KN/720118 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಜೈಪುರ

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸಂತ ವ್ಯಕ್ತಿಯ ಕರ್ತವ್ಯವೆಂದರೆ 'ಪ್ರಜಾ': ನಾಗರಿಕರು, ಅವರು ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂತೋಷವಾಗುವಂತಹಾ ವ್ಯವಸ್ಥೆಯಲ್ಲಿ ಅವರನ್ನು ರಕ್ಷಿಸುವುದು. ಇದು ಸಂತನ ಕರ್ತವ್ಯಗಳಲ್ಲಿ ಒಂದಾಗಿದೆ. 'ನಾನು ಹಿಮಾಲಯಕ್ಕೆ ಹೋಗಿ ಮೂಗು ಒತ್ತಿಕೊಂಡು ಮುಕ್ತಿ ಹೊಂದುತ್ತೇನೆ' ಎನ್ನುವುದು ಸಂತ ವ್ಯಕ್ತಿಯ ಗುಣವಲ್ಲ.

ಸಂತ ವ್ಯಕ್ತಿ ಎಂದರೆ ಅವರು ನಿಜವಾದ ಜನಕಲ್ಯಾಣದಲ್ಲಿ ಆಸಕ್ತಿ ಹೊಂದಿರಬೇಕು. ಸಾರ್ವಜನಿಕ ಕಲ್ಯಾಣ ಎಂದರೆ ಪ್ರತಿಯೊಬ್ಬ ನಾಗರಿಕರು ಕೃಷ್ಣ ಪ್ರಜ್ಞೆಯನ್ನು ಹೊಂದಿರಬೇಕು. ಇದರಿಂದ ಅವರು ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂತೋಷವಾಗಿರುತ್ತಾರೆ. ನಾನು ಹೇಳುವುದೇನೆಂದರೆ ನಮ್ಮ ಕೃಷ್ಣ ಪ್ರಜ್ಞೆಯ ಆಂದೋಲನವು ಸ್ವಾರ್ಥಿ ಚಳುವಳಿಯಲ್ಲ. ಇದು ಅತ್ಯಂತ ಪರೋಪಕಾರಿ ಚಳುವಳಿಯಾಗಿದೆ. ಆದರೆ ಜನರು, ಪರೋಪಕಾರಿ ಚಳುವಳಿಯ ಹೆಸರಿನಲ್ಲಿ, ಸಾಮಾನ್ಯವಾಗಿ, ಅವರು ನಿಜವಾಗಿಯೂ ಸಂತ ವ್ಯಕ್ತಿಗಳಲ್ಲದ ಕಾರಣ, ಅವರು ಹಣವನ್ನು ಸಂಗ್ರಹಿಸಿ ಬದುಕುತ್ತಾರೆ."

720118 - ಸಂಭಾಷಣೆ - ಜೈಪುರ