KN/Prabhupada 0051 - ಮಂದಬುದ್ದಿಗೆ ಈ ದೇಹಾತೀತ ವಿಷಯಗಳ ಬಗ್ಗೆ ಅರ್ಥವಾಗುವುದಿಲ್ಲ: Difference between revisions

(Created page with "<!-- BEGIN CATEGORY LIST --> Category :1080 Kannada Pages with Videos Category :Prabhupada 0051 - in all Languages Category :KN-Quotes - 1976 Category :KN-Quotes...")
 
(Vanibot #0023: VideoLocalizer - changed YouTube player to show hard-coded subtitles version)
 
Line 7: Line 7:
[[Category :KN-Quotes - in USA]]
[[Category :KN-Quotes - in USA]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0050 - They do not Know What is Next Life|0050|Prabhupada 0052 - Difference Between Bhakta and Karmi|0052}}
{{1080 videos navigation - All Languages|Kannada|KN/Prabhupada 0050 - ಅವರಿಗೆ ಮರುಜನ್ಮದ ಬಗ್ಗೆ ಅರಿವಿಲ್ಲ|0050|KN/Prabhupada 0052 - ಭಕ್ತ ಹಾಗು ಕರ್ಮಿಯ ನಡುವಿನ ವ್ಯತ್ಯಾಸ|0052}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 20: Line 18:


<!-- BEGIN VIDEO LINK -->
<!-- BEGIN VIDEO LINK -->
{{youtube_right|47MRhoRzD80|ಮಂದಬುದ್ದಿಗೆ ಈ ದೇಹಾತೀತ ವಿಷಯಗಳ ಬಗ್ಗೆ ಅರ್ಥವಾಗುವುದಿಲ್ಲ<br />- Prabhupāda 0051}}
{{youtube_right|dk-HF6FiZ34|ಮಂದಬುದ್ದಿಗೆ ಈ ದೇಹಾತೀತ ವಿಷಯಗಳ ಬಗ್ಗೆ ಅರ್ಥವಾಗುವುದಿಲ್ಲ<br />- Prabhupāda 0051}}
<!-- END VIDEO LINK -->
<!-- END VIDEO LINK -->



Latest revision as of 21:22, 3 February 2021



Invalid source, must be from amazon or causelessmery.com

Interview with Newsweek -- July 14, 1976, New York

ಸಂದರ್ಶಕ: ಒಂದು ದಿನ ಈ ಕೃಷ್ಣ ಪ್ರಜ್ಞೆ ಚಳುವಳಿ ವಿಶ್ವದಾದ್ಯಂತ ಎಲ್ಲ ಜನರಿಗೂ ದೊರಕುತ್ತದೆ ಎಂದು ನಿಮಗೆ ಅನಿಸುತ್ತಿದೆಯೇ?

ಪ್ರಭುಪಾದ: ಅದು ಸಾದ್ಯವಿಲ್ಲ. ಇದು ಅತ್ಯಂತ ಬುದ್ದಿವಂತ ವರ್ಗದ ಜನರಿಗೆ ಮಾತ್ರ. ಆದ್ದರಿಂದ ಈ ಚಳುವಳಿ ಅತ್ಯಂತ ಬುದ್ದಿವಂತ ವರ್ಗದ ಜನರಿಗೆ ಮಾತ್ರ.

