KN/Prabhupada 0087 - ಭೌತಿಕ ಪ್ರಕೃತಿಯ ನಿಯಮ

Revision as of 10:34, 9 February 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0087 - in all Languages Category:KN-Quotes - 1970 Category:KN-Quotes - L...")
(diff) ← Older revision | Latest revision (diff) | Newer revision → (diff)


Sri Isopanisad Invocation Lecture -- Los Angeles, April 28, 1970

ಹೌದು. ಈ ಭೌತಿಕ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ನಿಗದಿತ ಸಮಯವಿದೆ. ಮತ್ತು ಆ ನಿಗದಿತ ಸಮಯದೊಳಗೆ ಆರು ರೀತಿಯ ಬದಲಾವಣೆಗಳಿವೆ. ಮೊದಲು ಜನ್ಮ, ನಂತರ ಬೆಳಯುವುದು, ನಂತರ ಉಳಿಯುವುದು, ನಂತರ ಉಪ-ಉತ್ಪನ್ನವನ್ನು ಉತ್ಪಾದಿಸುವುದು, ನಂತರ ಕ್ಷೀಣಿಸುವುದು, ನಂತರ ಕಣ್ಮರೆಯಾಗುವುದು. ಇದು ಭೌತಿಕ ಪ್ರಕೃತಿಯ ನಿಯಮ. ಈ ಹೂವು ಹುಟ್ಟುತ್ತದೆ, ಮೊಗ್ಗಿನಂತೆಯೇ, ನಂತರ ಬೆಳೆಯುತ್ತದೆ, ನಂತರ ಎರಡು, ಮೂರು ದಿನಗಳವರೆಗೆ ಇರುತ್ತದೆ, ನಂತರ ಅದು ಬೀಜವನ್ನು ಉತ್ಪಾದಿಸುತ್ತದೆ, ಉಪ-ಉತ್ಪನ್ನ, ನಂತರ ಕ್ರಮೇಣ ಒಣಗುತ್ತದೆ, ಕೊನೆಗೆ ಸಾಯುತ್ತದೆ. (ಪಕ್ಕಕ್ಕೆ:) ನೀನು ಈ ರೀತಿ ಕುಳಿತುಕೊ. ಆದ್ದರಿಂದ ಇದನ್ನು ಷಡ್-ವಿಕಾರ, ಎಂದು ಕರೆಯಲಾಗುತ್ತದೆ, ಆರು ರೀತಿಯ ಬದಲಾವಣೆಗಳು. ಆದ್ದರಿಂದ ನಿಮ್ಮ ನಾಮಮಾತ್ರದ ಭೌತಿಕ ವಿಜ್ಞಾನದ ಮೂಲಕ ಇದನ್ನು ತಡೆಯಲು ನಿಮಗೆ ಸಾಧ್ಯವಿಲ್ಲ. ಇಲ್ಲ. ಇದು ಅವಿದ್ಯಾ. ಜನರು ತಮ್ಮನ್ನು ತಾವು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಮತ್ತು