KN/Prabhupada 0026 - ಮೊಟ್ಟ ಮೊದಲಾಗಿ ನಿಮ್ಮನ್ನು ಕೃಷ್ಣನಿರುವ ಬ್ರಹ್ಮಾಂಡಕ್ಕೆ ವರ್ಗಾಯಿಸಲಾಗುತ್ತದೆ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0026 - in all Languages Category:KN-Quotes - 1975 Category:KN-Quotes - M...")
 
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
 
Line 7: Line 7:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|French|FR/Prabhupada 0025 - Si ce que nous offrons est authentique, il y aura un effet|0025|FR/Prabhupada 0027 - Ils ignorent qu'il y a une vie après la mort|0027}}
{{1080 videos navigation - All Languages|Kannada|KN/Prabhupada 0025 - ನೀವು ಅಪ್ಪಟವಾದುದನ್ನು ನೀಡಿದರೆ ಅದು ಕೆಲಸ ಮಾಡುತ್ತದೆ|0025|KN/Prabhupada 0027 - ಮರುಜನ್ಮವಿದೆಯೆಂದು ಅವರಿಗೆ ತಿಳಿಯದು|0027}}
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 18: Line 18:


<!-- BEGIN VIDEO LINK -->
<!-- BEGIN VIDEO LINK -->
{{youtube_right|rei1gj-V7pM|You Are First of all Transferred to the Universe Where Krishna is<br /> où Krishna est présent<br /> - Prabhupāda 0026}}
{{youtube_right|8v9wXLRoLII|ಮೊಟ್ಟ  ಮೊದಲಾಗಿ ನಿಮ್ಮನ್ನು ಕೃಷ್ಣನಿರುವ ಬ್ರಹ್ಮಾಂಡಕ್ಕೆ ವರ್ಗಾಯಿಸಲಾಗುತ್ತದೆ<br /> où Krishna est présent<br /> - Prabhupāda 0026}}
<!-- END VIDEO LINK -->
<!-- END VIDEO LINK -->



