KN/Prabhupada 0089 - ಕೃಷ್ಣನ ತೇಜಸ್ಸು ಸರ್ವಸ್ವದ ಮೂಲ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0089 - in all Languages Category:KN-Quotes - 1976 Category:KN-Quotes - L...")
 
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
 
Line 6: Line 6:
[[Category:KN-Quotes - in France]]
[[Category:KN-Quotes - in France]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0088 - Students Who Have Joined Us, They Have Given Aural Reception, by Hearing|0088|Prabhupada 0090 - Systematic Management - Otherwise How ISKCON Will Be Done?|0090}}
{{1080 videos navigation - All Languages|Kannada|KN/Prabhupada 0088 - ನಮ್ಮೊಂದಿಗೆ ಸೇರಿಕೊಂಡ ವಿದ್ಯಾರ್ಥಿಗಳಿಂದ, ಅವರು ಆಲಿಸುವ ಮೂಲಕ, ಶ್ರವಣಂ|0088|KN/Prabhupada 0090 - ವ್ಯವಸ್ಥಿತ ನಿರ್ವಹಣೆ - ಇಲ್ಲದಿದ್ದರೆ ಇಸ್ಕಾನ್ ಅನ್ನು ಹೇಗೆ ನಿರ್ವಹಿಸುವುದು|0090}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 17:51, 1 October 2020



Lecture on BG 4.24 -- August 4, 1976, New Mayapur (French farm)

ಫ್ರೆಂಚ್ ಭಕ್ತ: "ನಾನು ಅವರಲ್ಲಿ ಇಲ್ಲ", ಎಂದು ಕೃಷ್ಣ ಹೇಳಿದಾಗ ಇದರ ಅರ್ಥವೇನು?

ಪ್ರಭುಪಾದ: ಹಹ್? "ನಾನು ಅವರಲ್ಲಿ ಇಲ್ಲ", ಏಕೆಂದರೆ ನೀವು ಅಲ್ಲಿ ನೋಡಲಾಗುವುದಿಲ್ಲ. ಕೃಷ್ಣ ಅಲ್ಲಿದ್ದಾನೆ, ಆದರೆ ನೀವು ಅವನನ್ನು ನೋಡಲು ಸಾಧ್ಯವಿಲ್ಲ. ನೀವು ಅರ್ಹತೆ ಪಡೆದವರಲ್ಲ. ಮತ್ತೊಂದು ಉದಾಹರಣೆಯಂತೆ. ಇಲ್ಲಿ, ಸೂರ್ಯನ ಬೆಳಕಿದೆ. ಎಲ್ಲರೂ ಅನುಭವಿಸುತ್ತಾರೆ. ಆದರೆ ಸೂರ್ಯ ಇಲ್ಲಿದ್ದಾನೆಂದು ಇದರ ಅರ್ಥವಲ್ಲ. ಇದು ಸ್ಪಷ್ಟವಾಗಿದೆಯೇ? ಸೂರ್ಯ ಇಲ್ಲಿದ್ದಾನೆ ಎಂದರ್ಥ... ಸೂರ್ಯ ಕಾಂತಿ ಇಲ್ಲಿದೆ ಎಂದರೆ ಸೂರ್ಯ ಇಲ್ಲಿದ್ದಾನೆ. ಆದರೆ ನೀವು ಸೂರ್ಯನ ಬೆಳಕಿನಲ್ಲಿರುವುದರಿಂದ, "ಈಗ ನಾನು ಸೂರ್ಯನನ್ನು ಹಿಡಿದಿದ್ದೇನೆ" ಎಂದು ಹೇಳಲು ಸಾಧ್ಯವಿಲ್ಲ. ಸೂರ್ಯನ ಬೆಳಕು ಸೂರ್ಯನಲ್ಲಿದೆ, ಆದರೆ ಸೂರ್ಯನ ಬೆಳಕಿನಲ್ಲಿ ಸೂರ್ಯ ಇರುವುದಿಲ್ಲ. ಸೂರ್ಯನಿಲ್ಲದೆ ಸೂರ್ಯನ ಬೆಳಕು ಇಲ್ಲ. ಸೂರ್ಯನ ಬೆಳಕು ಸೂರ್ಯ ಎಂದು ಇದರ ಅರ್ಥವಲ್ಲ. ಅದೇ ಸಮಯದಲ್ಲಿ, ನೀವು ಸೂರ್ಯನ ಬೆಳಕು ಎಂದರೆ ಸೂರ್ಯ ಎಂದು ಹೇಳಬಹುದು.