ಕೆಲವೊಮ್ಮೆ ವೈಜ್ಞಾನಿಕ ಜ್ಞಾನದಿಂದ ಮನುಷ್ಯ ಅಮರನಾಗುತ್ತಾನೆ ಎಂದು ಮೂರ್ಖತನದಿಂದ ಮಾತನಾಡುತ್ತಾರೆ. ರಷ್ಯನ್ನರು ಹಾಗೆ ಹೇಳುತ್ತಾರೆ. ಆದ್ದರಿಂದ ಇದು ಅವಿದ್ಯಾ, ಅಜ್ಞಾನ. ಭೌತಿಕ ಕಾನೂನುಗಳ ಪ್ರಕ್ರಿಯೆಯನ್ನು ನೀವು ನಿಲ್ಲಿಸಲು ಸಾಧ್ಯವಿಲ್ಲ. ಆದ್ದರಿಂದ ಭಗವದ್ಗೀತೆಯಲ್ಲಿ, ದೈವಿ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ (ಭ.ಗೀ 7.14) ಎಂದು ಹೇಳಲಾಗಿದೆ. ಭೌತಿಕ ಸ್ವಭಾವದ ಪ್ರಕ್ರಿಯೆ, ಮೂರು ಗುಣಗಳಿಂದ ಕೂಡಿದೆ - ಸತ್ವ-ಗುಣ, ರಾಜೋ-ಗುಣ, ತಮೋ-ಗುಣ... ತ್ರಿ-ಗುಣ. ಗುಣದ ಇನ್ನೊಂದು ಅರ್ಥ ಹಗ್ಗ. ನೀವು ಹಗ್ಗವನ್ನು ನೋಡಿರುವಿರಿ, ಅವುಗಳನ್ನು ಮೂರು ಬಾರಿ ತಿರುಚಲಾಗಿದೆ. ಮೊದಲಿಗೆ ತೆಳುವಾದ ಹಗ್ಗ, ನಂತರ ಆ ಮೂರು, ಅವುಗಳನ್ನು ಸುತ್ತಿಕೊಳ್ಳಲಾಗುತ್ತದೆ, ನಂತರ ಮತ್ತೆ ಆ ಮೂರು ಸುತ್ತಿಕೊಳ್ಳುತ್ತವೆ, ನಂತರ ಮತ್ತೆ ಮೂರು. ಇದು ತುಂಬಾ ಗಟ್ಟಿಯಾಗುತ್ತದೆ. ಆದ್ದರಿಂದ ಸತ್ವ, ರಜ, ತಮೋ-ಗುಣ ಎಂಬ ಈ ಮೂರು ಗುಣಗಳು ಬೆರೆತಿವೆ. ಮತ್ತೆ ಅವು ಕೆಲವು ಉಪ-ಉತ್ಪನ್ನಗಳನ್ನು ಉತ್ಪಾದಿಸುತ್ತದೆ, ಮತ್ತೆ ಬೆರೆಯುತ್ತದೆ, ಮತ್ತೆ ಬೆರೆಯುತ್ತದೆ. ಈ ರೀತಿಯಾಗಿ ಅವು ಎಂಭತ್ತೊಂದು ಬಾರಿ ತಿರುಚಲ್ಪಟ್ಟಿವೆ. ಆದ್ದರಿಂದ ಗುಣಮಯೀ ಮಾಯಾ ನಿಮ್ಮನು ಹೆಚ್ಚು ಹೆಚ್ಚು ಬಂಧಿಸುತ್ತದೆ. ಆದ್ದರಿಂದ ಈ ಭೌತಿಕ ಪ್ರಪಂಚದ ಈ ಬಂಧನದಿಂದ ನೀವು ಹೊರಬರಲು ಸಾಧ್ಯವಿಲ್ಲ. ಬಂಧ. ಆದ್ದರಿಂದ ಇದನ್ನು ಅಪವರ್ಗ ಎಂದು ಕರೆಯಲಾಗುತ್ತದೆ. ಕೃಷ್ಣ ಪ್ರಜ್ಞೆಯ ಈ ಪ್ರಕ್ರಿಯೆಯು ಪವರ್ಗ ಪ್ರಕ್ರಿಯೆಯನ್ನು ರದ್ದುಗೊಳಿಸುವುದು ಎಂದರ್ಥ.

