KN/Prabhupada 0221 - ಭಗವಂತನೊಂದಿಗೆ ಒಂದಾಗಿದ್ದೇವೆಂದು ಮಾಯಾವಾದಿಗಳು ಭಾವಿಸುತ್ತಾರೆ
"ಭಗವದ್ಗೀತೆಯ ಈ ತತ್ವಶಾಸ್ತ್ರವನ್ನು ನೀನು ಸೂರ್ಯದೇವನಿಗೆ ಬೋಧಿಸಿದ್ದೇನೆಂದು ಹೇಳುತ್ತೀಯಾ. ನಾನು ಅದನ್ನು ಹೇಗೆ ನಂಬಲಿ?", ಎಂದು ಅರ್ಜುನನು ಕೃಷ್ಣನನ್ನು ಕೇಳಿದ. "ವಿಷಯವೆಂದರೆ ನಾವಿಬ್ಬರೂ ಆಗಲೂ ಇದ್ದೆವು. ಆದರೆ ನೀನು ಮರೆತಿದ್ದೀಯಾ, ನಾನು ಮರೆತಿಲ್ಲ", ಎಂದು ಕೃಷ್ಣ ಉತ್ತರಿಸಿದ.
ಅದುವೇ ಕೃಷ್ಣ ಮತ್ತು ಸಾಮಾನ್ಯ ಜೀವಿಗಳ ನಡುವಿನ ವ್ಯತ್ಯಾಸ. ಅವನು ಸಂಪೂರ್ಣ; ನಾವು ಅಪೂರ್ಣ. ನಾವು ಅಪೂರ್ಣ, ಕೃಷ್ಣನ ತುಣುಕು. ಆದ್ದರಿಂದ, ನಾವು ಕೃಷ್ಣನಿಂದ ನಿಯಂತ್ರಿಸಲ್ಪಡಬೇಕು. ನಾವು ಕೃಷ್ಣನಿಂದ ನಿಯಂತ್ರಿಸಲ್ಪಡಲು ಒಪ್ಪದಿದ್ದರೆ, ನಾವು ಭೌತಿಕ ಶಕ್ತಿಯಿಂದ ನಿಯಂತ್ರಿಸಲ್ಪಡುತ್ತೇವೆ, ಭೂಮಿರ್ ಆಪೋ 'ನಲೋ ವಾಯುಃ (ಭ.ಗೀ 7.4). ವಾಸ್ತವವಾಗಿ, ನಾವು ಆಧ್ಯಾತ್ಮಿಕ ಶಕ್ತಿ. ನಾವು ಸ್ವಯಂಪ್ರೇರಣೆಯಿಂದ ಕೃಷ್ಣನಿಂದ ನಿಯಂತ್ರಿಸಲ್ಪಡಲು ಒಪ್ಪಿಕೊಳ್ಳಬೇಕು. ಅದು ಭಕ್ತಿ ಸೇವೆ. ಅದು ಭಕ್ತಿ ಸೇವೆ. ನಾವು ಆಧ್ಯಾತ್ಮಿಕ ಶಕ್ತಿ, ಮತ್ತು ಕೃಷ್ಣನು ಪರಮಾತ್ಮ. ಆದ್ದರಿಂದ, ನಾವು ಕೃಷ್ಣನಿಂದ ನಿಯಂತ್ರಿಸಲ್ಪಡಲು ಒಪ್ಪಿಕೊಂಡರೆ, ಆಧ್ಯಾತ್ಮಿಕ ಜಗತ್ತಿಗೆ ಬಡ್ತಿ ಪಡೆಯುತ್ತೇವೆ. ನಾವು ಒಪ್ಪಿದರೆ. ಕೃಷ್ಣನು ನಿಮ್ಮ ಅಲ್ಪ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವುದಿಲ್ಲ. ಯಥೇಚ್ಛಸಿ ತಥಾ ಕುರು (ಭ.ಗೀ 18.63). ಕೃಷ್ಣನು ಅರ್ಜುನನಿಗೆ, "ನಿನಗೆ ಇಷ್ಟವಾದ ಹಾಗೆ ಮಾಡು", ಎಂದು ಹೇಳುತ್ತಾನೆ. ಆ ಸ್ವಾತಂತ್ರ್ಯ ನಮಗೆ ಸಿಕ್ಕಿದೆ.
