು ಪರಿಗಣಿಸಿ, ನಂತರ ಅವರಿಗೆ ತರಬೇತಿ ನೀಡಿ. ಅದು ಬೇಕಾಗಿದೆ. ಎಲ್ಲರನ್ನೂ ಧೂರ್ತುರು ಎಂದು ಪರಿಗಣಿಸಿ. "ಇಲ್ಲಿ ಬುದ್ದಿವಂತ ಮನುಷ್ಯ, ಇಲ್ಲೊಬ್ಬ ಧರೂರ್ತ, ಇಲ್ಲೊಬ್ಬ...", ಎಂಬ ಪ್ರಶ್ನೆಯೇ ಇಲ್ಲ, ಇಲ್ಲ. ಮೊದಲು ಎಲ್ಲರೂ ಧೂರ್ತುರು ಎಂದು ಪರಿಗಣಿಸಿ, ನಂತರ ಅವರಿಗೆ ತರಬೇತಿ ನೀಡಿ. ಅದು ಬೇಕಾಗಿದೆ. ಅದು ಈಗ ಬೇಕಾಗಿದೆ. ಈ ಸಮಯದಲ್ಲಿ ಇಡೀ ಪ್ರಪಂಚವು ಧೂರ್ತರಿಂದ ತುಂಬಿದೆ. ಈಗ, ಅವರು ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಿದರೆ ಅವರಲ್ಲಿ ಆಯ್ಕೆ ಮಾಡಿ. ನಾನು ತರಬೇತಿ ನೀಡುತ್ತಿರುವಂತೆಯೇ. ನೀವು ತರಬೇತಿಯಿಂದ ಬ್ರಾಹ್ಮಣರಾಗಿದ್ದೀರಿ. ಆದ್ದರಿಂದ, ಬ್ರಾಹ್ಮಣನಾಗಲು ತರಬೇತಿ ಪಡೆಯಲು ಸಿದ್ಧನಾಗಿರುವವನು ಬ್ರಾಹ್ಮಣ ಎಂದು ವರ್ಗೀಕರಿಸಿ. ಒಬ್ಬನು ಕ್ಷತ್ರಿಯನಾಗಿ ತರಬೇತಿ ಪಡೆದಿದ್ದರೆ, ಅವನನ್ನು ವರ್ಗೀಕರಿಸಿ. ಈ ರೀತಿಯಲ್ಲಿ, ಚಾತುರ್-ವರ್ಣ್ಯಮ್ ಮಯಾ ಸೃಷ್ಟಮ್ (ಭ.ಗೀ 4.13).

ಹರಿಕೇಶ: ಮತ್ತು ಆ ಕ್ಷತ್ರಿಯನು ಎಲ್ಲರನ್ನು ಮೂಲತಃ ಶೂದ್ರನಂತೆ ತೊಡಗಿಸಿಕೊಳ್ಳುತ್ತಾನೆ ಮತ್ತು ನಂತರ ಅವರಿಂದ ಆರಿಸಿಕೊಳ್ಳುತ್ತಾನೆ.

ಪ್ರಭುಪಾದ: ಹಾಂ?

ಹರಿಕೇಶ: ಅವನು ಆರಂಭದಲ್ಲಿ ಆರಿಸುತ್ತಾನೆ...

ಪ್ರಭುಪಾದ: ಇಲ್ಲ, ಇಲ್ಲ, ಇಲ್ಲ. ನೀವು ಆರಿಸಿ... ನೀವು ಇಡೀ ಸಮೂಹವನ್ನು ಶೂದ್ರ ಎಂದು ಪರಿಗಣಿಸಿ. ನಂತರ...

ಹರಿಕೇಶ: ಆರಿಸಿ.