Latest revision as of 17:51, 1 October 2020



Morning Walk -- October 5, 1975, Mauritius

ಭಾರತೀಯ: ಸ್ವಾಮೀಜಿ, ನಾವು ಯಾವ ರೀತಿ ಕೆಲಸ ಮಾಡುತ್ತೇವೋ ಆ ರೀತಿ ಜನ್ಮವನ್ನು ಪಡೆಯುತ್ತೇವೆ, ಎಂದು ಹೇಳಿದೆ. ಹಾಗಾದರೆ, ನಾವು ಏನನ್ನಾದರೂ ಮಾಡಿದ್ದರೆ, ಭಗವಂತನ ನಿಯಮದ ಪ್ರಕಾರ ಜನ್ಮವನ್ನು ತಳೆಯಬೇಕು. ಪ್ರಭುಪಾದರು: ನೀವು ಜನ್ಮವನ್ನು ತಳೆಯಲೇ ಬೇಕು. ಅದು ಸತ್ಯ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ನೀವು ಮಾಡಿದ ಕೆಲಸದ ಪ್ರಕಾರ ನೀವು ಜನ್ಮವನ್ನು ತಳೆಯಬೇಕು. ಭಾರತೀಯ: ಹಾಗಾದರೆ... ಇದರ ಅರ್ಥ ನೀವು ಏನನ್ನು ಬರೆದಿದ್ದೀರೋ ಅದನ್ನು ಪಾವತಿಸಬೇಕು. ಹೌದಲ್ಲವೇ? ಹಾಗಾದರೆ ನಿಮ್ಮ ಪ್ರಕಾರ... ಪ್ರಭುಪಾದರು: ಒಂದು ವೇಳೆ, ನಿಮ್ಮ ಈ ಅಂಗಿಯು ಹರಿದು ಹೋದರೆ, ನೀವು ಹೊಸ ಅಂಗಿಯನ್ನು ಖರೀದಿಸಬೇಕು. ಆ ಹೊಸ ಅಂಗಿಯನ್ನು ನೀವು ನಿಮ್ಮಲ್ಲಿರುವ ಹಣದಿಂದ ಖರೀದಿಸಬೇಕು. ನಿಮ್ಮಲ್ಲಿ ಸಾಕಷ್ಟು ಹಣ ಇದ್ದರೆ, ನೀವು ಉತ್ತಮ ಗುಣಮಟ್ಟದ ಅಂಗಿಯನ್ನು ಖರೀದಿಸಬಹುದು. ಇಲ್ಲದೇ ಹೋದರೆ ಕಳಪೆ ಗುಣಮಟ್ಟದ ಅಂಗಿಯನ್ನು ಪಡೆಯುತ್ತೀರಿ. ಭಾರತೀಯ: ನಾನು ಏನು ಹೇಳುತ್ತಿದ್ದೇನೆಂದರೆ, ಸ್ವಾಮೀಜಿ, ನರಕವು ಸಹ ಈ ಪ್ರಪಂಚದಲ್ಲಿಯೇ ಇದೆ. ನಾವು ನಮ್ಮ ಸಾಲವನ್ನು ಎಲ್ಲಿ ತೀರಿಸಬಹುದು? ಪಾಪ ಅಥವಾ ಸಾಲ, ಇದನ್ನು ನಾವು ಎಲ್ಲಿ ಪಾವತಿಸಬಹುದು? ನರಕದಲ್ಲಿ ಸಾಧ್ಯವಿಲ್ಲ. ಪ್ರಭುಪಾದರು: ನರಕವು ನಿಮ್ಮ ಶಿಕ್ಷೆಗಾಗಿ ಇರುವ ಸ್ಥಳ. ಭಾರತೀಯ: ಹಾಗಾದರೆ ಇದು ಭೂಮಿಯ ಮೇಲೆಯೇ ಇದೆ. ಪ್ರಭುಪಾದರು: ಭೂಮಿಯಲ್ಲಿ ಏಕೆ? ಭಾರತೀಯ: ಭೂಗ್ರಹದಲ್ಲಿ ಅಲ್ಲವೇ? ಪ್ರಭುಪಾದರು: ಇಲ್ಲ. ಅದು... ಭಾರತೀಯ: ಯಾವ ಗ್ರಹದಲ್ಲಿಯಾದರೂ ಇರಬಹುದೇ? ಪ್ರಭುಪಾದರು: ಸಾವಿರಾರು ಮೈಲಿ ದೂರದಲ್ಲಿ. ಭಾರತೀಯ: ನರಕವು ಒಂದೇ ಸ್ಥಳದಲ್ಲಿ ಇದೆಯಲ್ಲವೇ? ನೀವೇನು ಹೇಳುತ್ತೀರಿ ಸ್ವಾಮೀಜಿ? ಪ್ರಭುಪಾದರು: ಹೌದು ಹೌದು, ಅಲ್ಲಿ ಬೇರೆ ಬೇರೆ ಗ್ರಹಗಳಿವೆ. ಭಾರತೀಯ: ಈ ಭೂಮಿಯಲ್ಲಿಯೇ ಬಹಳಷ್ಟು ಜನ ಕಷ್ಟಪಡುತ್ತಿದ್ದಾರೆ. ಪ್ರಭುಪಾದರು: ಅವರಿಗೆ ಮೊದಲು ನರಕದಲ್ಲಿ ತರಬೇತಿ ನೀಡಲಾಗುವುದು, ನಂತರ ಅವರು ಇಲ್ಲಿಗೆ ಬಂದು ಅದೇ ರೀತಿಯ ಜೀವನ ನಡೆಸುತ್ತಾರೆ. ಭಾರತೀಯ: ಜೀವಾತ್ಮನು ಈ ದೇಹದಿಂದ ಹೊರಗೆ ಬಂದಾಗ ಅದು ನರಕಕ್ಕೆ ಹೋಗುತ್ತದೆ ಅಥವಾ... ಪ್ರಭುಪಾದರು: ನರಕ ಲೋಕ. ಭಾರತೀಯ: ಮರಣದ ನಂತರ ಅವರು ತಕ್ಷಣ ಇನ್ನೊಂದು ಜನ್ಮ ಪಡೆಯುತ್ತಾರೆಯೇ? ಪ್ರಭುಪಾದರು: ಹೌದು, ಪಾಪಿಗಳಾದವರು ತಕ್ಷಣ ಜನ್ಮ ತಳೆಯುವುದಿಲ್ಲ. ಮೊದಲು ಅವರಿಗೆ ನರಕ ಲೋಕದಲ್ಲಿ ಕಷ್ಟಪಡುವುದು ಹೇಗೆ ಎಂಬುದರ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಮುಂದಿನ ಜನ್ಮದ ಜೀವನಕ್ಕೆ ಹೊಂದಿಕೊಂಡ ನಂತರ ಹುಟ್ಟುತ್ತಾರೆ ಮತ್ತು ಕಷ್ಟಪಡುತ್ತಾರೆ. ನೀವು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ. ನಂತರ ನೀವು ಒಬ್ಬ ಸಹಾಯಕ ಮ್ಯಾಜಿಸ್ಟ್ರೇಟ್ ಆಗಿ, ಕೆಲಸವನ್ನು ಕಲಿಯುತ್ತೀರಿ. ನಂತರ ನಿಮ್ಮನ್ನು ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡುತ್ತಾರೆ. ನೀವು ಮರಳಿ ಭಗವಂತನ ಧಾಮಕ್ಕೆ ಹೋಗಲು ಅರ್ಹರಾದರೂ ಸಹ, ನಿಮ್ಮನ್ನು ಮೊದಲು ಕೃಷ್ಣನು ಈಗ ಇರುವ ಲೋಕಕ್ಕೆ ಕಳುಹಿಸಲಾಗುವುದು ಮತ್ತು ನೀವು ಅಲ್ಲಿಗೆ ಹೊಂದಿಕೊಳ್ಳುತ್ತೀರಿ. ನಂತರ ನೀವು ನಿಜವಾದ ವೃಂದಾವನಕ್ಕೆ ಹೋಗುತ್ತೀರಿ. ಭಾರತೀಯ: ಹಾಗಾದರೆ, ನಮ್ಮ ಮರಣದ ನಂತರ... ಭಗವಂತನ ಪ್ರತಿಯೊಂದು ವ್ಯವಸ್ಥೆಯೂ ಪರಿಪೂರ್ಣ. ಪೂರ್ಣಂ. ಪೂರ್ಣಂ ಅದಃ ಪೂರ್ಣಂ ಇದಂ ಪೂರ್ಣಾತ್ ಪೂರ್ಣಂ... (Īśopaniṣad, ಈಶೋಪನಿಷತ್) ಭಗವಂತನಿಂದ ಏನು ಸೃಷ್ಟಿಸಲ್ಪಟ್ಟಿದೆಯೋ, ಅದು ಪರಿಪೂರ್ಣ.