KN/Prabhupada 0052 - ಭಕ್ತ ಹಾಗು ಕರ್ಮಿಯ ನಡುವಿನ ವ್ಯತ್ಯಾಸ

Revision as of 12:42, 20 August 2019 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0052 - in all Languages Category:KN-Quotes - 1973 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on SB 1.2.9-10 -- Delhi, November 14, 1973

ಇದು ಭಕ್ತಿ ಮತ್ತು ಕರ್ಮದ ನಡುವಿನ ವ್ಯತ್ಯಾಸ. ಕರ್ಮ ಎನ್ನುವುದು ಸ್ವಂತ ಇಂದ್ರಿಯ ತೃಪ್ತಿ , ಭಕ್ತಿಯೆಂದರೆ ದೇವರನ್ನು ತೃಪ್ತಿಪಡಿಸುವುದು. ಅದೇ ವಿಷಯ. ಹೀಗಾಗಿ ಜನರಿಗೆ ಭಕ್ತ ಹಾಗು ಕರ್ಮಿಯ ನಡುವೆ ಇರುವ ವ್ಯತ್ಯಾಸ ಅರ್ಥೈಸಿಕೊಳ್ಳಲಾಗುವುದಿಲ್ಲ. ಕರ್ಮಿ ತನ್ನ ಇಂದ್ರಿಯಗಳನ್ನು ತೃಪ್ತಿಪಡಿಸಿಕೊಳ್ಳುತ್ತಿದ್ದರೆ, ಭಕ್ತ ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸುತ್ತಿರುತ್ತಾನೆ. ಅಲ್ಲಿ ಸ್ವಲ್ಪ ಇಂದ್ರಿಯ ತೃಪ್ತಿ ಇರಲೇಬೇಕು. ಆದರೆ ಯಾವಾಗ ನೀವು ಕೃಷ್ಣನನ್ನು ತೃಪ್ತಿಪಡಿಸುತ್ತೀರೋ ಆಗ ಅದು ಭಕ್ತಿ ಎನ್ನಿಸಿಕೊಳ್ಳುತ್ತದೆ. ಹೃಷೀಕೇಣ ಹೃಷೀಕೇಶ-ಸೇವನಂ ಭಕ್ತಿರುಚ್ಯತೇ (ಚೈ.ಚ ಮಧ್ಯ 19.170). ಹೃಷೀಕ ಎಂದರೆ ಇಂದ್ರಿಯಗಳು, ಪರಿಶುದ್ಧವಾದ ಇಂದ್ರಿಯಗಳು. ಅದನ್ನು ನಾನು ಹಿಂದೊಮ್ಮೆ ವಿವರಿಸಿದ್ದೆ

ಸರ್ವ್ರೋಪಾಧಿ-ವಿನಿರ್ಮುಕ್ತಂ
ತತ್ಪರತ್ವೇನ ನಿರ್ಮಲಂ
ಹ್ರಷೀಕೇಣ ಹ್ರಷೀಕೇಶ
ಸೇವನಂ ಭಕ್ತಿರುಚ್ಯತೇ
(ಚೈ.ಚ ಮಧ್ಯ 19.170)

ಭಕ್ತಿಯೆಂದರೆ ನಿಮ್ಮ ಕೆಲಸಕಾರ್ಯಗಳನ್ನೆಲ್ಲ ನಿಲ್ಲಿಸುವುದಲ್ಲ. ಭಕ್ತಿಯಂದರೆ ಭಾವನಾತ್ಮಕ ಮತಾಂಧತೆಯಲ್ಲ. ಅದು ಭಕ್ತಿ ಅಲ್ಲ. ಭಕ್ತಿಯೆಂದರೆ ನಮ್ಮೆಲ್ಲ ಇಂದ್ರಿಯಗಳನ್ನೂ ಅದರ ಒಡೆಯನ ಸಂತೃಪ್ತಿಗಾಗಿ ಬಳಸಿಕೊಳ್ಳುವುದು. ಅದನ್ನೇ ಭಕ್ತಿ ಎನ್ನುತ್ತಾರೆ.

