KN/Prabhupada 0088 - ನಮ್ಮೊಂದಿಗೆ ಸೇರಿಕೊಂಡ ವಿದ್ಯಾರ್ಥಿಗಳಿಂದ, ಅವರು ಆಲಿಸುವ ಮೂಲಕ, ಶ್ರವಣಂ

Revision as of 15:12, 13 February 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0088 - in all Languages Category:KN-Quotes - 1972 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 7.1 -- San Diego, July 1, 1972

ಬ್ರಹ್ಮ ಹೇಳುತ್ತಾರೆ. ಬ್ರಹ್ಮನ ಅನುಭವ ... ಅವನು ಈ ಬ್ರಹ್ಮಾಂಡದೊಳಗಿನ ಉನ್ನತ ಜೀವಿ. ಅವರು ಹೇಳಿದರು, "ಒಬ್ಬ ವ್ಯಕ್ತಿಯು ಈ ಅಸಂಬದ್ಧ ಅಭ್ಯಾಸವನ್ನು ಯಾವಾಗ ಊಹಾಪೋಹಗಳನ್ನು ಬಿಟ್ಟುಕೊಡುತ್ತಾನೆ ..." ಜ್ಞಾನೇ ಪ್ರಯಾಸಂ ಉದಪಾಸ್ಯ. ಅವನು ವಿಧೇಯನಾಗಬೇಕು. ಒಬ್ಬನು ತನಗೆ ಏನೋ ತಿಳಿದಿದೆ, ಏನೋ ಊಹಿಸಬಹುದು, ಅವನು ಏನೋ ಆವಿಷ್ಕರಿಸಬಹುದು ಎಂದು ತೋರಿಸಿಕೊಳ್ಳಬಾರದು. ವಿಜ್ಞಾನಿಗಳು ಎಂದು ಕರೆಯಲ್ಪಡುವವರು ಕೇವಲ ಊಹಾಪೋಹ ಮಾಡುತ್ತ ಶ್ರಮವನ್ನು ವ್ಯರ್ಥ ಮಾಡುತ್ತಿದ್ದಾರೆ. ನಿಮ್ಮಿಂದ ಏನೂ ಮಾಡಲಾಗುವುದಿಲ್ಲ. ಎಲ್ಲವನ್ನೂ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ನೀವು ಬದಲಾಯಿಸಲು ಸಾಧ್ಯವಿಲ್ಲ. ಕಾನೂನು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೀವು ಸುಮ್ಮನೆ ನೋಡಬಹುದು. ನೀವು ಅಷ್ಟು ಮಾಡಬಹುದು. ಆದರೆ ನೀವು ಕಾನೂನನ್ನು ಬದಲಾಯಿಸಲೂ ಸಾಧ್ಯವಿಲ್ಲ, ಅದನ್ನು ಸುಧಾರಿಸಲೂ ಸಾಧ್ಯವಿಲ್ಲ. ಇಲ್ಲ. ಅದನ್ನು ನೀವು ಮಾಡಲು ಸಾಧ್ಯವಿಲ್ಲ. ದೈವಿ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ (ಭ.ಗೀ 7.14). ದುರತ್ಯಯ ಎಂದರೆ ಅದು ತುಂಬಾ ಕಷ್ಟ. ಆದ್ದರಿಂದ ಚೈತನ್ಯ ಮಹಾಪ್ರಭುಗಳಿಗೆ, ಬ್ರಹ್ಮನ ಈ ಹೇಳಿಕೆಯನ್ನು ತಿಳಿಸಿದಾಗ, ಒಬ್ಬನು ಊಹಾತ್ಮಕ ವಿಧಾನವನ್ನು ಬಿಟ್ಟುಬಿಡಬೇಕು, ಅವನು ಏನನ್ನಾದರೂ ರಚಿಸಬಹುದು ... ಈ ಅಸಂಬದ್ಧ ಅಭ್ಯಾಸಗಳನ್ನು ತ್ಯಜಿಸಬೇಕು. ಅವನು ತುಂಬಾ ವಿನಮ್ರನಾಗಬೇಕು. ಹುಲ್ಲುಗಿಂತ ವಿನಮ್ರ. ನಾವು ಹುಲ್ಲಿನ ಮೇಲೆ ತುಳಿದುಕೊಂಡು ಓಡಾಡುತ್ತೇವೆ; ಅದು ಪ್ರತಿಭಟಿಸುವುದಿಲ್ಲ. "ಸರಿ, ಸರ್, ನೀವು ನಡೆಯಿರಿ." ಆ ರೀತಿಯ ವಿನಮ್ರ. ತೃಣಾದ್ ಅಪಿ ಸುನೀಚೆನ ತರೋರ್ ಅಪಿ ಸಹಿಷ್ಣುನಾ. ತರು ಅಂದರೆ ಮರ. ಮರವು ತುಂಬಾ ಸಹಿಸಿಕೊಳ್ಳುತ್ತದೆ.

