KN/690908 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹ್ಯಾಂಬರ್ಗ್: Difference between revisions

 
(No difference)

Latest revision as of 13:16, 22 August 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೊಲಗಳು, ಅವು ಒಬ್ಬ ಬೇಟೆಗಾರನನ್ನು ಎದುರಿಸಿದಾಗ ಮತ್ತು 'ಈಗ ನನ್ನ ಜೀವವು ಅಪಾಯದಲ್ಲಿದೆ' ಎಂದು ಅದು ಅರ್ಥಮಾಡಿಕೊಂಡು, ಅದು ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತದೆ. ಅದು 'ಸಮಸ್ಯೆ ಪರಿಹಾರವಾಗಿದೆ' ಎಂದು ಭಾವಿಸುತ್ತದೆ. (ನಗು) ಮತ್ತು ಶಾಂತಿಯುತವಾಗಿ ಅದರ ವಧೆಯಾಗುವುದು. (ನಗು) ನೋಡಿದಿರಾ? ಅಂತೆಯೇ ಅವರ, ಅಲ್ಲಿ ಸಮಸ್ಯೆಗಳು ಇವೆ, ಆದರೆ ನಾವು ಕಣ್ಣು ಮುಚ್ಚಿಕೊಂಡಿರುತ್ತೇವೆ : 'ಅಯ್ಯೋ, ತೊಂದರೆ ಇಲ್ಲ, ನಾವು ತುಂಬಾ ಸಂತೋಷವಾಗಿದ್ದೇವೆ' ಅಷ್ಟೆ. (ನಗು) ಆದ್ದರಿಂದ ಇದನ್ನು ಮಾಯೆ ಎಂದು ಕರೆಯಲಾಗುತ್ತದೆ. ಸಮಸ್ಯೆಯು ಪರಿಹಾರವಾಗಿಲ್ಲ, ಆದರೆ ಕಣ್ಣು ಮುಚ್ಚಿಕೊಂಡಿರುವುದರಿಂದ ಸಮಸ್ಯೆ ಬಗೆಹರಿದಿದೆ ಎಂದು ಅವರು ಅಂದುಕೊಂಡಿದ್ದಾರೆ ಅಷ್ಟೆ. ಈಗ, ಇಲ್ಲಿ ಸಮಸ್ಯೆಗೆ ಪರಿಹಾರವಿದೆ, ಕೃಷ್ಣನು ಹದಿನಾಲ್ಕನೆಯ ಶ್ಲೋಕ, ಭಗವದ್ಗೀತೆಯ ಏಳನೇ ಅಧ್ಯಾಯದಲ್ಲಿ ಹೇಳಿದಂತೆ: "ಭೌತಿಕ ಪ್ರಕೃತಿಯ ನಿಯಮಗಳು ನೀಡುವ ಸಮಸ್ಯೆಗಳನ್ನು ಮೀರಿಸುವುದು ತುಂಬಾ ಕಷ್ಟ, ಆದರೆ ನನಗೆ ಯಾರು ಶರಣಾಗುವನೋ ಅವನು ಜಯಿಸುತ್ತಾನೆ." ಆದ್ದರಿಂದ ನಾವು ಜೀವನದ ಸಮಸ್ಯೆಗಳನ್ನು ಪರಿಹರಿಸಲು ಈ ಕೃಷ್ಣ ಪ್ರಜ್ಞೆಯನ್ನು ಕಲಿಸುತ್ತಿದ್ದೇವೆ."
690908 - ಸಂಭಾಷಣೆ - ಹ್ಯಾಂಬರ್ಗ್