KN/Prabhupada 0061 - ಈ ದೇಹವು ಚರ್ಮ, ಮೂಳೆ ಹಾಗು ರಕ್ತ ತುಂಬಿರುವ ಒಂದು ಚೀಲ

Revision as of 21:24, 3 February 2021 by Vanibot (talk | contribs) (Vanibot #0023: VideoLocalizer - changed YouTube player to show hard-coded subtitles version)
(diff) ← Older revision | Latest revision (diff) | Newer revision → (diff)


Northeastern University Lecture -- Boston, April 30, 1969

ನನ್ನ ಪ್ರೀತಿಯ ಹುಡುಗ ಹಾಗು ಹುಡುಗಿಯರೆ, ನೀವು ಈ ಸಭೆಗೆ ಆಗಮಿಸಿರುವ ಸಲುವಾಗಿ ನಿಮಗೆ ಧನ್ಯವಾದಗಳು. ನಾವು ಈ ಕೃಷ್ಣ ಪ್ರಜ್ಞೆ ಆಂದೋಲವನ್ನು ಹರಡುತ್ತಿರುವುದು ಏಕೆಂದರೆ ವಿಶ್ವದಾದ್ಯಂತ ಈ ಆಂದೋಲನದ ಅತ್ಯಂತ ಅವಶ್ಯಕತೆಯಿದೆ ಹಾಗು ಪ್ರಕ್ರಿಯೆಯೂ ಕೂಡ ಬಹಳ ಸುಲಭ. ಅದು ಒಂದು ಅನುಕೂಲ. ಪ್ರಥಮವಾಗಿ, ಅಲೌಕಿಕ ಸ್ಥಾನವೇನೆಂದು ತಿಳಿದುಕೊಳ್ಳಲು ಪ್ರಯತ್ನಿಸಿ. ನಮ್ಮ ಜೀವನದ ಸ್ಥಿತಿಯನ್ನು ಗಮನಿಸಿದರೆ ನಾವು ವಿಭಿನ್ನ ಮಟ್ಟಗಳಿದ್ದೇವೆ. ಆದ್ದರಿಂದ ನಾವು ಮೊದಲು ಅಲೌಕಿಕ ಮಟ್ಟದಲ್ಲಿ ನಿಲ್ಲಬೇಕು. ತದನಂತರ ಅಲೌಕಿಕ ಧ್ಯಾನದ ಪ್ರಶ್ನೆಯೂ ಇದೆ. ಭಗವದ್ಗೀತೆಯ ಮೂರನೇಯ ಅಧ್ಯಾಯದಲ್ಲಿ ನಮ್ಮ ಬದ್ದ ಜೀವನದ ವಿಭಿನ್ನ ದರ್ಜೆಗಳನ್ನು ನೀವು ಕಾಣಬಹುದು. ಮೊದಲನೆಯದು ಇಂದ್ರಿಯಾಣಿ ಪರಾಣಿ ಆಹುರ್ (ಭ.ಗೀ 3.42). ಸಂಸೃತ, ಇಂದ್ರಿಯಾಣಿ. ಪ್ರಥಮವಾಗಿ ಜೀವನದ ಬಗ್ಗೆಯಿರುವ ದೈಹಿಕ ಪರಿಕಲ್ಪನೆ. ಈ ಭೌತಿಕ ಲೋಕದಲ್ಲಿ ಪ್ರತಿಯೊಬ್ಬರೂ ಜೀವನದ ದೈಹಿಕ ಪರಿಕಲ್ಪನೆಯಲ್ಲಿದ್ದೇವೆ. “ನಾನು ಭಾರತೀಯ”, ಎಂದು ನಾನು ತಿಳಿದುಕೊಂಡಿದ್ದೇನೆ. ನೀವು ಅಮೇರಿಕನ್ ಎಂದು ಅಂದುಕೊಂಡಿರುವಿರಿ. ಬೇರೊಬ್ಬರು