KN/Prabhupada 0216 - ಕೃಷ್ಣನು ಉತ್ತಮನು
Lecture on SB 1.7.47-48 -- Vrndavana, October 6, 1976
ಇದು ವೈಷ್ಣವನ ಮನೋಭಾವ. ಪರ-ದುಃಖ-ದುಃಖೀ. ವೈಷ್ಣವ ಪರ-ದುಃಖ-ದುಃಖೀ. ಅದು ವೈಷ್ಣವನ ಅರ್ಹತೆ. ಅವನು ತನ್ನ ಸ್ವಂತ ವೈಯಕ್ತಿಕ ದುಃಖಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ಒಬ್ಬ ವೈಷ್ಣವನಾಗಿ ಇತರರು ಬಳಲುತ್ತಿರುವಾಗ ದುಃಖಿತನಾಗುತ್ತಾನೆ, ದುಃಖಿತನಾಗುತ್ತಾನೆ. ಅವನೇ ವೈಷ್ಣವ. ಪ್ರಹ್ಲಾದ ಮಹಾರಾಜರು ಹೇಳಿದರು.
- ನೈವೋದ್ವಿಜೆ ಪರ ದುರತ್ಯಯ-ವೈತರಣ್ಯಾಸ್
- ತ್ವದ್-ವೀರ್ಯ-ಗಾಯನ-ಮಹಾಮೃತ-ಮಗ್ನ-ಚಿತ್ತಃ
- ಶೋಚೆ ತತೋ ವಿಮುಖ-ಚೇತಸ ಇಂದ್ರಿಯಾರ್ಥ-
- ಮಾಯಾ-ಸುಖಾಯ ಭಾರಮ್ ಉದ್ವಹತೋ ವಿಮೂಢಾನ್
- (ಶ್ರೀ.ಭಾ 7.9.43)
ಪ್ರಹ್ಲಾದ ಮಹಾರಾಜನು ತನ್ನ ತಂದೆಯಿಂದ ತುಂಬಾ ಹಿಂಸೆಗೆ ಒಳಗಾದನು, ಆದರೆ ಕೊನೆಗೆ ಅವನ ತಂದೆ ಕೊಲ್ಲಲ್ಪಟ್ಟನು. ಭಗವಾನ್ ನೃಸಿಂಹದೇವ ಅವನಿಗ ವರವನ್ನು ನೀಡಿದಾಗ, ಅವನು ಅದನ್ನು ಸ್ವೀಕರಿಸಲಿಲ್ಲ. ಅವನು ಹೇಳಿದನು: ಸ ವೈ ವಣಿಕ್. ನನ್ನ ಪ್ರಭು, ನಾವು ರಾಜೋ-ಗುಣ, ತಮೋ-ಗುಣಗಳ ಕುಟುಂಬದಲ್ಲಿ ಜನಿಸಿದ್ದೇವೆ. ರಾಜೋ-ಗುಣ, ತಮೋ-ಗುಣ. ಅಸುರರು ಎರಡು ಕೆಳ ಗುಣಗಳಾದ ರಜೋ-ಗುಣ ಮತ್ತು ತಮೋ-ಗುಣಗಳಿಂದ ಪ್ರಭಾವಿತರಾಗುತ್ತಾರೆ. ಮತ್ತು ದೇವತೆಗಳು ಸತ್ವ-ಗುಣದಿಂದ ಪ್ರಭಾವಿತರಾಗುತ್ತಾರೆ.
ಭೌತಿಕ ಜಗತ್ತಿನಲ್ಲಿ ಮೂರು ಗುಣಗಳಿವೆ. ಸತ್ವ-ಗುಣ. ತ್ರಿ-ಗುಣಮಯೀ. ದೈವಿ ಹಿ ಏಷಾ ಗುಣಮಯೀ (ಭ.ಗೀ 7.14). ಗುಣಮಯೀ. ಈ ಭೌತಿಕ ಜಗತ್ತು ತ್ರಿಗುಣಮಯೀ — ಸತ್ವ-ಗುಣ, ರಜೋ-ಗುಣ, ಹಾಗು ತಮೋ-ಗುಣ. ಆದ್ದರಿಂದ, ಸತ್ತ್ವ-ಗುಣದಿಂದ ಪ್ರಭಾವಿತರಾದವರು ಉತ್ತಮ. ಭೌತಿಕ ಜಗತ್ತಿನಲ್ಲಿ ಉತ್ತಮ ದರ್ಜೆ ಎಂದರೆ ಉತ್ತಮ ದರ್ಜೆ, ಆಧ್ಯಾತ್ಮಿಕ ಜಗತ್ತಿನಲ್ಲಿ ಅಲ್ಲ. ಆಧ್ಯಾತ್ಮಿಕ ಜಗತ್ತು ವಿಭಿನ್ನವಾಗಿದೆ. ಅದು ನಿರ್ಗುಣ, ಯಾವುದೇ ಭೌತಿಕ ಗುಣಗಳಿಲ್ಲ. ಉತ್ತಮ ದರ್ಜೆ, ಮಧ್ಯಮ ದರ್ಜೆ, ಮತ್ತು ಕನಿಷ್ಠ ದರ್ಜೆ ಎಂಬುದು ಇಲ್ಲ. ಪ್ರತಿಯೊಬ್ಬರೂ ಉತ್ತಮ ದರ್ಜೆ. ಅದು ಪರಿಪೂರ್ಣ. ಕೃಷ್ಣನು ಉತ್ತಮನು, ಅವನ ಭಕ್ತರೂ ಉತ್ತಮರು, ಮರಗಳೂ ಉತ್ತಮ, ಪಕ್ಷಿಗಳೂ ಉತ್ತಮ, ಹಸುಗಳೂ ಉತ್ತಮ, ಕರುಗಳೂ ಉತ್ತಮ, ಎಲ್ಲವೂ ಉತ್ತಮವೇ. ಆದ್ದರಿಂದ, ಅದು ಪರಿಪೂರ್ಣ. ಸಾಪೇಕ್ಷ ಎರಡನೇ ದರ್ಜೆ, ಮೂರನೇ ದರ್ಜೆ, ನಾಲ್ಕನೇ ದರ್ಜೆ ಎಂಬ ಕಲ್ಪನೆ ಇಲ್ಲ. ಎಲ್ಲವೂ ಪ್ರಥಮ ದರ್ಜೆಯೇ. ಆನಂದ-ಚಿನ್ಮಯ-ರಸ-ಪ್ರತಿಭಾವಿತಾಭಿಃ (ಬ್ರಹ್ಮ ಸಂಹಿತ 5.37). ಎಲ್ಲವೂ ಆನಂದ-ಚಿನ್ಮಯ-ರಸದ ಸಂಯೋಜನೆಯಾಗಿದೆ. ಯಾವುದೇ ವರ್ಗೀಕರಣವಿಲ್ಲ. ಒಬ್ಬ ದಾಸ್ಯ-ರಸದಲ್ಲಿರಬಹುದು, ಒಬ್ಬ ಸಾಖ್ಯ-ರಸದಲ್ಲಿರಬಹುದು, ವಾತ್ಸಲ್ಯ-ರಸದಲ್ಲಿರಬಹುದು, ಅಥವಾ ಮಾಧುರ್ಯ-ರಸದಲ್ಲಿರಬಹುದು, ಅವೆಲ್ಲವೂ ಒಂದೇ. ಅಂತಹ ಯಾವುದೇ ವ್ಯತ್ಯಾಸವಿಲ್ಲ. ಆದರೆ ವೈವಿಧ್ಯತೆ ಇದೆ. ನೀವು ಈ ರಸವನ್ನು ಇಷ್ಟಪಡಬಹುದು, ನಾನು ಈ ರಸವನ್ನು ಇಷ್ಟಪಡಬಹುದು. ಅದನ್ನು ಅನುಮತಿಸಲಾಗಿದೆ.
ಹಾಗಾಗಿ ಇಲ್ಲಿ, ಈ ಭೌತಿಕ ಜಗತ್ತಿನಲ್ಲಿ, ಅವರು ಮೂರು ರಸಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಪ್ರಹ್ಲಾದ ಮಹಾರಾಜನು ಹಿರಣ್ಯಕಶಿಪುವಿನ ಮಗನಾಗಿರುವುದರಿಂದ ತನ್ನನ್ನು "ನಾನು ರಜೋ-ಗುಣ ಮತ್ತು ತಮೋ-ಗುಣಗಳಿಂದ ಪ್ರಭಾವಿತನಾಗಿದ್ದೇನೆ", ಎಂದು ಪರಿಗಣಿಸಿದನು. ಅವನು ವೈಷ್ಣವ, ಅವನು ಇಲ್ಲಾ ಗುಣಗಳಿಗೆ ಅತೀತನಾದವನು. ಆದರೆ ಒಬ್ಬ ವೈಷ್ಣವನು ತನ್ನ ಗುಣದ ಬಗ್ಗೆ ಎಂದಿಗೂ ಹೆಮ್ಮೆಪಡುವುದಿಲ್ಲ. ತಾನು ದೊಡ್ಡ ಪಂಡಿತ, ತುಂಬಾ ಪ್ರಬುದ್ಧ ಎಂದು ಅವನು ಎಂದಿಗೂ ಭಾವಿಸುವುದಿಲ್ಲ. ಅವನು ಯಾವಾಗಲೂ, "ನಾನು ಅತ್ಯಂತ ಕನಿಷ್ಠ", ಎಂದು ಭಾವಿಸುತ್ತಾನೆ.
- ತೃಣಾದ್ ಅಪಿ ಸುನೀಚೇನ
- ತರೋರ್ ಅಪಿ ಸಹಿಷ್ಣುನಾ
- ಅಮಾನಿನಾ ಮಾನದೇನ
- ಕೀರ್ತನೀಯಃ ಸದಾ ಹರಿಃ
- (ಚೈ.ಚ ಆದಿ 17.31)
ಅವನೇ ವೈಷ್ಣವ.