ಆ ಸ್ವಾತಂತ್ರ್ಯದಿಂದ ನಾವು ಈ ಭೌತಿಕ ಜಗತ್ತಿಗೆ ಮುಕ್ತವಾಗಿ ಆನಂದಿಸಲು ಬಂದಿದ್ದೇವೆ. ಆದ್ದರಿಂದ, ಕೃಷ್ಣನು ನಮಗೆ ಸ್ವಾತಂತ್ರ್ಯವನ್ನು ನೀಡಿದ್ದಾನೆ, “ನೀವು ಮುಕ್ತವಾಗಿ ಆನಂದಿಸಬಹುದು.” ಮತ್ತು ನಾವು ಆನಂದಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಫಲಿತಾಂಶವೆಂದರೆ ನಾವು ಸಿಕ್ಕಿಹಾಕಿಕೊಳ್ಳುತ್ತಿದ್ದೇವೆ. ಈ ಭೌತಿಕ ಜಗತ್ತಿನಲ್ಲಿ ಕೆಲಸ ಮಾಡಲು ನಮಗೆ ಸ್ವಾತಂತ್ರ್ಯ ನೀಡಲಾಗಿದೆ. ಪ್ರತಿಯೊಬ್ಬರೂ ಭೌತಿಕ ಪ್ರಪಂಚದ ಯಜಮಾನನಾಗಲು ಪ್ರಯತ್ನಿಸುತ್ತಿದ್ದಾರೆ. ಯಾರೂ ಸೇವಕನಾಗಲು ಪ್ರಯತ್ನಿಸುತ್ತಿಲ್ಲ. ನಾವು, ವೈಷ್ಣವರು, ನಾವು ಮಾತ್ರ ಸೇವಕರಾಗಲು ಪ್ರಯತ್ನಿಸುತ್ತಿದ್ದೇವೆ. ಕರ್ಮಿಗಳು ಮತ್ತು ಜ್ಞಾನಿಗಳು ಸೇವಕರಾಗಲು ಇಷ್ಟಪಡುವುದಿಲ್ಲ. ಅವರು "ನೀವು ವೈಷ್ಣವರು, ನೀವು ಗುಲಾಮ ಮನಸ್ಥಿತಿಯನ್ನು ಹೊಂದಿದ್ದೀರಿ”, ಎಂದು ನಮ್ಮನ್ನು ಟೀಕಿಸುತ್ತಾರೆ. ಹೌದು, ನಮಗೆ ಗುಲಾಮ ಮನಸ್ಥಿತಿಯಿದೆ. ಚೈತನ್ಯ ಮಹಾಪ್ರಭು ಕಲಿಸಿದ್ದಾರೆ: ಗೋಪಿ-ಭರ್ತುಃ ಪಾದ-ಕಮಲಯೋರ್ ದಾಸ-ದಾಸನುದಾಸಃ (ಚೈ.ಚ ಮಧ್ಯ 13.80). ಅದು ನಮ್ಮ ನಿಲುವು. ಕೃತಕವಾಗಿ, "ನಾನು ಯಜಮಾನ", ಎಂದು ಹೇಳಿಕೊಳ್ಳುವುದರಿಂದ ಏನು ಪ್ರಯೋಜನ? ನಾನು ಯಜಮಾನನಾಗಿದ್ದರೆ, ಫ್ಯಾನ್ ಏಕೆ ಬೇಕು? ನಾನು ಬೇಸಿಗೆಯ ಈ ಪ್ರಭಾವಕ್ಕೆ ದಾಸ. ಅದೇ ರೀತಿ, ಚಳಿಗಾಲದಲ್ಲಿ ನಾನು ಅತ್ಯಂತ ಚಳಿಗೆ ದಾಸನಾಗಿರುತ್ತೇನೆ.
