KN/690607 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್: Difference between revisions

 
(No difference)

Latest revision as of 11:48, 12 May 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಇಲ್ಲಿಗೆ ಬಂದರೆ, ನೀವು ಶ್ರವಣ ಮಾಡಿ ಮತ್ತು ಜಪ ಮಾಡಿದರೆ, ಆಗ ಕ್ರಮೇಣವಾಗಿ ..... ಕೃಷ್ಣನು ನಿಮ್ಮೊಳಗೆ ಇದ್ದಾನೆ. ಅವನು ನಿಮ್ಮ ಹೃದಯದಲ್ಲಿ ಸ್ನೇಹಿತನಾಗಿ ಕುಳಿತಿದ್ದಾನೆ, ಶತ್ರುವಾಗಿ ಅಲ್ಲ. ಕೃಷ್ಣನು ಯಾವಾಗಲೂ ನಿಮ್ಮ ಸ್ನೇಹಿತ. ಸುಹೃದಂ ಸರ್ವ- ಭೂತಾನಾಮ್ (ಭ.ಗೀ- ೫.೨೯). ನೀವು ಸ್ನೇಹಿತರ ಜೊತೆ ಮಾತನಾಡಲು, ಹಾಸ್ಯ ಮಾಡಲು, ಪ್ರೀತಿಸಲು ಸ್ನೇಹಿತರನ್ನು ಹುಡುಕುತ್ತಿದ್ದೀರಿ. ಕೃಷ್ಣ ಆ ಉದ್ದೇಶಕ್ಕಾಗಿಯೇ ಅಲ್ಲಿ ಕುಳಿತಿದ್ದಾನೆ. ನೀವು ಕೃಷ್ಣನನ್ನು ಪ್ರೀತಿಸಿದರೆ, ಕೃಷ್ಣನೊಂದಿಗೆ ಸ್ನೇಹ ಬೆಳೆಸಿದರೆ, ನೀವು ಕೃಷ್ಣನನ್ನು ಪ್ರೀತಿಸಿದರೆ, ನಿಮ್ಮ ಜೀವನವು ಯಶಸ್ವಿಯಾಗುತ್ತದೆ. ನೀವು ಬೇರೆ ಯಾವುದೇ ಸ್ನೇಹಿತನನ್ನು ಹುಡುಕಬೇಕಾಗಿಲ್ಲ. ಸ್ನೇಹಿತ ಈಗಾಗಲೇ ಇದ್ದಾನೆ, ನೀವು ಹುಡುಗನಾಗಿರಬಹುದು ಅಥವಾ ಹುಡುಗಿಯಾಗಿರಬಹುದು, ನಿಮ್ಮೊಳಗೆ ನೀವು ಒಳ್ಳೆಯ ಸ್ನೇಹಿತನನ್ನು ಕಂಡುಕೊಳ್ಳುತ್ತೀರಿ. ನೀವು ಈ ಸ್ನೇಹಿತನನ್ನು ಅರಿತುಕೊಂಡಾಗ ಅದು ಯೋಗ ಪದ್ದತಿ. ಈ ಸ್ನೇಹಿತ ಎಷ್ಟು ಒಳ್ಳೆಯವನೆಂದರೆ ಅವನ ಬಗ್ಗೆ ಕೇಳಲು ನೀವು ಸ್ವಲ್ಪ ಒಲವು ತೋರಿದ ತಕ್ಷಣ, ಶೃಣ್ವತಾಂ ಸ್ವ- ಕತಾಃ - ಕೃಷ್ಣನ ಬಗ್ಗೆ, ಬೇರೆ ಯಾವುದೇ ಅಸಂಬದ್ಧ ಮಾತುಗಳಲ್ಲ, ಕೇವಲ ಕೃಷ್ಣನ ಬಗ್ಗೆ- ಆಗ ಕೃಷ್ಣನಿಗೆ ಎಷ್ಟೋ ಸಂತೋಷವಾಗುವುದು. ಅವನು ನಿಮ್ಮೊಳಗೆ ಇದ್ದಾನೆ. ಶೃಣ್ವತಾಂ ಸ್ವ- ಕತಾಃ ಕೃಷ್ಣ ಪುಣ್ಯ -ಶ್ರವಣ -ಕೀರ್ತನಃ, ಹ್ರದ್ಯ್ ಅಂತಃ ಸ್ಥಹ್ (ಶ್ರೀ ಮ ಭಾ ೧.೨.೧೭). ಹೃತ್ ಅಂದರೆ ಹೃದಯ. ಅಂತಃ ಸ್ಥೋ. ಅಂತಃ ಸ್ಥೋ ಎಂದರೆ 'ಯಾರು ನಿಮ್ಮ ಹೃದಯದಲ್ಲಿ ಕುಳಿತಿರುವರೋ' ಎಂದರ್ಥ."
690607 - ಉಪನ್ಯಾಸ ಶ್ರೀ ಚೈ ಚ ಆದಿ ೧೭.೨೧ - ನವ ವೃಂದಾವನ, ಯು ಯಸ್ ಏ