KN/Prabhupada 0019 - ನೀವು ಏನು ಕೇಳಿಸಿಕೊಳ್ಳುತ್ತಿರೋ ಅದನ್ನು ಬೇರೆಯವರಿಗೆ ಹೇಳಬೇಕು

Revision as of 17:51, 1 October 2020 by Elad (talk | contribs) (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
(diff) ← Older revision | Latest revision (diff) | Newer revision → (diff)


Jagannatha Deities Installation Srimad-Bhagavatam 1.2.13-14 -- San Francisco, March 23, 1967

ಊಹಿಸಿಕೊಳ್ಳಿ ನಿಮ್ಮಗೆ ನನ್ನನ್ನು ತಿಳಿಯಬೇಕಾದರೆ ಅಥವ ನನ್ನ ಬಗ್ಗೆ ಏನಾದರು ತಿಳಿಯಬೇಕಾದರೆ, ನೀವು ಒಬ್ಬ ಸ್ನೇಹಿತನ ಕೇಳಬಹುದು, "ಒ, ಸ್ವಾಮೀಜಿ ಹೇಗೆ?" ಅವನು ಏನೊ ಹೇಳಬಹುದು; ಇತರರೂ ಏನೋ. ಆದರೆ ನಾನೇ ನನ್ನ ಬಗ್ಗೆ ವಿವರಿಸಿದಾಗ, " ಇದು ನನ್ನ ಸ್ಥಾನ. ನಾನು ಇದು," ಅದು ಪರಿಪೂರ್ಣ ಅದು ಪರಿಪೂರ್ಣ ಆದ್ದರಿಂದ ನೀವು ಸಂಪೂರ್ಣ ದೇವೊತ್ತಮ ಪರಮ ಪುರುಷನ ಬಗ್ಗೆ ತಿಳಿಯಬೇಕಾದರೆ, ನೀವು ಉಹಿಸಲು ಸಾಧ್ಯವಿಲ್ಲ, ಅಥವ ಧ್ಯಾನಿಸುವದರಿಂದ ಇದು ಸಾಧ್ಯವಿಲ್ಲ, ಏಕೆಂದರೆ ನಮ್ಮ ಇಂದ್ರಿಯಗಳು ಅಪೂರ್ಣ ಏನು ಇದರ ಮಾರ್ಗ? ಕೇವಲ ಅವನಿಂದ ಕೇಳಿರಿ. ಆದ್ದರಿಂದ ಅವನು ದಯೆಯಿಂದ ಭಗವದ್ಗೀತ ಹೇಳಲು ಬಂದಿದ್ದಾನೆ. ಶ್ರೋತವ್ಯಃ "ಕೇವಲ ಕೇಳಲು ಪ್ರಯತ್ನಿಸಿ." ಶ್ರೋತವ್ಯಃ ಮತ್ತು ಕೀರ್ತಿತವ್ಯಸ್ ಚ. ನೀವು ಕೇವಲ ಕೃಷ್ಣ ಪ್ರಜ್ಞೆಯ ವರ್ಗದಲ್ಲಿ ಮತ್ತೆ ಮತ್ತೆ ಕೇಳಿ, ಮತ್ತು ಹೊರಗೆ ಹೋಗಿ ಮರೆತುಹೋದರೆ, ಒ, ಅದು ಒಳ್ಳಯದಲ್ಲ. ಅದು ನಿಮ್ಮನು ಸುಧಾರಿಸುವುದಿಲ್ಲ. ಹಾಗಾದರೆ ಏನು? ಕೀರ್ತಿತವ್ಯಸ್ ಚ: ನೀವು ಏನು ಕೇಳಿತೀರೊ, ಅದನ್ನು ನೀವು ಬೇರೊಬ್ಬರಿಗೆ ಹೇಳಬೇಕು." ಇದು ಪರಿಪೂರ್ಣತೆ. ಆದ್ದರಿಂದ ನಾವು ಮರಳಿ ಭಗವಂತನೆಡೆಗೆ ಸ್ಥಾಪಿಸಿದ್ದೆವೆ. ವಿಧ್ಯರ್ಥಿಗಳು ಅವಕಾಶ ಕೊಟ್ಟಿದೆ, ಅವರು ಏನು ಕೇಳುತ್ತಾರೊ, ಅವರು ಆದರ ಬಗ್ಗೆ ವಿವೇಚಿಸಿ ಅದ್ದನು ಬರೆಯಬೇಕು. ಕೀರ್ತಿತವ್ಯಸ್ ಚ. ಕೇವಲ ಕೇಳುವುದು ಅಲ್ಲ. "ಒ, ನಾನು ಲಕ್ಷಾಂತರ ವರ್ಷಗಳಿಂದ ಕೇಳುತ್ತಿದ್ದಿನಿ; ಆದರೂ, ನನಗೆ ಅರ್ಥವಾಗುವುದಿಲ್ಲ" - ಏಕೆಂದರೆ ನೀವು ಜಪಿಸುವುದಿಲ್ಲ, ನೀವು ಕೇಳಿದ್ದನ್ನು ಮತ್ತೆ ಪುನರಾವರ್ತಿಸುವುದಿಲ್ಲ. ನೀವು ಪುನರಾವರ್ತಿಸಬೇಕು. ಕೀರ್ತಿತವ್ಯಸ್ ಚ. ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೆಯಃ. ಮತ್ತು ನೀವು ಹೇಗೆ ಬರೆಯಬಹುದು ಅಥವ ನೀವು ಅವನ ನೆನೆಯದ ಹೊರತು ನೀವು ಹೇಗೆ ಮಾತನಾಡುವಿರಿ ? ನೀವು ಕೃಷ್ಣನ ಬಗ್ಗೆ ಕೇಳುತ್ತಿದ್ದಿರ; ನೀವು ಯೋಚಿಸಬೇಕು, ಆಗ ನೀವು ಮಾತಾಡಬಹುದು. ಆದ್ದರಿಂದ ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೆಯಃ.ಮತ್ತು ಪೂಜ್ಯಸ್ ಚ ಮತ್ತು ನೀವು ಪೂಜೆ ಮಾಡಬೇಕು. ಆದ್ದರಿಂದ ಪೂಜೆ ಮಾಡಲು ನಮ್ಮಗೆ ಈ ವಿಗ್ರಹ ಬೇಕು. ನಾವು ಯೋಚಿಸಬೇಕು, ನಾವು ಮಾತನಾಡಬೇಕು, ನಾವು ಕೇಳಬೇಕು, ನಾವು ಪೂಜಿಸಬೇಕು, ಪೂಜ್ಯಸ್ ಚ..... ನಂತರ ಕೆಲವೊಮ್ಮೆ? ಇಲ್ಲ ನಿತ್ಯದಾ: ದಿನವು ನಿಯಮಿತವಾಗಿ ನಿತ್ಯದಾ, ಇದೇ ಪ್ರಕ್ರಿಯೆ. ಆದ್ದರಿಂದ ಯಾರು ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುತ್ತಾರೊ, ಅವನಿಗೆ ಸಂಪೂರ್ಣ ಸತ್ಯ ಅರ್ಥವಾಗುತ್ತದೆ ಇದು ಶ್ರೀಮದ್ ಭಾಗವತದ ಸ್ಪಷ್ಟ ಘೋಷಣೆಯಾಗಿದೆ.