KN/Prabhupada 0046 - ನೀನು ಮೃಗವಾಗಬೇಡ - ಪ್ರತಿರೋಧಿಸು

Revision as of 21:21, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)


Morning Walk -- May 28, 1974, Rome

ಯೋಗೇಶ್ವರ: ಭಗವಾನ್ ಹೋಗುವ ಮುನ್ನ ನನಗೆ ಪ್ರಶ್ನೆಗಳ ಪಟ್ಟಿಯೊಂದನ್ನು ಬಿಟ್ಟು ಹೋಗಿದ್ದಾರೆ. ನಿಮ್ಮನ್ನು ಕೆಲವು ಪ್ರಶ್ನೆಗಳು ಕೇಳಲೆ?

ಪ್ರಭುಪಾದ: ಸರಿ.

ಯೋಗೇಶ್ವರ: ಈಗ ಹೆಚ್ಚಾಗಿ ಪುನಃಸಂಭವಿಸುತ್ತಿರುವ ಸಮಸ್ಯೆ ಎಂದರೆ ಉಗ್ರವಾದಿಗಳು ಕಂಡುಬರುತ್ತಿದ್ದಾರೆ, ಕೆಲವು ರಾಜಕೀಯ ಕಾರಣಗಳಿಂದ … ಅಲ್ಲ ಹೆಚ್ಚಾಗಿ ರಾಜಕೀಯ ಕಾರಣಗಳಿಂದ ಪ್ರೇರಿತ ವ್ಯಕ್ತಿಗಳು.

ಪ್ರಭುಪಾದ: ಹೌದು, ಈ ಪೂರ್ಣ ಮೂಲ ತತ್ವವನ್ನು ನಾನು ಆಗಲೆ ವಿವರಿಸಿದ್ದೇನೆ. ಏಕೆಂದರೆ ಅವರು ಮೃಗಗಳು, ಕೆಲವೊಮ್ಮೆ ಕ್ರೂರ ಮೃಗಗಳು. ಅಷ್ಟೇ. ಮೃಗಗಳು.. ಹಲವಾರು ವಿಧವಾದ ಮೃಗಗಳಿವೆ. ಹುಲಿಗಳು ಹಾಗು ಸಿಂಹಗಳು, ಅವು ಕ್ರೂರ ಮೃಗಗಳು. ಆದರೆ ನೀವು ಮೃಗಗಳ ಸಮಾಜದಲ್ಲಿದ್ದೀರಿ. ಆದ್ದರಿಂದ ಮೃಗಗಳ ಸಮಾಜದಲ್ಲಿ ಬೇರೊಂದು ಉಗ್ರ ಮೃಗ ಬಂದರೆ ಅಚ್ಚರಿಪಡುವಂತದೆನಲ್ಲ. ಏನಾದರು ನೀವು ಮೃಗಗಳ ಸಮಾಜದಲ್ಲಿ ಬಾಳುತ್ತಿದ್ದೀರಿ. ಆದ್ದರಿಂದ ನೀನು ಆದರ್ಶ ಮನುಷ್ಯನಾಗು. ಇದೊಂದೆ ಪರಿಹಾರ. ನಾವು ಆಗಲೆ ಘೋಷಿಸಿದ್ದೇವೆ ಇದು ಮೃಗಗಳ ಸಮಾಜ. ಬೇರೊಂದು ಉಗ್ರ ಮೃಗ ಬಂದರೆ ಅಚ್ಚರಿಪಡುವಂತದ್ದೇನು? ಏನಾದರು ಅದು ಮೃಗಗಳ ಸಮಾಜ. ಹುಲಿಯೆ ಬಂದರೂ, ಆನೆಯೆ ಬಂದರೂ, ಅವೆಲ್ಲ ಮೃಗಗಳೆ. ಆದರೆ ನೀನು ಮೃಗವಾಗಬೇಡ. ಪ್ರತಿರೋಧಿಸು. ಅದೇ ಬೇಕಾಗಿರುವುದು. ಮಾನವನನ್ನು ವಿವೇಕಯುಕ್ತ ಪ್ರಾಣಿಯೆಂದು ಕರೆಯಲಾಗುತ್ತದೆ. ನೀವು ವಿಚಾರಪರತೆಯನ್ನು ಪಡೆಯಬೇಕಾಗಿದೆ. ನೀವು ಇನ್ನೊಂದು ಮೃಗವಾಗಿ ಉಳಿದರೆ, ಮತ್ತೊಂದು ಬಗೆಯ ಮೃಗವಾದರೆ, ಅದು ನಿಮಗೆ ಉಪಯೋಗವಾಗುವುದಿಲ್ಲ. ನೀವು ನಿಜವಾದ ಮನುಷ್ಯನಾಗಬೇಕು. ಆದರೆ ‘ದುರ್ಲಬಂ ಮಾನುಷ ಜನ್ಮ ತದ್ ಅಪಿ ಅದ್ರುವಮ್ ಅರ್ಥದಮ್’ (ಶ್ರೀ.ಭಾ 7.6.1).