ಸಂದರ್ಶಕ: ಆದರೆ ಅತ್ಯಂತ ಬುದ್ದಿವಂತ ವರ್ಗದ ಜನರ ಮದ್ಯೆ…

ಪ್ರಭುಪಾದ: ಬುದ್ದಿವಂತ ವರ್ಗದವನಲ್ಲವೆಂದರೆ ಅವನಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಪ್ರತಿ ಒಬ್ಬರೂ ಬುದ್ದಿವಂತನಾಗಿರಬೇಕೆಂಬ ಅಪೇಕ್ಷೆ ನಮ್ಮಗಿಲ್ಲ. ಕೃಷ್ಣ ಯೆ ಭಜಸೇ ಬಡ ಚತುರ. ಒಬ್ಬನು ಅತ್ಯಂತ ಬುದ್ದಿವಂತನಾಗದಿದ್ದರೆ ಅವನಿಗೆ ಕೃಷ್ಣ ಪ್ರಜ್ಞಾವಂತನಾಗಲು ಆಗುವುದಿಲ್ಲ ಏಕೆಂದರೆ ಅದು ವಿಭ್ಭಿನ್ನ ವಸ್ತುವಿಷಯ. ಜನರು ಜೀವನದ ದೈಹಿಕ ಕಲ್ಪನೆಯಲ್ಲಿ ಮಗ್ನರಾಗಿದ್ದಾರೆ. ಅದು ಅತೀತವಾದದ್ದು. ಮಂದಬುದ್ದಿಗೆ ಈ ದೇಹಾತೀತ ವಿಷಯಗಳ ಬಗ್ಗೆ ಅರ್ಥವಾಗುವುದಿಲ್ಲ. ಆದ್ದರಿಂದ ಪ್ರತಿ ಒಬ್ಬರಿಗೂ ಕೃಷ್ಣ ಪ್ರಜ್ಞೆ ಅರ್ಥವಾಗುತ್ತದೆಯೆಂದು ಅಪೇಕ್ಷಿಸಬಾರದು. ಅದು ಸಾದ್ಯವಿಲ್ಲ.

ಸಂದರ್ಶಕ: ಮಾನವಕುಲದ ಆನುವಂಶಿಕ ಪರಿಪೂರ್ಣತೆಯ ಬಗ್ಗೆ, ಅಥವ ಆನುವಂಶಿಕ ಪರಿಪೂರ್ಣತೆಗಾಗಿ ಪ್ರಯತ್ನಗಳ ಬಗ್ಗೆ, ಬಹಳ ಚರ್ಚೆ ನಡೆಯುತ್ತಿದೆ.

ಪ್ರಭುಪಾದ: ಆನುವಂಶಿಕ ಎಂದರೇನು?

ಸಂದರ್ಶಕ: ಅಂದರೆ… ಆನುವಂಶಿಕ ಪರಿಪೂರ್ಣತೆ ಎಂದರೇನು?

ಬಲಿ ಮರ್ದನ: ನಾವು ನೆನ್ನೆ ಆನುವಂಶಿಕ ವಿಜ್ಞಾನದ ಬಗ್ಗೆ ಚರ್ಚಿಸುತ್ತಿದ್ದೆವು. ಅವರು ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ, ಹೇಗೆ ದೇಹ ಮತ್ತು ಮನಸು ರೂಪಗೊಂಡಿದೆಯೆಂದು, ಹಾಗು ನಂತರ ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ.

ಪ್ರಭುಪಾದ: ಅದನ್ನು ನಾವು ಆಗಲೆ… ಆ ಪುಸ್ತಕವೆಲ್ಲಿ?

ರಾಮೇಶ್ವರ: ಸ್ವರೂಪ ದಾಮೋಧರನ ಪುಸ್ತಕ.

ಪ್ರಭುಪಾದ: ಹೌದು. ತೆಗೆದುಕೊಂಡು ಬಾ.

ರಾಮೇಶ್ವರ: ನಿಮ್ಮ ಪ್ರಶ್ನೆಯೇನು?

ಸಂದರ್ಶಕ: ನನ್ನ ಪ್ರಶ್ನೆ ಏನೆಂದರೆ… ತಂತ್ರಜ್ಞಾನದ ಉಪಕರಣಗಳನ್ನು ಬಳಸಿಕೊಳ್ಳುವ ಬಗ್ಗೆ ಮೊದಲು ಉಲ್ಲೇಖಿಸಿದ್ದಿರಿ, ಹಾಗು ಯಾವುದಾದರು ಸಮಾಜವಿದೆಯೆ ಎಲ್ಲಿ…

ಪ್ರಭುಪಾದ: ಆ ಪುಸ್ತಕವಿಲ್ಲವೆ? ಎಲ್ಲೂ ಇಲ್ಲವೆ?

