KN/690501 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

Revision as of 10:23, 10 April 2022 by Shiv Kumar (talk | contribs)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯಾವಾಗ ದೇವರ ಪ್ರೇಮದ ಅಂಜನ ನಮ್ಮ ಕಣ್ಣುಗಳಲ್ಲಿ ಲೇಪಿತವಾಗಿದೆಯೋ, ಆಗಾ ಈ ಕಣ್ಣುಗಳಿಂದ ನಾವು ದೇವರನ್ನು ನೋಡಬಹುದು. ದೇವರು ಅದೃಶ್ಯನಲ್ಲ. ಹೇಗೆ ಕಣ್ಣಿನ ಪೊರೆ ಅಥವಾ ಇತರ ಯಾವುದೇ ಕಣ್ಣಿನ ಕಾಯಿಲೆ ಇರುವ ಮನುಷ್ಯನಂತೆ, ಅವನು ನೋಡಲಾಗುವುದಿಲ್ಲ. ಅದರರ್ಥ ವಸ್ತುಗಳು ಅಸ್ತಿತ್ವದಲ್ಲಿಲ್ಲ ಎಂದಲ್ಲ. ಅವನು ನೋಡಲಾಗುವುದಿಲ್ಲ. ದೇವರು ಇದ್ದಾನೆ, ಆದರೆ ನನ್ನ ಕಣ್ಣುಗಳು ದೇವರನ್ನು ನೋಡಲು ಸಮರ್ಥವಾಗಿಲ್ಲ, ಆದ್ದರಿಂದ ನಾನು ದೇವರನ್ನು ನಿರಾಕರಿಸುತ್ತೇನೆ. ದೇವರು ಎಲ್ಲೆಡೆ ಇದ್ದಾನೆ. ಆದ್ದರಿಂದ ನಮ್ಮ ಜೀವನದ ಲೌಕಿಕ ಸ್ಥಿತಿಯಲ್ಲಿ, ನಮ್ಮ ಕಣ್ಣುಗಳು ಮೊಂಡಾಗಿವೆ. ಕಣ್ಣುಗಳು ಮಾತ್ರವಲ್ಲ, ಪ್ರತಿ ಇಂದ್ರಿಯವೂ. ವಿಶೇಷವಾಗಿ ಕಣ್ಣುಗಳು. ಏಕೆಂದರೆ, ನೋಡಿ ನಾವು ನಮ್ಮ ಕಣ್ಣುಗಳ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ ಮತ್ತು ನಾವು, 'ನೀವು ನನಗೆ ದೇವರನ್ನು ತೋರಿಸುತ್ತೀರಾ?' ಎಂದು ಹೇಳುತ್ತೇವೆ. ಆದರೆ ಅವನ ಕಣ್ಣುಗಳು ದೇವರನ್ನು ನೋಡಲು ಸಮರ್ಥವಾಗಿವೆಯೇ ಎಂದು ಅವನು ಯೋಚಿಸುವುದಿಲ್ಲ. ಅದು ನಾಸ್ತಿಕತೆ."
690501 - ಭಗವಾನ್ ನೃಸಿಂಹದೇವರ ಆವಿರ್ಭಾವ ದಿನದ ಉಪನ್ಯಾಸ- ಬೋಸ್ಟನ್