ನಿನ್ನೆ ನಾನು ಗರ್ಗಮುನಿಗೆ ಈ ಪವರ್ಗ ಏನು ಎಂದು ವಿವರಿಸುತ್ತಿದ್ದೆ. ಈ ಪವರ್ಗ ಎಂದರೆ ಪ ಎಂಬ ವರ್ಣಮಾಲೆಯ ಸಾಲು. ಈ ದೇವನಾಗರೀಯನ್ನು ಅಧ್ಯಯನ ಮಾಡಿದವರಿಗೆ ತಿಳಿದಿದೆ. ದೇವನಾಗರೀ ವರ್ಣಮಾಲೆಗಳಿವೆ, ಕ ಖ ಗ ಘ ಙ , ಚ ಛ ಜ ಝ ಞ. ಈ ರೀತಿಯಲ್ಲಿ ಐದು ಗುಂಪು, ಒಂದು ಸಾಲು. ನಂತರ ಐದನೇ ಗುಂಪು, ಪ ಫ ಬ ಭ ಮ ಬರುತ್ತದೆ. ಆದ್ದರಿಂದ ಈ ಪವರ್ಗ ಎಂದರೆ ಪ. ಮೊದಲನೆಯದಾಗಿ ಪ. ಪ ಎಂದರೆ ಪರವ, ಸೋಲು. ಎಲ್ಲರೂ ಪ್ರಯತ್ನಿಸುತ್ತಿದ್ದಾರೆ, ಬದುಕಲು ತುಂಬಾ ಕಷ್ಟಪಡುತ್ತಿದ್ದಾರೆ, ಆದರೆ ಸೋಲುತ್ತಿದ್ದಾರೆ. ಮೊದಲು ಪವರ್ಗ. ಪ ಎಂದರೆ ಪರವ. ತದನಂತರ ಫ. ಫ ಎಂದರೆ ನೊರೆ. ಕುದುರೆಯಂತೆಯೇ, ತುಂಬಾ ಕಷ್ಟಪಟ್ಟು ಕೆಲಸ ಮಾಡುವಾಗ, ಸ್ವಲ್ಪ ನೊರೆ ಬಾಯಿಯಿಂದ ಹೊರಬರುವುದನ್ನು ನೀವು ಕಾಣುತ್ತೀರಿ, ನಾವು ಕೆಲವೊಮ್ಮೆ, ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ನಂತರ ತುಂಬಾ ಆಯಾಸಗೊಂಡಾಗ, ನಾಲಿಗೆ ಒಣಗುತ್ತದೆ, ಮತ್ತು ಸ್ವಲ್ಪ ನೊರೆ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇಂದ್ರಿಯ ತೃಪ್ತಿಗಾಗಿ ಬಹಳ ಶ್ರಮಿಸುತ್ತಿದ್ದಾರೆ, ಆದರೆ ಸೋಲುತ್ತಿದ್ದಾರೆ. ಪ, ಫ, ಮತ್ತು ಬ. ಬ ಎಂದರೆ ಈ ಬಂಧನ. ಆದ್ದರಿಂದ ಮೊದಲು ಪ, ಎರಡನೇಯದು ಫ, ಮೂರನೇಯದು ಬಂಧನ, ನಂತರ ಬ, ಭ. ಭ ಎಂದರೆ ಒಡಿಯುವುದು, ಭಯಪಡುವುದು. ತದನಂತರ ಮ. ಮ ಎಂದರೆ ಮೃತ್ಯು, ಅಥವಾ ಸಾವು. ಆದ್ದರಿಂದ ಈ ಕೃಷ್ಣ ಪ್ರಜ್ಞಾಪೂರ್ವಕ ಪ್ರಕ್ರಿಯೆಯು ಅಪವರ್ಗ ಆಗಿದೆ. ಅಪ. ‘ಅ’ ಅಂದರೆ ‘ಇಲ್ಲದ’ ಎಂದರ್ಥ. ಪವರ್ಗ, ಇವು ಈ ಭೌತಿಕ ಪ್ರಪಂಚದ ಲಕ್ಷಣಗಳಾಗಿವೆ, ಮತ್ತು ನೀವು ಈ ಪದ ‘ಅ’ ಸೇರಿಸಿದಾಗ, ಅಪವರ್ಗ ಆಗುತ್ತದೆ. ಇದರರ್ಥ ಅದನ್ನು ರದ್ದುಗೊಳಿಸಲಾಗಿದೆ ಎಂದು.