KN/710204b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಯಂ ಏವೈಷ ವೃಣುತೇ... ನಾಯಮ್ ಆತ್ಮಾ ಪ್ರವಚನೇನ ಲಾಭ್... (ಕಠ ಉಪನಿಷದ್ 1.2.23). ಇದೇ ವೈದಿಕ ಆದೇಶ. ಕೇವಲ ಮಾತನಾಡುವ ಮೂಲಕ, ಉತ್ತಮ ಭಾಷಣಕಾರ ಅಥವಾ ಉಪನ್ಯಾಸಕರಾಗುವುದರಿಂದ, ನೀವು ಪರಮಾತ್ಮನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾಯಂ ಆತ್ಮಾ ನ ಮೇಧಯಾ. ತುಂಬಾ ಒಳ್ಳೆಯ ಮೆದುಳನ್ನು ಹೊಂದಿದ್ದೀರಿ ಅಂದ ಮಾತ್ರಕ್ಕೆ ನೀವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಅಂದುಕೊಂಡಿದ್ದೀರಾ? ಇಲ್ಲ. ನ ಮೇಧಯಾ. ನಾಯಮ್ ಆತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ. ಹಾಗಾದರೆ ಹೇಗೆ? ಯಮ್ ಏವೈಷ ವೃಣುತೇ ತೇನ ಲಭ್ಯಃ-ಲಭ್ಯಃ (ಕಠ ಉಪನಿಷದ್ 2.2) ʼದೇವೋತ್ತಮ ಪರಮ ಪುರುಷನು ಮೆಚ್ಚಿದ ವ್ಯಕ್ತಿ ಯಾರೋ, ಅವನು ಅರ್ಥಮಾಡಿಕೊಳ್ಳಬಲ್ಲನು.ʼ ಅವನು ಅರ್ಥಮಾಡಿಕೊಳ್ಳಬಲ್ಲನು. ಇಲ್ಲದಿದ್ದರೆ ಯಾರೂ ಅರ್ಥಮಾಡಿಕೊಳ್ಳಲಾರರು.”
710204 - ಉಪನ್ಯಾಸ SB 06.03.12-15 - ಗೋರಖ್ಪುರ