ಹೀಗಾಗಿಯೇ ಕೃಷ್ಣನಿಗೆ ಹೃಷೀಕೇಶ ಎಂಬ ಹೆಸರಿದೆ. ಹೃಷೀಕ ಎಂದರೆ ಇಂದ್ರಿಯಗಳು. ಹೃಷೀಕ ಈಶ, ಆತ ಇಂದ್ರಿಯಗಳ ನಿಯಂತ್ರಕ. ನಿಜವೆಂದರೆ, ನಮ್ಮ ಇಂದ್ರಿಯಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ನಾವದನ್ನು ಅರ್ಥೈಸಿಕೊಳ್ಳಬಹುದು. ಕೃಷ್ಣ ಅವನ್ನು ನಿರ್ದೇಶಿಸುತ್ತಾನೆ. ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಹ ಸ್ಮ್ರತಿರ್ ಜ್ಞಾನಂ ಅಪೋಹನಂ ಚ (ಭಗವದ್ಗೀತೆ 15.15). ಮತ್ತಹ ಸ್ಮ್ರತಿರ್ ಜ್ಞಾನಂ ಅಪೋಹನಂ ಚ. ಕೃಷ್ಣ ಸಹಾಯ ಮಾಡುತ್ತಿರುವುದರಿಂದಲೇ ವಿಜ್ಞಾನಿಯೊಬ್ಬ ಕೆಲಸ ಮಾಡುತ್ತಿರುತ್ತಾನೆ, ಅವನು ಅಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇದು ಸಾಧ್ಯವಿಲ್ಲ. ಆದರೆ, ವಿಜ್ಞಾನಿ ಅದನ್ನೇ ಆಶಿಸುತ್ತಿರುತ್ತಾನೆ. ಆಗಾಗಿ ಕೃಷ್ಣನೇ ಅವನಿಗೆ ಸೌಲಭ್ಯಗಳನ್ನು ಒದಗಿಸುತ್ತಿರುತ್ತಾನೆ. ಅಂದರೆ, ನಿಜವಾಗಿ ಕೃಷ್ಣನೇ ಅಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇವನ್ನೆಲ್ಲ ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ. ಕೃಷ್ಣನು ಕೆಲಸ ಮಾಡದೆ, ಕೃಷ್ಣನು ನೋಡದೆ ನಾವು ನೋಡಲಾರೆವು. ಬ್ರಹ್ಮ ಸಂಹಿತೆಯಲ್ಲಿ ಸೂರ್ಯ ಕಾಂತಿಯ ಬಗ್ಗೆ ವಿವರಣೆ ನೀಡಿರುವಂತೆಯೇ.ಯಚ್ ಚಕ್ಷುರ್ ಏಷ ಸವಿತಾ ಸಕಲ ಗ್ರಹಾಣಾo, ಸೂರ್ಯನು ಕೃಷ್ಣನ ಒಂದು ಕಣ್ಣು.

ಯಚ್ ಚಕ್ಷುರ್ ಏಷ ಸವಿತಾ ಸಕಲ ಗ್ರಹಾಣಾo
ರಾಜ ಸಮಸ್ತ ಸುರ ಮೂರ್ತಿರ್ ಅಶೇಷ ತೆಜಾಃ
ಯಸ್ಯ ಆಜ್ಞಯ ಬ್ರಮತಿ ಸಂಭೃತ ಕಾಲ ಚಕ್ರೋ
ಗೋವಿಂದಂ ಆದಿ ಪುರುಷಂ ತಮ್ ಅಹಂ ಭಜಾಮಿ
(ಬ್ರಹ್ಮ ಸಂಹಿತ 5.52)

ಆದ್ದರಿಂದ ಕೃಷ್ಣನ ಕಣ್ಣುಗಳಲ್ಲಿ ಒಂದಾದ ಸೂರ್ಯನು, ಸೂರ್ಯನು ಉದಯಿಸುವುದರಿಂದ, ಸೂರ್ಯನು ನೋಡುವುದರಿಂದ ನೀವು ನೋಡಲು ಸಾದ್ಯ. ಸ್ವತಂತ್ರವಾಗಿ ನೀವು ನೋಡಲು ಸಾದ್ಯವಿಲ್ಲ. ನಿಮ್ಮ ಕಣ್ಣುಗಳ ಬಗ್ಗೆ ನಿಮಗೆ ಬಹಳ ಗರ್ವವಿದೆ. ಸೂರ್ಯ ಕಿರಣಗಳಿಲ್ಲದೆ ನಿಮ್ಮ ಕಣ್ಣುಗಳ ಬೆಲೆ ಏನು? ನೀವು ನೋಡಲಾರಿರಿ. ಇ ವಿದ್ಯುತ್ ಕೂಡ ಸೂರ್ಯನಿಂದ ಪಡೆಯಲಾಗಿದೆ. ಆದ್ದರಿಂದ ಕೃಷ್ಣನು ನೋಡಿದಾಗ ಮಾತ್ರ ನೀವು ನೋಡಲು ಸಾದ್ಯ. ಅದು ಸ್ಥಾನ.