ಈ ಜನರಿಗೆ ಜೀವನದ ಗುರಿಯೇನೆಂದು ತಿಳಿದಿಲ್ಲ. ಮಾನವನ ಗುರಿಯೇನೆಂದು ಅವರಿಗೆ ಗೊತ್ತಿಲ್ಲ. ಆದ್ದರಿಂದ ಅವರ ಪಶು ಪ್ರವೃತ್ತಿಗಳನ್ನು ಹೀಗೆ ಹಾಗೆ ಹೀಗೆ ಹಾಗೆ ಸರಿಹೊಂದಿಸಿಕೊಳ್ಳುತ್ತಿದ್ದಾರೆ. ಅವರು ನಗ್ನ ನೃತ್ಯವನ್ನು ನೋಡಲು ಹೋಗುವ ಹಾಗೆ. ಆ ಪಶು ಪ್ರವೃತ್ತಿ… ದಿನ ಅವನ ಪತ್ನಿಯನ್ನು ನಗ್ನವಾಗಿ ನೋಡುತ್ತಿದ್ದಾನೆ ಆದರೂ ಕೂಡ ಸ್ವಲ್ಪ ಶುಲ್ಕ ಕೊಟ್ಟು ಅವನು ನಗ್ನ ನೃತ್ಯವನ್ನು ನೋಡಲು ಹೋಗುತ್ತಿದ್ದಾನೆ. ಏಕೆಂದರೆ ಈ ಪಶುತ್ವವನ್ನು ಬಿಟ್ಟು ಅವನಿಗೆ ಬೇರೇನೂ ಕಾರ್ಯಗಳಿಲ್ಲ. ಅಲ್ಲವೇ? ಬೇರೆ ಹೆಣ್ಣನು ನಗ್ನವಾಗಿ ನೋಡಲು ಹೋಗುವುದರಲ್ಲಿ ಉಪಯೋಗವೇನು? ನೀನು ದಿನ, ಪ್ರತಿ ರಾತ್ರಿ, ನಿನ್ನ ಪತ್ನಿಯನ್ನು ನಗ್ನವಾಗಿ ನೋಡುತಿದ್ದೀಯ. ನೀನು ಏಕೆ... ಏಕೆಂದರೆ ಅವರಿಗೆ ಬೇರೇನೂ ಕಾರ್ಯಗಳಿಲ್ಲ. ಮೃಗಗಳು. ಪನಃ ಪುನಶ್ ಚರ್ವಿತಮ್ ಚರ್ವಣಾಣಾಮ್ (ಶ್ರೀ. ಭಾ 7.5.30) ನಾಯಿಗೆ ರುಚಿ ಗೊತ್ತಾಗುವುದಿಲ್ಲ. ಅದು ಸುಮ್ಮನೆ ಒಂದು ಮೂಳೆಯನ್ನು ಹೀಗೆ ಹಾಗೆ, ಹೀಗೆ ಹಾಗೆ, ಅಗಿಯುತ್ತಿರುತ್ತದೆ. ಏಕೆಂದರೆ ಅದು ಒಂದು ಪಶು. ಅದಕ್ಕೆ ಬೇರೇನೂ ಕಾರ್ಯಗಳಿಲ್ಲ. ಅಂತೆಯೇ ಈ ಇಡಿ ಸಮಾಜವೂ ಪಶುವು. ಮುಖ್ಯವಾಗಿ ಪಶ್ಚಿಮ ದೇಶದವರು. ಹಾಗು ಅವರು ಒಂದು ನಾಗರಿಕತೆಯನ್ನೆ ಪಶು ಪ್ರವೃತಿಯ ಆಧಾರದ ಮೇಲೆ ನಿರ್ಮಿಸಿದ್ದಾರೆ. ಅಂದರೆ, “ನಾನು ಈ ದೇಹ, ಮತ್ತು ನನ್ನ ಜೀವನದ ಅತ್ಯುತ್ತಮ ಬಳಕೆಯೆಂದರೆ ಇಂದ್ರಿಯಗಳನ್ನು ತೃಪ್ತಿಪಡಿಸುವುದು”. ಇದು ಪಶುವೆಂದರೆ. “ನಾನು ಈ ದೇಹ.” ದೇಹವೆಂದರೆ ಇಂದ್ರಿಯಗಳು. “ಹಾಗು ಇಂದ್ರಿಯಗಳ ತೃಪ್ತಿಯೇ ಉನ್ನತ ಪರಿಪೂರ್ಣತೆ.” ಇದು ಇವರ ನಾಗರಿಕತೆ.

