KN/710218 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಪ್ರಪಂಚದಲ್ಲಿ ಆನಂದದ, ಬ್ರಹ್ಮಾನಂದದ ಪ್ರತಿಬಿಂಬವಿದೆ. ಆದರೆ ಅದು ಮಿನುಗುತ್ತಿದೆ, ತಾತ್ಕಾಲಿಕವಾಗಿದೆ. ಆದ್ದರಿಂದ, ಇದನ್ನು ಶಾಸ್ತ್ರಗಳಲ್ಲಿ ‘ರಮಂತೆ ಯೋಗಿನೋ 'ನಂತೇ’, ಎಂದು ಹೇಳಲಾಗಿದೆ. ಯೋಗಿಗಳು… ಯೋಗಿ ಎಂದರೆ ಅತೀಂದ್ರಿಯ ಸ್ಥಾನವನ್ನು ಅರಿತುಕೊಳ್ಳುವವರು, ಅವರನ್ನು ಯೋಗಿಗಳು ಎಂದು ಕರೆಯಲಾಗುತ್ತದೆ. ಅವರನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು: ಜ್ಞಾನಿಗಳು, ಹಠ-ಯೋಗಿಗಳು, ಮತ್ತು ಭಕ್ತ-ಯೋಗಿಗಳು. ಇವರೆಲ್ಲರನ್ನೂ ಯೋಗಿಗಳು ಎಂದು ಕರೆಯಲಾಗುತ್ತದೆ. ಆದ್ದರಿಂದ, ‘ರಮಂತೇ ಯೋಗಿನೋ ಅನಂತೇ.’ ಅಪರಿಮಿತವಾದುದನ್ನು ಮುಟ್ಟುವುದೇ ಯೋಗಿಗಳ ಆನಂದದ ಗುರಿಯಾಗಿದೆ."
710218 - ಉಪನ್ಯಾಸ - ಗೋರಖ್ಪುರ