ಆದ್ದರಿಂದ ಭಗವದ್ಗೀತೆಯಲ್ಲಿ ಹೇಳಿದೆ, ಸರ್ವತಃ ಪಾಣಿ ಪಾದಂ ತತ್. ಸರ್ವತಃ ಪಾಣಿ ಪಾದಂ ... ಎಲ್ಲ ಕಡೆಯಲ್ಲೂ ಕೃಷ್ಣ ತನ್ನ ಕೈ ಹಾಗು ಕಾಲುಗಳನ್ನು ಹೊಂದಿದ್ದಾನೆ. ಅವುಗಳು ಯಾವುದು? ನನ್ನ ಕೈಗಳು, ನಿಮ್ಮ ಕೈಗಳು, ನಿಮ್ಮ ಕಾಲುಗಳು - ಅವು ಕೃಷ್ಣನದೇ. ಏಗೆಂದರೆ ಯಾರೋ ಒಬ್ಬರು ಜತ್ತಿನೆಲ್ಲೆಡೆ ನನ್ನ ಶಾಖೆಗಳಿವೆ ಎಂದು ಹೇಳಿದ ಹಾಗೆ. ಆ ಇಲ್ಲ ಶಾಖೆಗಳು ಪರಮ ಪುರುಷನ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಕೃಷ್ಣನು ಕೂಡ ಹಾಗೆಯೇ. ಆದ್ದರಿಂದ ಕೃಷ್ಣನನ್ನು ಹೃಷಿಕೇಶ ಎಂದು ಕರೆಯುತ್ತಾರೆ, ಹೃಷಿಕೇಶ. ಆದ್ದರಿಂದ ಭಕ್ತಿ ಎಂದರೆ ನಮ್ಮ ಹೃಷಿಕ, ನಮ್ಮ ಇಂದ್ರಿಯಗಳನ್ನು, ಅದರ ಒಡೆಯನ ಸೇವೆಯಲ್ಲಿ ತೊಡಗಿಸುವುದು. ಅದು ನಮ್ಮ ಪರಿಪೂರ್ಣ ಜೀವನ. ಅದು ನಮ್ಮ ಪರಿಪೂರ್ಣ.... ಆದರೆ ನಮ್ಮ ಇಂದ್ರಿಯಗಳನ್ನು ಅದರ ತೃಪ್ತಿಯಲ್ಲಿ ತೊಡಗಿಸಲು ಬಯಸಿದರೆ, ಅದು ಕರ್ಮ ಎನಿಸಿಕೊಳ್ಳುತ್ತದೆ. ಅದನ್ನೇ ಭೌತಿಕ ಜೀವನ ಎಂದು ಕರೆಯುತ್ತಾರೆ. ಆದ್ದರಿಂದ ಒಬ್ಬ ಭಕ್ತನಿಗೆ ಭೌತಿಕ ಎಂಬುದೇ ಇಲ್ಲ. ಅದೇ ಈಷಾವಾಸ್ಯಂ ಇದಂ ಸರ್ವಂ(ಈಶೋಪನಿಶದ್ 1) ಭಕ್ತನು ಎಲ್ಲವೂ ಕೃಷ್ಣನಿಗೆ ಸೇರಿದ್ದು ಎಂದು ಕಾಣುತ್ತಾನೆ. ಈಷಾವಾಸ್ಯಂ ಇದಂ ಸರ್ವಂ ಯತ್ ಕಿನ್ಚ ಜಗತ್ಯಾಂ, ತೇನ ತ್ಯಕ್ತೆನ ಭುಂಜಿಥಾ. ಎಲ್ಲವು ಕೃಷ್ಣನಿಗೆ ಸೇರುತ್ತದೆ. ಆದ್ದರಿಂದ ಕೃಷ್ಣನು ನಮಗೆ ಏನನ್ನು ಕೊಡುತ್ತಾನೋ.... ಒಬ್ಬ ಯಜಮಾನನಂತೆ. ಯಜಮಾನನು ಸೇವಕನಿಗೆ ಏನನ್ನಾದರೂ ಹಂಚಬಹುದು, "ಇದನ್ನು ನೀನು ಅನುಭವಿಸ ಬಹುದು". ಅದು ಪ್ರಸಾದಂ. ಪ್ರಸಾದೆ ಸರ್ವ ದುಃಖಾನಾಂ ಹಾನಿರ್ ಅಸ್ಯೋಪಜ... ಇದುವೇ ಜೀವನ. ನೀವು ಕೃಷ್ಣ ಪ್ರಜ್ಞಾವಂತರಾದರೆ, ನೀವು ಇದನ್ನು ಅರ್ಥಮಾಡಿಕೊಂಡರೆ "ಎಲ್ಲವೂ ಕೃಷ್ಣನಿಗೆ ಸೇರಿದ್ದು, ನನ್ನ ಕೈ ಕಾಲುಗಳು ಕೂಡ ಕೃಷ್ಣನಿಗೆ ಸೇರಿದ್ದು, ನನ್ನ ದೇಹದ ಎಲ್ಲ ಭಾಗಗಳೂ ಕೃಷ್ಣನಿಗೆ ಸೇರಿದ್ದು, ಆಗಾಗಿ ಅವುಗಳನ್ನು ಕೃಷ್ಣನಿಗಾಗಿ ಬಳಸ ಬೇಕು", ಇದನ್ನು ಭಕ್ತಿ ಎನ್ನುತಾರೆ.