ಆದ್ದರಿಂದ, ನಾವು ಯಾವಾಗಲೂ ಸೇವಕರು. ಚೈತನ್ಯ ಮಹಾಪ್ರಭು ಹೇಳುತ್ತಾರೆ: ಜೀವೇರ ಸ್ವರೂಪ ಹಯ ನಿತ್ಯ-ಕೃಷ್ಣ-ದಾಸ (ಚೈ.ಚ ಮಧ್ಯ 20.108-109). ವಾಸ್ತವವಾಗಿ, ಕೃಷ್ಣನ ಶಾಶ್ವತ ಸೇವಕನಾಗಿರುವುದೆ ನಮ್ಮ ಸಹಜ ಸ್ಥಾನ. ಕೃಷ್ಣನು ಸರ್ವೋಚ್ಚ ನಿಯಂತ್ರಕ. ಈ ಕೃಷ್ಣ ಪ್ರಜ್ಞೆ ಚಳುವಳಿಯು ಈ ಉದ್ದೇಶಕ್ಕಾಗಿ ನಡೆಸಲಾಗಿದೆ. ಈ ಮೂರ್ಖ ವ್ಯಕ್ತಿಗಳು ಅಥವಾ ದುಷ್ಟರು, ಮೂಢಾಃ... ನಾನು "ಮೂರ್ಖ" ಮತ್ತು "ದುಷ್ಟ" ಪದಗಳನ್ನು ತಯಾರಿಸುತ್ತಿಲ್ಲ. ಇದನ್ನು ಕೃಷ್ಣ ಹೇಳಿದ್ದಾನೆ. ನ ಮಾಂ ದುಷ್ಕೃತಿನೋ ಮುಢಾಃ ಪ್ರಪದ್ಯಂತೇ ನರಾಧಮಾಃ (ಭ.ಗೀ 7.15). ಅವನು ಹಾಗೆ ಹೇಳಿದ್ದಾನೆ. ನೀವು ನೋಡಿ. ದುಷ್ಕೃತಿನಾಃ, ಯಾವಾಗಲೂ ಪಾಪ ವರ್ತನೆ, ಮತ್ತು ಮೂಢಾಃ, ಮತ್ತು ಧೂರ್ತರು, ಕತ್ತೆಗಳು. ನರಾಧಮಾಃ, ಮನುಕುಲದ ನೀಚರು. "ಓಹ್, ನೀನು...? ಕೃಷ್ಣ, ನೀನು ಈ ಭೌತಿಕವಾದಿ ವಿಜ್ಞಾನಿಗಳ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದೀಯಾ? ತುಂಬಾ ತತ್ವಜ್ಞಾನಿಗಳಿದ್ದಾರೆ. ಅವರೆಲ್ಲರೂ ನರಾಧಮರೇ?" "ಹೌದು, ಅವರು ನರಾಧಮಾಃ." "ಆದರೆ ಅವರು ವಿದ್ಯಾವಂತರು." "ಹೌದು, ಅದು ಕೂಡ..." ಆದರೆ ಯಾವ ರೀತಿಯ ಶಿಕ್ಷಣ? ಮಾಯಯಾ ಅಪಹೃತ-ಜ್ಞಾನಾಃ: "ಅವರ ಶಿಕ್ಷಣದ ಫಲಿತಾಂಶವೆಂದರೆ ಜ್ಞಾನವನ್ನು ಮಾಯಾ ಕಸಿದುಕೊಂಡಿದ್ದಾಳೆ.” ಒಬ್ಬ ವ್ಯಕ್ತಿಯು ಹೆಚ್ಚು ವಿದ್ಯಾವಂತನಾದಷ್ಟೂ ಅವನು ಹೆಚ್ಚು ನಾಸ್ತಿಕನಾಗುತ್ತಾನೆ.
ಈ ಕಾಲದಲ್ಲಿ... ಖಂಡಿತ, ಶಿಕ್ಷಣ ಎಂದರೆ... ಶಿಕ್ಷಣ ಎಂದರೆ ಅರ್ಥಮಾಡಿಕೊಳ್ಳುವುದು. ಜ್ಞಾನಿ. ಶಿಕ್ಷಿತ ಎಂದರೆ ಬುದ್ಧಿವಂತ ವ್ಯಕ್ತಿ, ವಿದ್ಯಾವಂತ ವ್ಯಕ್ತಿ, ಜ್ಞಾನಿ. ನಿಜವಾದ ಜ್ಞಾನಿ ಎಂದರೆ ಮಾಂ ಪ್ರಪದ್ಯತೇ. ಬಹುನಾಂ ಜನ್ಮನಾಂ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ (ಭ.ಗೀ 7.19). ಅದು ಶಿಕ್ಷಣ. ಶಿಕ್ಷಣ ಎಂದರೆ ನಾಸ್ತಿಕರಾಗುವುದು ಎಂದಲ್ಲ, "ಭಗವಂತನಿಲ್ಲ. ನಾನು ಭಗವಂತ, ನೀನೂ ಭಗವಂತ, ಎಲ್ಲರೂ ಭಗವಂತರು." ಇದು ಶಿಕ್ಷಣವಲ್ಲ. ಇದು ಅಜ್ಞಾನ. ಭಗವಂತನೊಂದಿಗೆ ಒಂದಾಗಿದ್ದೇವೆಂದು ಮಾಯಾವಾದಿಗಳು ಭಾವಿಸುತ್ತಾರೆ. ಅದು ಶಿಕ್ಷಣವಲ್ಲ.