KN/690913b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಟಿಟನ್ಹರ್ಸ್ಟ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಸಸ್ಯ ಸಾಮ್ರಾಜ್ಯದಲ್ಲಿ ಅನೇಕ ಆಹಾರ ಪದಾರ್ಥಗಳನ್ನು ಹೊಂದಿದ್ದೇವೆ, ಮತ್ತು ಕೃಷ್ಣನು ನಿಮ್ಮನ್ನು ಕೇಳುತ್ತಾನೆ ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ (ಭ.ಗೀ 9.26). 'ಯಾರಾದರೂ ನನಗೆ ಅರ್ಪಿಸಿದರೆ...' ಇದು ಸಾರ್ವತ್ರಿಕ. ಪತ್ರಂ ಎಂದರೆ ಎಲೆ. ಎಲೆಯ ಹಾಗೆಯೇ — ಪುಷ್ಪಂ, ಹೂವು. ಮತ್ತು ಪತ್ರಂ ಪುಷ್ಪಂ ಫಲಂ. ಫಲಂ ಎಂದರೆ ಹಣ್ಣು. ತೋಯಂ ಎಂದರೆ ನೀರು. ಆದ್ದರಿಂದ ಯಾವುದೇ ಬಡವನು ಕೂಡ ಕೃಷ್ಣನಿಗೆ ಅರ್ಪಿಸಬಹುದು. ಐಷಾರಾಮಿ ಆಹಾರ ಪದಾರ್ಥಗಳ ಅಗತ್ಯವಿಲ್ಲ, ಆದರೆ ಇದು ಕಡು ಬಡವನಿಗೋಸ್ಕರ. ಬಡವರಲ್ಲಿ ಅತ್ಯಂತ ಬಡವನೂ ಕೂಡ ಈ ನಾಲ್ಕು ವಸ್ತುಗಳನ್ನು ಕಲೆಹಾಕಬಹುದು — ಒಂದು ಎಲೆ, ಒಂದು ಹೂವು, ಒಂದು ಹಣ್ಣು ಮತ್ತು ಸ್ವಲ್ಪ ನೀರು. ಪ್ರಪಂಚದ ಯಾವುದೇ ಮೂಲೆಯಲ್ಲೂ. ಆದ್ದರಿಂದ ಅವನು ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ಎಂದು ಸೂಚಿಸುತ್ತಿದ್ದಾನೆ: 'ನನಗೆ ಯಾರಾದರೂ ಪ್ರೀತಿ ಮತ್ತು ಭಕ್ತಿಯಿಂದ ಅರ್ಪಿಸಿದರೆ...' ತದಹಂ ಭಕ್ತ್ಯುಪಹೃತಮ್. 'ಪ್ರೀತಿ ಮತ್ತು ಭಕ್ತಿಯಿಂದ ಅದನ್ನು ನನ್ನ ಬಳಿಗೆ ತಂದಿರುವುದರಿಂದ', ಅಶ್ನಾಮಿ, 'ನಾನು ತಿನ್ನುತ್ತೇನೆ'."
690913 - ಉಪನ್ಯಾಸ SB 05.05.01-2 - ಟಿಟನ್ಹರ್ಸ್ಟ್