ಆದ್ದರಿಂದ ನೀವು ವಾಸ್ತವಿಕ ಮಾನವ ನಾಗರಿಕತೆಯನ್ನು ಪ್ರವೇಶ ಮಾಡಬೇಕು. ನೀವು ಆಶ್ಚರ್ಯ ಪಡಬಾರದು… ಒಂದು ಮೃಗ, ವಿವಿಧ ಆಕಾರದಲ್ಲಿ, ವಿವಿಧ ಸಾಮರ್ಥ್ಯಗಳೊಂದಿಗೆ, ಹೊರ ಬರುತ್ತದೆ. ಏನಾದರೂ ಅದು ಪಶು. ಅದರ ಮೂಲ ತತ್ವ ಪಶುತ್ವ. ಏಕೆಂದರೆ ಅವನು “ನಾನು ಈ ದೇಹ” ಎಂದು ಆಲೋಚಿಸುತ್ತಿದ್ದಾನೆ. “ನಾನು ನಾಯಿ, ಬಹಳ ದೃಢಾಕೃತಿಯ ಬಲಿಷ್ಠ ನಾಯಿ”, ಎಂದು ನಾಯಿ ಆಲೋಚಿಸುತಿದೆ. ಹಾಗೆಯೆ ಇನ್ನೊಬ್ಬ ವ್ಯಕ್ತಿ ಆಲೋಚಿಸುತ್ತಿದ್ದಾನೆ, “ನಾನು ದೊಡ್ಡ ದೇಶ” ಎಂದು. ಆದರೆ ಮೂಲ ತತ್ವವೇನು? ನಾಯಿಯೂ ತನ್ನ ದೇಹದ ಆಧಾರದಮೇಲೆ ಆಲೋಚಿಸುತಿದೆ ಮತ್ತು ಈ ದೊಡ್ಡ ರಾಷ್ಟ್ರವೂ ಕೂಡ ದೇಹದ ಆಧಾರದಮೇಲೆ ಆಲೋಚಿಸುತಿದೆ. ಆದ್ದರಿಂದ ಈ ನಾಯಿಗು ಈ ದೊಡ್ಡ ದೇಶಕ್ಕು ಏನೂ ವ್ಯತ್ಯಾಸವಿಲ್ಲ. ಮನುಷ್ಯನಿಗಿರುವ ಒಂದೆ ವ್ಯತ್ಯಾಸವೆಂದರೆ… ಪ್ರಕೃತಿಯ ಕೊಡುಗೆ… ಅವನಿಗೆ ಉತ್ತಮ ಇಂದ್ರಿಯಗಳಿವೆ. ಹಾಗು ಅವನಿಗೆ ಬಲವಿಲ್ಲ, ಅಥವ ಅವನ ಉತ್ತಮ ಇಂದ್ರಿಯಗಳನ್ನು ಬಳಸಿಕೊಳ್ಳಲು ಶಿಕ್ಷಣವಿಲ್ಲ… ಹೇಗೆ ಆಧ್ಯಾತ್ಮಿಕವಾಗಿ ಮುಂದುವರೆದು ಈ ಐಹಿಕ ಜಗತ್ತಿನಿಂದ ಹೊರಹೋಗುವುದು ಎಂಬುದರ ಬಗ್ಗೆ. ಅವನಿಗೆ ಆ ಬುದ್ದಿಯಿಲ್ಲ. ಆವನು ಆ ಉತ್ತಮ ಬುದ್ದಿಯನ್ನು ಕೇವಲ ಪಶುತ್ವಕ್ಕೆ ಉಪಯೋಗಿಸುತ್ತಿದ್ದಾನೆ. ಇದೆ ಅದರ ಅರ್ಥ. ಉತ್ತಮ ಬುದ್ದಿಶಕ್ತಿಯನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಅವನಿಗೆ ಶಿಕ್ಷಣವಿಲ್ಲ. ಆದ್ದರಿಂದ ಪಶುತ್ವಕ್ಕೆ ಮಾತ್ರ ಬಳಸುತ್ತಿದ್ದಾನೆ. ವಿಶ್ವದಾದ್ಯಂತ ಜನರು ಪಾಶ್ಚಿಮಾತ್ಯರನ್ನು ನೋಡಿ, “ಓ, ಎಷ್ಟು ಮುಂದುವರಿದವರು” ಎನ್ನುತ್ತಾರೆ. ಏನದು? ಪಶುತ್ವದಲ್ಲಿ ಮುಂದುವರಿಯುತಿರುವವರು. ಮೂಲತತ್ವ ಪಶುತ್ವವಾಗಿದೆ. ಅವರು ಅಚ್ಚರಿಗೊಳ್ಳುತ್ತಾರೆ. ಅವರನ್ನು ಅನುಕರಿಸುತ್ತಾರೆ ಕೂಡ. ಆದ್ದರಿಂದ ಅವರು ಪಶುತ್ವವನ್ನು ವಿಸ್ತರಿಸುತ್ತಿದ್ದಾರೆ, ಪಶು ನಾಗರಿಕತೆ. ಮನುಷ್ಯರ ಹಿತಕ್ಕಾಗಿ ಈಗ ನಾವು ಇದನ್ನು ಪ್ರತಿರೋಧಿಸಬೇಕು.