ಪ್ರಭುಪಾದ: ಆರಿಸಿ. ಮತ್ತು ಉಳಿದದ್ದು ಯಾರು ಬ್ರಾಹ್ಮಣ ಅಥವಾ ಕ್ಷತ್ರಿಯ ಅಥವಾ ವೈಶ್ಯ ಅಲ್ಲ, ಆಗ ಅವನು ಶೂದ್ರ. ಅಷ್ಟೆ, ತುಂಬಾ ಸುಲಭವಾದ ವಿಷಯ. ಇಂಜಿನಿಯರ್ ಆಗಿ ತರಬೇತಿ ಪಡೆಯಲು ಸಾಧ್ಯವಾಗದಿದ್ದರೆ, ಅವನು ಸಾಮಾನ್ಯ ಮನುಷ್ಯನಾಗಿ ಉಳಿಯುತ್ತಾನೆ. ಬಲವಂತವಿಲ್ಲ. ಇದುವೇ ಸಮಾಜವನ್ನು ಸಂಘಟಿಸುವ ಮಾರ್ಗವು. ಬಲವಂತವಿಲ್ಲ. ಶೂದ್ರರೂ ಬೇಕು.

ಪುಷ್ಟ ಕೃಷ್ಣ: ಈಗ ಆಧುನಿಕ ಸಮಾಜದಲ್ಲಿ ವಿದ್ಯಾವಂತರಾಗಲು ಅಥವಾ ಇಂಜಿನಿಯರ್ ಆಗಲು ಪ್ರೇರಣೆ ಹಣ. ವೈದಿಕ ಸಂಸ್ಕೃತಿಯಲ್ಲಿ ಪ್ರೋತ್ಸಾಹವೇನು?

ಪ್ರಭುಪಾದ: ಹಣದ ಅವಶ್ಯಕತೆ ಇಲ್ಲ. ಬ್ರಾಹ್ಮಣನು ಎಲ್ಲವನ್ನೂ ಉಚಿತವಾಗಿ ಕಲಿಸುತ್ತಾನೆ. ಹಣದ ಪ್ರಶ್ನೆಯೇ ಇಲ್ಲ. ಯಾರು ಬೇಕಾದರೂ ಶಿಕ್ಷಣವನ್ನು ಬ್ರಾಹ್ಮಣ, ಕ್ಷತ್ರಿಯ, ಅಥವಾ ವೈಶ್ಯನಾಗಿ ಪಡೆಯಬಹುದು. ವೈಶ್ಯನಿಗೆ ಯಾವುದೇ ಶಿಕ್ಷಣದ ಅಗತ್ಯವಿಲ್ಲ. ಕ್ಷತ್ರಿಯರಿಗೆ ಕಡಿಮೆ ಅಗತ್ಯವಿರುತ್ತದೆ. ಬ್ರಾಹ್ಮಣನಿಗೆ ಬೇಕು. ಆದರೆ ಅದು ಉಚಿತ. ಕೇವಲ ಒಬ್ಬ ಬ್ರಾಹ್ಮಣ ಗುರುವನ್ನು ಹುಡುಕಿ ಮತ್ತು ಅವನು ನಿಮಗೆ ಉಚಿತ ಶಿಕ್ಷಣವನ್ನು ನೀಡುತ್ತಾನೆ. ಅಷ್ಟೆ. ಇದೇ ಸಮಾಜ ಅಂದರೆ. ಈಗ, ತಕ್ಷಣ ... ಈಗಿನ ಕಾಲದಲ್ಲಿ, ಒಬ್ಬನು ಶಿಕ್ಷಣವನ್ನು ಪಡೆಯಲು ಬಯಸಿದರೆ ಅವನಿಗೆ ಹಣದ ಅಗತ್ಯವಿರುತ್ತದೆ. ಆದರೆ ವೈದಿಕ ಸಮಾಜದಲ್ಲಿ ಹಣದ ಪ್ರಶ್ನೆಯೇ ಇಲ್ಲ. ಶಿಕ್ಷಣ ಉಚಿತ.

ಹರಿಕೇಶ: ಹಾಗಾದರೆ ಸಮಾಜದಲ್ಲಿ ಸಂತೋಷವೇ ಪ್ರೋತ್ಸಾಹವೇ?