ಅನ್ಯಾಭಿಲಾಶಿತ ಶೂನ್ಯಮ್
ಜ್ಞಾನ-ಕರ್ಮಾದ್ಯ-ಅನಾವೃತಂ
ಆನುಕೂಲ್ಯೇನ ಕೃಷನಾನು
ಶಿಲನಂ ಭಕ್ತಿರ್ ಉತ್ತಮ
(ಭಕ್ತಿ ರಸಾಮೃತ ಸಿಂಧು 1.1.11)

ಅದನ್ನು ಕೃಷ್ಣ ಮಾಡಿದ, ಅಲ್ಲ, ಅರ್ಜುನ ಮಾಡಿದ. ಅವನು ಯುದ್ಧ ಮಾಡದೆ ತನ್ನ ಇಂದ್ರಿಯಗಳನ್ನು ತೃಪ್ತಿಗೊಳಿಸಲು ಬಯಸಿದ. ಆದರೆ ಭಗವದ್ಗೀತೆಯನ್ನು ಕೇಳಿದ ನಂತರ, " ಹೌದು, ಕೃಷ್ಣನೇ ಪರಮ ಪುರುಷ" ಎಂದು ಒಪ್ಪಿಕೊಂಡನು.

ಅಹಂ ಸರ್ವಸ್ಯ ಪ್ರಭವೋ
ಮತ್ತಃ ಸರ್ವಂ ಪ್ರವರ್ತತೆ
ಇತಿ ಮತ್ವಾ ಭಜಂತೆ ಮಾಂ
ಬುಧ ಭಾವ-ಸಮನ್ವಿತಾಃ
(ಭಗವದ್ಗೀತೆ 10.8)

ಈ ವಿಷಯಗಳನ್ನು ಭಗವದ್ಗೀತೆಯಲ್ಲಿ ತುಂಬಾ ಚೆನ್ನಾಗಿ ವಿವರಿಸಲಾಗಿದೆ. ಅದುವೆ ಆಧ್ಯಾತ್ಮಿಕ ಜೀವನದ ಆರಂಭಿಕ ಅಧ್ಯಯನ. ಹಾಗು ಭಗವದ್ಗೀತೆಯ ಬೋಧನೆಗಳು ನಮಗೆ ನಿಜವಾಗಿ ಮನವರಿಕೆಯಾಗಿದ್ದರೆ, ಆಗ ಕೃಷ್ಣನಿಗೆ ನಾವು ಶರಣಾಗುತ್ತೇವೆ. ಕೃಷ್ಣನು ಅದನ್ನು ಬಯಸುತ್ತಾನೆ. ಸರ್ವ ಧರ್ಮಾನ್ ಪರಿತ್ಯಜ್ಯ ಮಾಂ ಏಕಮ್ ಶರಣಂ ವ್ರಜ (ಭಗವದ್ಗೀತೆ 18.66). ಅದು ಆತನಿಗೆ ಬೇಕು. ನಾವು ಈ ಪ್ರಕ್ರಿಯೆಯನ್ನು ನಿಜವಾಗಿ ತೆಗೆದುಕೊಂಡಾಗ, ಅದನ್ನು ಶ್ರದ್ಧಾ ಎನ್ನುತ್ತಾರೆ. ಶ್ರದ್ಧಾ. ಶ್ರದ್ಧಾ ಎಂಬುದರ ಅರ್ಥ ಏನು, ಎಂಬುದನ್ನು ಕವಿರಾಜ ಗೊಸ್ವಾಮಿಯವರು ವಿವರಿಸಿದ್ದಾರೆ.