ಸಂದರ್ಶಕ: ತಂತ್ರಜ್ಞಾನದ ಮುಖಾಂತರ ಮಾನವಕುಲ ಉದ್ದಾರವಾಗುದಾದರೆ, ಅಂದರೆ, ಸಾಮಾನ್ಯ ಮನುಷ್ಯ ಹೆಚ್ಚು ಬುದ್ದಿವಂತನಾದರೆ, ನೀವು ಯಾರನ್ನು ಅತ್ಯಂತ ಬುದ್ದಿವಂತನೆಂದು ಕರೆಯುತ್ತಿರೋ…

ಪ್ರಭುಪಾದ: ಬುದ್ದಿವಂತ ಮನುಷ್ಯ… ಯಾರು ತಾನು ಈ ದೇಹವಲ್ಲ – ದೇಹದೊಳಗಿರುವವನು ಎಂದು ಅರ್ಥಮಾಡಿಕೊಂಡಿದ್ದಾನೊ ಅವನು. ನಿನ್ನ ಹತ್ತಿರ ಒಂದು ಅಂಗಿಯಿದೆ. ಆದರೆ ನೀನು ಆ ಅಂಗಿಯಲ್ಲ. ಯಾರಿಗಾದರೂ ಅರ್ಥವಾಗುತ್ತದೆ. ನೀನು ಅಂಗಿ ಒಳಗಿರುವವನು. ಅಂತೆಯೆ, ಯಾರು ತಾನು ಈ ದೇಹವಲ್ಲ, ದೇಹದೊಳಗಿರುವವನು, ಎಂದು ಅರ್ಥಮಾಡಿಕೊಳ್ಳುತ್ತಾನೊ… ಅದು ಯಾರಿಗಾದರೂ ಅರ್ಥವಾಗುತ್ತದೆ ಎಕೆಂದರೆ ದೇಹವು ಸತ್ತಮೇಲೆ ವ್ಯತ್ಯಾಸವೇನು? ದೇಹದಲ್ಲಿದಂತಹ ಚೈತನ್ಯ ಶಕ್ತಿ ಬಿಟ್ಟುಹೋಯಿತು ಆದ್ದರಿಂದ ದೇಹವನ್ನು ಮೃತದೇಹವೆನ್ನುತ್ತೇವೆ.

ಸಂದರ್ಶಕ: ಆದರೆ ಆಧ್ಯಾತ್ಮಿಕ ಜ್ಞಾನವಿಲ್ಲದಿರುವ ಎಷ್ಟೋ ಅತ್ಯಂತ ಬುದ್ದಿವಂತರಿದ್ದಾರೆ, ತಾನು ದೇಹವಲ್ಲವೆಂದು, ದೇಹವೇ ಎಲ್ಲವೂ ಅಲ್ಲ ದೇಹವು ಜಡ, ಬೇರೇನೋ ಇದೆ ಎಂದು ಬಹುಶಃ ಅರಿತವರಿರ ಬಹುದು. ಇವರೇಕೆ ಆಧ್ಯಾತ್ಮಿಕ ಅರಿವುಳ್ಳವರಾಗಲಿಲ್ಲ?

ಪಭುಪಾದ: ತಾನು ದೇಹವಲ್ಲ ಎಂಬುವ ಸಾಧಾರಣ ವಿಷಯನ್ನು ಅರ್ಥಮಾಡಿಕೊಳ್ಳದಿದ್ದರೆ ಅವನು ಪಶುಗಿಂತ ಮಿಗಿಲಿಲ್ಲ. ಇದುವೇ ಆಧ್ಯಾತ್ಮಿಕ ಸ್ಥಿತಿಯ ಪ್ರಥಮ ತಿಳುವಳಿಕೆ. ತಾನು ಈ ದೇಹವೆಂದು ತಿಳಿದರೆ, ಅವನು ಪಶುಗಳ ವರ್ಗಕ್ಕೆ ಸೇರುತ್ತಾನೆ.

