KN/Prabhupada 0040 - ಇಲ್ಲಿದ್ದಾನೆ ಪರಮಪುರುಷ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0040 - in all Languages Category:KN-Quotes - 1975 Category:KN-Quotes - L...")
 
(Vanibot #0023: VideoLocalizer - changed YouTube player to show hard-coded subtitles version)
Line 6: Line 6:
[[Category:KN-Quotes - in Japan]]
[[Category:KN-Quotes - in Japan]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0039 - Modern Leader Is Just Like A Puppet|0039|Prabhupada 0041 - Present Life, it is Full of Inauspicity|0041}}
{{1080 videos navigation - All Languages|Kannada|KN/Prabhupada 0039 - ಆಧುನಿಕ ನಾಯಕರು ಕೇವಲ ಕೈಗೊಂಬೆಯೆಂತೆ|0039|KN/Prabhupada 0041 - ಈಗಿರುವ ಜೀವನ, ಕ್ಲೇಶಮಯ|0041}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 19: Line 17:


<!-- BEGIN VIDEO LINK -->
<!-- BEGIN VIDEO LINK -->
{{youtube_right|-2CC7896HtM|ಇಲ್ಲಿದ್ದಾನೆ ಪರಮಪುರುಷ<br />- Prabhupāda 0040}}
{{youtube_right|B74v5aFb4mE|ಇಲ್ಲಿದ್ದಾನೆ ಪರಮಪುರುಷ<br />- Prabhupāda 0040}}
<!-- END VIDEO LINK -->
<!-- END VIDEO LINK -->