ಪ್ರಭುಪಾದ: ಹೌದು, ಅಂದರೆ... ಎಲ್ಲರೂ ಹಾತೊರೆಯುತ್ತಿದ್ದಾರೆ: "ಸಂತೋಷ ಎಲ್ಲಿದೆ?" ಇದು ಸಂತೋಷವಾಗಿರುತ್ತದೆ. ಜನರು ತಮ್ಮ ಜೀವನದಲ್ಲಿ ಶಾಂತಿಯುತವಾಗಿ, ಸಂತೋಷದಿಂದ ಇರುವಾಗ, ಅದು ಸಂತೋಷವನ್ನು ತರುತ್ತದೆ. "ನನಗೆ ಗಗನಚುಂಬಿ ಕಟ್ಟಡ ಸಿಕ್ಕರೆ, ನಾನು ಸಂತೋಷವಾಗಿರುತ್ತೇನೆ" ಎಂದು ಊಹಿಸಿ, ನಂತರ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅದು ನಡೆಯುತ್ತಿದೆ. "ನನಗೆ ಗಗನಚುಂಬಿ ಕಟ್ಟಡವಿದ್ದರೆ ಸಂತೋಷವಾಗುತ್ತದೆ", ಎಂದು ಅವನು ಯೋಚಿಸುತ್ತಿದ್ದಾನೆ, ಮತ್ತು ಅವನು ನಿರಾಶೆಗೊಂಡಾಗ ಅವನು ಕೆಳಗೆ ಹಾರುತ್ತಾನೆ. ಅದು ನಡೆಯುತ್ತಿದೆ. ಇದು ಇವರ ಸಂತೋಷ. ಅಂದರೆ ಎಲ್ಲರೂ ಧೂರ್ತರು. ಅವರಿಗೆ ಸುಖವೆಂದರೇನು ಗೊತ್ತಿಲ್ಲ. ಆದ್ದರಿಂದ, ಪ್ರತಿಯೊಬ್ಬರಿಗೂ ಕೃಷ್ಣನ ಮಾರ್ಗದರ್ಶನದ ಅಗತ್ಯವಿದೆ. ಅದುವೇ ಕೃಷ್ಣ ಪ್ರಜ್ಞೆ. ಈಗ ಇಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚಿದೆ ಎಂದು ಹೇಳುತ್ತಿದ್ದೆ ನೀನು?

ಪುಷ್ಟ ಕೃಷ್ಣ: ಹೌದು.

ಪ್ರಭುಪಾದ: ಏಕೆ? ಇದು ಚಿನ್ನದ ಗಣಿ ಹೊಂದಿರುವ ದೇಶ, ಮತ್ತು ಅವರು ಏಕೆ...? ಮತ್ತು ಇಲ್ಲಿ ಬಡವರಾಗುವುದು ಕಷ್ಟ ಎಂದು ನೀನು ಹೇಳಿದೆ.

ಪುಷ್ಟ ಕೃಷ್ಣ: ಹೌದು. ಇಲ್ಲಿ ಬಡವನಾಗಲು ಕಷ್ಟಪಡಬೇಕು.

ಪ್ರಭುಪಾದ: ಹೌದು. ಆದರೂ ಇನ್ನೂ ಆತ್ಮಹತ್ಯೆ ಇದೆ. ಏಕೆ? ಪ್ರತಿಯೊಬ್ಬ ಮನುಷ್ಯನು ಶ್ರೀಮಂತನಾಗಿದ್ದಾನೆ ಮತ್ತು ಅವನು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ? ಹಾಂ? ನೀವು ಉತ್ತರ ಕೊಡುವಿರಾ?

ಭಕ್ತ (1): ಅವರಿಗೆ ಕೇಂದ್ರ ಸಂತೋಷದ ಕೊರತೆಯಿದೆಯೇ?

ಪ್ರಭುಪಾದ: ಹೌದು. ಸುಖವಿಲ್ಲ. (ವಿರಾಮ)