ಇದನ್ನು ಅಚಿಂತ್ಯ-ಭೇದಾಭೇದ ಎಂದು ಕರೆಯಲಾಗುತ್ತದೆ - ಏಕಕಾಲದಲ್ಲಿ ಒಂದು, ಮತ್ತು ವಿಭಿನ್ನ. ಸೂರ್ಯನ ಬೆಳಕಿನಲ್ಲಿ ನೀವು ಸೂರ್ಯನ ಉಪಸ್ಥಿತಿಯನ್ನು ಅನುಭವಿಸುತ್ತೀರಿ, ಆದರೆ ನೀವು ಸೂರ್ಯನ ಭೂಗೋಳದಲ್ಲಿ ಪ್ರವೇಶಿಸಲು ಸಾಧ್ಯವಾದರೆ, ನೀವು ಸೂರ್ಯ ಭಗವಾನ್ ಅನ್ನು ಸಹ ಭೇಟಿ ಮಾಡಬಹುದು. ವಾಸ್ತವವಾಗಿ, ಸೂರ್ಯನ ಬೆಳಕು ಎಂದರೆ ಸೂರ್ಯಲೋಕದಲ್ಲಿ ವಾಸಿಸುವ ವ್ಯಕ್ತಿಯ ದೇಹದ ಕಿರಣಗಳು. ಅದನ್ನು ಬ್ರಹ್ಮ-ಸಂಹಿತಾ ನಲ್ಲಿ ವಿವರಿಸಲಾಗಿದೆ - ಯಸ್ಯ ಪ್ರಭಾ ಪ್ರಭವತೊ ಜಗದ್-ಅಂಡ-ಕೋಟಿ (ಬ್ರ.ಸಂ 5.40). ಕೃಷ್ಣನ ಕಾರಣದಿಂದಾಗಿ... ಕೃಷ್ಣನ ತೇಜಸ್ಸು ಹೊರಹೊಮ್ಮುತ್ತಿರುವುದನ್ನು ನೀವು ನೋಡಿದ್ದೀರಿ. ಅದು ಸರ್ವಸ್ವದ ಮೂಲ. ಆ ತೇಜಸ್ಸಿನ ವಿಸ್ತರಣೆಯೇ ಬ್ರಹ್ಮಜ್ಯೋತಿ, ಮತ್ತು ಆ ಬ್ರಹ್ಮಜ್ಯೋತಿಯಲ್ಲಿ ಅಸಂಖ್ಯಾತ ಆಧ್ಯಾತ್ಮಿಕ ಗ್ರಹಗಳು, ವಸ್ತು ಗ್ರಹಗಳು ಉತ್ಪತ್ತಿಯಾಗುತ್ತವೆ. ಮತ್ತು ಪ್ರತಿಯೊಂದು ಗ್ರಹದಲ್ಲೂ ಪ್ರದರ್ಶನ ವೈವಿಧ್ಯಗಳಿವೆ. ವಾಸ್ತವವಾಗಿ, ಕೃಷ್ಣನ ದೇಹದ ಕಿರಣಗಳು ಸರ್ವಸ್ವದ ಮೂಲವು, ಮತ್ತು ದೇಹದ ಕಿರಣಗಳ ಮೂಲ ಕೃಷ್ಣನು.