ಆದ್ದರಿಂದ ಚೈತನ್ಯ ಮಹಾಪ್ರಭು ಹೇಳಿದರು, ಜ್ಞಾನೆ ಪ್ರಯಾಸಂ ಉದಪಾಸ್ಯ ನಮಂತ ಏವಾ... "ಅಥವಾ ನಾನು ಊಹಾತ್ಮಕ ಪ್ರಕ್ರಿಯೆಯನ್ನು ಬಿಟ್ಟುಬಿಡುತ್ತೇನೆ, ಮತ್ತು ನೀವು ಸಲಹೆ ನೀಡಿದಂತೆ ನಾನು ವಿನಮ್ರನಾಗುತ್ತೇನೆ. ನಂತರ ನನ್ನ ಮುಂದಿನ ಕರ್ತವ್ಯ ಏನು?" ಮುಂದಿನ ಕರ್ತವ್ಯವೆಂದರೆ: ನಮಂತ ಏವಾ, ವಿನಮ್ರನಾಗಿರುವುದು, ಸನ್-ಮುಖರಿತಾಂ ಭವದೀಯ-ವಾರ್ತಾಂ, ನೀವು ಒಬ್ಬ ಭಕ್ತನನ್ನು ಸಂಪರ್ಕಿಸಬೇಕು, ಮತ್ತು ನೀವು ಅವನಿಂದ ಕೇಳಬೇಕು. ಸ್ಥಾನೆ ಸ್ಥಿತಾಃ. ನೀವು ನಿಮ್ಮ ಸ್ಥಾನದಲ್ಲಿಯೇ ಇರುತ್ತೀರಿ. ನೀವು ಅಮೆರಿಕನ್ನರಾಗಿರಿ. ನೀವು ಭಾರತೀಯರಾಗಿರಿ. ನೀವು ಕ್ರಿಶ್ಚಿಯನ್ ಆಗಿರಿ. ನೀವು ಹಿಂದುವಾಗಿರಿ. ನೀವು ಕಪ್ಪಾಗಿರಿ. ನೀವು ಬಿಳಿಯಾಗಿರಿ. ನೀವು ಮಹಿಳೆ, ಪುರುಷ, ಏನೇ ಆಗಿರಿ. ಆತ್ಮಜ್ಞಾನಿಗಳ ಪ್ರವಚನಗಳಿಗೆ ನೀವು ಕೇವಲ ಕಿವಿಗೊಡಿ. ಇದನ್ನು ಶಿಫಾರಸು ಮಾಡಲಾಗಿದೆ. ಮತ್ತು ನೀವು ಆಲಿಸಿದಾಗ, ನೀವು ಸಹ ಆಲೋಚಿಸುತ್ತೀರಿ. ನೀವು ನನ್ನ ಮಾತನ್ನು ಆಲಿಸುತ್ತಿರುವಂತೆ. ನೀವು ಆಲೋಚಿಸಿದರೆ - "ಸ್ವಾಮೀಜಿ ಏನು ಹೇಳಿದರು ...?" ಸ್ಥಾನೆ ಸ್ಥಿತಾಃ ಶೃತಿ-ಗತಾಂ ತನು-ವಾನ್-ಮನೊಭಿಃ ಶೃತಿ-ಗತಾಂ. ಶೃತಿ ಎಂದರೆ ಕಿವಿಯ ಮೂಲಕ ಸ್ವೀಕರಿಸುವುದು. ನಿಮ್ಮ ದೇಹ, ಮತ್ತು ಮನಸ್ಸಿನಿಂದ ಆಲೋಚಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಕ್ರಮೇಣ ನೀವು... ಏಕೆಂದರೆ ನಿಮ್ಮ ಗುರಿ ಆತ್ಮ-ಸಾಕ್ಷಾತ್ಕಾರ. ಆದ್ದರಿಂದ ಆತ್ಮ ಎಂದರೆ ಪರಮಾತ್ಮ. ಪರಮಪ್ರಭು, ಆತನೇ ಪರಮಾತ್ಮ. ನಾವು ಅವನ ಭಾಗಾಂಶಗಳು ಮಾತ್ರ. ಆದ್ದರಿಂದ ಈ ಪ್ರಕ್ರಿಯೆಯಿಂದ, ಚೈತನ್ಯ ಮಹಾಪ್ರಭು ಹೇಳುತ್ತಾರೆ, ದೇವರು, ಅಜಿತ, ಆವನನ್ನು ಎಂದಿಗೂ ಜಯಿಸಲಾಗುವುದಿಲ್ಲ... ನೀವು... ಸವಾಲಿನ ಮೂಲಕ, ನೀವು