KN/Prabhupada 0041 - ಈಗಿರುವ ಜೀವನ, ಕ್ಲೇಶಮಯ

Revision as of 21:20, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)


Lecture on BG 9.1 -- Melbourne, June 29, 1974

ಸಂಪೂರ್ಣ ಜ್ಞಾನ. ಆದ್ದರಿಂದ ನೀವು ಭಗವದಗ್ಗೀತೆಯನ್ನು ಅಧ್ಯಯನಮಾಡಿದರೆ ಸಂಪೂರ್ಣ ಜ್ಞಾನವನ್ನು ಪಡೆಯುವಿರಿ.

ಆದ್ದರಿಂದ ಭಗವಂತನು ಏನು ಹೇಳುತ್ತಾನೆ?

ಇದಂ ತು ತೇ ಗುಹ್ಯತಮಮ್
ಪ್ರವಕ್ಷ್ಯಾಮಿ ಅನಸೂಯವೇ
(ಭ.ಗೀ 9.1)

ಭಗವಾನ್ ಕೃಷ್ಣನು ಅರ್ಜುನನಿಗೆ ಬೋಧಿಸುತ್ತಿದ್ದಾನೆ. ಒಂಬತ್ತನೆ ಅಧ್ಯಾಯದಲ್ಲಿ ಅವನು ಹೇಳುತ್ತಾನೆ, “ನನ್ನ ಪ್ರೀತಿಯ ಅರ್ಜುನ, ನಾನು ಈಗ ನಿನ್ನೊಂದಿಗೆ ಅತ್ಯಂತ ರಹಸ್ಯತಮ ಜ್ಞಾನವನ್ನು ಮಾತನಾಡುತ್ತಿದ್ದೇನೆ, "ಗುಹ್ಯತಮಮ್.” ಗುಹ್ಯತಮಮ್ ಅಂದರೆ ಸರ್ವೋತ್ಕೃಷ್ಠ. ಮೂಲ, ತುಲನಾತ್ಮಕ ಹಾಗು ಸರ್ವೋತ್ಕೃಷ್ಟ. ಸಂಸ್ಕೃತದಲ್ಲಿ ತರ-ತಮ. ತರ ತುಲನಾತ್ಮಕ, ಹಾಗು ತಮ ಅಂದರೆ ಸರ್ವೋತ್ಕೃಷ್ಟ. ಆದ್ದರಿಂದ ಇಲ್ಲಿ ಭಗವಾನ್ ಹೇಳುತ್ತಾನೆ, ಪರಿಪೂರ್ಣನಾದ ದೇವೋತ್ತಮ ಪರಮಪುರುಷನು ಹೇಳುತ್ತಾನೆ, ಇದಂ ತು ತೇ ಗುಹ್ಯತಮಮ್ ಪ್ರವಕ್ಷ್ಯಾಮಿ. “ನಾನು ಈಗ ನಿನ್ನೊಂದಿಗೆ ಅತ್ಯಂತ ರಹಸ್ಯತಮ ಜ್ಞಾನವನ್ನು ಮಾತನಾಡುತ್ತಿದ್ದೇನೆ, ಗುಹ್ಯತಮಮ್.” ಜ್ಞಾನಂ ವಿಜ್ಞಾನ ಸಹಿತಂ. ಜ್ಞಾನವೆಂದರೆ ಸಂಪೂರ್ಣ ಜ್ಞಾನದಿಂದಿರುವುದು, ಅದು ಕಲ್ಪನೆಯಲ್ಲ. ಜ್ಞಾನಂ ವಿಜ್ಞಾನ ಸಹಿತಂ. ವಿಜ್ಞಾನವೆಂದರೆ ಪ್ರಾಯೋಗಿಕ ನಿರೂಪಣೆ. ಆದ್ದರಿಂದ ಜ್ಞಾನಂ ವಿಜ್ಞಾನ ಸಹಿತಂ ಯಗ್ ಜ್ಞಾತ್ವಾ. ನೀನು ಈ ಜ್ಞಾನವನ್ನು ಕಲಿತುಕೊಂಡರೆ, ಯಗ್ ಜ್ಞಾತ್ವಾ ಮೋಕ್ಷ್ಯಸೇ ಅಶುಭಾತ್. ಅಶುಭಾತ್. ಮೋಕ್ಷ್ಯಸೇ ಅಂದರೆ ನಿನಗೆ ಮುಕ್ತಿ ದೊರಕುತ್ತದೆ ಎಂದು. ಅಶುಭಾತ್ ಅಂದರೆ ಕ್ಲೇಶಮಯ. ಕ್ಲೇಶಮಯ.

ಆದ್ದರಿಂದ ನಮ್ಮ ಈಗಿರುವ ಜೀವನ, ಈಗಿರುವ ಕ್ಷಣದಲ್ಲಿ, ಈಗಿರುವ ಜೀವನವೆಂದರೆ ಈ ಭೌತಿಕ ದೇಹವನ್ನು ಹೊಂದಿರುವವರೆಗೂ…ಅದರ ತುಂಬ ಕ್ಲೇಶಗಳೆ. ಮೋಕ್ಷ್ಯಸೇ ಅಶುಭಾತ್. ಅಶುಭಾತ್ ಅಂದರೆ ಕ್ಲೇಶಮಯ.