ರಾಮೇಶ್ವರ: ಅವಳ ಪ್ರಶ್ನೆ ಏನೆಂದರೆ… ಯಾರೋ ಒಬ್ಬರಿಗೆ ಮೃತ್ಯುವಿನಂತರ ಕೂಡ ಜೀವನವಿದೆ ಎಂಬುದರ ಬಗ್ಗೆ ನಂಬಿಕೆಯಿದ್ದರೆ, ಹಾಗು ಭೌತಿಕ ಮಟ್ಟದಲ್ಲಿ ಕೂಡ ಬುದ್ದಿವಂತನಾಗಿದ್ದರೆ, ಅವನು ಏಕೆ ತಾನಾಗಿಯೆ…

ಫ್ರಭುಪಾದ: ಇಲ್ಲ. ಭೌತಿಕ ಮಟ್ಟದಲ್ಲಿರುವುದು ಬುದ್ದಿವಂತಿಕೆಯಲ್ಲ. ಭೌತಿಕ ಮಟ್ಟವೆಂದರೆ “ನಾನು ಈ ದೇಹ.” ನಾನು ಅಮೇರಿಕದವನು. ನಾನು ಭಾರತೀಯ. ನಾನು ನರಿ. ನಾನು ನಾಯಿ. ನಾನು ಮನುಷ್ಯ. ಇದು ಭೌತಿಕ ತಿಳುವಳಿಕೆ. ಆಧ್ಯಾತ್ಮಿಕ ತಿಳುವಳಿಕೆ ಅದಕ್ಕೆ ಅತೀತವಾದದ್ದು, “ನಾನು ಈ ದೇಹವಲ್ಲ” ಎಂದು ತಿಳಿದುಕೊಳ್ಳಬೇಕು. ಹಾಗು ಅವನು ಯಾವಾಗ ತನ್ನ ಆಧ್ಯಾತ್ಮಿಕ ಗುರುತನ್ನು ತಿಳಿದುಕೊಳ್ಳಲು ಯತ್ನಿಸುತ್ತಾನೊ ಆಗ ಅವನು ಬುದ್ದಿವಂತ. ಅನ್ಯಥಾ ಅವನು ಬುದ್ದಿವಂತನಲ್ಲ.

ಸಂದರ್ಶಕ: ಅಂದರೆ ಇದರ ಅರ್ಥ…

ಪ್ರಭುಪಾದ: ಅವರನ್ನು ಮೂಢ ಎಂದು ವಿವರಿಸಲಾಗಿದೆ. ಮೂಢ ಎಂದರೆ ಕತ್ತೆ. ಆದ್ದರಿಂದ ದೇಹವೆಂದು ಗುರುತಿಸಿಕೊಳ್ಳದಿರುವುದೆ ಪ್ರಥಮ ತಿಳುವಳಿಕೆ.

ಸಂದರ್ಶಕ: ತದನಂತರ ಯಾವ ತಿಳುವಳಿಕೆಗಳು…

ಪ್ರಭುಪಾದ: ನಾಯಿಯಂತೆ. ನಾಯಿ ತಾನು ದೇಹವೆಂದು ತಿಳಿದುಕೊಂಡಿದೆ. ಮನುಷ್ಯನೂ ಕೂಡ ಹಾಗೆಯೇ ತಿಳಿದುಕೊಂಡರೆ – ತಾನು ದೇಹವೆಂದು – ಅವನು ನಾಯಿಗಿಂತ ಮಿಗಿಲಿಲ್ಲ.

ಸಂದರ್ಶಕ: ಇದಾದನಂತರ ಇನ್ನು ಯಾವ ತಿಳುವಳಿಕೆಗಳು ಬರುತ್ತವೆ?