ದೇವರನ್ನು ತಿಳಿದುಕೊಳ್ಳಲು ಬಯಸಿದರೆ, ನಿಮಗೆ ಎಂದಿಗೂ ಅರ್ಥವಾಗುವುದಿಲ್ಲ. ದೇವರು ಎಂದಿಗೂ ಸವಾಲನ್ನು ಸ್ವೀಕರಿಸುವುದಿಲ್ಲ. ಏಕೆಂದರೆ ದೇವರು ದೊಡ್ಡವನು. ಅವನು ನಿಮ್ಮ ಸವಾಲನ್ನು ಏಕೆ ಸ್ವೀಕರಿಸಬೇಕು. "ಓ ದೇವರೇ, ದಯವಿಟ್ಟು ಇಲ್ಲಿಗೆ ಬಾ. ನಾನು ನಿನ್ನನ್ನು ನೋಡುತ್ತೇನೆ", ಎಂದು ನೀವು ಹೇಳಿದರೆ... ದೇವರು ನಿನ್ನ ಆದೇಶವನ್ನು ನಿರ್ವಹಿಸುವವನಲ್ಲ. ನೀವು ಆತನ ಆದೇಶವನ್ನು ಪಾಲಿಸಬೇಕು. ನಂತರ ದೇವರ ಸಾಕ್ಷಾತ್ಕಾರವಾಗುತ್ತದೆ. ಭಗವಂತನು ಹೇಳುತ್ತಾನೆ: "ನೀವು ಶರಣಾಗತರಾಗಿ," ಸರ್ವ-ಧರ್ಮಾನ್ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ (ಭ.ಗೀ 18.66). ಅದು ಪ್ರಕ್ರಿಯೆ, ನೀವು ದೇವರನ್ನು ತಿಳಿಯುವಿರಿ. "ಓಹ್, ನಾನು ದೇವರನ್ನು ತಿಳಿದುಕೊಳ್ಳುತ್ತೇನೆ. ನನಗೆ ಒಳ್ಳೆಯ ಬುದ್ಧಿವಂತಿಕೆಯಿದೆ, ಊಹಿಸಿಕೊಳ್ಳುತ್ತೇನೆ." ಇಲ್ಲ.

ಆದ್ದರಿಂದ ಈ ಆಲಿಸುವುದು ... ನಾವು ಆಲಿಸುವ ಬಗ್ಗೆ ಮಾತನಾಡುತ್ತಿದ್ದೇವೆ. ಶ್ರವಣ ಪ್ರಕ್ರಿಯೆಯು ತುಂಬಾ ಮುಖ್ಯವಾಗಿದೆ. ನಮ್ಮೆಲ್ಲರ, ಈ ಸಂಸ್ಥೆ, ಕೃಷ್ಣ ಪ್ರಜ್ಞೆ ಆಂದೋಲನವು, ಹರಡಿರುವುದು ನಮ್ಮೊಂದಿಗೆ ಸೇರಿಕೊಂಡ ವಿದ್ಯಾರ್ಥಿಗಳಿಂದ, ಅವರು ಆಲಿಸುವ ಮೂಲಕ, ಶ್ರವಣಂ. ಆಲಿಸುವಿಕೆ, ತಮ್ಮೊಳಗೆ ಎಲ್ಲವನ್ನೂ ಬದಲಾಯಿಸಿತು, ಮತ್ತು ಅವರು ಪೂರ್ಣ ಹೃದಯದಿಂದ ಸೇರಿಕೊಂಡಿದ್ದಾರೆ ಮತ್ತು... ಮುಂದುವರಿಯುತ್ತಿದ್ದಾರೆ. ಆದ್ದರಿಂದ ಶ್ರವಣವು ತುಂಬಾ ಮುಖ್ಯವಾಗಿದೆ. ಅತೀಂದ್ರಿಯ ಸಂದೇಶದ ಬಗ್ಗೆ ಜನರಿಗೆ ಕೇಳಲು ಅವಕಾಶ ನೀಡಲು ನಾವು ಅನೇಕ ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ಆದ್ದರಿಂದ ನಾನು ಹೇಳುವುದೇನೆಂದರೆ ನೀವು ಆಲಿಸುವ ಪ್ರಕ್ರಿಯೆಯ ಪ್ರಯೋಜನವನ್ನು ಬಳಸಿಕೊಳ್ಳಿ.