KN/681125b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಶುದ್ಧ ಭಕ್ತನನ್ನು ಅನುಸರಿಸಿದರೆ, ನೀವು ಸಹ ಶುದ್ಧ ಭಕ್ತರೆ. ಒಬ್ಬರು ಶೇಕಡಾ ನೂರಕ್ಕೆ ನೂರು ಪರಿಶುದ್ಧವಾಗಿಲ್ಲದೆ ಇರಬಹುದು, ಏಕೆಂದರೆ ನಾವು ಬದ್ಧ ಜೀವನದಿಂದ ನಮ್ಮನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿದ್ದೇವೆ. ಆದರೆ ನಾವು ಶುದ್ಧ ಭಕ್ತನನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ, ನಾವೂ ಸಹ ಪರಿಶುದ್ಧ ಭಕ್ತರೆ. ಇದುವರೆಗೆ ನಾವು ಮಾಡುತ್ತಿದ್ದೇವೆ, ಅದು ಪರಿಶುದ್ಧವಾಗಿದೆ. ಆದ್ದರಿಂದ ಶುದ್ಧ ಭಕ್ತ ಎಂದರೆ ಒಬ್ಬನು ತಕ್ಷಣವೇ ಶೇಕಡಾ ನೂರಕ್ಕೆ ನೂರು ಪರಿಶುದ್ಧನಾಗಬೇಕು ಎಂದಲ್ಲ.ಆದರೆ ಅವನು "ನಾವು ಶುದ್ಧ ಭಕ್ತನನ್ನು ಅನುಸರಿಸುತ್ತೇವೆ" ಎಂಬ ತತ್ವಕ್ಕೆ ಅಂಟಿಕೊಂಡರೆ, ಆಗ ಅವನ ಚಟುವಟಿಕೆಗಳು . . . ಅವರು ಶುದ್ಧ ಭಕ್ತರಷ್ಟೇ ಒಳ್ಳೆಯವರು. ಅದು ... ಅದು ನನ್ನದೇ ಆದ ರೀತಿಯಲ್ಲಿ ನಾನು ವಿವರಿಸುತ್ತಿಲ್ಲ; ಇದು ಭಾಗವತದ ವಿವರಣೆಯಾಗಿದೆ. ಮಹಾಜನೋ ಯೇನ ಗತಃ ಸ ಪಂಥಾಹ (ಚೈ ಚ ಮಧ್ಯ ೧೭.೧೮೬)."
681125 - ಉಪನ್ಯಾಸ ಭ.ಗೀ-೦೨.೦೧-೧೦ - ಲಾಸ್ ಎಂಜಲೀಸ್