KN/690917 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಂಡನ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಬ್ಬ ಆತ್ಮ, ದೇವೋತ್ತಮ ಪರಮಪುರುಷನ ಭಾಗವಾಗಿರುವುದರಿಂದ, ಸ್ವಭಾವತಃ ಅವನು ಬಹಳ ಶಕ್ತಿಶಾಲಿ. ಎಷ್ಟು ಆಧ್ಯಾತ್ಮಿಕ ಶಕ್ತಿ ನಮ್ಮ ಬಳಿ ಇದೆ ಎಂದು ನಮಗೆ ತಿಳಿದಿಲ್ಲ, ಆದರೆ ಅದು ಐಹಿಕ ಹೊದಿಕೆಯಿಂದ ನಿಗ್ರಹಿಸಲ್ಪಟ್ಟಿದೆ. ಈ ಬೆಂಕಿಯಂತೆ. ಬೆಂಕಿಯಲ್ಲಿ ಹೆಚ್ಚು ಬೂದಿ ಇದ್ದರೆ, ಬೆಂಕಿಯ ಶಾಖವನ್ನು ಸರಿಯಾಗಿ ಅನುಭವಿಸಲಾಗುವುದಿಲ್ಲ. ಆದರೆ ನೀವು ಬೂದಿಯನ್ನು ಸರಿಸಿ ಗಾಳಿಯನ್ನು ಊದಿದರೆ, ಮತ್ತು ಅದು ಉರಿಯುತ್ತಿರುವಾಗ, ನೀವು ಸರಿಯಾದ ಶಾಖವನ್ನು ಪಡೆಯುತ್ತೀರಿ ಮತ್ತು ನೀವು ಅದನ್ನು ಅನೇಕ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಅಂತೆಯೇ, ನಾವು ಆತ್ಮರಾಗಿರುವುದರಿಂದ, ನಮಗೆ ಅಪಾರ ಶಕ್ತಿ ಇದೆ, ಮತ್ತು ಭಗವಂತನು ಪರಮ ಚೇತನ ಆತ್ಮ, ಆದ್ದರಿಂದ ಭಗವಂತನ ಬಳಿ ಎಷ್ಟು ಶಕ್ತಿಯಿದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ.
690917 - ಉಪನ್ಯಾಸ SB 05.05.02 - ಲಂಡನ್