ಅಂದುಕೊಳ್ಳುತ್ತಾರೆ, “ನಾನು ರಶ್ಯನ್.” ಬೇರೊಬ್ಬರು, “ನಾನೂ ಬೇರೆ ಇನ್ನೊಬ್ಬ” ಎಂದು ಕೊಳ್ಳುತ್ತಾರೆ. ಅಂತೆಯೇ ಪ್ರತಿಯೊಬ್ಬರೂ “ನಾನು ಈ ದೇಹವು”, ಎಂದು ಕೊಳ್ಳುತ್ತಿರುವರು. ಇದು ಒಂದು ದರ್ಜೆ, ಅಥವ ಒಂದು ಮಟ್ಟ. ಈ ಮಟ್ಟವನ್ನು ಇಂದ್ರಿಯ ಮಟ್ಟವೆಂದು ಕರೆಯಲಾಗುತ್ತದೆ, ಏಕೆಂದರೆ ಎಲ್ಲಿಯವರೆಗು ಜೀವನದ ದೈಹಿಕ ಪರಿಕಲ್ಪನೆ ಇರುವುದೋ ನಾವು ಇಂದ್ರಿಯ ತೃಪ್ತಿಯನ್ನು ಸಂತೋಷವೆಂದುಕೊಳ್ಳುತ್ತೇವೆ. ಅಷ್ಟೆ. ಸಂತೋಷವೆಂದರೆ ಇಂದ್ರಿಯ ತೃಪ್ತಿ ಏಕೆಂದರೆ ದೇಹವೆಂದರೆ ಇಂದ್ರಿಯಗಳು. ಇಂದ್ರಿಯಾಣಿ ಪರಾಣಿ ಆಹುರ್ ಇಂದ್ರಿಯೆಭ್ಯಃ ಪರಮ್ ಮನಃ (ಭ.ಗೀ 3.42). ಪ್ರಭು ಕೃಷ್ಣನು ಹೇಳುತ್ತಾನೆ ಜೀವನದ ಐಹಿಕ ಪರಿಕಲ್ಪನೆಯಲ್ಲಿ, ಅಥವ ಜೀವನದ ದೈಹಿಕ ಪರಿಕಲ್ಪನೆಯಲ್ಲಿ, ನಮ್ಮ ಇಂದ್ರಿಯಗಳು ಬಹಳ ಪ್ರಬಲ. ಪ್ರಸ್ತುತ ಹೀಗೆ ನಡೆಯುತ್ತಿದೆ. ಈಗಲ್ಲ, ಭೌತಿಕ ಜಗತ್ತಿನ ಸೃಷ್ಠಿಯಾದಾಗಿನಿಂದಲು. ಇದುವೇ ಒಂದು ರೋಗ, “ನಾನು ಈ ದೇಹ” ಎಂಬುದು. ಶ್ರೀಮದ್ ಭಾಗವತಮ್ ಹೇಳುತ್ತದೆ, ಯಸ್ಯಾತ್ಮ-ಬುದ್ದಿಹಿ ಕುಣಪೆ ತ್ರೈ ಧಾತುಕೆ ಸ್ವದೀಹಿ ಕಲತ್ರಾದಿಷು ಭೌಮ ಇಜ್ಯ-ಧಿಹಿ (ಶ್ರೀ.ಭಾ 10.84.13), ಅಂದರೆ ಯಾರಿಗೆ, “ನಾನು ಈ ದೇಹವು”, ಎಂಬ ದೈಹಿಕ ಪರಿಕಲ್ಪನೆಯಿದೆಯೋ, ಆತ್ಮ-ಬುದ್ದಿಹಿ ಕುಣಪೆ ತ್ರೈ-ಧಾತು. ಆತ್ಮ-ಬುದ್ದಿಹಿ ಅಂದರೆ ಚರ್ಮ ಮತ್ತು ಮೂಳೆಯ ಚೀಲದಲ್ಲಿ ಆತ್ಮದ ಪರಿಕಲ್ಪನೆ. ಇದೊಂದು ಚೀಲ. ಈ ದೇಹವು ಚರ್ಮ, ಮೂಳೆ, ರಕ್ತ, ಮೂತ್ರ, ಮಲ, ಹಾಗು ಇನ್ನಿತರ ಒಳ್ಳೆಯ ಪದಾರ್ಥಗಳು ಕೂಡಿರುವ ಚೀಲ. ನೋಡಿದಿರ? ಆದರೆ ನಾವು ಆಲೋಚಿಸುವುದು “ನಾನು ಮೂಳೆ, ಚರ್ಮ, ಮಲ ಹಾಗು ಮೂತ್ರದಿಂದ ಕೂಡಿರುವ ಚೀಲ. ಅದುವೇ ನಮ್ಮ ಸೌಂದರ್ಯ. ಅದುವೇ ಸರ್ವಸ್ವ” ಎಂದು.

