KN/690616 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ನಾವು ಜೀವಾತ್ಮಗಳು. ನಾವು ಯಾವುದೇ ಐಹಿಕ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ. ನಮ್ಮ ಸಹಜ ಸ್ಥಿತಿ ಆರೋಗ್ಯಕರ ಜೀವನ, ಜ್ವರದಿಂದ ಬಳಲುತ್ತಿರುವುದಲ್ಲ. ಅದು ಅಸಹಜ ಸ್ಥಿತಿ. ಒಬ್ಬನು ಜ್ವರದಿಂದ ಬಳಲುತ್ತಿದ್ದರೆ, ಅದು ಅವನ ಸಹಜ ಜೀವನವಲ್ಲ, ಅದು ತಾತ್ಕಾಲಿಕ ಅಸಹಜ ಜೀವನ. ವಾಸ್ತವ ಜೀವನವು ಆರೋಗ್ಯಕರ ಜೀವನ. ನಾವು ಚೆನ್ನಾಗಿ ತಿನ್ನಬೇಕು, ನಾವು ಚೆನ್ನಾಗಿ ಮಲಗಬೇಕು, ನಾವು ಬಹಳ ಚೆನ್ನಾಗಿ ಕೆಲಸ ಮಾಡಬೇಕು, ನಮ್ಮ ಮೆದುಳು ಬಹಳ ಚೆನ್ನಾಗಿ ಕೆಲಸ ಮಾಡಬೇಕು, ಇವು ಆರೋಗ್ಯಕರ ಸಂಕೇತಗಳು. ಆದರೆ ನಾನು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದಾಗ, ನನಗೆ ಚೆನ್ನಾಗಿ ನಿದ್ದೆ ಮಾಡಲು ಆಗದಿದ್ದಾಗ, ಚೆನ್ನಾಗಿ ಕೆಲಸ ಮಾಡಲು ಆಗದಿದ್ದಾಗ, ನನ್ನ ಮೆದುಳಿನಿಂದ ತುಂಬಾ ಚೆನ್ನಾಗಿ ಕೆಲಸ ಮಾಡಲು ಆಗದಿದ್ದಾಗ, ಅಸಹಜ ಸ್ಥಿತಿ ಎಂದರ್ಥ. ಆ ಸಮಯದಲ್ಲಿ ಅವನಿಗೆ ತಜ್ಞ ವೈದ್ಯರ ಚಿಕಿತ್ಸೆಯ ಅಗತ್ಯವಿರುತ್ತದೆ. ಅದೇ ರೀತಿ ಇಲ್ಲಿ ತಜ್ಞ ವೈದ್ಯ ನಾರದ ಮುನಿ ಇದ್ದಾರೆ. ಮತ್ತು ಅವರು ತಮ್ಮ ಶಿಷ್ಯನನ್ನು ತಜ್ಞನನ್ನಾಗಿಸಲು ಸಲಹೆ ನೀಡುತ್ತಿದ್ದಾರೆ. ಇದಕ್ಕೆ ಪರಂಪರಾ ವ್ಯವಸ್ಥೆ ಎಂದು ಕರೆಯುತ್ತಾರೆ.
690616 - ಉಪನ್ಯಾಸ SB 01.05.13 - New Vrindaban, USA