Revision as of 21:20, 3 February 2021



Lecture on BG 16.8 -- Tokyo, January 28, 1975

ದಶಲಕ್ಷಾಂತರ, ಕೋಟಿಯಾಂತರ ಜಿವಾತ್ಮಗಳಿವೆ, ಹಾಗು ಅವನು ಪ್ರತಿಯೊಂದರ ಹೃದಯದಲ್ಲಿ ನೆಲೆಸಿರುತ್ತಾನೆ. ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ ಜ್ಞಾನಂ ಅಪೋಹನಂ ಚ (ಭ.ಗೀ 15.15) ಅವನು ಹಾಗೆ ನಿರ್ವಹಿಸುತಿದ್ದಾನೆ. ಆದ್ದರಿಂದ ನಾವು ಅವನೂ ನಮ್ಮಂತೆಯೆ ಒಬ್ಬ ನಿಯಂತ್ರಕನೆಂದುಕೊಂಡಿದ್ದೇವೆ. ಇದು ನಮ್ಮ ತಪ್ಪುತಿಳುವಳಿಕೆ. ಅವನೂ ನಿಯಂತ್ರಕನೆ. ನಿಯಂತ್ರಕನಿದ್ದಾನೆ. ಅಮಿತ ಜ್ಞಾನ, ಅನಿಯಮಿತ ಸಹಾಯಕರು, ಅನಂತ ಶಕ್ತಿಗಳ ಜೊತೆ ಅವನು ನಿರ್ವಹಿಸುತ್ತಾನೆ. ಒಬ್ಬ ವ್ಯಕ್ತಿ ಇಷ್ಟು ಅಮಿತ ಶಕ್ತಿವಂತನಾಗಿರಬಹುದೆಂದು ತಿಳಿಯಲು ಈ ಮಾಯಾವಾದಿಗಳಿಗೆ ಆಗುವುದಿಲ್ಲ. ಆದ್ದರಿಂದ ಅವರು ಮಾಯಾವಾದಿಯಾಗುತ್ತಾರೆ. ಆವರಿಗೆ ಆಲೋಚಿಸಲಾಗುವುದಿಲ್ಲ. ಈ ಮಾಯಾವಾದಿಗಳು… ಅವರಿಗೆ ಆಲೋಚಿಸಲಾಗುವುದಿಲ್ಲ… “ಒಬ್ಬ ವ್ಯಕ್ತಿಯಾದರೆ, ಅವನು ನನ್ನಂತ ವ್ಯಕ್ತಿಯೇ ಆಗಿರಬೇಕು”, ಎಂದು ಅವರು ಕಲ್ಪಿಸಿಕೊಳುತ್ತಾರೆ. “ನಾನು ಇದನ್ನು ಮಾಡಲಾಗುವುದಿಲ್ಲ. ಆದ್ದರಿಂದ ಅವನೂ ಮಾಡಲಾಗುವುದಿಲ್ಲ.” ಆದ್ದರಿಂದ ಅವರು ಮೂಢರು. “ಅವಜಾನಂತಿ ಮಾಂ ಮೂಢಾಃ” (ಭ.ಗೀ 9.11) ಅವರು ಕೃಷ್ಣನನ್ನು ತಮ್ಮ ಜೊತೆ ಹೋಲಿಸಿಕೊಳ್ಳುತಿದ್ದಾರೆ. ಅವನು ಹೇಗೆ ಒಬ್ಬ ಪುರುಷನೊ ಅಂತೆಯೇ ಕೃಷ್ಣನೂ ಒಬ್ಬ ಪುರುಷ. ಅವನಿಗೆ ತಿಳಿಯದು. ಅವನು ಒಬ್ಬ ಪರುಷನಾದರೂ ಅನಿಯಮಿತ ಪುರುಷರನು ಪೋಷಿಸುತ್ತಾನೆ ಎಂದು ವೇದಗಳು ತಿಳಿಸುತ್ತವೆ. ಅದು ಅವರಿಗೆ ತಿಳಿಯದು. ಏಕೊ ಯೊ ಬಹೂನಾಂ ವಿದದಾತಿ ಕಾಮಾನ್. ಆ ಒಬ್ಬ ಏಕೈಕ ಪುರುಷ ದಶಲಕ್ಷಾಂತರ, ಕೋಟ್ಯಾಂತರ ಪುರುಷರನ್ನು ಪೋಷಿಸುತ್ತಾನೆ. ನಾವೆಲ್ಲರು… ಪ್ರತಿಯೊಬ್ಬರು ಪುರುಷರು. ನಾನೊಬ್ಬ ಪುರುಷ. ನೀನೂ ಪುರುಷ. ಇರುವೆ ಒಂದು ಪುರುಷ. ಬೆಕ್ಕು ಒಂದು ಪುರುಷ. ನಾಯಿ ಒಂದು ಪುರುಷ, ಹಾಗು ಹುಳ ಒಂದು ಪುರುಷ. ಮರಗಳೂ ಪುರುಷ. ಪ್ರತಿಯೊಬ್ಬರೂ ಪುರುಷ. ಪ್ರತಿಯೊಬ್ಬರೂ ಪುರುಷ. ಹಾಗು ಮತ್ತೊಬ್ಬ ಪುರುಷನಿದ್ದಾನೆ. ಅವನೆ ದೇವರು, ಕೃಷ್ಣ. ಆ ಒಬ್ಬ ಪುರುಷನು ಈ ಎಲ್ಲಾ ದಶಲಕ್ಷಾಂತರ, ಕೋಟ್ಯಾಂತರ ವೈವಿಧ್ಯ ಪುರುಷರನ್ನು ಪೋಷಿಸುತ್ತಾನೆ. ಇದು ವೈದಿಕ ಭೋ… ಏಕೊ ಯೊ ಬಹೂನಾಮ್ ವಿದದಾತಿ ಕಾಮಾನ್, ನಿತ್ಯೋ ನಿತ್ಯಾನಾಮ್ ಚೇತನಸ್ ಚೇತನಾನಾಮ್. (ಕಠಾ ಉಪನಿಷದ್ 2.2.13) ಇದೆ ಮಾಹಿತಿ.

ಮತ್ತು ಭಗವದ್ಗೀತೆಯಲ್ಲಿಯು ಶ್ರೀಕೃಷ್ಣನು ಹೇಳುತ್ತಾನೆ… ಅಹಂ ಸರ್ವಸ್ಯ ಪ್ರಭವೊ ಮತ್ತಃ ಸರ್ವಂ ಪ್ರವರ್ತತೇ ಇತಿ ಮತ್ವಾ ಭಜಂ ತೇಮಾಮ್ (ಭ.ಗೀ 10.8). ಆದ್ದರಿಂದ ಒಬ್ಬ ಭಕ್ತ ಯಾವಾಗ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಾನೊ…” ಇಲ್ಲಿದ್ದಾನೆ ಒಬ್ಬ ಪರಮಪುರುಷ, ಯಾರು ನಾಯಕನೊ, ಯಾರು ನಿಯಂತ್ರಕನೊ, ಯಾರು ಎಲ್ಲರನೂ ಪೋಷಿಸುತ್ತಾನೊ… ಆಗ ಅವನು ಪರಮಪುರುಷನಿಗೆ ಶರಣಾಗತನಾಗುತ್ತಾನೆ ಮತ್ತು ಅವನ ಭಕ್ತನಾಗುತ್ತಾನೆ.