KN/Prabhupada 0011 - ಕೃಷ್ಣನನ್ನು ಮನಸ್ಸಿನಿಂದ ಪೂಜಿಸಬಹುದು

Revision as of 13:42, 2 April 2015 by Rishab (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0011 - in all Languages Category:KN-Quotes - 1974 Category:KN-Quotes - L...")
(diff) ← Older revision | Latest revision (diff) | Newer revision → (diff)


Invalid source, must be from amazon or causelessmery.com

Lecture on BG 4.28 -- Bombay, April 17, 1974

ಭಕ್ತಿ-ರಸಾಮೃತ-ಸಿಂಧುವಿನಲ್ಲಿ, ಒಂದು ಕಥೆ ಇದೆ.... ಕಥೆಯಲ್ಲ. ವಾಸ್ತವ. ಇದರಲ್ಲಿ ವಿವರಿಸಿದೆ ಒಬ್ಬ ಬ್ರಹ್ಮಣ ಇದ್ದ - ಅವನು ಮಹಾನ್ ಭಕ್ತ ಎಂದು - ಅವನು ಒಂದು ಅತ್ಯಂತ ಅದ್ಭುತ ಸೇವೆ ಮಾಡಲು ಇಚ್ಛಿಸಿದ, ಅರ್ಚನೆ, ದೇವಸ್ತಾದ ಪೂಜೆಯಲ್ಲಿ. ಆದರೆ ಅವರ ಬಳಿ ಹಣವಿರಲಿಲ್ಲ ಒಂದು ದಿನ ಅವರು ಭಗವತದ ಕ್ಲಸ್ ನಲ್ಲಿ ಕುಳಿತಿದರು ಮತ್ತು ಅವನು ಕೇಳಿದ ಕೃಷ್ಣನನ್ನು ಮಾನಸಿಕವಾಗಿಯು ಸಹ ಪೂಜಿಸಬಹುದು ಎಂದು. ಆಗ ಅವನು ಈ ಅವಾಕಾಶವನ್ನು ತೆಗೆದುಕೊಂಡ ಏಕೆಂದರೆ ಅವನು ಇದರ ಬಗ್ಗೆ ಬಹಳ ದಿನಗಳಿಂದ ಯೋಚಿಸುತ್ತಿದ ಕೃಷ್ಣನನ್ನು ಹೇಗೆ ವೈಭವವಾಗಿ ಪೂಜಿಸುವುದು, ಆದರೆ ಅವನ ಬಳಿ ಹಣವಿರಲಿಲ್ಲ. ಆಗ ಅವನು, ಈ ಹಂತಕ್ಕೆ ಬಂದಾಗ, ಕೃಷ್ಣನನ್ನು ಮಾನಸಿಕವಾಗಿ ಪೂಜಿಸ ಬಹುದು ಎಂದು, ಆಮೇಲೆ ಗೋಧಾವರಿ ನದಿಯಲ್ಲಿ ಸ್ನಾನ ಮಾಡಿ, ಅವನು ಒಂದು ಮರದ ಕೆಳಗೆ ಕುಳಿತ ಮತ್ತು ಅವನು ತನ್ನ ಮನಸ್ಸಿನಲಿ ವೈಭವದ ಸಿಂಹಾಸನ ನಿರ್ಮಿಸುತ್ತಿದ, ರತ್ನಗಳಿಂದ ಅಲಂಕರಿಸಿದ ಸಿಂಹಾಸನದ ಮೇಲೆ ವಿಗ್ರಹವನ್ನು ಇಟ್ಟು, ಅವನು ಆ ವಿಗ್ರಹಕ್ಕೆ ಸ್ನಾನ ಮಾಡಿಸಿದ ಗಂಗ, ಯಮುನಾ, ಗೋಧಾವರಿ, ನರ್ಮದ, ಕಾವೇರಿ ನದಿಗಳ ನೀರಿನಿಂದ ಆಮೇಲೆ ಅವನು ಆ ವಿಗ್ರಹಕ್ಕೆ ಬಹಳ ಚೆನ್ನಾಗಿ ಅಲಂಕಾರ ಮಾಡಿ, ಆಮೇಲೆ ಅದಕೆ ಹೂವಿನ ಹಾರ ಅರ್ಪಿಸಿದ. ಆಮೇಲೆ ಅವನು ಬಹಳ ಚೆನ್ನಾಗಿ ಅಡುಗೆ ಮಾಡಿ, ಮತ್ತೆ ಅವನು ಪರಮಾನ್ನ, ಸಿಹಿ ಅನ್ನ ಅಡಿಗೆ ಮಾಡಿದ ಆದರೆ ಅವನು ಅದನ್ನು ಪರೀಕ್ಷಿಸಲು ಬಯಸಿ, ಬಹಳ ಬಿಸಿಯಿದೆಯೆ ಎಂದು ಏಕೆಂದರೆ ಪರಮಾನ್ನ ತಣ್ಣಗೆ ತೆಗೆದುಕೊಳ್ಳ ಬೇಕು. ಪರಮಾನ್ನ ಬಹಳ ಬಿಸಿಯಾಗಿ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಅವನು ತನ್ನ ಬೆರಳನ್ನು ಪರಮಾನ್ನದಲ್ಲಿ ಹಾಕಿದ ಮತ್ತು ಅವನ ಬೆರಳು ಸುಟ್ಟಿತು. ಆಗ ಅವನ ಧ್ಯಾನ ಮುರಿಯಿತು, ಏಕೆಂದರೆ ಅಲ್ಲಿ ಏನು ಇರಲಿಲ್ಲ. ಕೇವಲ ಅವನು ಎಲ್ಲವನ್ನು ತನ್ನ ಮನಸ್ಸಿನಲ್ಲೆ ಮಾಡುತ್ತಿದ್ದ. ಆದ್ದರಿಂದ..... ಆದರೆ ಅವನ ಬೆರಳು ಸುಟ್ಟಿದ್ದನ್ನು ನೋಡಿದ. ಆಗ ಅವನಿಗೆ ಆಶ್ಚರ್ಯವಾಯಿತು. ಈ ರೀತಿ, ವೈಕುಂಠದಿಂದ ನಾರಾಯಣ, ಅವನು ನಗುತ್ತಿದ್ದ ಲಕ್ಷ್ಮಿ ಕೇಳಿದಳು, "ಏಕೆ ನೀವು ನಗುತ್ತಿದ್ದಿರ?" "ನನ್ನ ಒಬ್ಬ ಭಕ್ತ ಹೀಗೆ ಪೂಜಿಸುತ್ತಿದ್ದಾನೆ. ಆದ್ದರಿಂದ ತಕ್ಷಣ ವೈಕುಂಠಕ್ಕೆ ಅವರನ್ನು ತರಲು ನನ್ನ ಜನಗಳನ್ನು ಕಳುಹಿಸಿ. " ಆದ್ದರಿಂದ ಭಕ್ತಿ-ಯೋಗ ಬಹಳ ಚೆನ್ನಾಗಿದೆ ನೀವು ದೇವರ ವೈಭವದ ಪೂಜೆ ಮಾಡಲು ಯಾವುದೇ ದಾರಿಯಿಲ್ಲದರು ಸಹ, ನೀವು ಅದನ್ನು ಮನಸ್ಸಿನಲ್ಲಿಯೆ ಮಾಡಬಹುದು. ಇದೂ ಸಹ ಸಾಧ್ಯ.