ಹಲವಾರು ಸ್ವಾರಸ್ಯ ಕಥೆಗಳಿವೆ. ಆದರೆ ಸಮಯದ ಅಭಾವವಿದೆ. ಆದರೂ, ಒಂದು ಚಿಕ್ಕ ಕಥೆಯನ್ನು ಹೇಳ ಬಯಸುತ್ತೇನೆ. ಒಬ್ಬ ವ್ಯಕ್ತಿ, ಅಂದರೆ ಒಬ್ಬ ಹುಡುಗ, ಒಂದು ಸುಂದರ ಹುಡುಗಿಯ ಕಡೆ ಆಕರ್ಷಿತನಾಗಿದ್ದ. ಆದರೆ ಆ ಹುಡುಗಿ ಒಪ್ಪುವುದಿಲ್ಲ, ಆದರೂ ಆ ಹುಡುಗ ಪಟ್ಟು ಬಿಡುವುದಿಲ್ಲ. ಭಾರತದಲ್ಲಿ ಹುಡುಗಿಯರು ತಮ್ಮ ಶೀಲವನ್ನು ಬಹಳ ಶಿಸ್ತಿನಿಂದ ಕಾಪಾಡಿಕೊಳ್ಳುತ್ತಾರೆ. ಆದ್ದರಿಂದ ಆ ಹುಡುಗಿ ಒಪ್ಪುತ್ತಿರಲಿಲ್ಲ. ಅವಳು ಹೇಳಿದಳು, “ಸರಿ, ನೀನು ಒಂದು ವಾರದ ನಂತರ ಬಾ.” ಅವಳು ಅವನನ್ನು ಒಂದು ನಿರ್ದಿಷ್ಟ ಸಮಯದಲ್ಲಿ ಬರಬೇಕೆಂದು ಎಂದು ಹೇಳಿದಳು. ಹುಡುಗನಿಗೆ ಬಹಳ ಖುಷಿಯಾಯಿತು. ಒಂದು ವಾರದ ತನಕ ಆ ಹುಡುಗಿ ವಿರೇಚಕ ಔಷದಿ ಸೇವಿಸಿದಳು, ಹಾಗು ಹಗಲು ರಾತ್ರಿ ಮಲ ಹಾಗು ವಾಕರಿಕೆ ಮಾಡಿದಳು, ಹಾಗು ಇವೆಲ್ಲ ವಾಕರಿಕೆ ಮತ್ತು ಮಲವನ್ನು ಒಂದು ಮಡಿಕೆಯಲ್ಲಿ ಶೇಖರಿಸಿದಳು. ನಿಗದಿತ ಸಮಯಕ್ಕೆ, ಆ ಹುಡುಗ ಬಂದ, ಹಾಗು ಹುಡುಗಿ ಬಾಗಿಲ ಹತಿರ ಕುಳಿತ್ತಿದ್ದಳು. ಅವಳನ್ನು ಹುಡುಗ ಕೇಳಿದ, “ಆ ಹುಡುಗಿ ಎಲ್ಲಿ?” “ನಾನೆ ಅವಳು”, ಎಂದು ಉತ್ತರಿಸಿದಳು. “ಇಲ್ಲ ಇಲ್ಲ. ನೀನಲ್ಲ. ನೀನು ಕುರೂಪಿ. ಅವಳು ಸೌಂದರ್ಯವತಿ. ನೀನು ಆ ಹುಡುಗಿ ಅಲ್ಲ.” “ಇಲ್ಲ, ನಾನೆ ಆ ಹುಡುಗಿ, ಆದರೆ ಈಗ ನಾನು ನನ್ನ ಸೌಂದರ್ಯವನ್ನು ಬೇರೆ ಮಡಿಕೆಯಲ್ಲಿ ಇಟ್ಟಿದ್ದೇನೆ.” “ಅದು ಹೇಗೆ?” ಅವಳು ತೋರಿಸಿದಳು; “ಇದೇ ಆ ಸೌಂದರ್ಯ. ಈ ಮಲ ಮತ್ತು ವಾಂತಿ. ಇದೇ ಮಿಶ್ರಣಾಂಶ.” ವಾಸ್ತವಿಕವಾಗಿ ಯಾರು ಬೇಕಾದರು ದೃಢಕಾಯ ಅಥವ ಅತಿ ಸುಂದರವಾಗಿರಬಹುದು. ಆದರೆ ಮೂರು ನಾಲ್ಕು ಬಾರಿ ಮಲ ವಿಸರ್ಜನೆ ಮಾಡಿದರೆ ತಕ್ಷಣ ಎಲ್ಲ ಬದಲಾಗುತ್ತದೆ.

ಆದ್ದರಿಂದ ನನ್ನ ದೃಷ್ಟಿಕೋನವೇನೆಂದರೆ, ಶ್ರೀಮದ್ ಭಾಗವತಂನಲ್ಲಿ ಹೇಳಿರುವಹಾಗೆ, ಜೀವನದ ಭೌತಿಕ ಪರಿಕಲ್ಪನೆ ಬಹಳ ಆಶಾಪೂರ್ಣವಾದದಲ್ಲ. ಯಸ್ಯಾತ್ಮ-ಬುದ್ದಿಹಿ ಕುಣಪೆ ತ್ರೈ-ಧಾತುಕೆ (ಶ್ರೀ.ಭಾ 10.84.13).