KN/Prabhupada 0033 - ಮಹಾಪ್ರಭುಗಳ ಹೆಸರು ಪತಿತಪಾವನ

Revision as of 13:20, 17 April 2015 by Rishab (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0033 - in all Languages Category:KN-Quotes - 1975 Category:KN-Quotes - M...")
(diff) ← Older revision | Latest revision (diff) | Newer revision → (diff)


Invalid source, must be from amazon or causelessmery.com

Morning Walk -- October 4, 1975, Mauritius

ಪುಷ್ಟ ಕೃಷ್ಣ : ಈಗಿನ ಕಾಲದ ಸರ್ಕಾರಗಳು ಘೋರ ಪಾಪಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಆದರಿಂದ ಸಾಮಾನ್ಯ ಜನರಿಗೆ ಹೇಗೆ ಸುಧಾರಿಸುವುದು?

ಪ್ರಭುಪಾದ : ಹಾಗಾದರೆ ನೀವು ಸರ್ಕಾರವು ಪರಿಪೂರ್ಣವಾಗಿ ಇದೆ ಎನ್ನುವಿರಾ?

ಪುಷ್ಟ ಕೃಷ್ಣ : ಇಲ್ಲ.

ಪ್ರಭುಪಾದ: ಹಾಗಾದರೆ? ಅವರನ್ನು ಜರುಗಿಸಬೇಕು. ಸರ್ಕಾರ ಎಂದರೆ ಈಗಿನ ಕಾಲದಲ್ಲಿ ಎಲ್ಲ ಮೂಢರು. ಅವರನ್ನು ಆರಿಸಿದವರು ಮೂಢರು ಮತ್ತು ಅವರೂ ಸಹ ಮೂಢರು. ಅದೇ ಕಷ್ಟವಾಗಿದೆ. ಎಲ್ಲಿ ಹೋದರೂ ಮೂಢರೇ ಸಿಕ್ಕುತಾರೆ. ಮಂದ. ಅರ್ಥ ಕೊಟ್ಟಿದೆ ಮಂದ ಎಂದು. ನಮ್ಮ ಶಿಬಿರದಲ್ಲೂ ಸಹ ಮೂಢರೂ ಇದ್ದಾರೆ. ಸ್ವಲ್ಪ ವರದಿ ನೋಡಿ. ಅವರೂ ಸಹ ಸುಧಾರಣೆಗೆ ಬಂದ್ದಿದ್ದಾರೆ, ಅವರು ಮೂಢರು. ಅವರಿಗೆ ಅವರ ಮೂಢ ಹವ್ಯಾಸಗಳನ್ನು ಬಿಡಲಾಗುವದಿಲ್ಲ. ಆದ್ದರಿಂದ ಸಾಮಾನ್ಯವಾಗಿ ಮಂದ ಅಂತ ಹೇಳಲಾಗಿದೆ. "ಎಲ್ಲವೂ ಕೆಟ್ಟದ್ದು". ಆದರೆ ಒಂದು ವ್ಯತ್ತ್ಯಾಸ ಎಂದರೆ, ನಮ್ಮ ಶಿಬಿರದಲ್ಲಿ ಕೆಟ್ಟವರೆಲ್ಲರನ್ನು ಸುಧಾರಿಸಲಾಗುತ್ತದೆ, ಹೊರಗಡೆ ಸುಧಾರಣೆ ಇಲ್ಲ. ಅವರು ಸುಧಾರಣೆಗೊಳ್ಳುವುದು ಭರವಸೆ ಇದೆ, ಆದರೆ ಹೊರಗಡೆ ಭರವಸೆ ಇಲ್ಲ. ಅದೇ ವ್ಯತ್ತ್ಯಾಸ. ಅನ್ಯಥಾ ಎಲ್ಲರೂ ಹೀನರು. ತಾರ್ತಮ್ಯ ಮಾಡದೆ ನೀವು ಹೇಳಬಹುದು "ಮಂದಃ ಸುಮಂದ್ ಮತಯೋ" (ಶ್ರೀ. ಭಾಗ. 1.1.10) ಈಗ, ಸರಕಾರ ಹೇಗೆ ಪ್ರಶಸ್ತವಾಗಿರಲು ಸಾಧ್ಯ. ಇದು ಸಹ ಹೀನ. ಮಹಾಪ್ರಭುಗಳ ಹೆಸರು ಪತಿತ ಪಾವನ; ಎಲ್ಲ ಹೀನರನ್ನುಉದ್ಧರಿಸುತ್ತಾರೆ. ಕಲಿಯುಗದಲ್ಲಿ ಯಾರೂ ಉತ್ತಮರಿಲ್ಲ, ಎಲ್ಲರೂ ಹೀನರೇ. ನೀವು ಪ್ರಭಲರಾಗಬೇಕು, ಹೀನರನ್ನು ಎದುರಿಸಲು.