ಬಲಿಮರ್ದನ: ನೀನು ದೇಹವಲ್ಲವೆಂದು ತಿಳಿದುಕೊಂಡ ನಂತರ ಏನಾಗುತ್ತದೆ?

ಪ್ರಭುಪಾದ: ಹಾ! ಇದು ಅರಿವುಳ್ಳ ಪ್ರಶ್ನೆ. ಆಗ ಅವನು “ನಾನು ಕೇವಲ ಜೀವನದ ದೈಹಿಕ ಕಲ್ಪನೆಯಲ್ಲಿ ತೊಡಗಿದ್ದೇನೆ” ಎಂಬುದನ್ನು ಅರಿತುಕೊಳ್ಳಬೇಕು. “ಹಾಗಾದರೆ ನನ್ನ ಕೆಲಸವೇನು?, ಅದು ಸನಾತನ ಗೋಸ್ವಾಮಿಗಳ ವಿಚಾರಣೆ, “ನೀನು ನನ್ನನು ಈ ಭೌತಿಕ ಚಟುವಟಿಕೆಗಳಿಂದ ಮುಕ್ತನಾಗಿಸಿದೆ. ಈಗ ನನ್ನ ಕರ್ತವ್ಯವೇನೆಂದು ತಿಳಿಸು.” ಆ ಕಾರಣಕೋಸ್ಕರವೇ ಒಬ್ಬ ಆಧ್ಯಾತ್ಮಿಕ ಗುರುವಿನ ಹತ್ತಿರ ಹೋಗಬೇಕು, ತಿಳಿಯಲು, ಈಗ ಅವನ ಕರ್ತವ್ಯವನ್ನು ಅರಿತುಕೊಳ್ಳಲು. “ನಾನು ಈ ದೇಹವಲ್ಲವಾದರೆ ನನ್ನ ಕರ್ತವ್ಯವೇನು? ಏಕೆಂದರೆ ನಾನು ಇಡಿ ಹಗಲೂ ರಾತ್ರಿಯೂ ಈ ದೇಹಕ್ಕಾಗಿಯೇ ನಿರತನಾಗಿರುವೆ. ನಾನು ತಿನ್ನುತ್ತಿದ್ದೇನೆ, ನಿದ್ರಿಸುತ್ತಿದ್ದೇನೆ, ಮೈಥುನದಲ್ಲಿ ತೊಡಗುತ್ತಿದ್ದೇನೆ, ರಕ್ಷಿಸುತ್ತಿದ್ದೇನೆ – ಇವೆಲವೂ ದೇಹದ ಅಗತ್ಯಗಳು. “ನಾನು ಈ ದೇಹವಲ್ಲವಾದರೆ ನನ್ನ ಕರ್ತವ್ಯವೇನು? ಅದು ಬುದ್ದಿವಂತಿಕೆ.

ರಾಮೇಶ್ವರ: ನೀವು ಹೇಳಿದಿರಿ, ““ನಾನು ಈ ದೇಹವಲ್ಲವೆಂದು ಅರಿತ ಮೇಲೆ ಮುಂದೇನು?” ಪ್ರಭುಪಾದರು ಹೇಳುತ್ತಾರೆ ಮುಂದೇನು ಎಂದರೆ ನೀನೇನು ಮಾಡಬೇಕೆಂದು ತಿಳಿದುಕೊ, ಮತ್ತು ಅದಕ್ಕೆ, ಒಬ್ಬ ಆತ್ಮಜ್ಞಾನಿ ಅಥವ ಆಧ್ಯಾತ್ಮಿಕ ಗುರುವಿನಿಂದ ಜ್ಞಾನವನ್ನು ಪಡೆ.

ಸಂರ್ದಶಕ: ಆಧ್ಯಾತ್ಮಿಕ ಗುರುವು ತನ್ನ ಪುಸ್ತಕಗಳ ರೂಪದಲ್ಲಿ.

