KN/Prabhupada 0082 - ಕೃಷ್ಣನು ಸರ್ವವ್ಯಾಪಿ

Revision as of 13:02, 15 December 2019 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0082 - in all Languages Category:KN-Quotes - 1976 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 4.24 -- August 4, 1976, New Mayapur (French farm)

ಭಕ್ತ: ಕೃಷ್ಣನು ಆಧ್ಯಾತ್ಮಿಕತೆಯಲ್ಲಿ, ಜೀವಿಯ ಹೃದಯದಲ್ಲಿ ಉಪಸ್ಥಿತನಾಗಿರುತ್ತಾನೆ ಎಂದು ನಾವು ಹೇಳುತ್ತೇವೆ.

ಪ್ರಭುಪಾದ: ಕೃಷ್ಣನು ಸರ್ವವ್ಯಾಪಿ.

ಭಕ್ತ: ವ್ಯಕ್ತಿಯಾಗೋ ಅಥವ ಶಕ್ತಿಯಾಗೋ?

ಪ್ರಭುಪಾದ: ಅವನ ಶಕ್ತಿಯಲ್ಲಿ. ವ್ಯಕ್ತಿಯಾಗಿ ಕೂಡ. ನಮ್ಮ ಈ ಕಣ್ಣುಗಳಿಂದ ನೋಡಲಾಗದ ವ್ಯಕ್ತಿಯಾಗಿ, ಆದರೆ ನಮಗೆ ಶಕ್ತಿಯ ಅರಿವಾಗುತ್ತದೆ. ಈ ವಿವರವನ್ನು ಇನ್ನು ಹೆಚ್ಚು ಹೆಚ್ಚಾಗಿ ಸ್ಪಷ್ಟಗೊಳಿಸಿ. ಸಂಪೂರ್ಣವಾಗಿ ಅರಿವಾದಾಗ, ಸರ್ವಂ ಖಲ್ವ್ ಇದಂ ಬ್ರಹ್ಮ, ಸರ್ವವೂ ಬ್ರಹ್ಮಮಯ ಎಂಬ ಈ ಶ್ಲೋಕ… ಪರಮ ಭಕ್ತನಿಗೆ ಕೃಷ್ಣನ್ನಲ್ಲದೆ ಬೇರೆನೂ ಕಾಣುವುದಿಲ್ಲ.

ಭಕ್ತ: ಶ್ರೀಲ ಪ್ರಭುಪಾದ, ಐಹಿಕ ಶಕ್ತಿಗು ಮತ್ತು ಆಧ್ಯಾತ್ಮಿಕ ಶಕ್ತಿಗು ವಾಸ್ತವಿಕವಾಗಿ ಏನಾದರು ವ್ಯತ್ಯಾಸವಿದಯೇ?

ಪ್ರಭುಪಾದ: ಹೌದು, ಹಲವಾರು ವ್ಯತ್ಯಾಸಗಳಿವೆ. ಉದಾಹರಣೆಗೆ ವಿದ್ಯುತ್ ಶಕ್ತಿ. ಎಷ್ಟೋ ವಸ್ತುಗಳು ಕೆಲಸಮಾಡುತ್ತಿವೆ… ವಿಭಿನ್ನ ಶಕ್ತಿಗಳು. ಡಿಕ್ಟಾಫೋನ್ ಕೂಡ ಕೆಲಸಮಾಡುತ್ತಿರುವುದು ವಿದ್ಯುತ್ ಶಕ್ತಿಯಿಂದ. ಅದೇ ಶಕ್ತಿಯಿಂದ… ವಿದ್ಯತ್. ಆದ್ದರಿಂದ ಕೃಷ್ಣ ಹೇಳುತ್ತಾನೆ, ಅಹಂ ಸರ್ವಸ್ಯ ಪ್ರಭವಃ (ಭ.ಗೀ 10.8). ಅವನೇ ಸರ್ವಮೂಲ.

ಭಕ್ತ: ಒಂದು ಜೀವಾವಧಿಯಲ್ಲಿ ದೇಹವು ಬದಲಾಗುತ್ತದೆ ಎಂದು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ, ಆದರೆ ಒಬ್ಬ ಕಪ್ಪಗಿರುವ ವ್ಯಕ್ತಿ ಬೆಳ್ಳಗಾಗುವುದನ್ನು ನಾವು ನೋಡಿಲ್ಲ, ಅಥವ ಏನೋ ಸ್ಥಿರವಾದ ಒಂದು ಇದೆ, ದೇಹ ಬದಲಾದರೂ ಅದರಲ್ಲಿ ಸ್ಥಿರವಾಗಿರುವ ಏನೋ ಒಂದಿದೆ. ಅದೇನು? ಯೌವನದಿಂದ ಮುಪ್ಪಿನವರೆಗು ಒಬ್ಬನ ದೇಹ ಬದಲಾದರು ನಾವು ಅವನನ್ನು ಹೇಗೆ ಗುರುತಿಸುತ್ತೇವೆ?

ಪ್ರಭುಪಾದ: ನೀವು ಇನ್ನು ಮುಂದುವರಿದಾಗ ಕಪ್ಪಿಗು ಬಿಳುಪಿಗು ಅಂತರವಿಲ್ಲ ಎಂಬುದನ್ನು ತಿಳಿಯುವಿರಿ. ಬಹುವರ್ಣದ ಹೂವು ಅರಳಿದಂತೆ. ಅದು ಒಂದೆ ಮೂಲದಿಂದ ಹೊರಬರುತ್ತಿದೆ. ಆದ್ದರಿಂದ ಏನು ವ್ಯತ್ಯಾಸವಿಲ್ಲ, ಆದರೆ ಅದನ್ನು ಸುಂದರಗೊಳಿಸಲು ಹಲವಾರು ಬಣ್ಣಗಳಿವೆ. ಸೂರ್ಯಪ್ರಕಾಶದಲ್ಲಿ ಏಳು ಬಣ್ಣಗಳಿವೆ, ಆ ಏಳು ಬಣ್ಣಗಳಿಂದ, ಬಹುವರ್ಣಗಳು ಹೊರಹೊಮ್ಮುತ್ತಿವೆ… ಮೂಲವು ಬಿಳಿಯ ಬಣ್ಣ, ಆದರೆ ಹಲವಾರು ಬಣ್ಣಗಳು ಹೊರಹೊಮ್ಮುತ್ತಿವೆ. ಇದು ಸ್ಪಷ್ಟವಾಗಿದೆಯೋ ಇಲ್ಲವೋ?

ಭಕ್ತ: ಶ್ರೀಲ ಪ್ರಭುಪಾದ, ಸರ್ವಸ್ವವನ್ನು ಕೃಷ್ಣನು ಸೃಜಿಸಿದರೆ, ಹಾಗು ಸರ್ವವೂ ಕೃಷ್ಣನ ಇಚ್ಛೆಗೆ ಅಧೀನವಾಗಿದ್ದರೆ, ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂದು ನಾವು ನಿಜವಾಗಿಯೂ ಹೇಳಬಹುದೇ?

ಪ್ರಭುಪಾದ: ಒಳ್ಳೆಯದು ಕೆಟ್ಟದು ಎಂದು ಯಾವುದೂ ಇಲ್ಲ. ಇದು ಭ್ರಮೆ. ಆದರೆ ಒಟ್ಟಾರೆ ನೋಡಿದರೆ ಈ ಭೌತಿಕ ಲೋಕದಲ್ಲಿ ಎಲ್ಲವೂ ಕೆಟ್ಟದ್ದೆ.