ಬಲಿಮರ್ದನ: ವೈಯಕ್ತಿಕವಾಗಿ ಅಥವ…

ಪುಷ್ಟಕೃಷ್ಣ: ಈಗ ದೇಹದ ಕಲ್ಪನೆಯಲ್ಲಿ ನಮಗೆ ಎಷ್ಟೋ ಕರ್ತವ್ಯಗಳಿವೆಯೆಂದು ಪ್ರಭುಪಾದರು ವಿವರಿಸುತ್ತಿದ್ದರು. ನಾವು ಕೆಲಸಮಾಡುತ್ತಿದ್ದೇವೆ, ಮೈಥುನದಲ್ಲಿ ತೊಡಗುತ್ತಿದ್ದೇವೆ, ತಿನ್ನುತ್ತಿದ್ದೇವೆ, ನಿದ್ರಿಸುತ್ತಿದ್ದೇವೆ, ರಕ್ಷಿಸುತ್ತಿದ್ದೇವೆ – ಇನ್ನು ಏನೇನೋ. ಇವೆಲ್ಲವೂ ದೇಹದ ಸಂಬಂಧವಾಗಿ. ಆದರೆ ನಾನು ಈ ದೇಹವಲ್ಲವಾದರೆ ನನ್ನ ಕರ್ತವ್ಯವೇನು? ನನ್ನ ಬಾಧ್ಯತೆಗಳೇನು? ಇದನ್ನು ತಿಳಿದುಕೊಂಡಮೇಲೆ ಮುಂದೇನು ಎಂದರೆ ಆಧ್ಯಾತ್ಮಿಕ ಗುರುವಿನಿಂದ ಬೋಧನೆಯನ್ನು ಪಡೆದುಕೊಂಡು, ಮುಂದುವರಿದು, ನಿಜವಾದ ಕರ್ತವ್ಯವನ್ನು ತಿಳಿದುಕೊಳ್ಳುವುದು, ಇದು ಬಹಳ ಮುಖ್ಯ.

ಪ್ರಭುಪಾದ: ನಮಗೆ ತಿನ್ನುವುದಕ್ಕೆ, ನಿದ್ರಿಸುದಕ್ಕೆ, ಮೈಥುನಕ್ಕೆ, ಹಾಗು ರಕ್ಷಿಸುವುದಕ್ಕೂ ಕೂಡ ಗುರುವಿನಿಂದ ಜ್ಞಾನ ಬೇಕಾಗಿದೆ. ಅಂದರೆ ಆಹಾರಸೇವನೆಗೆ, ಒಬ್ಬ ನಿಪುಣನಿಂದ ಯಾವ ಆಹಾರವನ್ನು ತಿನ್ನಬೇಕೆಂದು ತಿಳಿದುಕ್ಕೊಳ್ಳುತ್ತೇವೆ. ಯಾವ ತರಹದ ಅನ್ನಾಂಗ, ಯಾವ ತರಹದ… ಅದಕ್ಕೂ ಕೂಡ ಶಿಕ್ಷಣ ಬೇಕು. ನಿದ್ರೆಗೂ ಕೂಡ ಶಿಕ್ಷಣ ಬೇಕು. ಈ ಜೀವನದ ದೇಹದ ಕಲ್ಪನೆಗೆ ಬೇರೆಯವರಿಂದ ಜ್ಞಾನಪಡೆಯಬೇಕು. ಆದರಿಂದ ಜೀವನದ ದೇಹದ ಕಲ್ಪನೆಗೆ ಅತೀತವಾದರೆ - ಅಂದರೆ ಅವನಿಗೆ “ನಾನು ಈ ದೇಹವಲ್ಲ, ನಾನು ಆತ್ಮ” ಎಂದು ಅರಿವಾದರೆ - ಅಂತೆಯೇ ಅವನು ಒಬ್ಬ ನಿಪುಣನಿಂದ ಪಾಠ ಹಾಗು ಶಿಕ್ಷಣ ಪಡೆಯಬೇಕು.